ಇನ್‌ಸ್ಟಾಗ್ರಾಂ ಅಲರ್ಟ್‌..! ನಿಯಮ ಉಲ್ಲಂಘಿಸಿದರೆ ಶಾಶ್ವತ ಬ್ಯಾನ್‌..!

By Gizbot Bureau
|

ಇನ್‌ಸ್ಟಾಗ್ರಾಂ ಅಕೌಂಟ್‌ಗಳನ್ನು ಬ್ಲಾಕ್‌ ಮಾಡುವುದರ ವಿರುದ್ಧ ವಿಶ್ವದಾದ್ಯಂತ ಬಳಕೆದಾರರು ಪ್ರತಿಭಟನೆ ನಡೆಸುತ್ತಿದ್ದಾರೆ. 'ನೀತಿ ಉಲ್ಲಂಘಿಸಿರುವುದಕ್ಕೆ (policy violations) ಯಾವುದೇ ಸ್ಪಷ್ಟ ಕಾರಣವಿಲ್ಲ (no apparent reason) ಎಂಬುದನ್ನು ಮುಂದಿಟ್ಟುಕೊಂಡು ಇನ್‌ಸ್ಟಾಗ್ರಾಂ ಬಳಕೆದಾರರ ಅಕೌಂಟ್‌ಗಳನ್ನು ಬ್ಲಾಕ್‌ ಮಾಡುತ್ತಿತ್ತು. ಆದರೆ, ಸದ್ಯ ಪೋಟೋ ಮೆಸೇಜಿಂಗ್‌ ಪ್ಲಾಟ್‌ಫಾರ್ಮ್‌ ಆಗಿರುವ ಇನ್ಸ್‌ಟಾಗ್ರಾಂ ಬಳಕೆದಾರರ ಪ್ರತಿಭಟನೆಯಿಂದ ಅಕೌಂಟ್‌ ಡಿಲೀಟ್‌ಗೂ ಮುನ್ನ ಬಳಕೆದಾರರಿಗೆ ಎಚ್ಚರಿಕೆ ನೀಡಲು ಮುಂದಾಗಿದೆ.

ವಾರ್ನಿಂಗ್‌ ಅಲರ್ಟ್‌

ವಾರ್ನಿಂಗ್‌ ಅಲರ್ಟ್‌

ಇನ್‌ಸ್ಟಾಗ್ರಾಂ ಹೊಸ ವಾರ್ನಿಂಗ್‌ ಅಲರ್ಟ್‌ನ್ನು ನೀಡುತ್ತಿದ್ದು, ಅದು ಪೋಸ್ಟ್‌ಗಳ ಇತಿಹಾಸ, ಕಮೆಂಟ್‌ ಮತ್ತು ಸ್ಟೋರಿಗಳನ್ನು ಬಳಕೆದಾರರಿಗೆ ತೋರಿಸುತ್ತದೆ ಅಥವಾ ಅವುಗಳನ್ನು ಪ್ಲಾಟ್‌ಫಾರ್ಮ್‌ನಿಂದ ತೆಗೆದುಹಾಕಬಹುದು. ಪರಿಷ್ಕೃತ ನೀತಿಯಂತೆ ಅಪ್ಲಿಕೇಶನ್‌ನ ಮಾರ್ಗಸೂಚಿಗಳಿಗೆ ವಿರುದ್ಧವಾದ ವಿಷಯವನ್ನು ಬಳಕೆದಾರರು ಮತ್ತೆ ಪೋಸ್ಟ್ ಮಾಡಿದ್ರೆ, ಅಂತಹ ಖಾತೆಗಳನ್ನು ಶಾಸ್ವತವಾಗಿ ಡಿಲೀಟ್‌ ಮಾಡುವ ಸಾಧ್ಯತೆ ದಟ್ಟವಾಗಿದೆ.

ಮೇಲ್ಮನವಿಗೆ ಅವಕಾಶ

ಮೇಲ್ಮನವಿಗೆ ಅವಕಾಶ

ಪ್ಲಾಟ್‌ಫಾರ್ಮ್‌ನ ನಿರ್ಧಾರಗಳನ್ನು ಅಲರ್ಟ್‌ ಮೂಲಕ ನೇರವಾಗಿ ಮೇಲ್ಮನವಿ ಸಲ್ಲಿಸಲು ಬಳಕೆದಾರರಿಗೆ ಅವಕಾಶ ನೀಡುತ್ತದೆ. ಇದಕ್ಕೆ, ವೆಬ್‌ನ ಸಹಾಯ ಪುಟಕ್ಕೆ ಹೋಗುವ ಅವಶ್ಯಕತೆಯಿಲ್ಲ. ಆರಂಭದಲ್ಲಿ, ನಗ್ನ ಅಥವಾ ದ್ವೇಷದ ಮಾತುಗಳ ಅಂಶಗಳಂತಹ ಕೆಲವು ವಿಷಯಗಳಲ್ಲಿ ಮಾತ್ರ ಮೇಲ್ಮನವಿ ಸಲ್ಲಿಸಲು ಅನುಮತಿಸಲಾಗುತ್ತದೆ. ಮನವಿಯ ಪ್ರಕಾರಗಳನ್ನು ಸಮಯ ನೋಡಿಕೊಂಡು ವಿಸ್ತರಿಸಲು ಆಪ್‌ ಯೋಚನೆ ನಡೆಸುತ್ತಿದೆ.

ಮಾಡರೇಟಿಂಗ್‌ ತಂಡಕ್ಕೆ ಹೆಚ್ಚಿನ ಅವಕಾಶ

ಮಾಡರೇಟಿಂಗ್‌ ತಂಡಕ್ಕೆ ಹೆಚ್ಚಿನ ಅವಕಾಶ

ಫೇಸ್‌ಬುಕ್‌ ಒಡೆತನದ ಇನ್ಸ್‌ಟಾಗ್ರಾಂ ಹೊಸ ಅಲರ್ಟ್‌ ಜೊತೆಗೆ ನಕಾರಾತ್ಮಕವಾಗಿ ಪ್ರಭಾವ ಬೀರುವ ನಟರನ್ನು ನಿಷೇಧಿಸಲು ತನ್ನ ಮಾಡರೇಟಿಂಗ್‌ ತಂಡಕ್ಕೆ ಹೆಚ್ಚಿನ ಅವಕಾಶ ನೀಡಲು ಯೋಜಿಸುತ್ತಿದೆ. ಇತ್ತೀಚೆಗೆ ಮಾಡೆಲ್‌ಗಳು, ಛಾಯಾಗ್ರಾಹಕರು ಮತ್ತು ವಯಸ್ಕ ಸಿನಿಮಾ ಕಲಾವಿದರು ಯಾವುದೇ ಮಾಹಿತಿಯಿಲ್ಲದೇ ನೀತಿ ಉಲ್ಲಂಘನೆಯ ಕಾರಣದಿಂದ ರಾತ್ರೋ ರಾತ್ರಿ ತಮ್ಮ ವಿಷಯ ಮತ್ತು ಅಕೌಂಟ್‌ಗಳನ್ನು ಕಳೆದುಕೊಂಡಿದ್ದಾರೆ.

ಜಾಗ್ರತೆ ಅಗತ್ಯ

ಜಾಗ್ರತೆ ಅಗತ್ಯ

ಇಲ್ಲಿಯವರೆಗೆ, ಇನ್‌ಸ್ಟಾಗ್ರಾಮ್‌ ತನ್ನ ನೀತಿಯು ''ನಿರ್ದಿಷ್ಟ ಶೇಕಡಾವಾರು ಉಲ್ಲಂಘನೆಯ ವಿಷಯ" ಪೋಸ್ಟ್ ಮಾಡಿದ ಬಳಕೆದಾರರನ್ನು ನಿಷೇಧಿಸಿದೆ. ಆದರೆ, ಈಗ ತನ್ನ ನೀತಿಗಳನ್ನು ಪದೇ ಪದೇ ಉಲ್ಲಂಘಿಸುವ ಜನರ ಅಕೌಂಟ್‌ಗಳನ್ನು ಡಿಲೀಟ್‌ ಮಾಡ್ತಿದೆ. ಇತ್ತೀಚೆಗೆ 21 ವರ್ಷದ ಹುಡುಗ 19 ವರ್ಷದ ಹುಡುಗಿಯ ಕುತ್ತಿಗೆ ಕತ್ತರಿಸಿ, ಹುಡುಗಿಯ ರಕ್ತಸಿಕ್ತ ದೇಹದ ಚಿತ್ರಗಳನ್ನು ಇನ್ಸ್‌ಟಾಗ್ರಾಂನಲ್ಲಿ ಬಹಿರಂಗವಾಗಿ ಪೋಸ್ಟ್‌ ಮಾಡಿದ ಕೆಲವೇ ದಿನಗಳಲ್ಲಿ ಈ ಅಪ್‌ಡೇಟ್‌ ಬಂದಿದೆ.

Best Mobiles in India

Read more about:
English summary
Instagram Adds A New Feature That Is A Nightmare For Violators

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X