ಇನ್ಫೊಸಿಸ್ ನೂತನ ಸಿಇಒ 'ಪಾರೇಖ್' ಸಂಬಳ ಎಷ್ಟು ಗೊತ್ತಾ?!

Written By:

ಭಾರತದ ಐ.ಟಿ ದೈತ್ಯ ಇನ್ಫೊಸಿಸ್ ಕಂಪೆನಿಗೆ ನೂತನ ಸಿಇಒ ಆಗಿ ಮಂಗಳವಾರ ಅಧಿಕಾರ ವಹಿಸಿಕೊಂಡಿರುವ ಸಲೀಲ್‌ ಎಸ್‌. ಪಾರೇಖ್ ಅವರ ಸಂಬಳ ಎಷ್ಟು ಎಂಬುದು ತಿಳಿದುಬಂದಿದೆ.! ಸಂಸ್ಥೆಯ ಹಿಂದಿನ ಸಿಇಒ ವಿಶಾಲ್‌ ಸಿಕ್ಕಾಗಿಂತ ಪಾರೇಖ್ ಕಡಿಮೆ ಸಂಬಳಕೆ ಇನ್ಫೋಸಿಸ್‌ಗೆ ದುಡಿಯಲಿದ್ದಾರೆ.!!

ಪಾರೇಖ್ ಅವರನ್ನು ಐದು ವರ್ಷಗಳ ಅವಧಿಗೆ ಇನ್ಫೊಸಿಸ್ ಸಿಇಒ ಹುದ್ದೆಗೆ ನೇಮಿಸಲಾಗಿದ್ದು, ಕಂಪನಿ ತೊರೆದ ನಂತರ ಅವರು 6 ತಿಂಗಳವರೆಗೆ ಇನ್ಫೊಸಿಸ್‌ನ ಪ್ರತಿಸ್ಪರ್ಧಿ ಸಂಸ್ಥೆಗೆ ಸೇರಿಕೊಳ್ಳಬಾರದು ಎಂದು ಒಪ್ಪಂದದಲ್ಲಿ ಹೇಳಲಾಗಿದೆ.!! ಹಾಗಾದರೆ, ನೂತನ ಸಿಇಒ ಪಾರೇಖ್ ಸಂಬಳವೆಷ್ಟು? ಮೊದಲಿನವರು ಎಷ್ಟು ಸಂಬಳ ಪಡೆಯುತ್ತಿದ್ದರು ಎಂಬುದನ್ನು ಮುಂದೆ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಿವಾದಕ್ಕೆ ಸಿಗಲಿದೆಯಾ ಬ್ರೇಕ್?

ವಿವಾದಕ್ಕೆ ಸಿಗಲಿದೆಯಾ ಬ್ರೇಕ್?

ಉದ್ಯೋಗಿಗಳಿಗಿಂತ ನಾಯಕತ್ವ ತಂಡದ ಸದಸ್ಯರಿಗೆ ಗರಿಷ್ಠ ವೇತನ ಹೆಚ್ಚಳ ಮತ್ತು ಸಂಸ್ಥೆ ತೊರೆದವರಿಗೆ ಗುತ್ತಿಗೆ ಒಪ್ಪಂದ ರದ್ದತಿ ಅನ್ವಯ ಹೆಚ್ಚು ಪರಿಹಾರ ಧನ ವಿತರಿಸಿದ ವಿವಾದಕ್ಕೆ ಬ್ರೇಕ್ ಬೀಳಲಿದೆ ಎನ್ನಲಾಗಿದೆ. ಸಂಸ್ಥೆಯ ಸಹ ಸ್ಥಾಪಕರರು ಈ ಬಗ್ಗೆ ಪ್ರಶ್ನಿಸಿದ್ದು ಇನ್ಫೊಸಿಸ್ ಬಗ್ಗೆ ವಿವಾದಕ್ಕೆ ಕಾರಣವಾಗಿತ್ತು.!!

18.6 ಕೋಟಿ ವೇತನ!!

18.6 ಕೋಟಿ ವೇತನ!!

ಸಿಇಒ ಹುದ್ದೆಗೆ ಇದೀಗ ಆಯ್ಕೆಯಾಗಿರುವ ಸಲೀಲ್‌ ಎಸ್‌. ಪಾರೇಖ್ ಅವರಿಗೆ ವಾರ್ಷಿಕ 18.6 ಕೋಟಿ ರೂಪಾಯಿಗಳಷ್ಟು ವೇತನ ನೀಡಲಿ ಇನ್ಫೊಸಿಸ್ ಮಂಡಳಿ ಮುಂದಾಗಿದೆ.! ಪಾರೇಖ್ ಅವರ ಸ್ಥಿರ ವೇತನ 6.5 ಕೋಟಿ ರೂ.ಗಳಾಗಿದ್ದು, ಅವರ ಕಾರ್ಯವೈಖರಿ ಉತ್ತಮವಾಗಿದ್ದರೆ 12.18 ಕೋಟಿಗಳವರೆಗೂ ಹೆಚ್ಚಿನ ವೇತನ ಪಡೆಯಬಹುದು.!!

