ಸಾವಿರಾರು ಉದ್ಯೋಗಿಗಳಿಗೆ ಗೇಟ್‌ಪಾಸ್ ಸುದ್ದಿ!..ಇನ್ಫೋಸಿಸ್ ಪ್ರತಿಕ್ರಿಯೆ ಏನು?

|

ದೇಶದ ಐಟಿ ತಂತ್ರಜ್ಞಾನ ದೈತ್ಯ ಇನ್ಫೋಸಿಸ್​ ಕಂಪನಿಯು ತನ್ನ ಸಾವಿರಾರು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಿದೆ ಎಂಬ ಮಾಧ್ಯಮಗಳ ವರದಿ ಬಗ್ಗೆ ಇನ್ಫೋಸಿಸ್ ಕಂಪೆನಿಯ ಅಧಿಕಾರಿಯೋರ್ವರು ಪ್ರತಿಕ್ರಿಯಿಸಿದ್ದಾರೆ. ಇನ್ಫೋಸಿಸ್​ ಕಂಪನಿ ಸಾವಿರಾರು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಿದೆ ಎಂಬ ಅನಗತ್ಯ ವರದಿ ಮಾಡುವುದನ್ನು ನಿಲ್ಲಿಸಿ. ಕಂಪನಿಯು ತನ್ನ ವಿವಿಧ ಹಂತಗಳಲ್ಲಿನ ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸುತ್ತಿಲ್ಲ ಎಂದು ಕಂಪನಿಯ ಅಧಿಕಾರಿಯೊಬ್ಬರು ಇ-ಮೇಲ್​ ಮೂಲಕ ತಿಳಿಸಿದ್ದಾರೆ.

ಇನ್ಫೋಸಿಸ್​

ಹೌದು, ಇತ್ತೀಚಿನ ಕೆಲದಿನಗಳಿಂದ ಆಗುತ್ತಿರುವ ಬೆಳವಣಿಗೆಗಳಿಂದಾಗಿ ಇನ್ಫೋಸಿಸ್​ ತನ್ನ ಸಾವಿರಾರು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಿದೆ ಎಂದು ವರದಿಯಾಗಿತ್ತು. ಆದರೆ ಈ ವರದಿಯನ್ನು ತಳ್ಳಿಹಾಕಿರುವ ಇನ್ಫೋಸಿಸ್ ಅಧಿಕಾರಿಯೊರ್ವರು, ಉನ್ನತ ಕಾರ್ಯಕ್ಷಮತೆಯ ಸಂಸ್ಥೆಯಲ್ಲಿ ಅನೌಪಚಾರಿಕವಾಗಿ ಕ್ಷೀಣಿಸುವಿಕೆ ಸಾಮಾನ್ಯ ವ್ಯವಹಾರದ ಅವಿಭಾಜ್ಯವಾಗಿರುತ್ತದೆ. ಇದನ್ನು ಯಾವುದೇ ಮಟ್ಟದಲ್ಲಿ ನಿರ್ದಿಷ್ಟವಾಗಿ ವಜಾ ಮಾಡುವುದು ಎಂದು ವ್ಯಾಖ್ಯಾನಿಸಬಾರದು ಎಂದು ಸುದ್ದಿ ಸಂಸ್ಥೆಯೊಂದಕ್ಕೆ ಇ-ಮೇಲ್​ ಮೂಲಕ ತಿಳಿಸಿದ್ದಾರೆ.

ಮಾಧ್ಯಮ ವರದಿ

ಮಾಧ್ಯಮ ವರದಿಯು ಕೇವಲ ದತ್ತಾಂಶ ಆಧಾರಿತ ಊಹಾಪೋಹ ಮತ್ತು ತಪ್ಪು ದತ್ತಾಂಶಗಳಿಂದ ಕೂಡಿದೆ. ಯಾವುದೇ ಕಂಪನಿಯು ತನ್ನ ನಿರೀಕ್ಷೆಗಳ ಅಥವಾ ಕಾರ್ಯಕ್ಷಮತೆಯ ಉನ್ನತ ಗುಣಮಟ್ಟವನ್ನು ಅಳೆಯುವುದಕ್ಕಾಗಿಯೇ ತನ್ನದೇ ಆದ ಕೆಲವು ಮಾನದಂಡಗಳನ್ನು ಹಾಕಿಕೊಂಡಿರುತ್ತದೆ. ಇದು ಕೆಲವು ತ್ರೈಮಾಸಿಕದಲ್ಲಿ ನಡೆಯುತ್ತಿರುತ್ತದೆ. ಉದ್ಯೋಗಿ ಎರಡು ವರ್ಷ ಅಥವಾ ಎರಡು ತ್ರೈಮಾಸಿಕಗಳವರೆಗೆ ಸಮರ್ಪಕವಾಗಿ ಕಾರ್ಯನಿರ್ವಹಿಸದಿದ್ದರೇ ಅದು ಅವರ ಕಾರ್ಯಕ್ಷಮತೆಗೆ ಸಂಬಂಧಿಸಿದ ವಿಷಯವಾಗಿರುತ್ತದೆ ಎಂದು ಅವರು ಹೇಳಿದ್ದಾರೆ.

ಉದ್ಯೋಗಿ

ಉದ್ಯೋಗಿ ಎರಡು ವರ್ಷ ಅಥವಾ ಎರಡು ತ್ರೈಮಾಸಿಕಗಳವರೆಗೆ ಸಮರ್ಪಕವಾಗಿ ಕಾರ್ಯನಿರ್ವಹಿಸದಿದ್ದರೇ ಅದು ಅವರ ಕಾರ್ಯಕ್ಷಮತೆಗೆ ಸಂಬಂಧಿಸಿದ ವಿಷಯವಾಗಿರುತ್ತದೆ. ಅಂತಹ ನೌಕರರನ್ನು ಕಾರ್ಯನಿರ್ವಹಿಸದ ನೌಕರರ ಎಂದು ಕಂಪನಿಯ ಪರಿಭಾಷೆಯಲ್ಲಿ ಕರೆಯಲಾಗುತ್ತದೆ. ಜೊತೆಗೆ ಇದು ಆಂತರಿಕ ಪ್ರಕ್ರಿಯೆ ಆಗಿರುವುದರಿಂದ ಈ ಬಗ್ಗೆ ನಾವು ದತ್ತಾಂಶ ಹಂಚಿಕೊಳ್ಳಲು ಸಾಧ್ಯವಿಲ್ಲ. ಅನಗತ್ಯ ವರದಿ ಮಾಡುವುದನ್ನು ನಿಲ್ಲಿಸುವಂತೆ ಅವರು ಹೇಳಿದ್ದಾರೆ. ಇದು ಮಾಧ್ಯಮದವರಿಗೆ ಮತ್ತೊಂದು ಪ್ರಮುಖ ಪ್ರಶ್ನೆಯೊಂದನ್ನು ಮೂಡಿಸಿದೆ.

ಆಂತರಿಕ ಪ್ರಕ್ರಿಯೆ

ಕಂಪೆನಿ ಆಂತರಿಕ ಪ್ರಕ್ರಿಯೆ ಆಗಿರುವುದರಿಂದ ಈ ಬಗ್ಗೆ ನಾವು ದತ್ತಾಂಶ ಹಂಚಿಕೊಳ್ಳಲು ಸಾಧ್ಯವಿಲ್ಲ ಎಂದು ಇನ್ಫೋಸಿಸ್ ಅಧಿಕಾರಿ ಹೇಳಿರುವುದು ಇನ್ಫೋಸಿಸ್​ ಕಂಪನಿ ತನ್ನ ಸಾವಿರಾರು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಿದೆಯಾ ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರವಲ್ಲ. ಹಾಗೆಯೇ, ಇತ್ತೀಚಿನ ದಿನಗಳಲ್ಲಿ ಇಂತಹ ಎಷ್ಟು ಉದ್ಯೋಗಿಗಳನ್ನು ವಜಾ ಮಾಡಲಾಗಿದೆ ಎಂದು ಸಹ ಇನ್ಫೋಸಿಸ್ ಬಹಿರಂಗಪಡಿಸಿಲ್ಲ. ಮಾಧ್ಯಮ ವರದಿಯು ಕೇವಲ ದತ್ತಾಂಶ ಆಧಾರಿತ ಊಹಾಪೋಹವಾದರೂ ಅದಕ್ಕೆ ಉತ್ತರಿಸಲು ಕಂಪೆನಿಗೆ ಕಷ್ಟವೇಕೆ ಎಂದು ಹೇಳಲಾಗುತ್ತಿದೆ.

Best Mobiles in India

English summary
Recently, Cognizant had said that it will eliminate as many as 7,000 jobs globally

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X