Subscribe to Gizbot

ಕ್ಯಾಂಪಸ್ ನೇಮಕಾತಿ ಮೂಲಕ 19 ಸಾವಿರ ಜನರ ತರಬೇತಿಗೆ ಇನ್ಫೋಸಿಸ್ ಆಹ್ವಾನ!!

Written By:

ಸಾಫ್ಟ್‌ವೇರ್‌ ಸೇವೆಗಳನ್ನು ರಫ್ತು ಮಾಡುವ ದೇಶದ ಎರಡನೇ ಅತಿ ದೊಡ್ಡ ಸಾಫ್ಟ್‌ವೇರ್‌ ಕಂಪೆನಿ ಇನ್ಫೊಸಿಸ್, ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ನಿರೀಕ್ಷೆಗಿಂತಲೂ ಉತ್ತಮ ಲಾಭಗಳಿಸಿದೆ.! ಇದೇ ಸುದ್ದಿಯ ಜೊತೆಗೆ ಕ್ಯಾಂಪಸ್ ನೇಮಕಾತಿ ಮೂಲಕ 19 ಸಾವಿರ ಮಂದಿಗೆ ತರಬೇತಿಗೆ ಇನ್ಫೋಸಿಸ್ ಆಹ್ವಾನಿಸಿದೆ.!!

ಸಂಶೋಧನೆ ಮತ್ತು ತರಬೇತಿಯಿಂದ ಕಂಪೆನಿಯಲ್ಲಿ ಪರಿವರ್ತನೆ ಸಾಧ್ಯವಾಗುತ್ತಿದೆ. ಮುಂದಿನ ಪೀಳಿಗೆಯ ಪ್ರಮುಖ ಸೇವಾ ಕಂಪೆನಿಯಾಗಿ ಇನ್ಫೊಸಿಸ್‌ ಬೆಳೆಯುತ್ತಿದೆ ಎನ್ನುವುದು ಹೆಮ್ಮೆಯ ವಿಷಯವಾಗಿದೆ' ಎಂದು ಕಂಪೆನಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ವಿಶಾಲ್‌ ಸಿಕ್ಕಾ ಹೇಳಿದ್ದಾರೆ. ಹಾಗಾದರೆ, ಇನ್ಫೊಸಿಸ್ ಈ ವರ್ಷಗಳಿಸಿರುವ ಆದಾಯ ಎಷ್ಟು? ಕ್ಯಾಂಪಸ್ ನೇಮಕಾತಿ ಹೇಗೆ ನಡೆಯುತ್ತದೆ ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
₹3,483 ಕೋಟಿ ನಿವ್ವಳ ಲಾಭ!

₹3,483 ಕೋಟಿ ನಿವ್ವಳ ಲಾಭ!

ಈ ವರ್ಷದ ಏಪ್ರಿಲ್‌-ಜೂನ್‌ ತ್ರೈಮಾಸಿಕದಲ್ಲಿ ಇನ್ಫೊಸಿಸ್ ₹3,483 ಕೋಟಿಗಳಷ್ಟು ನಿವ್ವಳ ಲಾಭ ಗಳಿಸಿದೆ. ಕಳೆದ ವರ್ಷ ಇದೇ ತ್ರೈಮಾಸಿಕದಲ್ಲಿ ನಿವ್ವಳ ಲಾಭ ₹3,436 ಕೋಟಿಗಳಷ್ಟಿತ್ತು. ಇದಕ್ಕೆ ಹೋಲಿಸಿದರೆ ಲಾಭದ ಪ್ರಮಾಣ ಶೇ 1.3ರಷ್ಟು ವೃದ್ಧಿಯಾಗಿದೆ.!!

ವರ್ಷದ ಒಟ್ಟು ಆದಾಯ ಎಷ್ಟು?

ವರ್ಷದ ಒಟ್ಟು ಆದಾಯ ಎಷ್ಟು?

