Insta360ಯಿಂದ ಹೊಸ ಆಕ್ಷನ್ ಕ್ಯಾಮೆರಾಗಳ ಅನಾವರಣ! ಯುವಜನರ ದಿಲ್ ಕದಿಯೋದು ಪಕ್ಕಾ!
ಇತ್ತೀಚಿನ ದಿನಗಳಲ್ಲಿ ಆಕ್ಷನ್ ಕ್ಯಾಮೆರಾಗಳಿಗೆ ಭಾರಿ ಡಿಮ್ಯಾಂಡ್ ಇದೆ. ಇಂದಿನ ಯುವಜನರ ಹಾಟ್‌ಫೇವರಿಟ್ ಆಕ್ಷನ್ ಕ್ಯಾಮೆರಾಗಳಲ್ಲಿ Insta360 ಕಂಪೆನಿಯ ಕ್ಯಾಮೆರಾಗಳಿಗೆ ಹೆಚ್ಚಿನ ಬೇಡಿಕೆಯಿದೆ. ಇದೀಗ Insta360 ಕಂಪೆನಿ ಹೊಸದಾಗಿ Insta360 Ace ಮತ್ತು Insta360 Ace ಪ್ರೊ ಆಕ್ಷನ್ ಕ್ಯಾಮೆರಾಗಳನ್ನು ಅನಾವರಣಗೊಳಿಸಿದೆ.
ಹೌದು, Insta360 ಕಂಪೆನಿ ಎರಡು ಹೊಸ ಆಕ್ಷನ್ ಕ್ಯಾಮೆರಾಗಳನ್ನು ಬಿಡುಗಡೆ ಮಾಡಿದೆ. ಈ ಕ್ಯಾಮೆರಾಗಳು ಫ್ಲಿಪ್-ಅಪ್ ಟಚ್‌ಸ್ಕ್ರೀನ್ ಡಿಸ್‌ಪ್ಲೇ ಮತ್ತು ಮ್ಯಾಗ್ನೆಟಿಕ್ ಮೌಂಟಿಂಗ್ ಸಿಸ್ಟಮ್ ಹೊಂದಿವೆ. ಇನ್ನು ಈ ಹೊಸ ಆಕ್ಷನ್ ಕ್ಯಾಮೆರಾಗಳು ಲೈಕಾದೊಂದಿಗೆ 5nm AI ಚಿಪ್‌ನಲ್ಲಿ ಕಾರ್ಯನಿರ್ವಹಿಸುತ್ತವೆ. ಅಲ್ಲದೆ AI ವಾರ್ಪ್ ಮತ್ತು AI ಹೈಲೈಟ್ಸ್ ಅಸಿಸ್ಟೆಂಟ್ ಸೇರಿದಂತೆ AI ಟೂಲ್ಸ್‌ಗಳನ್ನು ಹೊಂದಿದೆ. ಹಾಗಾದ್ರೆ Insta360 ಕಂಪೆನಿ ಪರಿಚಯಿಸಿರುವ ಆಕ್ಷನ್ ಕ್ಯಾಮೆರಾಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

Insta360 Ace Pro ಫೀಚರ್ಸ್ ಹೇಗಿದೆ?
Insta360 Ace ಪ್ರೊ ಆಕ್ಷನ್ ಕ್ಯಾಮೆರಾ 2.4-ಇಂಚಿನ ಫ್ಲಿಪ್ ಟಚ್‌ಸ್ಕ್ರೀನ್ ಅನ್ನು ಹೊಂದಿದೆ. ಇನ್ನು ಈ ಕ್ಯಾಮೆರಾ 5nm AI ಚಿಪ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಲೈಕಾ ಸಮ್ಮರಿಟ್ ಲೆನ್ಸ್ ಮತ್ತು ದೊಡ್ಡ 1/1.3-ಇಂಚಿನ ಇಮೇಜ್ ಸೆನ್ಸಾರ್ ಜೊತೆಗೆ f/2.6 ಅಪರ್ಚರ್ ಮತ್ತು 16mm ಫೋಕಲ್ ಲೆಂತ್ ಹೊಂದಿದೆ. ಇದಲ್ಲದೆ ಈ ಆಕ್ಷನ್ ಕ್ಯಾಮೆರಾ ಪ್ರತಿ ಸೆಕೆಂಡಿಗೆ 24 ಫ್ರೇಮ್‌ಗಳಲ್ಲಿ (fps) ರೆಕಾರ್ಡಿಂಗ್‌ನಲ್ಲಿ 8K ವರೆಗೆ ಬೆಂಬಲಿಸಲಿದೆ.
Insta360 Ace ಫೀಚರ್ಸ್ ಹೇಗಿದೆ?
ಇನ್ನು Insta360 Ace ಕ್ಯಾಮೆರಾ ಕೂಡ 2.4-ಇಂಚಿನ ಫ್ಲಿಪ್ ಟಚ್‌ಸ್ಕ್ರೀನ್ ಹೊಂದಿದೆ. ಈ ಕ್ಯಾಮೆರಾ f/2.4 ದ್ಯುತಿರಂಧ್ರ ಮತ್ತು 16mm ನಾಭಿದೂರದೊಂದಿಗೆ ಚಿಕ್ಕದಾದ 1/2 ಇಂಚಿನ ಇಮೇಜ್ ಸೆನ್ಸಾರ್‌ನೊಂದಿಗೆ ಬರುತ್ತದೆ. ಇದು 30fps ನಲ್ಲಿ 6K ವರೆಗೆ ವೀಡಿಯೊ ರೆಕಾರ್ಡಿಂಗ್ ಅನ್ನು ಬೆಂಬಲಿಸಲಿದೆ. ಇದಲ್ಲದೆ 120fps ನಲ್ಲಿ 4K ವೀಡಿಯೊಗಳನ್ನು ಶೂಟ್ ಮಾಡುವುದಕ್ಕೆ ಅವಕಾಶ ನೀಡಿದೆ. ಅಲ್ಲದೆ 48 ಮೆಗಾಪಿಕ್ಸೆಲ್ ರೆಸಲ್ಯೂಶನ್ ನಲ್ಲಿ ಫೋಟೋ ಕ್ಲಿಕ್ಕಿಸಬಹುದಾಗಿದೆ.

ಈ ಎರಡೂ ಆಕ್ಷನ್ ಕ್ಯಾಮೆರಾಗಳು ಕೂಡ ಫ್ರೀ-ಫ್ರೇಮ್ ವೀಡಿಯೊ, ಸ್ಲೋ ಮೋಷನ್, ಸ್ಟಾರ್‌ಲ್ಯಾಪ್ಸ್, ಟೈಮ್‌ಲ್ಯಾಪ್ಸ್, ಟೈಮ್‌ಶಿಫ್ಟ್, ಪ್ರಿ-ರೆಕಾರ್ಡಿಂಗ್ ಮತ್ತು ಲೂಪ್ ರೆಕಾರ್ಡಿಂಗ್‌ನಂತಹ ಫೀಚರ್ಸ್‌ಗಳನ್ನು ಹೊಂದಿದೆ. ಜೊತೆಗೆ ಲೋ ಲೈಟ್ ಚಿತ್ರೀಕರಣಕ್ಕಾಗಿ ರಚನೆಕಾರರು PureVideo ಅನ್ನು ಸಹ ಬಳಸಬಹುದಾಗಿದೆ. Insta360 Ace Pro HDR, ಇಂಟರ್ವಲ್, ಬರ್ಸ್ಟ್ ಮತ್ತು ಸ್ಟಾರ್‌ಲ್ಯಾಪ್ಸ್ ಫೋಟೋ ಮೋಡ್‌ಗಳನ್ನು ಬೆಂಬಲಿಸಲಿದೆ.
ಇನ್ನು ಈ ಕ್ಯಾಮೆರಾಗಳಲ್ಲಿ ಇನ್‌ಬಿಲ್ಟ್ ಸ್ಟೋರೇಜ್‌ಗೆ ಅವಕಾಶ ನೀಡಿಲ್ಲ. ಬದಲಿಗೆ ಮೆಮೊರಿ ಕಾರ್ಡ್ ಮೂಲಕ 1TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ಬೆಂಬಲಿಸಲಿದೆ. ಈ ಆಕ್ಷನ್ ಕ್ಯಾಮೆರಾಗಳು ವಾಟರ್‌ಪ್ರೂಫ್ ವ್ಯವಸ್ಥೆಯನ್ನು ಹೊಂದಿದ್ದು, ನೀರಿನ ಅಡಿಯಲ್ಲಿ 10 ಮೀಟರ್‌ಗಳಷ್ಟು ಮುಳುಗುವ ಸಾಮರ್ಥ್ಯವನ್ನು ಹೊಂದಿವೆ. ಜೊತೆಗೆ ಡೈವ್ ಕೇಸ್ ಪರಿಕರದೊಂದಿಗೆ ಸೇರಿ 60 ಮೀಟರ್‌ಗಳವರೆಗೆ ನೀರಿನಿಂದ ರಕ್ಷಣೆಯನ್ನು ನೀಡಲಿದೆ ಎಂದು ವರದಿಯಾಗಿದೆ

ಇದಲ್ಲದೆ ಈ ಎರಡೂ ಕ್ಯಾಮೆರಾಗಳು ಬ್ಲೂಟೂತ್ 5.2, Wi-Fi 802.11 a/b/g/n/ac, ಮತ್ತು USB ಟೈಪ್-C ಸಂಪರ್ಕ ಆಯ್ಕೆಗಳನ್ನು ಬೆಂಬಲಿಸುತ್ತವೆ. ಇನ್ನು Insta360 Ace Pro 1,650mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದ್ದು, 30W ವೇಗದ ಚಾರ್ಜಿಂಗ್ ಬೆಂಬಲಿಸಲಿದೆ. ಇದರಿಂದ ಕೇವಲ 46 ನಿಮಿಷಗಳಲ್ಲಿ ಶೂನ್ಯದಿಂದ 100% ಬ್ಯಾಟರಿ ಚಾರ್ಜ್ ಮಾಡಲಿದೆ. ಆದರೆ Insta360 Ace ಆಕ್ಷನ್ ಕ್ಯಾಮೆರಾ 1,700mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 5V/3A ಅಡಾಪ್ಟರ್ ಮೂಲಕ ಬ್ಯಾಟರಿಯನ್ನು ಪೂರ್ಣವಾಗಿ ಚಾರ್ಜ್ ಮಾಡಲು ಬೆಂಬಲಿಸಲಿದೆ.
Insta360 Ace Pro ಮತ್ತು Insta360 Ace ಬೆಲೆ ಎಷ್ಟಿದೆ?
Insta360 Ace Pro ಬೆಲೆ $449.99 (ಸುಮಾರು 37,000ರೂ) ಆಗಿದೆ. ಆದರೆ Insta360 Ace ಬೆಲೆ $379.99 (ಸುಮಾರು 31,000ರೂ)ಹೊಂದಿದೆ ಎಂದು ವರದಿಯಾಗಿದೆ.ಈ ಎರಡೂ ಆಕ್ಷನ್ ಕ್ಯಾಮೆರಾಗಳು ಕೂಡ ಕಪ್ಪು ಬಣ್ಣದ ಆಯ್ಕೆಯಲ್ಲಿ ಲಭ್ಯವಾಗುತ್ತಿವೆ.


Click it and Unblock the Notifications








