ಇನ್ಫೋಸಿಸ್‌ಗೆ ಮಾಜಿ ಸಿಎಫ್ಒ 'ರಾಜೀವ್ ಬನ್ಸಾಲ್'ಗೆ ದಕ್ಕಿತು ಬಡ್ಡಿ ಸಮೇತ 12.17 ಕೋಟಿ!
2015ರಲ್ಲಿ ಇನ್ಫೋಸಿಸ್ ತೊರೆದಿದ್ದ ಕಂಪೆನಿಯ ಮಾಜಿ ಮುಖ್ಯ ಹಣಕಾಸು ಅಧಿಕಾರಿ 'ರಾಜೀವ್ ಬನ್ಸಾಲ್' ಅವರಿಗೆ ನೀಡಬೇಕಿದ್ದ ಬಾಕಿ ಹಣ 12.17 ಕೋಟಿ ರೂಪಾಯಿಯನ್ನು ಬಡ್ಡಿ ಸಮೇತ ನೀಡುವಂತೆ ವ್ಯಾಜ್ಯ ಒಪ್ಪಂದ ನ್ಯಾಯಾಧಿಕರಣ ಆದೇಶಿಸಿದೆ. ಈ ಮೂಲಕ ಕುತೋಹಲ ಮೂಡಿಸಿದ್ದ ಈ ಪ್ರಕರಣದಲ್ಲಿ 'ರಾಜೀವ್ ಬನ್ಸಾಲ್' ಅವರಿಗೆ ಇನ್ಫೋಸಿಸ್ ಕಂಪೆನಿ ತಲೆಬಾಗಿದೆ.
2015 ರಲ್ಲಿ ರಾಜೀವ್ ಬನ್ಸಾಲ್ ಕಂಪನಿಯನ್ನು ತೊರೆಯುವ ವೇಳೆ 24 ತಿಂಗಳ ವೇತನ ಪರಿಹಾರವಾಗಿ 17.38 ಕೋಟಿ ರೂಪಾಯಿ ನೀಡುವುದಾಗಿ ಇನ್ಫೋಸಿಸ್ ಒಪ್ಪಿತ್ತು. ಆದರೆ, ಈ ಪೈಕಿ 5.2 ಕೋಟಿ ರೂಪಾಯಿಯನ್ನು ಬನ್ಸಾಲ್ ಅವರಿಗೆ ಪಾವತಿಸಿದ್ದ ಕಂಪನಿ, ಉಳಿದ ಹಣ ನೀಡಲು ಹಿಂದೇಟು ಹಾಕಿತ್ತು. ತದ ನಂತರ ಈ ವ್ಯಾಜ್ಯ ಕೋರ್ಟ್ ಮೆಟ್ಟಲೇರಿ ಕುತೋಹಲ ಮೂಡಿಸಿತ್ತು.

ಇನ್ನು ಇದೀಗ ಈ ಪ್ರಕರಣದ ತೀರ್ಪು ಹೊರಬಿದ್ದಿದ್ದು, ನ್ಯಾಯಾಧಿಕರಣ ಇನ್ಫೋಸಿಸ್‌ನ ವಾದವನ್ನು ತಳ್ಳಿಹಾಕಿದ್ದು, ಕಂಪನಿಯು ಬಾಕಿ ಉಳಿಸಿಕೊಂಡಿರುವ ಹಣವನ್ನು ಬಡ್ಡಿ ಸಮೇತ ರಾಜೀವ್ ಬನ್ಸಾಲ್ ಅವರಿಗೆ ನೀಡುವಂತೆ ಮಂಗಳವಾರ ಆದೇಶಿಸಿದೆ. ನ್ಯಾಯಾಧಿಕರಣದ ಆದೇಶದ ಬೆನ್ನಲ್ಲೇ ಮಂಗಳವಾರ ಇನ್ಫೋಸಿಸ್‌ನ ಷೇರು ಸೂಚ್ಯಂಕ ಶೇಕಡ 1ರಷ್ಟು ಕುಸಿತ ಕಂಡಿದೆ.
17.38 ಕೋಟಿ ಅಥವಾ 24 ತಿಂಗಳುಗಳ ವೇತನವನ್ನು ಪಾವತಿಸಲು ಒಪ್ಪಿಕೊಳ್ಳಲಾಗಿತ್ತು, ಆದರೆ, ಸಹ ಸಂಸ್ಥಾಪಕ ನಾರಾಯಣಮೂರ್ತಿ ಹಾಗೂ ಇತರರು ಈ ಪ್ಯಾಕೇಜ್ ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಇದಾದ ನಂತರ ಬನ್ಸಾಲ್ ತಾವು ಈ ಮುನ್ನ ಕೆಲಸ ಮಾಡುತ್ತಿದ್ದ ಸಂಸ್ಥೆಯನ್ನು ಮಧ್ಯಸ್ಥಿಕೆ ವ್ಯವಹಾರಕ್ಕೆ ಎಳೆದು ತಂದದ್ದಲ್ಲದೆ ಬಾಕಿ ಮೊತ್ತ ಕೊಡುವಂತೆ ಆಗ್ರಹಿಸಿದ್ದರು.

ಈ ಪ್ರಕರಣದಲ್ಲಿ ತನ್ನ ವಾದ ಮಂಡಿಸಿದ್ದ ಇನ್ಫೋಸಿಸ್, 'ಬನ್ಸಾಲ್ ನಡೆಯಿಂದ ಕಂಪನಿಗೆ ಹಾನಿಯಾಗಿದ್ದು, ವೇತನ ಪರಿಹಾರವಾಗಿ ಅವರಿಗೆ ಈ ಮೊದಲು ನೀಡಿರುವ 5.2 ಕೋಟಿ ರೂಪಾಯಿಯನ್ನು ವಾಪಸ್ ಕೊಡಿಸಬೇಕು" ಎಂದು ಹೇಳಿತ್ತು. ಆದರೆ, ನ್ಯಾಯಾಧಿಕರಣದ ಇನ್ಫೋಸಿಸ್ ವಾದವನ್ನು ತಳ್ಳಿಹಾಕಿ 'ರಾಜೀವ್ ಬನ್ಸಾಲ್' ಅವರಿಗೆ ನ್ಯಾಯವನ್ನು ಒದಗಿಸಿದೆ.


Click it and Unblock the Notifications








