Home
ಸುದ್ದಿಜಾಲ

ಫೇಸ್‌ಬುಕ್‌ನಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದಕ್ಕೆ ಸಿಕ್ತು ಮತ್ತೊಂದು ಕಾರಣ..!

ಸಾಮಾಜಿಕ ಜಾಲತಾಣದ ದೈತ್ಯ ಫೇಸ್‌ಬುಕ್‌ನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಮತ್ತೊಂದು ಬಾರಿ ಸಾಬೀತಾಗಿದೆ. ಕೇಂಬ್ರಿಡ್ಜ್‌ ಅನಾಲಿಟಿಕಾ ಡೇಟಾ ಸೋರಿಕೆ ಪ್ರಕರಣದ ನಂತರ ಚೇತರಿಸಿಕೊಳ್ಳುತ್ತಿದ್ದ ಫೇಸ್‌ಬುಕ್‌ ಈಗ ಆಂತರಿಕ ಜಗಳದಿಂದ ತನ್ನ ಪ್ರತಿಷ್ಟೆಯನ್ನು ಮಣ್ಣು ಪಾಲು ಮಾಡಿಕೊಳ್ಳುತ್ತಿದೆ. ಫೇಸ್‌ಬುಕ್‌ ಒಡೆತನದಲ್ಲಿ ಇನ್‌ಸ್ಟಾಂಟ್‌ ಮೇಸೆಜಿಂಗ್‌ ಆಪ್‌ ವಾಟ್ಸ್‌ಆಪ್‌ ಮತ್ತು ಫೋಟೋ ಶೇರಿಂಗ್‌ ಆಪ್‌ ಇನ್‌ಸ್ಟಾಗ್ರಾಂ ಕಾರ್ಯನಿರ್ವಹಿಸುತ್ತಿವೆ. ಮೂರು ವೇದಿಕೆಗಳು ಸೇರಿ ಸಾಮಾಜಿಕ ಮಾಧ್ಯಮವನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿವೆ.

ಫೇಸ್‌ಬುಕ್‌ನಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದಕ್ಕೆ ಸಿಕ್ತು ಮತ್ತೊಂದು ಕಾರಣ..!

ಆದರೆ, ಇನ್‌ಸ್ಟಾಗ್ರಾಂನ ಸಹ ಸಂಸ್ಥಾಪಕರಾಸ ಕೇವಿನ್‌ ಸಿಸ್ಟ್ರೋಮ್‌ ಮತ್ತು ಮೈಕ್‌ ಕ್ರೈಗರ್‌ ಸಿಇಒ ಹಾಗೂ ಸಿಟಿಒ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿ ಹೊರ ಬಂದಿದ್ದಾರೆ. ಅವರಿಬ್ಬರ ರಾಜೀನಾಮೆಗೆ ಪ್ರಮುಖ ಕಾರಣ ಫೇಸ್‌ಬುಕ್‌ ಸಿಇಒ ಮಾರ್ಕ್‌ ಜುಕರ್‌ಬರ್ಗ್‌ ಎಲ್ಲದರಲ್ಲೂ ಮೂಗು ತೂರಿಸುತ್ತಾರೆ ಎನ್ನುವುದು. ಆರು ವರ್ಷಗಳ ಹಿಂದೆ ಪ್ರಾರಂಭವಾಗಿದ್ದ ಇನ್‌ಸ್ಟಾಗ್ರಾಂನ್ನು ಫೇಸ್‌ಬುಕ್ 1 ಬಿಲಿಯನ್‌ ಡಾಲರ್‌ಗೆ ಖರೀದಿಸಿತ್ತು. ಆಗಿದ್ರೇ ಫೇಸ್‌ಬುಕ್‌ನಲ್ಲಿ ನಡೆಯುತ್ತಿರುವುದು ಏನು..? ಸಾಲು ಸಾಲು ರಾಜೀನಾಮೆಗಳನ್ನು ನೀಡಿ ಹೊರ ನಡೆಯುತ್ತಿರುವುದು ಏಕೆ..? ಎಂಬುದನ್ನು ಮುಂದೆ ನೋಡಿ..

ಆದಾಯದಲ್ಲಿ ಇನ್‌ಸ್ಟಾಗ್ರಾಂ ಮೊದಲು

ಆದಾಯದಲ್ಲಿ ಇನ್‌ಸ್ಟಾಗ್ರಾಂ ಮೊದಲು

ಫೇಸ್‌ಬುಕ್‌ನ ಆದಾಯದಲ್ಲಿ ಇನ್‌ಸ್ಟಾಗ್ರಾಂ ಬಹುಪಾಲು ಆದಾಯವನ್ನು ತಂದುಕೊಡುತ್ತದೆ. ಹೀಗಂತೂ ಇನ್‌ಸ್ಟಾಗ್ರಾಂ ಯುವಜನರಲ್ಲಿ ಟ್ರೇಂಡ್‌ ಸೃಷ್ಟಿಸಿದ್ದು, ಜನಪ್ರಿಯ ಫೋಟೋ ಶೇರಿಂಗ್‌ ಆಪ್‌ ಆಗಿ ಹೊರಹೊಮ್ಮಿದೆ. ಫೇಸ್‌ಬುಕ್‌ 1 ಬಿಲಿಯನ್‌ ಡಾಲರ್ ಕೊಟ್ಟು ಖರೀದಿಸಿ ಹೊಸ ಹೊಸ ಫೀಚರ್‌ಗಳನ್ನು ತಂದು ಇನ್‌ಸ್ಟಾಗ್ರಾಂ ಆಪ್‌ನ್ನು ಜನಪ್ರಿಯಗೊಳಿಸಿದೆ.

ಹೊರನಡೆದಿದ್ದ ವಾಟ್ಸ್‌ಆಪ್‌ ಸಹ ಸಂಸ್ಥಾಪಕ

ಹೊರನಡೆದಿದ್ದ ವಾಟ್ಸ್‌ಆಪ್‌ ಸಹ ಸಂಸ್ಥಾಪಕ

ಕೆಲವೇ ತಿಂಗಳುಗಳ ಹಿಂದೆ ವಾಟ್ಸ್‌ಆಪ್‌ನ ಸಹ ಸಂಸ್ಥಾಪಕ ಜಾನ್‌ ಕೋಮ್‌ ರಾಜೀನಾಮೆ ನೀಡಿ ಹೊರ ನಡೆದಿದ್ದರು. ಈಗ ಇನ್‌ಸ್ಟಾಗ್ರಾಂನ ಇಬ್ಬರು ಸಹ ಸಂಸ್ಥಾಪಕರಾದ ಕೇವಿನ್‌ ಸಿಸ್ಟ್ರೋಮ್‌ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಸ್ಥಾನಕ್ಕೆ ಹಾಗೂ ಮೈಕ್‌ ಕ್ರೈಗರ್‌ ಮುಖ್ಯ ತಾಂತ್ರಿಕ ಅಧಿಕಾರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರನಡೆದಿದ್ದು, ಎರಡು ದೊಡ್ಡ ವೇದಿಕೆಗಳು ತಮ್ಮ ಮೂಲ ಸಂಸ್ಥಾಪಕರಿಲ್ಲದೇ ಕಾರ್ಯ ನಿರ್ವಹಿಸುತ್ತಿವೆ.

ಹೊಸತನದ ಸಾಧ್ಯತೆ

ಹೊಸತನದ ಸಾಧ್ಯತೆ

ಇನ್‌ಸ್ಟಾಗ್ರಾಂನ ಸಹ ಸಂಸ್ಥಾಪಕ ಕೇವಿನ್‌ ಸಿಸ್ಟ್ರೋಮ್‌ ತಮ್ಮ ಬ್ಲಾಗ್‌ನಲ್ಲಿ ಪೋಸ್ಟ್‌ ಒಂದನ್ನು ಬರೆದುಕೊಂಡಿದ್ದು, ಆ ಬರಹದಲ್ಲಿ ಸಿಸ್ಟ್ರೋಮ್‌ ಮತ್ತು ಕ್ರೈಗರ್‌ ಇಬ್ಬರು ಮತ್ತೆ ಸಮಯ ತೆಗೆದುಕೊಂಡು ನಮ್ಮ ಕುತೂಹಲ ಹಾಗೂ ಸೃಜನಾತ್ಮಕತೆಯನ್ನು ಮತ್ತೆ ಜಗತ್ತಿಗೆ ತೋರಿಸುತ್ತೇವೆ ಎಂದಿದ್ದು, ಹೊಸ ಸಾಮಾಜಿಕ ಜಾಲತಾಣ ಬರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ಜುಕರ್‌ಬರ್ಗ್‌ ಅಭಿನಂದನೆ

ಜುಕರ್‌ಬರ್ಗ್‌ ಅಭಿನಂದನೆ

ಇನ್‌ಸ್ಟಾಗ್ರಾಂನ ಇಬ್ಬರು ಸಹ ಸಂಸ್ಥಾಪಕರು ರಾಜೀನಾಮೆ ಕೊಟ್ಟು ಫೇಸ್‌ಬುಕ್‌ನಿಂದ ಹೊರ ನಡೆದ ಬೆನ್ನಲ್ಲೆ ಫೇಸ್‌ಬುಕ್‌ ಸಿಇಒ ಮಾರ್ಕ್‌ ಜುಕರ್‌ ಬರ್ಗ್‌ ಹೇಳಿಕೆ ನೀಡಿದ್ದು, ಇಬ್ಬರನ್ನು ಅದ್ಭುತ ಉತ್ಪನ್ನ ನಾಯಕರು ಎಂದು ವರ್ಣಿಸಿದ್ದಾರೆ. ಕಳೆದ ಆರು ವರ್ಷದಲ್ಲಿ ಇಬ್ಬರಿಂದ ಬಹಳಷ್ಟು ಕಲಿತಿದ್ದು, ಬಹಳಷ್ಟು ಎಂಜಾಯ್ ಮಾಡಿದ್ದೇನೆ. ಅವರಿಬ್ಬರು ಮುಂದೆನನ್ನು ಸೃಷ್ಟಿಸುತ್ತಾರೆ ಎಂಬುದನ್ನು ನೋಡುತ್ತಿದ್ದೇನೆ. ಇಬ್ಬರಿಗೂ ಆಲ್‌ ದಿ ಬೆಸ್ಟ್‌ ಎಂದು ಅಭಿನಂದನೆ ತಿಳಿಸಿದ್ದಾರೆ.

ಜುಕರ್‌ ಬರ್ಗ್‌ ಹಸ್ತಕ್ಷೇಪ

ಜುಕರ್‌ ಬರ್ಗ್‌ ಹಸ್ತಕ್ಷೇಪ

ವಾಟ್ಸ್‌ಆಪ್‌ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫೇಸ್‌ಬುಕ್‌ ಸಿಇಒ ಮಾರ್ಕ್‌ ಜುಕರ್‌ಬರ್ಗ್‌ ನಿರಂತರ ಹಸ್ತಕ್ಷೇಪ ಮಾಡುತ್ತಿದ್ದುದು ರಾಜೀನಾಮೆಗಳಿಗೆ ಕಾರಣವಾಗಿದೆ. ಅಲ್ಲದೇ ಫೇಸ್‌ಬುಕ್‌ನ ಒಂದಿಷ್ಟು ಜನರನ್ನು ವಾಟ್ಸ್‌ಆಪ್ ಮತ್ತು ಇನ್‌ಸ್ಟಾಗ್ರಾಂನ ಆಯಕಟ್ಟಿನ ಸ್ಥಳಗಳಿಗೆ ನೇಮಿಸಿದ್ದರಿಂದ ಮೂಲ ಉದ್ಯೋಗಗಳಿಗೆ ಸ್ವಾತಂತ್ರ್ಯ ಇಲ್ಲದಂತಾಗಿ ಎರಡು ವೇದಿಕೆಗಳ ಸಹ ಸಂಸ್ಥಾಪಕರು ರಾಜೀನಾಮೆ ನೀಡಿದ್ದಾರೆಂದು ವರದಿಯಾಗಿದೆ.

1 ಬಿಲಿಯನ್ ಡಾಲರ್‌ಗೆ ಇನ್‌ಸ್ಟಾಗ್ರಾಂ ಖರೀದಿ

1 ಬಿಲಿಯನ್ ಡಾಲರ್‌ಗೆ ಇನ್‌ಸ್ಟಾಗ್ರಾಂ ಖರೀದಿ

2012ರಲ್ಲಿ ಇನ್‌ಸ್ಟಾಗ್ರಾಂನ್ನು 1 ಬಿಲಿಯನ್‌ ಡಾಲರ್‌ಗೆ ಖರೀದಿಸಿತ್ತು. ದಿನ ಕಳೆದಂತೆಲ್ಲ ಇನ್‌ಸ್ಟಾಗ್ರಾಂ ಜನಪ್ರಿಯಗೊಳ್ಳುತ್ತಾ ಇದೆ. ಈ ವರ್ಷ ಇನ್‌ಸ್ಟಾಗ್ರಾಂ ಆದಾಯ 8 ಬಿಲಿಯನ್ ಡಾಲರ್‌ನ್ನು ದಾಟುತ್ತದೆ ಎಂದು eMarketer ವರದಿ ಮಾಡಿದೆ. ಇನ್‌ಸ್ಟಾಗ್ರಾಂನಲ್ಲಿ IGTV ಆಪ್‌ ತಂದು ಹೊಸ ವಿಡಿಯೋ ಪ್ಲಾಟ್‌ಫಾರ್ಮ್‌ನ್ನು ಫೇಸ್‌ಬುಕ್‌ ನಿರ್ಮಿಸಿತ್ತು.

Best Mobiles in India

English summary
Instagram co-founders resign in latest Facebook executive exit. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+