ಉತ್ತರ ಅಮೆರಿಕ ಮತ್ತು ಯುರೋಪ್‌ನಲ್ಲಿ ವಹಿವಾಟು ಹೆಚ್ಚಾಗಿರುವುದರಿಂದ ನಿವ್ವಳ ಲಾಭದಲ್ಲಿ ಏರಿಕೆ ಕಂಡುಬಂದಿದೆ ಎಂದು ಇನ್ಫೊಸಿಸ್ ತಿಳಿಸಿದೆ. ತ್ರೈಮಾಸಿಕದಲ್ಲಿ ಕಂಪೆನಿಯ ವರಮಾನ ₹16,782 ಕೋಟಿಗಳಿಂದ ₹17,078 ಕೋಟಿಗಳಿಗೆ ಹೆಚ್ಚಾಗಿದೆ.

10 ಸಾವಿರ ಉದ್ಯೋಗ:

10 ಸಾವಿರ ಉದ್ಯೋಗ:

ಭಾರತದಲ್ಲಿ ಕೇವಲ ಆರು ತಿಂಗಳಿನಲ್ಲಿ 10 ಸಾವಿರ ಉದ್ಯೋಗ ನೇಮಕಾತಿ ಮಾಡಿಕೊಳ್ಳುವುದಾಗಿ ಇನ್ಫೊಸಿಸ್ ಹೇಳಿದೆ. ಇನ್ನು ಎರಡು ವರ್ಷಗಳಲ್ಲಿ ಅಮೆರಿಕದಲ್ಲಿ 10 ಸಾವಿರ ಮಂದಿಗೆ ಉದ್ಯೋಗ ನೀಡುವುದಾಗಿ ಇನ್ಫೊಸಿಸ್ ಕಂಪೆನಿ ಪ್ರಕಟಿಸಿದೆ

9 ಸಾವಿರ ಮಂದಿಗೆ ತರಬೇತಿ!!

9 ಸಾವಿರ ಮಂದಿಗೆ ತರಬೇತಿ!!

ಸಂಶೋಧನೆ ಮತ್ತು ತರಬೇತಿಯ ಅವಶ್ಯಕತೆಯ ಹಿನ್ನಲೆಯಲ್ಲಿ ಭಾರತದ 19 ಸಾವಿರ ಮಂದಿಗೆ ತರಬೇತಿ ನೀಡಲು ಇನ್ಫೊಸಿಸ್ ಮುಂದಾಗಿದೆ.! ವಿಧ್ಯಾರ್ಥಿಗಳು ಆನ್‌ಲೈನ್‌ ಮೂಲಕವೂ ತರಬೇತಿಗಾಗಿ ಅರ್ಜಿಸಲ್ಲಿಸಬಹುದಾಗಿದೆ.!!

ಭಾರತದಲ್ಲಿ ನೇಮಕಾತಿಗೆ ಹಿನ್ನಡೆ ಇಲ್ಲ!!

ಭಾರತದಲ್ಲಿ ನೇಮಕಾತಿಗೆ ಹಿನ್ನಡೆ ಇಲ್ಲ!!

ಅಮೆರಿಕದಲ್ಲಿ ನಡೆಸುವ ಇನ್ಫೊಸಿಸ್ ನೇಮಕಾತಿಯು ಭಾರತದಲ್ಲಿ ಉದ್ಯೋಗ ಸೃಷ್ಟಿ ಯೋಜನೆಯ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ. ಭಾರತದಲ್ಲಿ ಹೊಸ ನೇಮಕಾತಿಗೆ ಹಿನ್ನಡೆ ಆಗುವುದಿಲ್ಲ ಎಂದು ವಿಶಾಲ್‌ ಸಿಕ್ಕಾ ಹೇಳಿದ್ದು, ಭಾರತೀಯ ತಂತ್ರಜ್ಞರು ನಮಗೆಷ್ಟು ಮುಖ್ಯ ಎಂದು ತಿಳಿಸಿದ್ದಾರೆ.!!

ಓದಿರಿ:ಫೇಸ್‌ಬುಕ್‌ ಖಾತೆಗೆ ಮೊಬೈಲ್‌ ನಂಬರ್ ಜೋಡಣೆಗಾಗಿ ಪಾಕಿಸ್ತಾನ ಮನವಿ!!.ಏಕೆ ಗೊತ್ತಾ??

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Financial statements prepared in accordance with Indian Accounting Standards.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot