Subscribe to Gizbot

5000mAh ಬ್ಯಾಟರಿ ಇರುವ ಇನ್ ಫೋಕಸ್ ಟರ್ಬೋ 5 ಸ್ಮಾರ್ಟ್ ಫೋನ್ ಬೆಲೆ ರೂ.6,999 ಮಾತ್ರ..!!!!

By: Precilla Dias

ಇನ್ ಪೋಕಸ್ ಬಜೆಟ್ ಸ್ಮಾರ್ಟ್ ಫೋನ್ ಟರ್ಬೋ 5 ಬಿಡುಗಡೆ ಮಾಡಿದ್ದು, ಈ ಫೋನ್ ಬಜೆಟ್ ಶ್ರೇಣಿಯಲ್ಲಿ ಲಭ್ಯವಿರುವ ಬೇರೆಲ್ಲಾ ಫೋನ್ ಗಳಿಗೆ ಭಾರೀ ಸ್ಪರ್ಧೇಯನ್ನು ನೀಡಲಿದ್ದು, ರೂ.6,999ಕ್ಕೆ ದೊರೆಯುವ ಈ ಫೋನಿನಲ್ಲಿ 5000mAh ಬ್ಯಾಟರಿಯನ್ನು ಕಾಣಬಹುದಾಗಿದೆ. ಇದೇ ಫೋನಿನ ಹೈಲೈಟ್ ಎಂದರೆ ತಪ್ಪಾಗುವುದಿಲ್ಲ.

5000mAh ಬ್ಯಾಟರಿ ಇರುವ ಇನ್ ಫೋಕಸ್ ಟರ್ಬೋ 5 ಸ್ಮಾರ್ಟ್ ಫೋನ್ ಬೆಲೆ ರೂ.6,999 ಮಾತ

ಇನ್ ಫೋಕಸ್ ಟರ್ಬೋ 5 ಸ್ಮಾರ್ಟ್ ಫೋನ್ ಅಮೆಜಾನ್ ಇಂಡಿಯಾದಲ್ಲಿ ಮಾರಾಟವಾಗುತ್ತಿದ್ದು, 2GB RAM ಆವೃತ್ತಿಯ ಫೋನ್ ರೂ.6,999 ಹಾಗೇ 3GB RAM ಆವೃತ್ತಿಯ ಫೋನ್ ರೂ.7,999ಕ್ಕೆ ದೊರೆಯುತ್ತಿದೆ. ಜುಲೈ 4 ರಿಂದ ಫೋನ್ ಮುಕ್ತವಾಗಿ ದೊರೆಯಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಪವರ್ ಫುಲ್ ಡಿಸೈನ್:

ಪವರ್ ಫುಲ್ ಡಿಸೈನ್:

ಇನ್ ಫೋಕಸ್ ಟರ್ಬೋ 5 ಪವರ್ ಫುಲ್ ಡಿಸೈನ್ ಹೊಂದಿದ್ದು, ಯೂನಿಬಾಡಿ ಮೆಟಲ್ ಬಿಲ್ಡ್ ಹೊಂದಿದ್ದು, ಸ್ಲಿಮ್ ಮತ್ತು ಲೈಟ್ ಆಗಿದೆ. ಇದರಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಹಿಂಭಾಗದಲ್ಲಿ ಕಾಣಬಹುದಾಗಿದೆ. ಇದು 0.5 ಸೆಕೆಂಡ್ಸ್ ನಲ್ಲಿ ಸ್ಕ್ರಿನ್ ಅನ್ ಲಾಕ್ ಮಾಡಲಿದೆ. ಇದಲ್ಲದೆ ಸೆಲ್ಫಿ ತೆಗೆದುಕೊಳ್ಳಲು ಫ್ಲಾಷ್ ಲೈಟ್ ನೀಡಲಾಗಿದೆ. 5.2 ಇಂಚಿನ HD ಡಿಸ್ ಪ್ಲೇ ಕಾಣಬಹುದಾಗಿದೆ. 2.5D ಕರ್ವಡ್ ಗ್ಲಾಸ್ ಪ್ಯಾನಲ್ ಹೊಂದಿದೆ.

ಹಾರ್ಡ್ ವೇರ್:

ಹಾರ್ಡ್ ವೇರ್:

ಇನ್ ಫೋಕಸ್ ಟರ್ಬೋ 5ನಲ್ಲಿ ಕ್ವಾಡ್ ಕೋರ್ ಮಿಡಿಯಾ ಟೆಕ್ MT6734 ಫ್ರೋಸೆಸರ್ ಇದರಲ್ಲಿದೆ. 2GB RAM ಮತ್ತು 16GB ಸ್ಟೋರೆಜ್ ಹಾಗೂ 3GB RAM ಮತ್ತು 32 ಸ್ಟೋರೆಜ್ ನಲ್ಲಿ ಈ ಫೋನ್ ಲಭ್ಯವಿದೆ. ಅಲ್ಲದೇ ಎಸ್ ಡಿ ಕಾರ್ಡ್ ಹಾಕಿಕೊಳ್ಳುವ ಮೂಲಕ 32 GB ವರೆಗೂ ಮೆಮೊರಿ ವಿಸ್ತರಿಕೊಳ್ಳಬಹುದಾಗಿದೆ.

ಕ್ಯಾಮೆರಾ:

ಕ್ಯಾಮೆರಾ:

ಇನ್ ಫೋಕಸ್ ಟರ್ಬೋ 5 ಸ್ಮಾರ್ಟ್ ಫೋನಿನಲ್ಲಿ 13 MP ಕ್ಯಾಮೆರಾವನ್ನು ಹಿಂಭಾಗದಲ್ಲಿ ಕಾಣಬಹುದಾಗಿದೆ. ಮುಂಭಾಗದಲ್ಲಿ 5 MP ಕ್ಯಾಮೆರಾವನ್ನು ಕಾಣಬಹುದಾಗಿದೆ. ಇದರಲ್ಲಿ ಅಪರ್ಚರ್ ಮತ್ತು ಬ್ಯೂಟಿ ಮೋಡ್ ಕಾಣಬಹುದಾಗಿದೆ.

ಈ ಫೋನಿನ ಹೈಲೈಟ್:

ಈ ಫೋನಿನ ಹೈಲೈಟ್:

ಇನ್ ಫೋಕಸ್ ಟರ್ಬೋ 5 ಸ್ಮಾರ್ಟ್ ಫೋನಿನಲ್ಲಿ 5000 mAh ಬ್ಯಾಟರಿಯನ್ನು ಕಾಣಬಹುದು. ಇದು 34 ದಿನಗಳ ಸ್ಟಾಂಡ್ ಬೈ ಕೊಡಲಿದೆ. ಇದರಲ್ಲಿ 23 ಗಂಟೆಗಳ ಕಾಲ ನಿರಂತರವಾಗಿ ವಿಡಿಯೋ ಕಾಲಿಂಗ್ ಮಾಡಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
InFocus Turbo 5 with a massive 5000mAh battery has been launched today and is exclusive to Amazon.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot