Subscribe to Gizbot

ಭಾರತದ ಯುವ ಅಬ್ದುಲ್ ಕಲಾಂಗಳ ಸಾಧನೆಗೆ ಹ್ಯಾಟ್ಸಾಫ್

Written By:

ಯುವ ಮನಸ್ಸು ಹೆಚ್ಚು ಕ್ರಿಯಾತ್ಮಕವಾಗಿರುತ್ತದೆ ಎಂಬ ಮಾತೊಂದಿದೆ. ಇಂದಿನ ಶಿಕ್ಷಣ ಪದ್ಧತಿ ಪುಸ್ತಕದ ಬದನೆಕಾಯಿ ವ್ಯವಸ್ಥೆಯನ್ನು ಬಿಟ್ಟು ವಿದ್ಯಾರ್ಥಿಯ ಸುಪ್ತ ಮನಸ್ಸಿನಲ್ಲಿ ಅಡಗಿರುವ ಶಕ್ತಿಯನ್ನು ಹೊರತರುವ ಪ್ರಯತ್ನವನ್ನು ಮಾಡುತ್ತಿದೆ ಮತ್ತು ಅದರಲ್ಲಿ ಯಶಸ್ಸನ್ನು ಪಡೆದುಕೊಳ್ಳುತ್ತಿದೆ.

ಓದಿರಿ: ತಂತ್ರಜ್ಞಾನ ಲೋಕಕ್ಕೆ ಅಬ್ದುಲ್ ಕಲಾಂ ಕೊಡುಗೆ ಏನು?

ಇಂತಹ ಪ್ರತಿಭೆಗಳನ್ನು ಅರಸುವುದಕ್ಕಾಗಿಯೇ ಸರಕಾರವು IGNITE competition ಎಂಬ ಸ್ಪರ್ಧೆಯನ್ನು ಆಯೋಜಿಸಿದ್ದು ಇದರಲ್ಲಿ ಬಹಿರಂಗಗೊಂಡಿರುವ ಪ್ರತಿಭೆಗಳ ಅನಾವರಣವನ್ನು ಇಂದಿನ ಲೇಖನದಲ್ಲಿ ನಾವು ಮಾಡುತ್ತಿದ್ದೇವೆ. ಈ ಸ್ಪರ್ಧೆಯಲ್ಲಿ 20,000 ಪ್ರವೇಶಗಳಾಗಿದ್ದು ಭಾರತದ 301 ಜಿಲ್ಲೆಗಳು ಪಾಲ್ಗೊಂಡಿವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬಿಹಾರ್‌ನ 12 ನೇ ತರಗತಿಯ ವಿದ್ಯಾರ್ಥಿ ಅಲಿಶರ್

ಹೆಚ್ಚುವರಿ ಬಲ್ಬ್ ಉಳ್ಳ ಟಾರ್ಚ್

ಬಿಹಾರ್‌ನ 12 ನೇ ತರಗತಿಯ ವಿದ್ಯಾರ್ಥಿ ಅಲಿಶರ್ ತಯಾರಿಸಿದ ಟಾರ್ಚ್ ಇದಾಗಿದ್ದು ಹೆಚ್ಚು ಪ್ರಕಾಶಮಾನವನ್ನು ಬೆಳಕನ್ನು ಹೊರಚೆಲ್ಲುತ್ತದೆ.

ವೀಲ್ ಚೇರ್ ಊರುಗೋಲು

ಊರುಗೋಲನ್ನಾಗಿ ಮಾರ್ಪಡಿಸಬಹುದಾದ ವೀಲ್ ಚೇರ್

ಚೆನ್ನೈ ತಮಿಳುನಾಡಿನ ಮಹಾರಿಶಿ ಇಂಟರ್ನಾಶನಲ್ ಶಾಲೆಯ ವಿದ್ಯಾರ್ಥಿಗಳಾದ ರಾಮ್‌ಕಿಶೋರ್, ಸಂಜಯ್ ಶ್ರೀನಿವಾಸ್, ತಮಿಳ್ ಸೆಲ್ವನ್ ತಯಾರಿಸಿದ ವೀಲ್ ಚೇರ್ ಊರುಗೋಲು.

ಏಕಾಗ್ರತೆ

ಏಕಾಗ್ರತೆಯನ್ನು ಪರಿಶೀಲಿಸುವ ಪೆನ್

ರಾಂಚಿ ಜಾರ್ಖಂಡ್‌ನ ರುದ್ರಾ ಪ್ರಸಾದ್ ಸಿದ್ಧಪಡಿಸಿರುವ ಪೆನ್. ಈ ಪೆನ್ ಮೇಲಿರುವ ನಿಮ್ಮ ಹಿಡಿತ ಕಡಿಮೆಯಾದಂತೆ ಏಕಾಗ್ರತೆ ಕಡಿಮೆಯಾಗುತ್ತಿದೆ ಎಂಬುದನ್ನು ಇದು ವಿದ್ಯಾರ್ಥಿಗೆ ತೋರಿಸುತ್ತದೆ.

ಬಲ್ಬ್ ರಿಮೂವರ್

ಬಲ್ಬ್ ರಿಮೂವರ್

11 ನೇ ತರಗತಿಯ ಗೌತಮ್ ಪ್ರವೀಣ್ ಸಿದ್ಧಪಡಿಸಿರುವ ಬಲ್ಬ್ ರಿಮೂವರ್. ಬಲ್ಬ್ ತೆಗೆಯುವ ಕೆಲಸವನ್ನು ಇದು ಸರಳಗೊಳಿಸುತ್ತದೆ.

ಮಲ್ಟಿ ಕಲರ್ ಹೆಡ್‌ಫೋನ್

ಮಲ್ಟಿ ಕಲರ್ ಹೆಡ್‌ಫೋನ್ ವಯರ್ಸ್

ಅಲಹಾಬಾದ್ ಆರ್ಮಿ ಪಬ್ಲಿಕ್ ಶಾಲೆಯ ಸ್ವೀಟ್ಲೀನಾ ತಯಾರಿಸಿದ ಬಣ್ಣದ ಹೆಡ್‌ಫೋನ್ ಚಿತ್ರ. ನಿಮ್ಮ ಇಯರ್ ಫೋನ್‌ನಲ್ಲಿ ಬೇರೆ ಬೇರೆ ಬಣ್ಣ ಇದ್ದಲ್ಲಿ ಅದನ್ನು ಗಂಟುಗಳಿಂದ ಸುಲಭವಾಗಿ ಬಿಡಿಸಬಹುದು ಎಂಬುದನ್ನು ಈ ವಿದ್ಯಾರ್ಥಿನಿ ಕಂಡುಹಿಡಿದಿದ್ದಾರೆ.

ಎಕ್ಸ್‌ಟೆನ್ಶನ್ ಬೋರ್ಡ್

ಇಲೆಕ್ಟ್ರಿಸಿಟಿ ಎಕ್ಸ್‌ಟೆನ್ಶನ್ ಬೋರ್ಡ್

ತಮಿಳು ನಾಡಿನ ಟೆನಿತ್ ಆದಿತ್ಯನ ಅನ್ವೇಷಣೆಯಾಗಿರುವ ಎಕ್ಸ್‌ಟೆನ್ಶನ್ ಬೋರ್ಡ್ ಓದುವ ವಿದ್ಯಾರ್ಥಿಗಳಿಗೆ ವರದಾಯಕ ಎಂದೆನಿಸಿದೆ.

ಸೀಲಿಂಗ್ ಫ್ಯಾನ್

ಸೀಲಿಂಗ್ ಫ್ಯಾನ್

11 ನೇ ತರಗತಿಯಲ್ಲಿ ಓದುತ್ತಿರುವ ಅತೀರ್ತ್ ಚಂದ್ರನ್ ಅನ್ವೇಷಣೆ ಇದಾಗಿದ್ದು, ಈ ನೇತಾಡುವ ಸೀಲಿಂಗ್ ಫ್ಯಾನ್ ಸ್ವಚ್ಛಗೊಳಿಸಲು ಸಹಕಾರಿಯಾಗಿದೆ. ಸ್ವಿಚ್ ಹಾಕಿದೊಡನೆಯೇ ಇದು ಸಾಮಾನ್ಯ ಫ್ಯಾನ್‌ಗಳಂತೆ ಕಾರ್ಯನಿರ್ವಹಿಸುತ್ತದೆ.

ಕಾರಿನಲ್ಲಿರುವ ಇಂಡಿಕೇಟರ್ಸ್

ಕಾರಿನಲ್ಲಿರುವ ಇಂಡಿಕೇಟರ್ಸ್

12 ನೇ ತರಗತಿಯ ಎಸ್‌ಆರ್ ವಾಲುವ ಕಂಡುಹಿಡಿದ ಆಕ್ಸಿಕನ್ ಕಾರ್ಬನ್ ಡಯಾಕ್ಸೈಡ್ ಮಟ್ಟ ಇಂಡಿಕೇಟರ್‌ಗಳು. ಎಲ್ಲಿಯಾದರೂ ಆಮ್ಲಜನಕ ಅಥವಾ ಕಾರ್ಬನ್ ಮಟ್ಟ ಏರಿಕೆಯಾದಲ್ಲಿ, ಕಡಿಮೆಯಾದಲ್ಲಿ ಇದು ಸಮತೋಲವನ್ನು ಕಾಪಾಡುತ್ತದೆ.

ಟ್ರೇನಲ್ಲಿ ಹೊಸ ವಿನ್ಯಾಸ

ಟ್ರೇನಲ್ಲಿ ಹೊಸ ವಿನ್ಯಾಸ

12 ನೇ ತರಗತಿಯಲ್ಲಿ ಓದುತ್ತಿರುವ ಅಲೋಕ್ ಸಿಂಗ್‌ನ ಅನ್ವೇಷಣೆ ಇದಾಗಿದ್ದು, ಟ್ರೇನಲ್ಲಿ ಪಾನೀಯವನ್ನು ರವಾನಿಸಲು ಈ ಹೊಸ ಪದ್ಧತಿ ಸಹಾಯವನ್ನೊದಗಿಸಲಿದೆ.

ಕಡಿಮೆ ವೆಚ್ಚದ ಬ್ರೈಲ್ ಪ್ರಿಂಟರ್

ಕಡಿಮೆ ವೆಚ್ಚದ ಬ್ರೈಲ್ ಪ್ರಿಂಟರ್

ಸಂತೋಕ್ ಸಿಂಗ್ ಮತ್ತು ಕುಶವಂತ್ ರಾಯ್ ಅನ್ವೇಷಿಸಿದ ಬ್ರೈಲ್ ಪ್ರಿಂಟರ್ ಇದಾಗಿದೆ. ಅದೂ ಕಡಿಮೆ ವೆಚ್ಚದಲ್ಲಿ ಈ ಬ್ರೈಲ್ ಪ್ರಿಂಟರ್‌ನ ರಚನೆಯಾಗಿದೆ ಎಂಬುದೇ ಇದರ ವಿಶೇಷತೆಯಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
A young mind is the sharpest mind. It learns quick and acts quicker. The education system today focuses on books and rote-learning, but times are changing as these young geniuses, who chose to take a different path, have proved. They have picked machines over books and ideas over words.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot