ಫೇಕ್ ಅಕೌಂಟ್‌ಗಳನ್ನು ತಡೆಯಲು ಹೊಸ ಕ್ರಮಕ್ಕೆ ಮುಂದಾದ ಇನ್‌ಸ್ಟಾಗ್ರಾಮ್!
ಪ್ರಸ್ತುತ ದಿನಗಳಲ್ಲಿ ಇನ್‌ಸ್ಟಾಗ್ರಾಮ್ ಕೂಡ ಜನಪ್ರಿಯ ಸೊಶೀಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಆಗಿ ಗುರುತಿಸಿಕೊಂಡಿದೆ. ಕೇವಲ ಫೋಟೋ ಶೇರಿಂಗ್ ಅಪ್ಲಿಕೇಶನ್ ಆಗಿ ಮಾತ್ರವಲ್ಲ ವೀಡಿಯೋಸ್, ಸ್ಟೋರಿಸ್‌ಗಳನ್ನು ಕೂಡ ಶೇರ್ ಮಾಡಬಹುದಾಗಿದೆ. ಇದೇ ಕಾರಣಕ್ಕೆ ಇನ್‌ಸ್ಟಾಗ್ರಾಮ್ ಹೊಸ ಮಾದರಿಯ ಫೀಚರ್ಸ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಇದರ ನಡುವೆ ಇನ್‌ಸ್ಟಾಗ್ರಾಮ್‌ನಲ್ಲಿ ಫೇಕ್ ಅಕೌಂಟ್‌ಗಳ ಹಾವಳಿ ಜಾಸ್ತಿಯಾಗಿದೆ. ಇದಕ್ಕೆ ಪರಿಹಾರ ನೀಡುವ ನಿಟ್ಟಿನಲ್ಲಿ ಇನ್‌ಸ್ಟಾಗ್ರಾಮ್ ಹೊಸ ಹೆಜ್ಜೆ ಇಟ್ಟಿದೆ.

ಹೌದು, ಇನ್‌ಸ್ಟಾಗ್ರಾಮ್ ತನ್ನ ಪ್ಲಾಟ್‌ಫಾರ್ಮ್‌ಗಳಲ್ಲಿ ಫೇಕ್ ಅಕೌಂಟ್‌ಗಳ ಸಮಸ್ಯೆ ತಡೆಗಟ್ಟುವುದಕ್ಕಾಗಿ ಹೊಸ ಹೆಜ್ಜೆ ಹಾಕಿದೆ. ಇನ್ಮುಂದೆ ಇನ್‌ಸ್ಟಾಗ್ರಾಮ್ ಅಕೌಂಟ್ ತೆರೆಯುವವರ ಕೆವೈಸಿ ದಾಖಲೆಗಳನ್ನು ವೀಡಿಯೋ ಮೂಲಕ ವೆರಿಫಿಕೇಶನ್‌ಗೆ ಮುಂದಾಗಿದೆ. ಇತರ ಅಪ್ಲಿಕೇಶನ್‌ಗಳನ್ನು ಆಯ್ಕೆ ಮಾಡಲು ಇದುವರೆಗೆ ಬಳಸಲಾದ ವೀಡಿಯೊ ಪರಿಶೀಲನೆ ವೈಶಿಷ್ಟ್ಯವು ಪ್ಲಾಟ್‌ಫಾರ್ಮ್‌ನಲ್ಲಿನ ನಕಲಿ ಖಾತೆಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ. ಹಾಗಾದ್ರೆ ಇನ್‌ಸ್ಟಾಗ್ರಾಮ್‌ನಲ್ಲಿ ಕೆವೈಸಿ ವಿಡಿಯೋ ವೆರಿಫಿಕೇಶನ್ ಹೇಗಿರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಮೆಟಾ ಒಡೆತನದ ಇನ್‌ಸ್ಟಾಗ್ರಾಮ್ ನಕಲಿ ಖಾತೆಗಳ ತಡೆಗಟ್ಟುವುದಕ್ಕೆ ಹೊಸ ವೀಡಿಯೊ ಪರಿಶೀಲನೆ ಫೀಚರ್ಸ್ ಬಳಸಲು ಮುಂದಾಗಿದೆ. ಇದಕ್ಕೆ ಸಂಬಂಧಿಸಿದ ಫೀಚರ್ಸ್ ಸ್ಕ್ರೀನ್‌ಶಾಟ್‌ಗಳನ್ನು ಇನ್‌ಸ್ಟಾಗ್ರಾಮ್ ಸಾಮಾಜಿಕ ಮಾಧ್ಯಮ ಸಲಹೆಗಾರ ಮ್ಯಾಟ್ ನವರಾ ಶೇರ್ ಮಾಡಿದ್ದಾರೆ. ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್ ಮೂಲಕ ಹಂಚಿಕೊಂಡ ಸ್ಕ್ರೀನ್‌ಶಾಟ್‌ಗಳಲ್ಲಿ, ಬಳಕೆದಾರರನ್ನು ಕೆವೈಸಿ ದೃಢೀಕರಿಸಲು ವಿಡಿಯೋ ಪರಿಶೀಲನೆ ಮಾಡುವುದಕ್ಕೆ ಹಲವು ಹಂತಗಳನ್ನು ಅನುಸರಿಸುವಂತೆ ಕೇಳಿರುವುದು ಬೆಳಕಿಗೆ ಬಂದಿದೆ. ಈ ಮೂಲಕ ಇನ್‌ಸ್ಟಾಗ್ರಾಮ್ ಅಕೌಂಟ್ ಕ್ರಿಯೆಟ್ ಮಾಡುತ್ತಿರುವ ವ್ಯಕ್ತಿ ಅಸಲಿತನ ತಿಳಿಯಲಿದೆ.

ವೀಡಿಯೊ ವೆರಿಫಿಕೇಶನ್‌ನಲ್ಲಿ ಇನ್‌ಸ್ಟಾಗ್ರಾಮ್ ಅಕೌಂಟ್ ಕ್ರಿಯೆಟ್ ಮಾಡುತ್ತಿರುವವರ ಎಡ ಬಲ ಮುಖ, ಇತ್ಯಾದಿ ಗುರುತುಗಳನ್ನು ತೋರುವಂತೆ ಕೇಳಲಾಗುತ್ತದೆ. ಅಲ್ಲದೆ ಈ ಕೆವೈಸಿ ಪರಿಶೀಲನೆ ಮುಗಿದ 30 ದಿನಗಳ ಅವಧಿಯಲ್ಲಿ ವೆರಿಫಿಕೇಶನ್ ವೀಡಿಯೊವನ್ನು ಡಿಲೀಟ್ ಮಾಡಲಾಗುತ್ತದೆ. ಇನ್ನುನ ಈ ವೀಡಿಯೊದಲ್ಲಿ ಇನ್‌ಸ್ಟಾಗ್ರಾಮ್ ಯಾವುದೇ ಫೇಸ್ ಡಿಟೆಕ್ಷನ್ ಟೆಕ್ನಾಲಜಿಯನ್ನು ಬಳಸುವುದಿಲ್ಲ ಅಥವಾ ಯಾವುದೇ ರೀತಿಯ ಬಯೋಮೆಟ್ರಿಕ್ ಡೇಟಾವನ್ನು ಸಂಗ್ರಹಿಸುವುದಿಲ್ಲ ಎಂದು ಕಂಪನಿ ಭರವಸೆ ನೀಡಿದೆ.

ಇನ್‌ಸ್ಟಾಗ್ರಾಮ್‌ನ ಈ ಹೊಸ ಸೆಕ್ಯುರ್ ಫೀಚರ್ಸ್ ಬಗ್ಗೆ ಯಾವುದೇ ಅಧಿಕೃತ ಪ್ರಕಟಣೆ ಮಾಡಲಾಗಿಲ್ಲ. ಆದರೆ XDA ಡೆವಲಪರ್‌ಗಳು Instagram ನಲ್ಲಿ ಖಾತೆಯನ್ನು ಮಾಡಲು ಪ್ರಯತ್ನಿಸುತ್ತಿರುವ ಹೊಸ ಬಳಕೆದಾರರಿಗೆ ಮಾತ್ರ ವೀಡಿಯೊ ಪರಿಶೀಲನೆಯನ್ನು ಅಳವಡಿಸಲಾಗಿದೆ ಎಂದು ಹೇಳಿಕೊಂಡಿದ್ದಾರೆ. ಚಾಲ್ತಿ ಖಾತೆದಾರರು ತಮ್ಮ ವೀಡಿಯೊ ಪರಿಶೀಲನೆ ಸೆಲ್ಫಿಯನ್ನು ಸಲ್ಲಿಸಲು ಇನ್ನು ಯಾವುದೇ ಮಾಹಿತಿ ನೀಡಿಲ್ಲ ಎನ್ನಲಾಗಿದೆ.

