ಸಿಹಿಸುದ್ದಿ!..18,000 ಉದ್ಯೋಗಿಗಳಿಗಾಗಿ ಕ್ಯಾಂಪಸ್ ಬೇಟೆಗಿಳಿದ 'ಇನ್ಫೋಸಿಸ್'!

|

ಐಟಿ ಉದ್ಯೋಗ ಬಯಸುತ್ತಿರುವ ವಿದ್ಯಾರ್ಥಿಗಳಿಗೆ ಭರ್ಜರಿ ಸುದ್ದಿಯೊಂದನ್ನು ದೇಶದ ಪ್ರಮುಖ ಐಟಿ ಸಂಸ್ಥೆ ಇನ್ಫೋಸಿಸ್ ನೀಡಿದೆ.! ಭಾರತದ ಎರಡನೇ ಅತಿದೊಡ್ಡ ಐಟಿ ಸೇವಾ ಸಂಸ್ಥೆಯಾಗಿರುವ ಇನ್ಫೋಸಿಸ್, ಈ ಹಣಕಾಸು ವರ್ಷದಲ್ಲಿ 18,000 ಮಂದಿಯನ್ನು ಕ್ಯಾಂಪಸ್ ನೇಮಕ ಮಾಡಿಕೊಳ್ಳಲಿದೆ ಎಂದು ತಿಳಿಸಿದೆ. ಪ್ರಸ್ತುತ 2.29 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಇನ್ಫೋಸಿಸ್ ಮತ್ತಷ್ಟು ಪ್ರತಿಭೆಗಳಿಗಾಗಿ ವಿಶ್ವವಿದ್ಯಾಲಯಗಳ ಬಳಿ ಹೋಗಲಿದೆ.

ಸಿಹಿಸುದ್ದಿ!..18,000 ಉದ್ಯೋಗಿಗಳಿಗಾಗಿ ಕ್ಯಾಂಪಸ್ ಬೇಟೆಗಿಳಿದ 'ಇನ್ಫೋಸಿಸ್'!

ಹೌದು, ಈ ತ್ರೈಮಾಸಿಕದಲ್ಲಿ ಒಟ್ಟಾರೆ ಸುಮಾರು 8,000 ಜನರನ್ನು ನೇಮಕ ಮಾಡಿಕೊಂಡಿದ್ದೇವೆ. ಅದರಲ್ಲಿ 2,500 ಮಂದಿ ಹೊಸ ಉದ್ಯೋಗಿಗಳಾಗಿದ್ದಾರೆ (ಫ್ರೆಶರ್‌ಗಳು). ಈ ವರ್ಷವೂ ಕೂಡ ನಾವು ಸುಮಾರು 18,000 ಉದ್ಯೋಗಿಗಳನ್ನು ದೇಶಾದ್ಯಂತದ ವಿಶ್ವವಿದ್ಯಾಲಯಗಳಿಂದ ನೇಮಕ ಮಾಡಿಕೊಳ್ಳಲು ತೀರ್ಮಾನಿಸಿದ್ದೇವೆ' ಎಂದು ಇನ್ಫೋಸಿಸ್ ಮುಖ್ಯ ಕಾರ್ಯಾಚರಣಾ ಅಧಿಕಾರಿಯಾಗಿರುವ ಯುಬಿ ಪ್ರವೀಣ್ ರಾವ್ ಅವರು ಹೇಳಿದ್ದಾರೆ.

ಐತಿಹಾಸಿಕವಾಗಿ ಈ ವರ್ಷದ ಹಣಕಾಸಿನ ಮೊದಲ ತ್ರೈಮಾಸಿಕವು ಹೆಚ್ಚಿನ ಮಟ್ಟದ ಗುಣಲಕ್ಷಣಗಳನ್ನು ಹೊಂದಿದ್ದು, ವೃತ್ತಿ ಅವಕಾಶಗಳಲ್ಲಿ ಉದ್ಯೋಗಿಗಳ ಹೂಡಿಕೆ ಮತ್ತು ಉದ್ಯೋಗಿಗಳಿಗೆ ಅನುಭವದ ಪುಷ್ಟೀಕರಣಕ್ಕಾಗಿ ಇನ್ಫೋಸಿಸ್ ಹಲವಾರು ಕ್ರಮಗಳನ್ನು ಪ್ರಾರಂಭಿಸಿದೆ. ಹಾಗಾಗಿ, ಈ ವರ್ಷಕ್ಕೆ ನಾವು ಸುಮಾರು 18,000 ಜನರನ್ನು ವಿಶ್ವವಿದ್ಯಾಲಯಗಳಿಂದ ನೋಡುತ್ತಿದ್ದೇವೆ ಎಂದು ಪ್ರವೀಣ್ ರಾವ್ ಅವರು ತಿಳಿಸಿದ್ದಾರೆ.

ಸಿಹಿಸುದ್ದಿ!..18,000 ಉದ್ಯೋಗಿಗಳಿಗಾಗಿ ಕ್ಯಾಂಪಸ್ ಬೇಟೆಗಿಳಿದ 'ಇನ್ಫೋಸಿಸ್'!

ಜೂನ್ 2019 ರ ತ್ರೈಮಾಸಿಕದಲ್ಲಿ ಇನ್ಫೋಸಿಸ್ 906 ಜನರನ್ನು ಸೇರ್ಪಡೆ ಮಾಡಿಕೊಂಡಿದೆ. ಮಾರ್ಚ್ 2019 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಶೇಕಡಾ 20.4 ಕ್ಕೆ ಹೋಲಿಸಿದರೆ ಇದೀಗ ಶೇ. 23.4 ರಷ್ಟು ಏರಿಕೆಯಾಗಿದೆ. 2.29 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದ್ದರೂ ಇನ್ಫೋಸಿಸ್ ಇನ್ನೂ ಸಾಕಷ್ಟು ಒತ್ತಡದಲ್ಲಿದೆ. ಆದರೂ, ಇದು ತನ್ನ ಸೇವೆಗಳ ಪೂರೈಕೆ ಮೇಲೆ ಯಾವ ಪರಿಣಾಮ ಬೀರಿಲ್ಲ ಎಂದು ಕಂಪನಿ ಪ್ರತಿಪಾದಿಸಿದೆ.

ಮನೆಯಲ್ಲಿ ನೆಟ್‌ವರ್ಕ್‌ ಸರಿಯಾಗಿ ಸಿಗುತ್ತಿಲ್ಲವೇ? ಇಲ್ಲಿದೆ ಪರಿಹಾರ!ಮನೆಯಲ್ಲಿ ನೆಟ್‌ವರ್ಕ್‌ ಸರಿಯಾಗಿ ಸಿಗುತ್ತಿಲ್ಲವೇ? ಇಲ್ಲಿದೆ ಪರಿಹಾರ!

'ಇನ್ಫೋಸಿಸ್ ಲಿಮಿಟೆಡ್' ಭಾರತೀಯ ಬಹುರಾಷ್ಟ್ರೀಯ ಸಂಸ್ಥೆಯಾಗಿದ್ದು, ವ್ಯಾಪಾರ ಸಲಹಾ, ಮಾಹಿತಿ ತಂತ್ರಜ್ಞಾನ ಮತ್ತು ಹೊರಗುತ್ತಿಗೆ ಸೇವೆಗಳನ್ನು ಒದಗಿಸುತ್ತದೆ. ಇದರ ಪ್ರಧಾನ ಕಚೇರಿ ಕರ್ನಾಟಕದ ಬೆಂಗಳೂರಿನಲ್ಲೇ ಇದ್ದು, ಕರ್ನಾಟಕದ ಕೆಲ ವಿಶ್ವವಿದ್ಯಾಲಯಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಇದೊಂದು ಸುವರ್ಣಾವಕಾಶ ಎಂದು ಹೇಳಬಹುದು. ಒಟ್ಟಾರೆಯಾಗಿ 18,000 ಮಂದಿಯನ್ನು ಕ್ಯಾಂಪಸ್ ನೇಮಕ ಮಾಡಿಕೊಳ್ಳುತ್ತಿರುವುದು ಖುಷಿಯ ವಿಷಯ.!

Best Mobiles in India

English summary
Jobs at Infosys! 18,000 students from campuses to be hired this fiscal year. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X