ಇನ್ಫೋಸಿಸ್‌ ವಿಜ್ಞಾನ' ಪ್ರಶಸ್ತಿ ಪ್ರದಾನ!..65 ಲಕ್ಷ ರೂ ನಗದು, ಚಿನ್ನದ ಪದಕ ಸಾಧಕರಿವರು!!

|

ಟಾಟಾ ಇನ್‌ಸ್ಟಿಟ್ಯೂಟ್‌ ಆಫ್‌ ಫಂಡಮೆಂಟಲ್ ರಿಸರ್ಚ್‌ ಮತ್ತು ನ್ಯಾಷನಲ್ ಸೆಂಟರ್ ಬಯಾಲಜಿಕಲ್ ಸೈನ್ಸಸ್‍ನ ಪ್ರೊಫೆಸರ್ ಉಪೀಂದರ್ ಸಿಂಗ್ ಭಲ್ಲ ಸೇರಿ ಆರು ಸಾಧಕರಿಗೆ ಭಾರತದ ಪ್ರತಿಷ್ಟಿತ ಪ್ರಶಸ್ತಿಗಳಲ್ಲಿ ಒಂದಾದ 'ಇನ್ಫೋಸಿಸ್‌ ವಿಜ್ಞಾನ' ಪ್ರಶಸ್ತಿಯನ್ನು ಬುಧವಾರ ನಡೆದ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು.!

2017ನೇ ವರ್ಷದ 'ಇನ್ಫೋಸಿಸ್‌ ವಿಜ್ಞಾನ' ಪ್ರಶಸ್ತಿ ಪುರಸ್ಕೃತರಿಗೆ 65 ಲಕ್ಷ ರೂಪಾಯಿ ನಗದು, ಚಿನ್ನದ ಪದಕ ಹಾಗೂ ಸ್ಮರಣಿಕೆಯನ್ನು ಒಳಗೊಂಡ ಪ್ರಶಸ್ತಿಯನ್ನು ಅಮೆರಿಕದ ಹೆಸರಾಂತ ಖಭೌತ ವಿಜ್ಞಾನಿ ಹಾಗೂ ನೊಬೆಲ್‌ ಪ್ರಶಸ್ತಿ ಪುರಸ್ಕೃತರಾಧ ಪ್ರೊ.ಕಿಪ್ ಎಸ್‌.ಥ್ರಾನ್ ಪ್ರಶಸ್ತಿ ನೀಡಿ ಗೌರವಿಸಿದರು.!!

ಇನ್ಫೋಸಿಸ್‌ ವಿಜ್ಞಾನ' ಪ್ರಶಸ್ತಿ ಪ್ರದಾನ!..65 ಲಕ್ಷ ರೂ ನಗದು, ಚಿನ್ನದ ಪದಕ ಸಾಧಕ

'ಪ್ರಶಸ್ತಿಗಳು ವಿಜ್ಞಾನಿಗಳ ಹೊಣೆಗಾರಿಕೆಯನ್ನು ಹೆಚ್ಚಿಸುತ್ತವೆ. ವಿಜ್ಞಾನವನ್ನು ನಂಬದ ಮತ್ತು ಮೌಢ್ಯಕ್ಕೆ ಅಂಟಿಕೊಳ್ಳುವವರ ಮನೋಭಾವವನ್ನು ವಿಜ್ಞಾನಿಗಳು ಬದಲಿಸಬೇಕು. ನಂಬದವರಿಗೂ ವಿಜ್ಞಾನದತ್ತ ಆಸಕ್ತಿ ಬೆಳೆಯುವಂತೆ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ' ಎಂದು ಪ್ರೊ.ಕಿಪ್ ಎಸ್‌.ಥ್ರಾನ್ ಹೇಳಿದರು.!!

ಉಪೀಂದರ್ ಸಿಂಗ್ ಭಲ್ಲ ಸೇರಿ ಸೇರಿ ಯಮುನಾ ಕೃಷ್ಣನ್‌, ರಿತುಬರ ಮುನ್ಷಿ ಸೇರಿದಂತೆ ಇತರ ಮೂವರಿಗೆ ಪ್ರಶಸ್ತಿ ಲಭಿಸಿದ್ದು, ಪ್ರಶಸ್ತಿ ಪಡೆದ ಸಾಧಕರು ಯಾರು ಮತ್ತು ಅವರ ಸಾಧನೆಗಳೇನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ಪೂರ್ಣವಾಗಿ ತಿಳಿಯಿರಿ !!

ಎಂಜಿನಿಯರಿಂಗ್ ಮತ್ತು ಕಂಪ್ಯೂಟರ್ ಸೈನ್ಸ್!!

ಎಂಜಿನಿಯರಿಂಗ್ ಮತ್ತು ಕಂಪ್ಯೂಟರ್ ಸೈನ್ಸ್!!

ಆಪ್ಟಿಮೈಜೇಷನ್ ಮತ್ತು ವಂಶವಾಹಿ ಮಾಹಿತಿ ವಿಶ್ಲೇಷಣೆಯ ಮೇಲೆ ಮಹತ್ವದ ಸಾಧನೆಗಾಗಿ ಕೊಲ್ಕತ್ತಾದ ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್ಸ್ಟಿಟ್ಯೂಟ್ (ಐಎಸ್ಐ) ನ ನಿರ್ದೇಶಕ ಪ್ರೊ. ಸಂಗಮಿತ್ರ ಬಾಂಧೋಪಾಧ್ಯಾಯ್ ಅವರಿಗೆ ಎಂಜಿನಿಯರಿಂಗ್ ಮತ್ತು ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಈ ಸಾರಿಯ 'ಇನ್ಫೋಸಿಸ್‌ ವಿಜ್ಞಾನ' ಪ್ರಶಸ್ತಿ ಲಭಿಸಿದೆ.!!

 ಮಾನವಿಕ ವಿಭಾಗ!

ಮಾನವಿಕ ವಿಭಾಗ!

ಪ್ರೊಫೆಸರ್ ಅನನ್ಯ ಜಹನರಾ ಕಬೀರ್ ಅವರು 'ಇನ್ಫೋ'ಸಿಸ್‌ ವಿಜ್ಞಾನ' ಪ್ರಶಸ್ತಿಗೆ ಭಾಜನರಾಗಿದ್ದು, ಕಿಂಗ್ಸ್ ಕಾಲೇಜ್ ಲಂಡನ್‌ನಲ್ಲಿ ಇಂಗ್ಲಿಷ್ ಸಾಹಿತ್ಯದ ಪ್ರಾಧ್ಯಾಪಕರಾಗಿರುವ ಇವರು ಕಾಶ್ಮೀರದಲ್ಲಿ ದೀರ್ಘಕಾಲೀನ ಐತಿಹಾಸಿಕ ಅಂಶಗಳ ಮೂಲ ಪರಿಶೋಧನೆ-ಪರಿಕಲ್ಪನೆ, ಸಾಮಾಜಿಕ ಮತ್ತು ಸಾಂಸ್ಕೃತಿಕ - ವಸಾಹತುಶಾಹಿ ಆಧುನಿಕತೆ, ಮತ್ತು ಸಾಂಸ್ಕೃತಿಕ ಮತ್ತು ರಾಜಕೀಯ ಜೀವನದ ತನ್ನ ಸೂಕ್ಷ್ಮ ವಿಷಯಗಳ ಬಗ್ಗೆ ಅಧ್ಯಯನ ನಡೆಸಿದ್ದರು.!!

 ಜೀವ ವಿಜ್ಞಾನ

ಜೀವ ವಿಜ್ಞಾನ

ಜೈವಿಕ ವಿಜ್ಞಾನದ ರಾಷ್ಟ್ರೀಯ ಕೇಂದ್ರ (ಎನ್ಸಿಬಿಎಸ್) ಪ್ರೊಫೆಸರ್ ಪ್ರೊ. ಉಪಿಂದರ್ ಸಿಂಗ್ ಭಲ್ಲಾ ಅವರು ಜೀವ ವಿಜ್ಞಾನ ವಿಭಾಗದಲ್ಲಿ ಇನ್ಫೋಸಿಸ್‌ ವಿಜ್ಞಾನ' ಪ್ರಶಸ್ತಿಗೆ ಭಾಜನರಾಗಿದ್ದು, ಮೆದುಳಿನ ಕಂಪ್ಯೂಟೇಷನಲ್ ಯಂತ್ರಗಳ ಅರ್ಥಮಾಡಿಕೊಳ್ಳಲು, ಸಂಕೀರ್ಣ ಸಂವೇದನಾ ಮಾಹಿತಿಯನ್ನು ಪಡೆದುಕೊಳ್ಳಲು, ಸಂಯೋಜಿಸಲು ಮತ್ತು ಶೇಖರಿಸುವ ಸಾಮರ್ಥ್ಯದ ಅಧ್ಯಯನ ನಡೆಸಿದ್ದರು.!!

ಗಣಿತ ವಿಜ್ಞಾನ

ಗಣಿತ ವಿಜ್ಞಾನ

ಮುಂಬೈನಲ್ಲಿನ ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ (ಟಿಐಎಫ್ಆರ್) ಪ್ರೊಫೆಸರ್ ರಿತಬ್ರಾತಾ ಮುನ್ಶಿ ಅವರಿಗೆ ಗಣಿತ ವಿಜ್ಞಾನ ವಿಭಾಗದಲ್ಲಿ 'ಇನ್ಫೋಸಿಸ್‌ ವಿಜ್ಞಾನ' ಪ್ರಶಸ್ಸತಿ ಪಡೆದಿದ್ದಾರೆ. ಡಿಯೋಫಾಂಟೈನ್ ಸಮಸ್ಯೆಗೆ ಸಂಖ್ಯಾ ಸಿದ್ಧಾಂತದ ವಿಶ್ಲೇಷಣಾತ್ಮಕ ಅಂಶಗಳಿಗೆ ನೀಡಿದ ಅದ್ಭುತ ಕೊಡುಗೆಗಾಗಿ ಇವರಿಗೆ ಈ ಪ್ರಶಸ್ತಿ ದೊರೆತಿದೆ.!

ಶಾರೀರಿಕ ವಿಜ್ಞಾನ

ಶಾರೀರಿಕ ವಿಜ್ಞಾನ

ಚಿಕಾಗೊ ವಿಶ್ವವಿದ್ಯಾಲಯದ ರಸಾಯನಶಾಸ್ತ್ರ ವಿಭಾಗದ ಪ್ರೊಫೆಸರ್ ಯಮುನಾ ಕೃಷ್ಣನ್ ಅವರಿಗೆ ಡಿಎನ್ಎ ವಾಸ್ತುಶಿಲ್ಪದ ಉದಯೋನ್ಮುಖ ಕ್ಷೇತ್ರದ ಅಧ್ಯಯನಕ್ಕಾಗಿ ಇನ್ಫೋಸಿಸ್‌ ವಿಜ್ಞಾನ' ಪ್ರಶಸ್ತಿ ದೊರೆತಿದೆ. ಯಶಸ್ವಿಯಾಗಿ ಡಿಎನ್ಎವನ್ನು ನಿಯಂತ್ರಿಸುವುದರಿಂದ ಬಯೋಮೆಡಿಕಲ್ ಪ್ರಶ್ನೆಗಳಿಗೆ ಉತ್ತರಿಸುವ ಒಂದು ಹೆಜ್ಜೆಗೆ ಇವರ ಅಧ್ಯಯನ ಹತ್ತಿರವಾಗಿತ್ತು.!!

Facebook Messenger Tips and Tricks : ಫೇಸ್‌ಬುಕ್‌ನಲ್ಲೂ ಫುಟ್‌ಬಾಲ್ ಆಡಿ!!
ಸಾಮಾಜಿಕ ವಿಜ್ಞಾನ

ಸಾಮಾಜಿಕ ವಿಜ್ಞಾನ

ದೆಹಲಿಯ ಅಂಬೇಡ್ಕರ್ ವಿಶ್ವವಿದ್ಯಾನಿಲಯದ ಕಾನೂನು ಶಾಲೆಯಲ್ಲಿ ಪ್ರೊಫೆಸರ್ ಆಗಿರುವ ಪ್ರೊಫೆಸರ್ ಲಾರೆಸ್ ಲಿಯಾಂಗ್ ಅವರ ಹಕ್ಕುಸ್ವಾಮ್ಯ ಕಾನೂನು, ಡಿಜಿಟಲ್ ಟೆಕ್ನಾಲಜೀಸ್ ಮತ್ತು ಮಾಧ್ಯಮ, ಮತ್ತು ಜನಪ್ರಿಯ ಸಂಸ್ಕೃತಿಯ ಕ್ಷೇತ್ರಗಳ ಅಧ್ಯಯನಕ್ಕಾಗಿ ಇನ್ಫೋಸಿಸ್‌ ವಿಜ್ಞಾನ ಪ್ರಶಸ್ತಿ ದೊರೆತಿದೆ.!!

Most Read Articles
Best Mobiles in India

English summary
Infosys Science Foundation awards presented to six winners. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more