ಸೊಶೀಯಲ್ ಮೀಡಿಯಾಗಳಲ್ಲಿ ನಕೆಲಿ ಅಕೌಂಟ್‌ಗಳನ್ನು ಕ್ರಿಯೆಟ್ ಮಾಡಿ ದ್ವೇಷ ಭಾಷಣ, ನಿಂದನಾತ್ಮಕ ಪದಗಳ ಮೂಲಕ ಸಮಾಜದಲ್ಲಿ ಆಶಾಂತಿಗೆ ಕಾರಣವಾಗುವವರು ಇದ್ದಾರೆ. ಇಂತಹವರಿಂದ ಸಮಾಜದಲ್ಲಿ ಸುಳ್ಳು ವದಂತಿಗಳು ಹರಡುತ್ತವೆ. ಇದೇ ಕಾರಣಕ್ಕೆ ಫೇಸ್‌ಬುಕ್ ತನ್ನ ಒಡೆತನದ ಅಪ್ಲಿಕೇಶನ್‌ಗಳಲ್ಲಿ ನಕಲಿ ಅಕೌಂಟ್‌ಗಳನ್ನು ಗುರುತಿಸಲು ಮುಂದಾಗುತ್ತಿದೆ. ಇನ್ನು ಇತ್ತೀಚಿಗಷ್ಟೇ ಫೇಸ್‌ಬುಕ್ ತನ್ನ ಅಪ್ಲಿಕೇಶನ್‌ಗಳಲ್ಲಿ ದ್ವೇಷ ಭಾಷಣ ಕಡಿಮೆಯಾಗಿದೆ ಎಂದು ಘೋಷಿಸಿದೆ. ಅದರಲ್ಲೂ ಮೂರನೇ ತ್ರೈಮಾಸಿಕದಲ್ಲಿ (Q3) ಶೇಕಡಾ 0.02 ರಷ್ಟು ಕುಸಿದಿದೆ ಎಂದು ಮಾಹಿತಿ ನೀಡಿದೆ.

ಇನ್‌ಸ್ಟಾಗ್ರಾಮ್ ತನ್ನ ಬಳಕೆದಾರರು ಇತರರ ನಿಂದನೆಗೆ ಒಳಗಾಗದಂತೆ ತಡೆಯಲು ಹೊಸ ಫೀಚರ್ಸ್ ಪರಿಚಯಿಸಿದೆ. ಇದರಿಂದ ಜನರು ನಿಂದನಾತ್ಮಕ ಕಾಮೆಂಟ್‌ಗಳಿಂದ ರಕ್ಷಣೆ ಪಡೆಯಲು ಸಾಧ್ಯವಾಗಿದೆ. ಸಂಭಾವ್ಯ ಆಕ್ರಮಣಕಾರಿ ಕಾಮೆಂಟ್‌ಗಳನ್ನು ಪೋಸ್ಟ್ ಮಾಡಲು ಪ್ರಯತ್ನಿಸಿದಾಗ ಇನ್‌ಸ್ಟಾಗ್ರಾಮ್ ಸ್ಟ್ರಾಂಗ್ ಆಲರ್ಟ್ ನೀಡಲು ಮುಂದಾಗಿದೆ. ಇದಕ್ಕಾಗಿ ಇನ್‌ಸ್ಟಾಗ್ರಾಮ್ ಅಪ್ಲಿಕೇಶನ್ ಹೊಸ ಹಿಡನ್ ವರ್ಡ್ಸ್ ಫೀಚರ್ಸ್ ಅನ್ನು ಕೂಡ ಸೇರಿಸಿದೆ.

ಇನ್‌ಸ್ಟಾಗ್ರಾಮ್‌ನಲ್ಲಿ ಬಳಕೆದಾರರು ಇದೀಗ ನೆಮ್ಮದಿಯಾಗಿ ಇರಬಹುದು. ಏಕೆಂದರೆ ಇನ್ಮುಂದೆ ನಿಮ್ಮ ಮೇಲೆ ಯಾವುದೇ ನಿಂದನಾತ್ಮಕ ಕಾಮೆಂಟ್‌ಗಳ ಭಯ ಇರುವುದಿಲ್ಲ. ಇಂತಹ ಕಾಮೆಂಟ್‌ಗಳನ್ನು ತಡೆಯಲು ಇನ್‌ಸ್ಟಾಗ್ರಾಮ್ ಇದೀಗ ಮುಂದಾಗಿದೆ. ಇದಕ್ಕಾಗಿ ಇನ್‌ಸ್ಟಾಗ್ರಾಮ್ "ಲಿಮಿಟ್ಸ್" ಫೀಚರ್ಸ್ ಅನ್ನು ಪರಿಚಯಿಸಿದೆ. ಇದು ನಿಮ್ಮನ್ನು ಅನುಸರಿಸದ ಅಥವಾ ಇತ್ತೀಚೆಗೆ ನಿಮ್ಮನ್ನು ಅನುಸರಿಸಿದ ಜನರಿಂದ ಕಾಮೆಂಟ್‌ಗಳು ಮತ್ತು ಡಿಎಂ ವಿನಂತಿಗಳನ್ನು ಸ್ವಯಂಚಾಲಿತವಾಗಿ ಮರೆಮಾಡುತ್ತದೆ. ಈ ಫೀಚರ್ಸ್ ಇನ್‌ಸ್ಟಾಗ್ರಾಮ್ ನಲ್ಲಿ ಎಲ್ಲರಿಗೂ ಲಭ್ಯವಿದೆ.

ನಿಮ್ಮ Instagram ಅಕೌಂಟ್ ಅನ್ನು ಡಿಲೀಟ್ ಮಾಡುವುದು ಹೇಗೆ?
ಹಂತ:1 ಮೊಬೈಲ್ ಬ್ರೌಸರ್ ಅಥವಾ ಲ್ಯಾಪ್‌ಟಾಪ್ ಮೂಲಕ ನಿಮ್ಮ ಇನ್‌ಸ್ಟಾಗ್ರಾಮ್ ಅಕೌಂಟ್ ಡಿಲೀಟ್ ಪೇಜ್‌ಗೆ ಹೋಗಿ.
ಹಂತ:2 ನಿಮ್ಮ ಅಕೌಂಟ್ ಅನ್ನು ಏಕೆ ಡಿಲೀಟ್ ಮಾಡುತ್ತಿದ್ದೀರಿ ಅನ್ನೊದನ್ನ ಮುಂದಿನ ಡ್ರಾಪ್‌ಡೌನ್ ಮೆನುವಿನಿಂದ ಆಯ್ಕೆಯನ್ನು ಆರಿಸಿ?
ಹಂತ:3 ನಂತರ ನಿಮ್ಮ ಪಾಸ್‌ವರ್ಡ್ ಅನ್ನು ಮರು-ನಮೂದಿಸಿ.
ಹಂತ:4 ಇದಾದ ನಂತರ ನಿಮ್ಮ ಅಕೌಂಟ್ ಡಿಲೀಟ್ ಕ್ಲಿಕ್ ಮಾಡಿ ನಿಮ್ಮ ಇನ್‌ಸ್ಟಗ್ರಾಮ್ ಅಕೌಂಟ್ ಅನ್ನು ಡಿಲೀಟ್ ಮಾಡಲು ರಿಕ್ವೆಸ್ಟ್ ಕಳುಹಿಸಿದ 30 ದಿನಗಳ ನಂತರ ನಿಮ್ಮ ಅಕೌಂಟ್ ಡಿಲೀಟ್ ಆಗಲಿದೆ. ನಂತರ ನಿಮ್ಮ ಮಾಹಿತಿಯನ್ನು ಹಿಂಪಡೆಯಲು ನಿಮಗೆ ಸಾಧ್ಯವಾಗುವುದಿಲ್ಲ. ಡಿಲೀಟ್ ಪ್ರಕ್ರಿಯೆ ಆರಂಭವಾದ ದಿನದಿಂದ 90 ದಿನಗಳವರೆಗೆ ತೆಗೆದುಕೊಳ್ಳಬಹುದು.

ನಿಮ್ಮ ಇನ್‌ಸ್ಟಾಗ್ರಾಮ್ ಅಕೌಂಟ್ ಅನ್ನು ನಿಷ್ಕ್ರಿಯಗೊಳಿಸುವುದು ಹೇಗೆ?
ಹಂತ:1 ಮೊದಲನೆಯದಾಗಿ ನಿಮ್ಮ ಲ್ಯಾಪ್‌ಟಾಪ್‌ನಲ್ಲಿ instagram.com ಗೆ ಲಾಗ್ ಇನ್ ಮಾಡಿ.
ಹಂತ:2 ಇನ್‌ಸ್ಟಾಗ್ರಾಮ್ ಅಪ್ಲಿಕೇಶನ್ ತೆರೆದ ತಕ್ಷಣ ಮೇಲಿನ ಬಲಭಾಗದಲ್ಲಿರುವ ನಿಮ್ಮ ಪ್ರೊಫೈಲ್ ಚಿತ್ರವನ್ನು ಕ್ಲಿಕ್ ಮಾಡಿ.
ಹಂತ:3 ನಂತರ ನಿಮ್ಮ ಪ್ರೊಫೈಲ್ ಅನ್ನು ಕ್ಲಿಕ್ ಮಾಡಿ, ಇದರಲ್ಲಿ ಎಡಿಟ್ ಪ್ರೊಫೈಲ್ ಅನ್ನು ಕ್ಲಿಕ್ ಮಾಡಿ.
ಹಂತ:4 ಈಗ ಕೆಳಗೆ ಸ್ಕ್ರಾಲ್ ಮಾಡಿ, ನಂತರ ಕೆಳಗಿನ ಬಲಭಾಗದಲ್ಲಿರುವ Temporarily disable my account ಕ್ಲಿಕ್ ಮಾಡಿ.
ಹಂತ:5 ಇದರಲ್ಲಿ ನೀವು ನಿಮ್ಮ ಖಾತೆಯನ್ನು ಏಕೆ ನಿಷ್ಕ್ರಿಯಗೊಳಿಸುತ್ತಿದ್ದೀರಿ ಅನ್ನೊದನ್ನ ಡ್ರಾಪ್-ಡೌನ್ ಮೆನುವಿನ ಆಯ್ಕೆಯನ್ನು ಆರಿಸಿ?
ಹಂತ:6 ನಂತರ ನಿಮ್ಮ ಪಾಸ್‌ವರ್ಡ್ ಅನ್ನು ರಿ-ಎಂಟ್ರಿ ಮಾಡಿ. ನೀವು ಮೆನುವಿನಿಂದ ಕಾರಣವನ್ನು ಆಯ್ಕೆಮಾಡಿ ಮತ್ತು ನಿಮ್ಮ ಪಾಸ್‌ವರ್ಡ್ ಅನ್ನು ನಮೂದಿಸಿದ ನಂತರವೇ ನಿಮ್ಮ ಖಾತೆಯನ್ನು ನಿಷ್ಕ್ರಿಯಗೊಳಿಸುವ ಆಯ್ಕೆಯು ಗೋಚರಿಸುತ್ತದೆ.
ಹಂತ:7 ಇದೆಲ್ಲವೂ ಮುಗಿದ ನಂತರ ಖಾತೆಯನ್ನು ತಾತ್ಕಾಲಿಕವಾಗಿ ನಿಷ್ಕ್ರಿಯಗೊಳಿಸಿ ಕ್ಲಿಕ್ ಮಾಡಿ.


Click it and Unblock the Notifications








