Instagramನಲ್ಲಿ ಫೋನ್‌ ಅಲುಗಾಡಿಸಿದ್ರೆ ಸಾಕು ನಿಮ್ಮ ಸಮಸ್ಯೆಗೆ ಪರಿಹಾರ ಸಿಗಲಿದೆ!

|

ಇನ್‌ಸ್ಟಾಗ್ರಾಮ್‌ ಜನಪ್ರಿಯ ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ ಎನಿಸಿಕೊಂಡಿದೆ. ತನ್ನ ಆಕರ್ಷಕ ಫೀಚರ್ಸ್‌ಗಳ ಕಾರಣದಿಂದಾಗಿ ಬಳಕೆದಾರರ ನೆಚ್ಚಿನ ಫೋಟೋ ಶೇರಿಂಗ್‌ ಅಪ್ಲಿಕೇಶನ್‌ ಆಗಿದೆ. ಸದ್ಯ ಇದೀಗ ಇನ್‌ಸ್ಟಾಗ್ರಾಮ್‌ ತನ್ನ ಬಳಕೆದಾರರಿಗೆ ಹೊಸ ಫೀಚರ್ಸ್‌ ಅನ್ನು ಪರಿಚಯಿಸಿದೆ. ಇದನ್ನು 'ರೇಜ್ ಶೇಕ್' ಎಂದು ಹೆಸರಿಸಲಾಗಿದ್ದು, ಬಳಕೆದಾರರಿಗೆ ಫೋನ್ ಅನ್ನು ಅಲುಗಾಡಿಸುವ ಮೂಲಕ ಅಪ್ಲಿಕೇಶನ್‌ನಲ್ಲಿನ ಸಮಸ್ಯೆಯನ್ನು ವರದಿ ಮಾಡಲು ಅನುಮತಿಸುತ್ತದೆ.

ಇನ್‌ಸ್ಟಾಗ್ರಾಮ್‌

ಹೌದು, ಇನ್‌ಸ್ಟಾಗ್ರಾಮ್‌ ಹೊಸ 'ರೇಜ್‌ ಶೇಕ್‌' ಫೀಚರ್ಸ್‌ ಅನ್ನು ಪರಿಚಯಿಸಿದೆ. ಇದರಿಂದ ನಿಮ್ಮ ಅಪ್ಲಿಕೇಶನ್‌ನಲ್ಲಿನ ಸಮಸ್ಯೆಗಳನ್ನು ವರದಿ ಮಾಡುವುದು ಸುಲಭವಾಗಲಿದೆ. ಅಪ್ಲಿಕೇಶನ್‌ ತೆರೆದಾಗ ಯಾವುದೇ ಸಮಸ್ಯೆ ಕಂಡು ಬಂದರೂ ನಿಮ್ಮ ಫೋನ್‌ ಅಲುಗಾಡಿಸಿದರೆ ಸಾಕು ವರದಿಯಾಗಲಿದೆ. ಅಂದರೆ ಇನ್‌ಸ್ಟಾಗ್ರಾಮ್‌ ಸ್ಟೋರಿಗಳು ಲೋಡ್ ಆಗದೇ ಇರುವಾಗ, ಆಡಿಯೋ ಕೆಲಸ ಮಾಡದೆ ಹೋದಾಗ, ರೇಜ್‌ ಶೇಕ್‌ ಫೀಚರ್ಸ್‌ ಉಪಯುಕ್ತವಾಗಲಿದೆ. ಹಾಗಾದ್ರೆ ರೇಜ್‌ ಶೇಕ್‌ ಫೀಚರ್ಸ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಇನ್‌ಸ್ಟಾಗ್ರಾಮ್‌

ಇನ್‌ಸ್ಟಾಗ್ರಾಮ್‌ ರೇಜ್‌ಶೇಕ್‌ ಫೀಚರ್ಸ್‌ ನಿಮಗೆ ಹೊಸ ಅನುಭವ ನೀಡೋದು ಖಂಡಿತ. ನಿಮ್ಮ ಇನ್‌ಸ್ಟಾಗ್ರಾಮ್‌ ಸ್ಟೋರೀಸ್‌, ಆಡಿಯೋ ಕೆಲಸ ಮಾಡದೇ ಇದ್ದಾಗ, ನಿಮ್ಮ ಫೋಟೋವನ್ನು ಅಪ್‌ಲೋಡ್ ಮಾಡಲು ಸಾಧ್ಯವಾಗದೇ ಇದ್ದಾಗ ರೇಜ್‌ಶೇಕ್‌ ಫೀಚರ್ಸ್‌ ಉಪಯುಕ್ತವಾಗಲಿದೆ. ರೇಜ್‌ಶೇಕ್‌ ಫೀಚರ್ಸ್‌ ಮೂಲಕ ನಿಮ್ಮ ಸ್ಮಾರ್ಟ್‌ಫೋನ್‌ ಅಲುಗಾಡಿಸಿದರೆ ಸಾಕು ವರದಿಮಾಡಬಹುದಾಗಿದೆ. ನಿಮ್ಮ ಫೋನ್ ಅನ್ನು ಅಲುಗಾಡಿಸಿದಾಗ, ಸಮಸ್ಯೆಯನ್ನು ವರದಿ ಮಾಡಲು ನಿಮಗೆ ಅನುಮತಿಸುವ ಒಂದು ಸಣ್ಣ ಆಯ್ಕೆ ಬರುತ್ತದೆ. ಆಗ ನಿಮ್ಮ ಸಮಸ್ಯೆ ಏನು ಅನ್ನೊದು ವರದಿ ಮಾಡಬಹುದಾಗಿದೆ.

ಇನ್‌ಸ್ಟಾಗ್ರಾಮ್‌

ಇನ್ನು ಇನ್‌ಸ್ಟಾಗ್ರಾಮ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ರೇಜ್ ಶೇಕ್ ಮತ್ತು ಕರೋಸೆಲ್ ಡಿಲೇಶನ್ ಫೀಚರ್ಸ್‌ಗಳನ್ನು ಸೇರಿಸಿದೆ. ಇದರಲ್ಲಿ ರೇಜ್‌ಶೇಕ್‌ ಫೋನ್ ಅನ್ನು ಅಲುಗಾಡಿಸುವ ಮೂಲಕ ಸಮಸ್ಯೆ ವರದಿ ಮಾಡಲು ಅನುಮತಿಸಲಿದೆ. ನಿಮ್ಮ ಫೋನ್‌ ಅನ್ನು ಶೇಕ್‌ ಮಾಡಿದ ನಂತರ, ನೀವು ಅಪ್ಲಿಕೇಶನ್‌ನಲ್ಲಿನ ಸಮಸ್ಯೆಯ ಕುರಿತು ವಿವರಣೆಯನ್ನು ಹಾಕಬಹುದು ಮತ್ತು ಅದನ್ನು ವರದಿ ಮಾಡಬಹುದು. ಈ ಫೀಚರ್ಸ್‌ ಕಂಪನಿಯ ದೋಷಗಳಿಗೆ ಆದ್ಯತೆ ನೀಡಲು ಮತ್ತು ಅಪ್ಲಿಕೇಶನ್‌ಗೆ ಸಂಬಂಧಿಸಿದ ಇತರ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ ಎಂದು Instagram ಕಾರ್ಯನಿರ್ವಾಹಕರು ಹೇಳಿದ್ದಾರೆ.

ಫೀಚರ್ಸ್‌

ಇನ್ನು ಕರೋಸೆಲ್ ಡಿಲೇಶನ್ ಫೀಚರ್ಸ್‌ ನೀವು ಆಕಸ್ಮಿಕವಾಗಿ ಯಾವುದೇ ವೀಡಿಯೊ ಅಥವಾ ಚಿತ್ರವನ್ನು ಪೋಸ್ಟ್ ಮಾಡಿರುವುದನ್ನು ಡಿಲೀಟ್‌ ಮಾಡಲು ಸಹಾಯ ಮಾಡಲಿದೆ. ಈ ಹೊಸ ಅಪ್‌ಡೇಟ್ ಬಳಕೆದಾರರಿಗೆ ಅಸ್ತಿತ್ವದಲ್ಲಿರುವ ಕರೋಸೆಲ್ ನಿಂದ ಐಟಂಗಳನ್ನು ಡಿಲೀಟ್‌ ಮಾಡುವುದಕ್ಕೆ ಅವಕಾಶ ನೀಡಲಿದೆ. ಇದಕ್ಕಾಗಿ ನೀವು ಪೋಸ್ಟ್‌ನ ಬಲ ಮೂಲೆಯಲ್ಲಿರುವ ಮೂರು ಚುಕ್ಕೆಗಳ ಮೇಲೆ ಟ್ಯಾಪ್ ಮಾಡಬೇಕಾಗುತ್ತದೆ. ನಂತರ ಇದರಲ್ಲಿ "ಎಡಿಟ್‌" ಆಯ್ಕೆಮಾಡುವ ಮೂಲಕ ಸ್ವೈಪ್ ಮಾಡಬಹುದು. ನಂತರ ನೀವು ತೆಗೆದುಹಾಕಲು ಬಯಸುವ ಚಿತ್ರವನ್ನು ಆಯ್ಕೆ ಮಾಡುವ ಮೂಲಕ ಎಡ ಮೂಲೆಯಲ್ಲಿರುವ 'ಡಿಲೀಟ್‌' ಐಕಾನ್ ಕ್ಲಿಕ್ ಮಾಡಿದರೆ ಪೋಸ್ಟ್‌ ಡಿಲೀಟ್‌ ಆಗಲಿದೆ. ಸದ್ಯ ಶೇಕ್‌ ರೇಜ್‌ ಫೀಚರ್ಸ್‌ US ನಲ್ಲಿನ ಬಳಕೆದಾರರಿಗೆ ಮಾತ್ರ ಲಭ್ಯವಿದೆ. ಇದಲ್ಲದೆ, ಕರೋಸೆಲ್ ಡಿಲೇಶನ್ ಫೀಚಸ iOS ಬಳಕೆದಾರರಿಗೆ ಸೀಮಿತವಾಗಿದೆ. ಶೀಘ್ರದಲ್ಲೇ ಆಂಡ್ರಾಯ್ಡ್‌ ಡಿವೈಸ್‌ನಲ್ಲಿಯೂ ಲಭ್ಯವಾಗಲಿದೆ.

ಇನ್‌ಸ್ಟಾಗ್ರಾಮ್‌

ಮೆಟಾ ಒಡೆತನದ ಇನ್‌ಸ್ಟಾಗ್ರಾಮ್‌ ನಕಲಿ ಖಾತೆಗಳ ತಡೆಗಟ್ಟುವುದಕ್ಕೆ ಹೊಸ ವೀಡಿಯೊ ಪರಿಶೀಲನೆ ಫೀಚರ್ಸ್‌ ಬಳಸಲು ಮುಂದಾಗಿದೆ. ಇದಕ್ಕೆ ಸಂಬಂಧಿಸಿದ ಫೀಚರ್ಸ್‌ ಸ್ಕ್ರೀನ್‌ಶಾಟ್‌ಗಳನ್ನು ಇನ್‌ಸ್ಟಾಗ್ರಾಮ್‌ ಸಾಮಾಜಿಕ ಮಾಧ್ಯಮ ಸಲಹೆಗಾರ ಮ್ಯಾಟ್ ನವರಾ ಶೇರ್‌ ಮಾಡಿದ್ದಾರೆ. ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್ ಮೂಲಕ ಹಂಚಿಕೊಂಡ ಸ್ಕ್ರೀನ್‌ಶಾಟ್‌ಗಳಲ್ಲಿ, ಬಳಕೆದಾರರನ್ನು ಕೆವೈಸಿ ದೃಢೀಕರಿಸಲು ವಿಡಿಯೋ ಪರಿಶೀಲನೆ ಮಾಡುವುದಕ್ಕೆ ಹಲವು ಹಂತಗಳನ್ನು ಅನುಸರಿಸುವಂತೆ ಕೇಳಿರುವುದು ಬೆಳಕಿಗೆ ಬಂದಿದೆ. ಈ ಮೂಲಕ ಇನ್‌ಸ್ಟಾಗ್ರಾಮ್‌ ಅಕೌಂಟ್‌ ಕ್ರಿಯೆಟ್‌ ಮಾಡುತ್ತಿರುವ ವ್ಯಕ್ತಿ ಅಸಲಿತನ ತಿಳಿಯಲಿದೆ.ವೀಡಿಯೊ ವೆರಿಫಿಕೇಶನ್‌ನಲ್ಲಿ ಇನ್‌ಸ್ಟಾಗ್ರಾಮ್‌ ಅಕೌಂಟ್‌ ಕ್ರಿಯೆಟ್‌ ಮಾಡುತ್ತಿರುವವರ ಎಡ ಬಲ ಮುಖ, ಇತ್ಯಾದಿ ಗುರುತುಗಳನ್ನು ತೋರುವಂತೆ ಕೇಳಲಾಗುತ್ತದೆ. ಅಲ್ಲದೆ ಈ ಕೆವೈಸಿ ಪರಿಶೀಲನೆ ಮುಗಿದ 30 ದಿನಗಳ ಅವಧಿಯಲ್ಲಿ ವೆರಿಫಿಕೇಶನ್‌ ವೀಡಿಯೊವನ್ನು ಡಿಲೀಟ್‌ ಮಾಡಲಾಗುತ್ತದೆ. ಇನ್ನುನ ಈ ವೀಡಿಯೊದಲ್ಲಿ ಇನ್‌ಸ್ಟಾಗ್ರಾಮ್‌ ಯಾವುದೇ ಫೇಸ್‌ ಡಿಟೆಕ್ಷನ್‌ ಟೆಕ್ನಾಲಜಿಯನ್ನು ಬಳಸುವುದಿಲ್ಲ ಅಥವಾ ಯಾವುದೇ ರೀತಿಯ ಬಯೋಮೆಟ್ರಿಕ್ ಡೇಟಾವನ್ನು ಸಂಗ್ರಹಿಸುವುದಿಲ್ಲ ಎಂದು ಕಂಪನಿ ಭರವಸೆ ನೀಡಿದೆ.

Best Mobiles in India

English summary
Instagram adds hidden gems to the platform, but only for certain users.to know more visit to kannada.gizbot.com.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X