Home
ಸುದ್ದಿಜಾಲ

Infinix ಜೂನ್ 27ರಂದು ಭಾರತದಲ್ಲಿ ತನ್ನ ಮೊದಲ AI PC ಲ್ಯಾಪ್‌ಟಾಪ್ ಪರಿಚಯಿಸಲಿದೆ: ನಿರೀಕ್ಷಿತ ಫೀಚರ್ಸ್‌ ಏನು?

Infinix ಸಂಸ್ಥೆ ತನ್ನ ಬಹು ನಿರೀಕ್ಷಿತ ZeroBook Ultra ಲ್ಯಾಪ್‌ಟಾಪ್‌ ಅನ್ನು ಜೂನ್ 27ರಂದು ಭಾರತದಲ್ಲಿ ಬಿಡುಗಡೆ ಮಾಡಲಿದೆ ಎಂದು ಸಂಸ್ಥೆ ದೃಢಪಡಿಸಿದೆ. ಇದು Infinix ಬ್ರಾಂಡ್‌ನ ಮೊದಲ AI PC ಲ್ಯಾಪ್‌ಟಾಪ್ ಆಗಿರಲಿದೆ. ಹೊಸ ತಂತ್ರಜ್ಞಾನದ ಮೇಲೆ ಆಸಕ್ತಿ ಹೊಂದಿರುವವರು ವೃತ್ತಿಪರರಿಗಾಗಿ ಈ ಲ್ಯಾಪ್‌ಟಾಪ್‌ ಅನ್ನು ವಿನ್ಯಾಸಗೊಳಿಸಿರುವುದಾಗಿ ಸಂಸ್ಥೆ ತಿಳಿಸಿದೆ. ವೇಗವಾದ AI ಪ್ರಕ್ರಿಯೆಯೊಂದಿಗೆ ಉತ್ಪಾದಕತೆ ಮತ್ತು ದಕ್ಷತೆಯನ್ನು ಹೆಚ್ಚಿಸಲು ಸುಧಾರಿತ Gen AI ಸಾಮರ್ಥ್ಯಗಳು ಮತ್ತು Intel AI ಬೂಸ್ಟ್ ಅನ್ನು ಈ ನೂತನ ಲ್ಯಾಪ್‌ಟಾಪ್ ಹೊಂದಿರಲಿದೆ. ಮುಂಬರುವ ಲ್ಯಾಪ್‌ಟಾಪ್‌ನ ವಿಶೇಷತೆಗಳೇನು ಎಂಬುದನ್ನು ಈ ಲೇಖನದಲ್ಲಿ ತಿಳಿಯಿರಿ.

Infinix ZeroBook Ultra ಇದು ಮುಂದಿನ ವಾರ ಅಂದರೆ ಜೂನ್ 27ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ ಎಂದು ಕಂಪನಿ ಬುಧವಾರ ದೃಢಪಡಿಸಿದೆ. ಇದು ಈ ತಿಂಗಳಿನಲ್ಲಿ Infinix ಬಿಡುಗಡೆ ಮಾಡುತ್ತಿರುವ ಎರಡನೇ ಪ್ರಾಡಕ್ಟ್‌ ಆಗಿರಲಿದೆ. ಜೂನ್ 21 ರಂದು Infinix Note 40 ಸ್ಮಾರ್ಟ್‌ಫೋನ್‌ ಅನ್ನು ಪರಿಚಯಿಸಲಿದೆ. AI PC ಗಳ ಯುಗವನ್ನು ಟೀಸಿಂಗ್ ಮಾಡಲಿರುವ Infinix ತನ್ನ ಮುಂಬರುವ ಲ್ಯಾಪ್‌ಟಾಪ್ ನಲ್ಲಿ ಕೃತಕ ಬುದ್ಧಿಮತ್ತೆಯನ್ನು ಹೊಂದಿರಲಿದೆ ಎಂದು ಹೇಳಿದೆ.

ಜೂನ್ 27ರಂದು ಭಾರತದಲ್ಲಿ ತನ್ನ ಮೊದಲ AI PC ಲ್ಯಾಪ್‌ಟಾಪ್ ಪರಿಚಯಿಸಲಿದೆ Infinix

ಹೈಲೆಟ್ಸ್‌:
*ಜೂನ್ 27 ರಂದು ಭಾರತದಲ್ಲಿ ತನ್ನ ZeroBook ಅಲ್ಟ್ರಾ ಲ್ಯಾಪ್‌ಟಾಪ್ ಬಿಡುಗಡೆ ಮಾಡುವುದಾಗಿ Infinix ತಿಳಿಸಿದೆ.
*ಇದು 32GB RAM ಜೊತೆಗೆ ಇಂಟೆಲ್ ಕೋರ್ ಅಲ್ಟ್ರಾ ಪ್ರೊಸೆಸರ್‌ನಿಂದ ನಡೆಸಲ್ಪಡುವ AI PC ಆಗಿರಲಿದೆ
*ಲ್ಯಾಪ್‌ಟಾಪ್ ಓವರ್‌ಬೂಸ್ಟ್ ಸ್ವಿಚ್ ಅನ್ನು ಹೊಂದಿದ್ದು, ಇದು ಕಾರ್ಯಕ್ಷಮತೆ ಹೆಚ್ಚಿಸಲು ಸಹಕಾರಿಯಾಗಿದೆ.

Infinix ZeroBook Ultra ನಿರೀಕ್ಷಿತ ಫೀಚರ್ಸ್‌:
ಇದು 15.6 ಇಂಚಿನ ಫುಲ್ HD ಡಿಸ್‌ಪ್ಲೇಯನ್ನು 100 ಪ್ರತಿಶತ sRGB ಕಲರ್ ಗ್ಯಾಮಟ್ ಕವರೇಜ್ ಹೊಂದಿರುವ ನಿರೀಕ್ಷೆಯಿದೆ. ಇದು ಕ್ವಾಡ್ ಸ್ಪೀಕರ್ ಸೆಟಪ್ ಅನ್ನು ಡಿಟಿಎಸ್ ಸೌಂಡ್ ಪ್ರೊಸೆಸಿಂಗ್ ತಂತ್ರಜ್ಞಾನದ ಬೆಂಬಲದೊಂದಿಗೆ ಸ್ಪಷ್ಟವಾದ ಆಡಿಯೊ ಹೊಂದಿರಲಿದೆ. ಇದು ಡ್ಯುಯಲ್ ಮೈಕ್ ಅರೇ ಜೊತೆಗೆ ಫುಲ್ ಹೆಚ್‌ಡಿ ಎಐ ವೆಬ್‌ಕ್ಯಾಮ್ ಅನ್ನು ಹೊಂದಿರಲಿದೆ ಎಂದು ಹೇಳಲಾಗುತ್ತಿದೆ.

ಲ್ಯಾಪ್‌ಟಾಪ್ ಅನ್ನು ಪವರ್ ಮಾಡುವುದು ಇಂಟೆಲ್ ಮೆಟಿಯರ್ ಲೇಕ್ ಅನ್ನು ಆಧರಿಸಿದ ಇಂಟೆಲ್ ಕೋರ್ ಅಲ್ಟ್ರಾ ಪ್ರೊಸೆಸರ್ ಆಗಿದಲಿದೆ, x86 ಸಿಪಿಯು ಆರ್ಕಿಟೆಕ್ಚರ್ ಹೊಂದಿರುವ 64 ಬಿಟ್ ಸಿಪಿಯು, ವೇಗವರ್ಧಿತ ಕಾರ್ಯಕ್ಷಮತೆಗಾಗಿ ಇಂಟೆಲ್ ಎಐ ಬೂಸ್ಟ್ ಎಂದು ಕರೆಯಲ್ಪಡುವ ಇನ್ ಬಿಲ್ಟ್ ನ್ಯೂರಲ್ ಪ್ರೊಸೆಸಿಂಗ್ ಯೂನಿಟ್ (ಎನ್‌ಪಿಯು) ನೊಂದಿಗೆ ಇದನ್ನು ಜೋಡಿಸಲಾಗುತ್ತದೆ. ಕಂಪನಿಯ ಪ್ರಕಾರ, ಈ NPU ವೇಗದ ಪ್ರಕ್ರಿಯೆಯನ್ನು ನಿರ್ವಹಿಸುವಾಗ ದೊಡ್ಡ ಡೇಟಾಸೆಟ್‌ಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿರಲಿದೆ.

AI PC ರೇ ಟ್ರೇಸಿಂಗ್ ಮತ್ತು XE SS ಫ್ರೇಮ್ ಆಕ್ಸಿಲರೇಶನ್‌ ಜೊತೆಗೆ ಇಂಟೆಲ್ ARC ಇಂಟಿಗ್ರೇಟೆಡ್ GPU ಅನ್ನು ಸಹ ಒಳಗೊಂಡಿದೆ. ಇದು 70 ಪ್ರತಿಶತದಷ್ಟು ವೇಗವಾಗಿ ಉತ್ಪಾದಕ AI ಕಾರ್ಯಗಳನ್ನು ನಿರ್ವಹಿಸುತ್ತದೆ ಎಂದು ಹೇಳಲಾಗುತ್ತಿದೆ. ಇದು 32GB DDR5 RAM ಮತ್ತು 1TB SSD ಸಂಗ್ರಹಣೆಯನ್ನು ಹೊಂದಿರಲಿದೆ ಎಂದು ನಿರೀಕ್ಷಿಸಲಾಗಿದೆ. ಇದು ಓವರ್‌ ಬೂಸ್ಟ್ ಸ್ವಿಚ್ ಅನ್ನು ಸಹ ಒಳಗೊಂಡಿರುತ್ತದೆ ಎಂದು ಸಂಸ್ಥೆ ಹೇಳಿದೆ. ಇದು ಅತ್ಯಂತ ಬೇಡಿಕೆಯ ಕಾರ್ಯಗಳನ್ನು ನಿರ್ವಹಿಸಲು ಲ್ಯಾಪ್‌ಟಾಪ್‌ನ ಕಾರ್ಯಕ್ಷಮತೆಯನ್ನು ಸಂಕ್ಷಿಪ್ತ ಅವಧಿಗೆ ಹೆಚ್ಚಿಸುತ್ತದೆ.

Infinix ZeroBook Ultra ಇದು 100W ವೇಗದ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 70Wh ಬ್ಯಾಟರಿ ಜೊತೆ ಬರುವ ಸಾಧ್ಯತೆಗಳಿದೆ. ಇದರ ಬೆಲೆಯ ಬಗ್ಗೆ ಯಾವುದೇ ವಿವರಗಳನ್ನು ಬಹಿರಂಗಪಡಿಸಲಾಗಿಲ್ಲವಾದರೂ, ಲ್ಯಾಪ್‌ಟಾಪ್ ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಾಗುವ ನಿರೀಕ್ಷೆಯಿದೆ.

Best Mobiles in India

English summary
Infinix has confirmed that it will launch its much-awaited ZeroBook Ultra laptop in India on June 27. This will be the first AI PC laptop from the Infinix brand.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+