Subscribe to Gizbot

ಸಿಕ್ಕಾ ರಾಜಿನಾಮೆಗೆ ಇನ್ಪೋಸಿಸ್ ಅಲ್ಲೋಲಕಲ್ಲೋಲ..ಹಠಾತ್ 31,148 ಕೋಟಿ ರೂ.ನಷ್ಟ!!

Written By:

ವಿಶಾಲ್ ಸಿಕ್ಕಾ ರಾಜೀನಾಮೆ ಸುದ್ದಿ ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನಕ್ಕೆ ಕಾರಣವಾಗಿ, ಇನ್ಪೋಸಿಸ್ ಸಂಸ್ಥೆಯ ಷೇರು ಮೌಲ್ಯ ಹಠಾತ್ ಶೇ.13ರಷ್ಟು ಕುಸಿತ ಕಂಡಿದೆ. ಇದರಿಂದ ಸಂಸ್ಥೆಯ ಷೇರುದಾರರಿಗೆ 31,148 ಕೋಟಿ ರೂ. ನಷ್ಟವಾಗಿದೆ. ಈ ವಿವಾದಕ್ಕೆ ಕಾರಣ ಎನ್ನಲಾದ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಷೇರುಗಳ ಮೌಲ್ಯವೂ 1038 ಕೋಟಿ ರೂ. ಇಳಿಕೆಯಾಗಿದೆ.

ಇನ್ಪೋಸಿಸ್ ಷೇರು ಮಾರುಕಟ್ಟೆ ಮೌಲ್ಯದ ದಿಢೀರ್ ಕುಸಿತ ಸಂಸ್ಥೆಯ ಭವಿಷ್ಯದ ದೃಷ್ಟಿಯಿಂದ ಉತ್ತಮ ಬೆಳವಣಿಗೆಯಲ್ಲ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಪರಿಸ್ಥಿತಿಯಿಂದ ಹೊರಬರಲು ಸಂಸ್ಥೆಗೆ ಸಾಕಷ್ಟು ಸಮಯ ಹಿಡಿಯಲಿದೆ ಎಂದು ಅಂದಾಜಿಸಿದ್ದಾರೆ. ಹಾಗಾದರೆ, ಇನ್ಪೋಸಿಸ್ನಲ್ಲಿ ಆಗುತ್ತಿರುವ ಅಲ್ಲೋಲಕಲ್ಲೋಲಗಳೇನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ರಾಜಿನಾಮೆ ನೀಡಿದ ವಿಶಾಲ್ ಸಿಕ್ಕಾ ಹೇಳಿದ್ದೇನು?

ರಾಜಿನಾಮೆ ನೀಡಿದ ವಿಶಾಲ್ ಸಿಕ್ಕಾ ಹೇಳಿದ್ದೇನು?

‘ನನ್ನ ಮೇಲಿನ ನಿರಂತರ ವೈಯಕ್ತಿಕ ದಾಳಿಯಿಂದ ಬೇಸತ್ತು ರಾಜೀನಾಮೆ ನೀಡುತ್ತಿದ್ದೇನೆ. ನನಗೆ ಬೆಂಬಲವಾಗಿ ನಿಲ್ಲಬೇಕಾದವರಿಂದಲೇ ಇಲ್ಲಸಲ್ಲದ ಆರೋಪಗಳನ್ನು ಕೇಳಬೇಕಾಯಿತು. ಒಂದೇ ಟೀಕೆಯನ್ನು ಪದೇಪದೆ ಸಹಿಸಿಕೊಂಡು ಕೆಲಸ ಮಾಡಲಾಗದು' ಎಂದಿದ್ದಾರೆ.

ವಿಶಾಲ್ ಸಿಕ್ಕಾ ಮೇಲಿದ್ದ ಆರೋಪಗಳೇನು?

ವಿಶಾಲ್ ಸಿಕ್ಕಾ ಮೇಲಿದ್ದ ಆರೋಪಗಳೇನು?

ಸಂಸ್ಥೆಯ ಉದ್ಯೋಗಿಗಳ ಬಡ್ತಿಯನ್ನು ತಡೆಹಿಡಿದಿದ್ದ ಸಿಕ್ಕಾ ತಮ್ಮ ವೇತನವನ್ನು ಏಕಾಏಕಿ 45.3 ಕೋಟಿ ರೂ.ಗಳಿಂದ 71.8 ಕೋಟಿ ರೂ. ಹೆಚ್ಚಳ ಮಾಡಿಕೊಂಡಿದ್ದರು. ಅವರ ಕಾರ್ಯವೈಖರಿ ಹಾಗೂ ಪಾರದರ್ಶಕತೆ ಕುರಿತ ಸಹ ಸಂಸ್ಥಾಪಕರ ಆಕ್ಷೇಪ ಇತ್ತು ಎಂದು ಎನ್ನಲಾಗಿದೆ.!!

ವಿಶಾಲ್ ಸಿಕ್ಕಾ ಪರ ಆಡಳಿತ ಮಂಡಳಿ!!

ವಿಶಾಲ್ ಸಿಕ್ಕಾ ಪರ ಆಡಳಿತ ಮಂಡಳಿ!!

ವಿಶಾಲ್ ಸಿಕ್ಕಾ ಪರ ನಿಂತಿರುವ ಇನ್ಪೋಸಿಸ್ ಆಡಳಿತ ಮಂಡಳಿ ಅವರ ನಡೆಯನ್ನು ಸಮರ್ಥಿಸಿಕೊಂಡಿದೆ. ಈ ಕುರಿತು ಹೇಳಿಕೆ ಬಿಡುಗಡೆ ಮಾಡಿದ ಸಂಸ್ಥೆ, ಸಿಕ್ಕಾ ಅವಧಿಯಲ್ಲಿ ಸಂಸ್ಥೆ ಲಾಭದಾಯಕ ಆದಾಯದ ಪ್ರಗತಿ ಹೊಂದಿತ್ತು.ಮೂರ್ತಿ ಪದೇಪದೆ ಅಸಂಬದ್ಧ ಬೇಡಿಕೆಗಳನ್ನು ಮುಂದಿಡುತ್ತಿದ್ದರು 12.75 ಷೇರು ಹೊಂದಿರುವ ಸಹ ಸಂಸ್ಥಾಪಕರ ಮನವೊಲಿಸಲು ಮಂಡಳಿ ಯತ್ನಿಸಿತಾದರೂ, ಅದು ಯಶಸ್ವಿಯಾಗಲಿಲ್ಲ ಎಂದು ಆಡಳಿತ ಮಂಡಳಿ ಹೇಳಿದೆ.!!

ಸಿಕ್ಕಾ ಆರೋಪಕ್ಕೆ ಮೂರ್ತಿ ಪ್ರತಿಕ್ರಿಯೆ.!!

ಸಿಕ್ಕಾ ಆರೋಪಕ್ಕೆ ಮೂರ್ತಿ ಪ್ರತಿಕ್ರಿಯೆ.!!

ಸಿಕ್ಕಾ ಮತ್ತು ಇನ್ಪೋಸಿಸ್ ಮಂಡಳಿಯ ಹೇಳಿಕೆಗಳು ಹಾಗೂ ಅದರ ಧಾಟಿ ನನಗೆ ಬೇಸರ ತಂದಿದೆ. ವೈಯಕ್ತಿಕ ಆರೋಪಗಳೇ ಸಿಕ್ಕಾ ರಾಜೀನಾಮೆಗೆ ಪ್ರಮುಖ ಕಾರಣ ಎಂಬ ಸಂಸ್ಥೆಯ ಆಡಳಿತ ಮಂಡಳಿ ಆರೋಪಗಳನ್ನು ಅಲ್ಲಗಳೆದಿರುವ ಮೂರ್ತಿ, ಇಂತಹ ಆಧಾರರಹಿತ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡುವುದು ನನ್ನ ಘನತೆಗೆ ತಕ್ಕದಾದುದಲ್ಲ ಎಂದಿದ್ದಾರೆ.!!

ಇನ್ಫೋಸಿಸ್‌ಗೆ ನಿಲೇಕಣಿ ಮರಳಲಿದ್ದಾರೆಯೇ?

ಇನ್ಫೋಸಿಸ್‌ಗೆ ನಿಲೇಕಣಿ ಮರಳಲಿದ್ದಾರೆಯೇ?

ಬಿಕ್ಕಟ್ಟಿನಲ್ಲಿರುವ ಇನ್ಫೋಸಿಸ್‌ಗೆ ಸಹ ಸಂಸ್ಥಾಪಕರಲ್ಲಿ ಒಬ್ಬರಾಗಿರುವ ನಂದನ್‌ ನಿಲೇಕಣಿಯವರನ್ನು ಮತ್ತೆ ಕರೆ ತರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಆದರೆಮ ಈ ಬಗ್ಗೆ ಯಾವುದೇ ಖಚಿತ ಮಾಹಿತಿ ಇನ್ನು ಹೊರಬಿದ್ದಿಲ್ಲ.!!

ಓದಿರಿ:9,999ಕ್ಕೆ ರೆಡ್‌ಮಿಗೂ ಸೆಡ್ಡುಹೊಡೆಯುವ 'ಡ್ಯುಯಲ್ ಕ್ಯಾಮೆರಾ' ಫೋನ್ 'ಇವೊಕ್'!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
He also ruled himself out of contention for the CEO's job.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot