'ಸ್ಪಾರ್ಕ್ ಕ್ಯಾಚ್ ದೆಮ್ ಯಂಗ್’ನಲ್ಲಿ ಎಐ ಮತ್ತು ಬ್ಲಾಕ್‍ಚೈನ್ ಬಗ್ಗೆ ತರಬೇತಿ!!

|

ಹೈಸ್ಕೂಲ್ ವಿದ್ಯಾರ್ಥಿಗಾಗಿ ಆಯೋಜಿಸುವ ಮಾಹಿತಿ ತಂತ್ರಜ್ಞಾನ ತರಬೇತಿ ಕಾರ್ಯಕ್ರಮ ''ಸ್ಪಾರ್ಕ್ ಕ್ಯಾಚ್ ದೆಮ್ ಯಂಗ್''ನ 22ನೇ ಆವೃತ್ತಿಯು ಇತ್ತೀಚೆಗೆ ಯಶಸ್ವಿಯಾಗಿ ಮುಗಿದಿದೆ. ಇನ್ಫೊಸಿಸ್ ಬೆಂಗಳೂರು ಡೆವಲಪ್‍ಮೆಂಟ್ ಸೆಂಟರ್ ಸಂಸ್ಥೆ ಪ್ರತಿ ವರ್ಷ ಆಯೋಜಿಸುವ ಈ ಕಾರ್ಯಕ್ರಮದಲ್ಲಿ ಈ ಬಾರಿ ಸುಮಾರು 60 ಮಕ್ಕಳು ಎರಡು ವಾರ ತರಬೇತಿ ಪಡೆದಿದ್ದಾರೆ.

'ಸ್ಪಾರ್ಕ್ ಕ್ಯಾಚ್ ದೆಮ್ ಯಂಗ್' ತರಬೇತಿಗಾಗಿ ಈ ಬಾರಿ 200ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದವು. ಸಾಮಾನ್ಯ ವಿಜ್ಞಾನ ಹಾಗೂ ಗಣಿತ ಪರೀಕ್ಷೆಗಳ ಮೂಲಕ ಅಂತಿಮವಾಗಿ 60 ವಿದ್ಯಾರ್ಥಿ ಗಳನ್ನು ತರಬೇತಿಗೆ ಆಯ್ಕೆ ಮಾಡಲಾಗಿತ್ತು. ಇದೀಗ ತರಬೇತಿ ಮುಗಿದಿದ್ದು, ದೈನಂದಿನ ಬದುಕಿನಲ್ಲಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವಂತೆ ಅವರಿಗೆ ಮಾರ್ಗದರ್ಶನ ನೀಡಲಾಯಿತು.

'ಸ್ಪಾರ್ಕ್ ಕ್ಯಾಚ್ ದೆಮ್ ಯಂಗ್’ನಲ್ಲಿ ಎಐ ಮತ್ತು ಬ್ಲಾಕ್‍ಚೈನ್ ಬಗ್ಗೆ ತರಬೇತಿ!!

ಇತ್ತೀಚಿನ ತಂತ್ರಜ್ಞಾನಗಳಾದ ಕೃತಕ ಬುದ್ಧಿಮತ್ತೆ, ಬಿಗ್ ಡೇಟಾ, ಐಒಟಿ, ಕ್ಲೌಡ್ ಮತ್ತು ಬ್ಲಾಕ್‍ಚೈನ್‍ನಂಥ ಡಿಜಿಟಲ್ ತಂತ್ರಜ್ಞಾನದ ಕುರಿತು ಮಕ್ಕಳಿಗೆ ಹೆಚ್ಚು ತರಬೇತಿ ನೀಡಲಾಯಿತು. ಜೊತೆಗೆ ಇನ್ಫೊಸಿಸ್‌ನಲ್ಲಿ ತರಬೇತಿ ಅನುಭವ ಹೊಂದಿರುವ ಹಾಗೂ ಇನ್ಫೊಸಿಸ್ ಉದ್ಯೋಗಿಗಳು ಸೇರಿ ವಿದ್ಯಾರ್ಥಿಗಳಿಗೆ ಪ್ರಾಜೆಕ್ಟ್‌ನಲ್ಲಿ ಕೆಲಸ ಮಾಡಲು ಮಾರ್ಗದರ್ಶನ ನೀಡಿದರು.

ಮೊದಲ ವಾರದಲ್ಲಿ ವಿದ್ಯಾರ್ಥಿಗಳಿಗೆ ಆಧುನಿಕ ತಂತ್ರಜ್ಞಾನ ಜತೆಗೆ ಸಂವಹನ ಹಾಗೂ ಕೌಶಲ ಅಭಿವೃದ್ಧಿ ಕುರಿತು ಮಾಹಿತಿ ನೀಡಲಾದರೆ, ಎರಡನೇ ವಾರದಲ್ಲಿ ಮಾರ್ಗದರ್ಶಕರ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಪ್ರಾಜೆಕ್ಟ್ ಮಾಡಿಸಲಾಯಿತು. ಕಂಪ್ಯೂಟಿಂಗ್, ಐಒಟಿ, ಬ್ಲಾಕ್ ಚೈನ್, ಚಾಟ್‍ಬೋಟ್ಸ್ ಪ್ರಾಜೆಕ್ಟ್ ನೀಡಿ ಕಲಿಕೆಯನ್ನು ಅನ್ವಯಿಸುವುದನ್ನು ಅವರಿಗೆ ತಿಳಿಸಿ ಕೊಡಲಾಯಿತು.

'ಸ್ಪಾರ್ಕ್ ಕ್ಯಾಚ್ ದೆಮ್ ಯಂಗ್’ನಲ್ಲಿ ಎಐ ಮತ್ತು ಬ್ಲಾಕ್‍ಚೈನ್ ಬಗ್ಗೆ ತರಬೇತಿ!!

ಅಂತರ್ಜಾಲ, ಸಾಫ್ಟ್‌ವೇರ್ ಹಾಗೂ ವ್ಯವಹಾರದಲ್ಲಿ ಕಂಪ್ಯೂಟರ್ ಬಳಕೆಕುರಿತು ಹೆಚ್ಚು ತಿಳಿವಳಿಕೆ ನೀಡುವಲ್ಲಿ ಈ 'ಸ್ಪಾರ್ಕ್ ಕ್ಯಾಚ್ ದೆಮ್ ಯಂಗ್' ಅತ್ಯುತ್ತಮ ಕಾರ್ಯಗಾರವಾಗಿದೆ, ಎರಡು ದಶಕಗಳಿಂದ ನಡೆಯುತ್ತಿರುವ ಈ ಕಾರ್ಯಕ್ರಮವು, ಯುವ ಮನಸ್ಸುಗಳು ಹೊಸ ತಂತ್ರಜ್ಞಾನವನ್ನು ದೈನಂದಿನ ಬದುಕಿನಲ್ಲಿ ಅಳವಡಿಸಿಕೊಳ್ಳುವಂತೆ ಮಾಡುವ ಉದ್ದೇಶವನ್ನು ಹೊಂದಿದೆ.

ಓದಿರಿ: 1999ರ ಮೊದಲು ಹುಟ್ಟಿದವರು ಮಾತ್ರ ಈ ಮೀಮ್ಸ್ ನೋಡಿ!..ಬೇರೆಯವರಿಗೆ ಇವು ಅರ್ಥವಾಗಲ್ಲ!!

Best Mobiles in India

English summary
Infosys Bangalore Development Center (DC) concluded the 22nd edition of ‘Spark Catch Them Young’, the annual training program in Information Technology for high school students. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X