ಇನ್‌ಸ್ಟಾಗ್ರಾಮ್‌ನಿಂದ ಗುಡ್‌ನ್ಯೂಸ್! ಸ್ಟೋರೀಸ್‌ಗಳಲ್ಲಿ ಸಿಗಲಿದೆ ಇನ್ನಷ್ಟು ಆಯ್ಕೆ!
ಜನಪ್ರಿಯ ಸೊಶೀಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಇನ್‌ಸ್ಟಾಗ್ರಾಮ್ ತನ್ನ ಬಳಕೆದಾರರಿಗೆ ಗುಡ್‌ನ್ಯೂಸ್ ನೀಡಿದೆ. ಈಗಾಗಲೇ ಹಲವು ಆಕರ್ಷಕ ಫೀಚರ್ಸ್‌ಗಳನ್ನು ಪರಿಚಯಿಸಿರುವ ಇನ್‌ಸ್ಟಾಗ್ರಾಮ್ ಇದೀಗ ಜನರೇಷನ್ Z ಗೆ ಹೊಸ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಈ ಫೀಚರ್ಸ್‌ಗಳು ಹೊಸ ಅನುಭವವನ್ನು ನೀಡೋದು ಪಕ್ಕಾ ಎನ್ನಲಾಗಿದೆ.
ಹೌದು, ಇನ್‌ಸ್ಟಾಗ್ರಾಮ್ ಅಪ್ಲಿಕೇಶನ್ GenZ ಬಳಕೆದಾರರಿಗಾಗಿ ನಾಲ್ಕು ಹೊಸ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಇದರಲ್ಲಿ ನ್ಯೂ ಕ್ರಿಯೆಟಿವ್ ಫೀಚರ್ಸ್, ರಿಮೈಂಡರ್ ಫಾರ್ ಬರ್ತ್‌ಡೇ, ಆಡಿಯೊ ನೋಟ್ಸ್, ಸೆಲ್ಫಿಗಳ ಮೂಲಕ ವೀಡಿಯೊ ನೋಟ್ಸ್ ಮತ್ತು ಮಲ್ಟಿಪಲ್ ಲಿಸ್ಟ್ ಫಾರ್ ಸ್ಟೋರಿಸ್ ಫೀಚರ್ಸ್‌ಗಳು ಸೇರಿವೆ. ಹಾಗಾದ್ರೆ ಇನ್‌ಸ್ಟಾಗ್ರಾಮ್ ಸೇರಿರುವ ಹೊಸ ಫೀಚರ್ಸ್‌ಗಳ ಉಪಯೋಗಗಳೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಏನಿದು ಬರ್ತ್‌ಡೇ ಫೀಚರ್ಸ್?
ಇನ್‌ಸ್ಟಾಗ್ರಾಮ್ ಸೇರಿರುವ ಹೊಸ ಫೀಚರ್ಸ್‌ಗಳಲ್ಲಿ ಬರ್ತ್‌ಡೇಸ್ ಪ್ರಮುಖವಾಗಿದೆ. ಇದು ಬಳಕೆದಾರರು ತಮ್ಮ ಸ್ನೇಹಿತರ ಜನ್ಮದಿನಗಳನ್ನು ನೆನಪಿಟ್ಟುಕೊಳ್ಳಲು ಸಹಾಯ ಮಾಡಲಿದೆ. ಇದಕ್ಕಾಗಿ ಬಳಕೆದಾರರು ತಮ್ಮ ಪ್ರೊಫೈಲ್ ಚಿತ್ರಕ್ಕೆ ಕಾನ್ಫೆಟ್ಟಿಯಂತಹ ಹೊಸ ಚಿತ್ರಗಳು ಅಥವಾ ಎಫೆಕ್ಟ್‌ಗಳನ್ನು ಸೇರಿಸಬಹುದಾಗಿದೆ.
ಹೊಸ ಆಯ್ಕೆಯ ನೋಟ್ಸ್‌ಗಳಲ್ಲಿ ಏನಿದೆ?
ಇದಲ್ಲದೆ ಇನ್‌ಸ್ಟಾಗ್ರಾಮ್ ಬಳಕೆದಾರರಿಗೆ ನೋಟ್ಸ್‌ಗಳನ್ನು ಸೇರ್ಪಡೆ ಮಾಡುವುದನ್ನು ಇನ್ನಷ್ಟು ಸುಲಭಗೊಳಿಸುತ್ತದೆ. ಇದರಲ್ಲಿ ಆಡಿಯೋ ನೋಟ್ ಅಥವಾ ಸೆಲ್ಫಿ ವಿಡಿಯೋ ನೋಟ್ ಕೂಡ ಸೇರಿವೆ.ಇನ್‌ಸ್ಟಾಗ್ರಾಮ್ ಅಪ್ಲಿಕೇಶನ್‌ನಲ್ಲಿ ನೋಟ್ಸ್ ಫೀಚರ್ಸ್ ಈಗಾಗಲೇ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದೆ. ಇದೀಗ ಹೊಸ ಆಯ್ಕೆಯ ನೋಟ್ಸ್ ಫೀಚರ್ಸ್ ಸೇರ್ಪಡೆ ಮಾಡಿರುವುದರಿಂದ ಬಳಕೆದಾರರು ತ್ವರಿತ ರೀತಿಯಲ್ಲಿ ಅಪ್ಡೇಟ್‌ಗಳನ್ನು ಶೇರ್ ಮಾಡುವುದಕ್ಕೆ ಅವಕಾಶ ನೀಡಲಿದೆ. ಇದು ಸಂದೇಶಗಳ ಮೇಲ್ಭಾಗದಲ್ಲಿರುವ DM ವಿಭಾಗದಲ್ಲಿ ಲಭ್ಯವಾಗಲಿದೆ.
ಹೊಸ ಆಡಿಯೋ ನೋಟ್ಸ್‌ನಲ್ಲಿ ಏನಿದೆ?
ಇದರಲ್ಲಿ ಹೊಸ ಆಡಿಯೊ ನೋಟ್ಸ್ ಫೀಚರ್ಸ್ ಬಳಕೆದಾರರಿಗೆ ವಾಯ್ಸ್ ರೆಕಾರ್ಡಿಂಗ್ ಅನ್ನು ನೋಟ್ ಆಗಿ ಮಾಡಲು ಅನುಮತಿಸುತ್ತದೆ. ಇದಲ್ಲದೆ ಸೆಲ್ಫಿ ವೀಡಿಯೊ ನೋಟ್ಸ್ 24 ಗಂಟೆಗಳ ಕಾಲ ಶಾರ್ಟ್ ವೀಡಿಯೊವನ್ನು ನೋಟ್ಸ್‌ಆಗಿ ರೆಕಾರ್ಡ್ ಮಾಡಲು ಅವಕಾಶ ನೀಡಲಿದೆ.
ಮಲ್ಟಿ ಲಿಸ್ಟ್ ಫೀಚರ್ಸ್ ವಿಶೇಷತೆ ಏನು?
ಇನ್ನು ಸ್ಟೋರಿಸ್‌ಗಳಲ್ಲಿ ಮಲ್ಟಿ ಲಿಸ್ಟ್‌ಗಳನ್ನು ಸಹ ಸೇರ್ಪಡೆ ಮಾಡಿದೆ. ಇದರಿಂದ ಬಳಕೆದಾರರು ತಮ್ಮ ವಿಶ್ವವಿದ್ಯಾನಿಲಯದ ಸ್ನೇಹಿತರಿಗಾಗಿ ಒಂದು, ಅವರ ಕಚೇರಿ ಸ್ನೇಹಿತರಿಗಾಗಿ, ಮತ್ತು ಇತರೆಯವರಿಗಾಗಿ ಹೀಗೆ ಹಲವು ಲಿಸ್ಟ್‌ಗಳನ್ನು ಸ್ಟೋರೀಸ್‌ಗಳನ್ನು ಕ್ರಿಯೆಟ್ ಮಾಡಬಹುದಾಗಿದೆ. ಮಲ್ಟಿ ಲಿಸ್ಟ್‌ಗಳನ್ನು ಮಾಡುವುದರಿಂದ ಯಾವುದೇ ನಿರ್ದಿಷ್ಟ ಸ್ಟೋರಿಯನ್ನು ವೀಕ್ಷಿಸಬಹುದಾದ ಜನರ ಆಯ್ಕೆಯನ್ನು ಪ್ರತ್ಯೇಕಿಸಲು ಬಳಕೆದಾರರಿಗೆ ಅವಕಾಶ ನೀಡಲಿದೆ.
ನಿಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿ ಯಾರು ವೀಕ್ಷಿಸಿದ್ದಾರೆ ಎಂದು ತಿಳಿಯುವುದು ಹೇಗೆ?
* ಇನ್‌ಸ್ಟಾಗ್ರಾಮ್ ಸ್ಟೋರಿ ಹಾಕಿದರೆ ನಿಮ್ಮ ಪ್ರೊಫೈಲ್ ಐಕಾನ್ ಅನ್ನು ಹೋಮ್ ಅಥವಾ ಪ್ರೊಫೈಲ್ ಐಕಾನ್‌ನಿಂದ ಕ್ಲಿಕ್ ಮಾಡಿ
* ನಿಮ್ಮ ಪ್ರೊಫೈಲ್ ಫೋಟೋದ ಮೇಲೆ ಕ್ಲಿಕ್ ಮಾಡುವ ಮೂಲಕ ಸ್ಟೋರಿ ಓಪೆನ್ ಮಾಡಿ
* ನೀವು ಹಾಕಿರುವ ಸ್ಟೋರಿಯನ್ನು ಯಾರು ವೀಕ್ಷಿಸಿದ್ದಾರೆ ತಿಳಿಯಲು ಸ್ಟೋರಿಯ ಮೇಲೆ ಸ್ವೈಪ್ ಮಾಡಿ.
ಇನ್‌ಸ್ಟಾಗ್ರಾಮ್ ಪ್ರೊಫೈಲ್ ಅನ್ನು ಯಾರು ವೀಕ್ಷಿಸಿದ್ದಾರೆ ತಿಳಿಯುವುದು ಹೇಗೆ?
ಬಿಸಿನೆಸ್ ಪ್ರೊಫೈಲ್ Insights ಬಳಿಸಿ ಇನ್‌ಸ್ಟಾಗ್ರಾಮ್ ಪ್ರೊಫೈಲ್ ಅನ್ನು ಯಾರು ವೀಕ್ಷಿಸಿದ್ದಾರೆ ಎಂಬುದನ್ನು ತಿಳಿಯಬಹುದು. ಇನ್‌ಸ್ಟಾಗ್ರಾಮ್ ಬಿಸಿನೆಸ್ ಪ್ರೊಫೈಲ್ ಮಾಲೀಕರಿಗೆ ಅವರ ಇಂಟ್ರ್ಯಾಕ್ಷನ್ ಮತ್ತು ರೀಚ್ ಪತ್ತೆ ಮಾಡಲು ಅನುಮತಿಸುತ್ತದೆ. ಅಲ್ಲದೇ ಬಳಕೆದಾರರು ತಮ್ಮ ಪ್ರೊಫೈಲ್ ವಿಸಿಟರ್ಸ್, ಅವರ ಫೋಟೋಗಳಲ್ಲಿನ ವೀಕ್ಷಣೆಗಳು, ಹಾಗೂ ಸಂಪೂರ್ಣ ಪ್ರೊಫೈಲ್‌ನ ಅನುಸರಣೆಗಳನ್ನು ತೆಗೆದುಕೊಳ್ಳಲು ಕೂಡಾ ಅನುವು ಮಾಡಿಕೊಡುತ್ತದೆ.


Click it and Unblock the Notifications








