ಇನ್ಮುಂದೆ ಇನ್‌ಸ್ಟಾಗ್ರಾಮ್‌ನಲ್ಲಿ ಕಾಮೆಂಟ್‌ ಮಾಡುವ ಮುನ್ನ ಯೋಚಿಸಿ!

|

ಇನ್‌ಸ್ಟಾಗ್ರಾಮ್‌ ಬಳಕೆದಾರರ ನೆಚ್ಚಿನ ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾಗಿದೆ. ಹಲವು ಆಕರ್ಷಕ ಫೀಚರ್ಸ್‌ಗಳನ್ನು ಒಳಗೊಂಡಿರುವ ಇನ್‌ಸ್ಟಾಗ್ರಾಮ್‌ ಇದೀಗ ಹೊಸ ಫೀಚರ್ಸ್‌ ಅನ್ನು ಲಾಂಚ್‌ ಮಾಡಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಜನರನ್ನು ಇತರರ ನಿಂದನೆಯಿಂದ ರಕ್ಷಿಸಲು ಹೊಸ ಫೀಚರ್ಸ್‌ಗಳ ಗುಂಪನ್ನು ಘೋಷಿಸಿದೆ. ಇದು ಕಾಮೆಂಟ್‌ಗಳನ್ನು ಮತ್ತು ಡಿಎಂ ವಿನಂತಿಗಳನ್ನು ಮಿತಿಗೊಳಿಸುವ ಸಾಮರ್ಥ್ಯವನ್ನು ಸೇರಿಸಿದೆ.

ಇನ್‌ಸ್ಟಾಗ್ರಾಮ್‌

ಹೌದು, ಇನ್‌ಸ್ಟಾಗ್ರಾಮ್‌ ತನ್ನ ಬಳಕೆದಾರರು ಇತರರ ನಿಂದನೆಗೆ ಒಳಗಾಗದಂತೆ ತಡೆಯಲು ಹೊಸ ಫೀಚರ್ಸ್‌ ಪರಿಚಯಿಸಿದೆ. ಇದರಿಂದ ಜನರು ನಿಂದನಾತ್ಮಕ ಕಾಮೆಂಟ್‌ಗಳಿಂದ ರಕ್ಷಣೆ ಪಡೆಯಲು ಸಾಧ್ಯವಾಗಿದೆ. ಸಂಭಾವ್ಯ ಆಕ್ರಮಣಕಾರಿ ಕಾಮೆಂಟ್‌ಗಳನ್ನು ಪೋಸ್ಟ್ ಮಾಡಲು ಪ್ರಯತ್ನಿಸಿದಾಗ ಇನ್‌ಸ್ಟಾಗ್ರಾಮ್‌ ಸ್ಟ್ರಾಂಗ್‌ ಆಲರ್ಟ್‌ ನೀಡಲು ಮುಂದಾಗಿದೆ. ಇದಕ್ಕಾಗಿ ಇನ್‌ಸ್ಟಾಗ್ರಾಮ್‌ ಅಪ್ಲಿಕೇಶನ್ ಹೊಸ ಹಿಡನ್ ವರ್ಡ್ಸ್ ಫೀಚರ್ಸ್‌ ಅನ್ನು ಕೂಡ ಸೇರಿಸಿದೆ. ಹಾಗಾದ್ರೆ ಇನ್‌ಸ್ಟಾಗ್ರಾಮ್‌ ಪರಿಚಯಿಸಿರುವ ಹೊಸ ಫೀಚರ್ಸ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಮುಂದೆ ಓದಿರಿ.

ಇನ್‌ಸ್ಟಾಗ್ರಾಮ್‌

ಇನ್‌ಸ್ಟಾಗ್ರಾಮ್‌ನಲ್ಲಿ ಬಳಕೆದಾರರು ಇದೀಗ ನೆಮ್ಮದಿಯಾಗಿ ಇರಬಹುದು. ಏಕೆಂದರೆ ಇನ್ಮುಂದೆ ನಿಮ್ಮ ಮೇಲೆ ಯಾವುದೇ ನಿಂದನಾತ್ಮಕ ಕಾಮೆಂಟ್‌ಗಳ ಭಯ ಇರುವುದಿಲ್ಲ. ಇಂತಹ ಕಾಮೆಂಟ್‌ಗಳನ್ನು ತಡೆಯಲು ಇನ್‌ಸ್ಟಾಗ್ರಾಮ್‌ ಇದೀಗ ಮುಂದಾಗಿದೆ. ಇದಕ್ಕಾಗಿ ಇನ್‌ಸ್ಟಾಗ್ರಾಮ್‌ "ಲಿಮಿಟ್ಸ್‌" ಫೀಚರ್ಸ್‌ ಅನ್ನು ಪರಿಚಯಿಸಿದೆ. ಇದು ನಿಮ್ಮನ್ನು ಅನುಸರಿಸದ ಅಥವಾ ಇತ್ತೀಚೆಗೆ ನಿಮ್ಮನ್ನು ಅನುಸರಿಸಿದ ಜನರಿಂದ ಕಾಮೆಂಟ್‌ಗಳು ಮತ್ತು ಡಿಎಂ ವಿನಂತಿಗಳನ್ನು ಸ್ವಯಂಚಾಲಿತವಾಗಿ ಮರೆಮಾಡುತ್ತದೆ. ಈ ಫೀಚರ್ಸ್‌ ಇನ್‌ಸ್ಟಾಗ್ರಾಮ್‌ ನಲ್ಲಿ ಎಲ್ಲರಿಗೂ ಲಭ್ಯವಿದೆ. ಅದನ್ನು ಸಕ್ರಿಯಗೊಳಿಸಲು, ನಿಮ್ಮ ಗೌಪ್ಯತೆ ಸೆಟ್ಟಿಂಗ್‌ಗಳಿಗೆ ಹೋಗಬೇಕಾಗುತ್ತದೆ.

ಇನ್‌ಸ್ಟಾಗ್ರಾಮ್‌

ಇನ್ನು ಇನ್‌ಸ್ಟಾಗ್ರಾಮ್‌ ಈಗಾಗಲೇ ಹಿಡನ್ ವರ್ಡ್ಸ್ ಎಂಬ ಫೀಚರ್ ಅನ್ನು ಪರಿಚಯಿಸಿದೆ. ಇದು ನಿಮಗೆ ಬೇಕೆಂದಾಗ ತೆರೆಯಲು ಬಾರದ, ಆಕ್ರಮಣಕಾರಿ ಪದಗಳು, ಪದಗುಚ್ಛಗಳು ಮತ್ತು ಎಮೋಜಿಗಳನ್ನು ಸ್ವಯಂಚಾಲಿತವಾಗಿ ಫಿಡನ್ ಮಾಡಲು ಅನುಮತಿಸುತ್ತದೆ. ಇದು ಸ್ಪ್ಯಾಮ್‌ ಅಥವಾ ಕಡಿಮೆ-ಗುಣಮಟ್ಟದ ಡಿಎಂ ವಿನಂತಿಗಳನ್ನು ಫಿಲ್ಟರ್ ಮಾಡುತ್ತದೆ. ಆದಾಗ್ಯೂ, ಈ ಫೀಚರ್ಸ್‌ ಕೆಲವು ದೇಶಗಳಲ್ಲಿ ಮಾತ್ರ ಲಭ್ಯವಿತ್ತು, ಆದ್ದರಿಂದ ಇನ್‌ಸ್ಟಾಗ್ರಾಮ್‌ ಇದೀಗ ಇದನ್ನು ಈ ತಿಂಗಳ ಅಂತ್ಯದ ವೇಳೆಗೆ ಜಾಗತಿಕವಾಗಿ ಎಲ್ಲರಿಗೂ ಬಿಡುಗಡೆ ಮಾಡಲು ಯೋಜಿಸುತ್ತಿದೆ.

ಫೀಚರ್ಸ್‌

ಈ ಹೊಸ ಫೀಚರ್ಸ್‌ ಮೂಲಕ ಇನ್‌ಸ್ಟಾಗ್ರಾಮ್‌ ಇನ್ಮುಂದೆ ಯಾರಾದರೂ ಸಂಭಾವ್ಯ ಆಕ್ರಮಣಕಾರಿ ಪ್ರತಿಕ್ರಿಯೆಯನ್ನು ಪೋಸ್ಟ್ ಮಾಡಲು ಪ್ರಯತ್ನಿಸಿದಾಗ ಸ್ಟ್ರಾಂಗ್‌ ಆಲರ್ಟ್‌ ಅನ್ನು ನೀಡುತ್ತದೆ. ಕಳೆದ ವಾರ, ಜನರು ಸಂಭಾವ್ಯವಾಗಿ ಆಕ್ರಮಣಕಾರಿ ಕಾಮೆಂಟ್‌ಗಳನ್ನು ಮಾಡುವಾಗ ಜನರಿಗೆ ದಿನಕ್ಕೆ ಸರಾಸರಿ ಒಂದು ಮಿಲಿಯನ್ ಬಾರಿ ಎಚ್ಚರಿಕೆಗಳನ್ನು ತೋರಿಸಿದೆ ಎಂದು ಕಂಪನಿ ಹೇಳಿಕೊಂಡಿದೆ. ಈ ಎಚ್ಚರಿಕೆಗಳ ಆಧಾರದ ಮೇಲೆ ಬಳಕೆದಾರರು ಸುಮಾರು 50% ಬಾರಿ ಕಾಮೆಂಟ್ ಅನ್ನು ಎಡಿಟ್‌ ಮಾಡಿದ್ದಾರೆ ಎಂದು ಇನ್‌ಸ್ಟಾಗ್ರಾಮ್‌ ಹೇಳಿದೆ.

Most Read Articles
Best Mobiles in India

Read more about:
English summary
Instagram has added the ability to limit comments and DM requests during spikes of increased attention.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X