ವಿಶ್ವದೆಲ್ಲೆಡೆ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಡೌನ್: ಪೋಸ್ಟ್ ಮಾಡಲಾಗದೆ ಪರದಾಟ
ವಿಶ್ವದೆಲ್ಲೆಡೆ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಮೆಸೆಂಜರ್ ಅಪ್ಲಿಕೇಶನ್‌ನಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದೆ. ಇದರಿಂದ ಜಾಗತಿಕವಾಗಿ ಸೊಶೀಯಲ್ ಮೀಡಿಯಾ ಬಳಕೆದಾರರು ಅಪ್ಲಿಕೇಶನ್ ಪ್ರವೇಶಿಸುವುದಕ್ಕೆ ಸಮಸ್ಯೆಗಳನ್ನು ಎದುರಿಸಿದ್ದಾರೆ. Instagramನಲ್ಲಿ ಯಾವುದೆ ಪೋಸ್ಟ್‌ಗಳನ್ನು ಅಪ್‌ಲೋಡ್ ಮಾಡಲಾಗದೇ ತೊಂದರೆ ಅನುಭವಿಸಿದ್ದಾರೆ.
ಹೌದು, ಮೆಟಾ ಒಡೆತನದ ಇನ್‌ಸ್ಟಾಗ್ರಾಮ್, ಫೇಸ್‌ಬುಕ್ ಮತ್ತು ಮೆಸೆಂಜರ್ ಬಳಕೆಯಲ್ಲಿ ತೊಂದರೆ ಕಾಣಿಸಿಕೊಂಡಿದೆ. ಫೇಸ್‌ಬುಕ್ ಅಪ್ಲಿಕೇಶನ್ ತೆರೆಯುವುದಕ್ಕೆ ತೊಂದರೆಯಾಗಿದೆ ಎಂದು ಹಲವು ಮಂದಿ ಟ್ವಿಟ್ ಮಾಡಿದ್ದಾರೆ. ಅಲ್ಲದೆ ಥ್ರೆಡ್‌ಗಳಲ್ಲಿ, ಅಪ್ಲಿಕೇಶನ್ ತೆರೆಯುವಾಗ ಸಮಸ್ಯೆಯ ಸಂದೇಶವನ್ನು ಎದುರಿಸುವುದು ವರದಿಯಾಗಿದೆ. ಅಷ್ಟಕ್ಕೂ ಮೆಟಾ ಒಡೆತನದ ಅಪ್ಲಿಕೇಶನ್‌ಗಳಲ್ಲಿ ತೊಂದರೆ ಕಾಣಿಸಿಕೊಂಡಿರುವುದಕ್ಕೆ ಮುಖ್ಯ ಕಾರಣ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಮೆಟಾ ಒಡೆತನದ ಅಪ್ಲಿಕೇಶನ್‌ಗಳಾದ Instagram, Facebook, Messenger ಪ್ಲಾಟ್‌ಫಾರ್ಮ್‌ಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಇದರಿಂದ ಜಾಗತಿಕ ವಲಯದಲ್ಲಿ ಸಾಕಷ್ಟು ಸಂಚಲನ ಉಂಟಾಗಿದೆ. ಹಲವು ಮಂದಿ ಸೊಶೀಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡಲಾಗದೆ ತೊಂದರೆ ಅನುಭವಿಸಿರುವುದಾಗಿ ವರದಿ ಮಾಡಿದ್ದಾರೆ. ಕೆಲವು Instagram, Facebook ಮತ್ತು ಥ್ರೆಡ್‌ಗಳ ಬಳಕೆದಾರರು ಫೀಡ್ ಅನ್ನು ಮೇನ್ ಪೇಜ್‌ನಲ್ಲಿ ರಿಫ್ರೆಶ್ ಮಾಡಲು ಸಾಧ್ಯವಾಗದೆ ತೊಂದರೆ ಅನುಭವಿಸಿದ್ದಾರೆ.
Instagram ಸಮಸ್ಯೆಯನ್ನು ಸರಿಪಡಿಸಲು ನೀವು ಏನು ಮಾಡಬಹುದು?
ಸದ್ಯ ಇನ್‌ಸ್ಟಾಗ್ರಾಮ್‌ನಲ್ಲಿ ಕಾಣಿಸಿಕೊಂಡಿರುವ ಸಮಸ್ಯೆಯು ಮೆಟಾಗೆ ಸಂಬಂಧಿಸಿದೆ. ಆದರಿಂದ ಮೆಟಾ ಪ್ಲಾಟ್‌ಫಾರ್ಮ್ ತಾಂತ್ರಿಕ ಸಮಸ್ಯೆಯನ್ನು ಸರಿಪಡಿಸುವವರೆಗೆ ನೀವು ಇನ್‌ಸ್ಟಾಗ್ರಾನ್ ಪ್ರವೇಶಿಸುವುದಕ್ಕೆ ಸಾಧ್ಯವಿಲ್ಲ. ನಿಮ್ಮ ಇನ್‌ಸ್ಟಾಗ್ರಾಮ್ ಖಾತೆಯನ್ನು ಪ್ರವೇಶಿಸುವುದಕ್ಕೆ ಸಾಧ್ಯವಾಗದಿರುವುದಕ್ಕೆ ಕೆಲವು ಕಾರಣಗಳು ಇಲ್ಲಿವೆ.
* ನಿಮ್ಮ ಖಾತೆ ಬ್ಯಾನ್ ಆಗಿರಬಹುದು
* ನೀವು ಇಂಟರ್ನೆಟ್ ಸಂಪರ್ಕವನ್ನು ಹೊಂದಿಲ್ಲದಿರಬಹುದು.
* Instagram ಸರ್ವರ್‌ಗಳು ಡೌನ್ ಆಗಿರಬಹುದು.
* ನಿಮ್ಮ ಡಿವೈಸ್‌ನ ಟೈಂ ಸೆಟ್ಟಿಂಗ್ಸ್‌ನಲ್ಲಿ ತಪ್ಪಾಗಿರಬಹುದು.
* ನಿಮ್ಮ ಯೂಸರ್ ನೇಮ್ ಅಥವಾ ಪಾಸ್‌ವರ್ಡ್ ಅನ್ನು ನೀವು ತಪ್ಪಾಗಿ ನಮೂದಿಸಿರುವ ಸಾಧ್ಯತೆಯಿದೆ.
Instagram ಲಾಗಿನ್ ಸಮಸ್ಯೆಗಳನ್ನು ನಿವಾರಿಸಲು ಇಲ್ಲಿ ಪರಿಹಾರಗಳಿವೆ:
* ನಿಮ್ಮ ಖಾತೆಯ ರುಜುವಾತುಗಳನ್ನು ಎರಡು ಬಾರಿ ಪರಿಶೀಲಿಸಿ.
* ನಿಮ್ಮ ಇಂಟರ್ನೆಟ್ ಸಂಪರ್ಕವನ್ನು ಪರಿಶೀಲಿಸಿ.
* ನಿಮ್ಮ ಫೋನ್ ಅನ್ನು ರಿ ಸ್ಟಾರ್ಟ್ ಮಾಡಿರಿ
* Instagram ನ ಸಂಗ್ರಹ ಮತ್ತು ಡೇಟಾವನ್ನು ತೆರವುಗೊಳಿಸಿ.
* ನಿಮ್ಮ ಸಾಧನದ ದಿನಾಂಕ ಮತ್ತು ಸಮಯದ ಸೆಟ್ಟಿಂಗ್‌ಗಳನ್ನು ಪರಿಶೀಲಿಸಿ.
* Instagram ಅಪ್ಲಿಕೇಶನ್ ಅನ್ನು ನವೀಕರಿಸಿ.
* ನಿಮ್ಮ ಖಾತೆಯ ಪಾಸ್‌ವರ್ಡ್ ಅನ್ನು ಮರುಹೊಂದಿಸಿ.
* Instagram ಅಪ್ಲಿಕೇಶನ್ ಅನ್ನು ಅನ್ ಇನ್‌ಸ್ಟಾಲ್ ಮಾಡಿರಿ ಮತ್ತು ರಿ ಇನ್‌ಸ್ಟಾಲ್ ಮಾಡಿರಿ.
* ನಿಮ್ಮ ಫೋನ್ ಅನ್ನು ರಿ ಸೆಟ್ ಮಾಡಿರಿ.


Click it and Unblock the Notifications