ವೇತನಕ್ಕಿಂತ ಆದಾಯ ಹೆಚ್ಚು.!!

ವೇತನಕ್ಕಿಂತ ಆದಾಯ ಹೆಚ್ಚು.!!

ವಾರ್ಷಿಕ 18.6 ಕೋಟಿ ರೂಪಾಯಿಗಳಷ್ಟು ವೇತನ ಪಡೆಯಲಿರುವ ಸಲೀಲ್‌ ಎಸ್‌. ಪಾರೇಖ್ ಅವರಿಗೆ ನಿರ್ಬಂಧಿತ ಷೇರು, ವಾರ್ಷಿಕ ಕಾರ್ಯಕ್ಷಮತೆ ಮತ್ತು ಒಂದು ಬಾರಿಯ ದೇಣಿಗೆ ರೂಪದಲ್ಲಿ ಒಟ್ಟು 32.5 ಕೋಟಿ ರೂಪಾಯಿ ಆದಾಯವನ್ನು ಪಡೆಯಲಿದ್ದಾರೆ.!!

ವಿಶಾಲ್ ಸಿಕ್ಕ ಸಂಬಳ ಹೆಚ್ಚು!!

ವಿಶಾಲ್ ಸಿಕ್ಕ ಸಂಬಳ ಹೆಚ್ಚು!!

ಇನ್ಫೊಸಿಸ್ ನೂತನ ಸಿಇಒ ಸಲೀಲ್‌ ಎಸ್‌. ಪಾರೇಖ್ ಅವರ ಸಂಬಳ ಸಂಸ್ಥೆಯ ಹಿಂದಿನ ಸಿಇಒ ವಿಶಾಲ್‌ ಸಿಕ್ಕಾ ಅವರು 2016-17ನೇ ಹಣಕಾಸು ವರ್ಷದಲ್ಲಿ ಪಡೆದಿದ್ದ ವೇತನಕ್ಕಿಂತ ಕಡಿಮೆ ಇರಲಿದೆ. ವಿಶಾಲ್ ಸಿಕ್ಕ ವಾರ್ಷಿಕ 45.11 ಕೋಟಿ ಸಂಬಳವನ್ನು ಪಡೆದಿದ್ದರು ಎಂದು ಇನ್ಫೋಸಿಸ್ ದಾಖಲೆಗಳು ಹೇಳುತ್ತವೆ.!!

How to Sharing a Mobile Data Connection with Your PC (KANNADA)
ನಿರ್ದೇಶಕನಾಗಿ ಪ್ರವೀಣ್ ರಾವ್?

ನಿರ್ದೇಶಕನಾಗಿ ಪ್ರವೀಣ್ ರಾವ್?

ಇನ್ಫೋಸಿಸ್ ಸಿಒಒ ಮತ್ತು ಪೂರ್ಣಾವಧಿ ನಿರ್ದೇಶಕರಾಗಿ ಯು.ಬಿ. ಪ್ರವೀಣ್ ರಾವ್‌ ಅವರಿಗೆ ಹುದ್ದೆ ನೀಡಿರುವುದಕ್ಕೂ ಷೇರುದಾರರ ಸಮ್ಮತಿ ಕೋರಲಾಗಿದೆ. ಜನವರಿ 22 ರಿಂದ ಫೆಬ್ರುವರಿ 20ರವರೆಗೆ ಷೇರುದಾರರು ಮತಚಲಾಯಿಸಿದ ನಂತರ ಈ ಬಗ್ಗೆ ಸ್ಪಷ್ಟ ನಿರ್ಧಾರ ಹೊರಬೀಳಲಿದೆ.!!

ಓದಿರಿ:ಮೊಬೈಲ್ಸ್ ಬೋನಾನ್ಜ ಸೇಲ್ ಇಂದಿಗೆ ಕೊನೆ!..ಖರೀದಿಸಲು ಬೆಸ್ಟ್ ಸ್ಮಾರ್ಟ್‌ಫೋನ್‌ಗಳಿವು!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Infosys will pay about Rs 32.5 crore (approximately $5.12 million) every year to its new chief executive Salil Parekh. to know more visit t to kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot