ಯುವಜನರ ರಕ್ಷಣೆಗಾಗಿ ಹೊಸ ಫೀಚರ್ಸ್‌ ಪರಿಚಯಿಸಿದ ಇನ್‌ಸ್ಟಾಗ್ರಾಮ್‌!

|

ಇತ್ತೀಚಿನ ದಿನಗಳಲ್ಲಿ ಇನ್‌ಸ್ಟಾಗ್ರಾಮ್‌ ಜನಪ್ರಿಯ ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ಗಳ ಸಾಲಿಗೆ ಸೇರಿಕೊಂಡಿದೆ. ಆಕರ್ಷಕ ಫೀಚರ್ಸ್‌ಗಳ ಜೊತೆಗೆ ಬಳಕೆದಾರರ ಅನುಕೂಲಕ್ಕಾಗಿ ಹಲವು ಅಭಿಯಾನಗಳನ್ನು ಕೂಡ ನಡೆಸುತ್ತಿದೆ. ಇದೇ ಕಾರಣಕ್ಕೆ ಇನ್‌ಸ್ಟಾಗ್ರಾಮ್‌ಬಳಕೆದಾರರ ನೆಚ್ಚಿನ ಫೋಟೋ ಶೇರಿಂಗ್‌ ಅಪ್ಲಿಕೇಶನ್‌ ಎನಿಸಿಕೊಂಡಿದೆ. ಸದ್ಯ ಇದೀಗ ಯುವ ಜನತೆಯ ರಕ್ಷಣೆಗಾಗಿ ಹೊಸ ಫೀಚರ್ಸ್‌ ಅನ್ನು ಪರಿಚಯಿಸಲು ಮುಂದಾಗಿದೆ. ಈ ಫೀಚರ್ಸ್‌ ಮುಖ್ಯವಾಗಿ ಹದಿಹರೆಯದವರ ಮೇಲೆ ಗಮನವಿಡಲಿದೆ ಎನ್ನಲಾಗಿದೆ.

ಇನ್‌ಸ್ಟಾಗ್ರಾಮ್‌

ಹೌದು, ಇನ್‌ಸ್ಟಾಗ್ರಾಮ್‌ ಹದಿಹರೆಯದವರನ್ನು ರಕ್ಷಿಸುವ ಉದ್ದೇಶದಿಂದ ತನ್ನ "ಟೇಕ್ ಎ ಬ್ರೇಕ್" ಫೀಚರ್ಸ್‌ ಅನ್ನು ಹೊರತರಲು ಮುಂದಾಗಿದೆ. ಹೆಸರೇ ಸೂಚಿಸುವಂತೆ ಇನ್‌ಸ್ಟಾಗ್ರಾಮ್‌ನಲ್ಲಿ ಸ್ಕ್ರೋಲಿಂಗ್‌ ಮಾಡಿದ ನಂತರ ಸ್ವಲ್ಪ ಸಮಯದ ವರೆಗೆ ಬ್ರೇಕ್‌ ತೆಗೆದುಕೊಳ್ಳಲು ಅವಕಾಶ ನೀಡಲಿದೆ. ಸದ್ಯ ಈ ಫೀಚರ್ಸ್‌ ಆರಂಭದಲ್ಲಿ ಯುನೈಟೆಡ್ ಸ್ಟೇಟ್ಸ್, ಯುನೈಟೆಡ್ ಕಿಂಗ್‌ಡಮ್, ಕೆನಡಾ ಮತ್ತು ಆಸ್ಟ್ರೇಲಿಯಾದಲ್ಲಿ ಲಭ್ಯವಾಗಲಿದೆ. ಹಾಗಾದ್ರೆ ಈ ಹೊಸ ಟೆಕ್‌ ಎ ಬ್ರೇಕ್‌ ಫೀಚರ್ಸ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಇನ್‌ಸ್ಟಾಗ್ರಾಮ್‌

ಇನ್‌ಸ್ಟಾಗ್ರಾಮ್‌ನ ಹೊಸ ಟೇಕ್ ಎ ಬ್ರೇಕ್ ಫೀಚರ್ಸ್‌ ಅನ್ನು ಸೆಟ್ಟಿಂಗ್ಸ್‌ ಪ್ಯಾನಲ್‌ ಮೂಲಕ ಸಕ್ರಿಯಗೊಳಿಸಬಹುದು. ಈ ಫೀಚರ್ಸ್‌ ಮೂಲಕ ಇನ್‌ಸ್ಟಾಗ್ರಾಮ್‌ನಲ್ಲಿ ಸ್ಕ್ರೋಲಿಂಗ್‌ ಮಾಡುವ ಬಳಕೆದಾರರು ನಿರ್ದಿಷ್ಟ ಅವಧಿಯ ನಂತರ ಬ್ರೇಕ್‌ ತೆಗೆದುಕೊಳ್ಳಬಹುದು. ಇದಕ್ಕಾಗಿ ನೀವು 10 ನಿಮಿಷಗಳು, 20 ನಿಮಿಷಗಳು ಅಥವಾ 30 ನಿಮಿಷಗಳ ಆಯ್ಕೆಯನ್ನು ಮಾಡಬಹುದು. ಒಮ್ಮೆ ಬ್ರೇಕ್‌ ಸಮಯವನ್ನು ಆಯ್ಕೆ ಮಾಡಿದ ನಂತರ ನಿಮಗೆ ಆಲರ್ಟ್‌ ಅನ್ನು ನೀಡಲಿದೆ. ನಿರ್ದಿಷ್ಟ ಸಮಯದ ನಂತರ ಬಳಕೆದಾರರಿಗೆ "ದೀರ್ಘವಾದ ಉಸಿರನ್ನು ತೆಗೆದುಕೊಳ್ಳಿ", "ಏನನ್ನಾದರೂ ಬರೆಯಿರಿ", "ಮಾಡಬೇಕಾದ ಪಟ್ಟಿಯನ್ನು ಪರಿಶೀಲಿಸಿ" ಅಥವಾ "ಹಾಡನ್ನು ಆಲಿಸಿ" ಎಂದು ವಿನಂತಿಸುತ್ತದೆ.

ಇನ್‌ಸ್ಟಾಗ್ರಾಮ್‌

ಇದಲ್ಲದೆ, ಇನ್‌ಸ್ಟಾಗ್ರಾಮ್‌ ಮತ್ತೊಂದು ಫೀಚರ್ಸ್‌ ಅನ್ನು ಪರಿಚಯಿಸಿದೆ. ಇದು ಬಳಕೆದಾರರು ದೀರ್ಘಕಾಲದವರೆಗೆ ನಿರ್ದಿಷ್ಟ ವಿಷಯದ ಅಡಿಯಲ್ಲಿ ಪೋಸ್ಟ್‌ಗಳನ್ನು ನೋಡುತ್ತಿರುವಾಗ ಇತರ ವಿಷಯಗಳನ್ನು ಪರಿಶೀಲಿಸಲು ಅವಕಾಶ ನೀಡಲಿದೆ. ಕಂಪನಿಯು ತನ್ನ ಬಳಕೆದಾರರಿಗೆ ಅವರು ಹಂಚಿಕೊಳ್ಳುವ ವಿಷಯದ ಮೇಲೆ ಹೆಚ್ಚಿನ ನಿಯಂತ್ರಣವನ್ನು ನೀಡಲು ಬಯಸುತ್ತದೆ ಎಂದು ಹೇಳಿದೆ. ಇದಕ್ಕಾಗಿ, ಬಳಕೆದಾರರು ಹಳೆಯ ಫೋಟೋಗಳನ್ನು ಒಂದೊಂದಾಗಿ ಡಿಲೀಟ್‌ ಮಾಡುವ ಬದಲು ದೊಡ್ಡ ಪ್ರಮಾಣದಲ್ಲಿ ಡಿಲೀಟ್‌ ಮಾಡಬಹುದಾದ ಫೀಚರ್ಸ್‌ ಅನ್ನು ಪರಿಚಯಿಸುತ್ತಿದೆ. ಇದು ಬಳಕೆದಾರರನ್ನು ಟ್ಯಾಗ್ ಮಾಡುವುದರಿಂದ ಅಥವಾ ಅವರು ಅನುಸರಿಸದ ಹದಿಹರೆಯದವರನ್ನು ಮೆನ್ಶನ್‌ ಮಾಡುವುದನ್ನ ತಡೆಯಲಿದೆ.

ಇನ್‌ಸ್ಟಾಗ್ರಾಮ್‌

ಇನ್ನು ಇನ್‌ಸ್ಟಾಗ್ರಾಮ್‌ ಮಾರ್ಚ್ 2022 ರಿಂದ ಪೋಷಕರು ಮತ್ತು ಪೋಷಕರಿಗೆ ತಮ್ಮ ಮಕ್ಕಳ ಚಟುವಟಿಕೆಯನ್ನು ಪ್ಲಾಟ್‌ಫಾರ್ಮ್‌ನಲ್ಲಿ ಟ್ರ್ಯಾಕ್ ಮಾಡಲು ಹೊಸ ಪರಿಕರಗಳನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ. ಇದರಿಂದ ತಮ್ಮ ಮಕ್ಕಳು Instagram ನಲ್ಲಿ ಎಷ್ಟು ಸಮಯವನ್ನು ಕಳೆಯುತ್ತಿದ್ದಾರೆ ಎಂಬುದನ್ನು ನೋಡಬಹುದಾಗಿದೆ. ಅಷ್ಟೇ ಅಲ್ಲದೆ ತಮ್ಮ ಮಕ್ಕಳು ಎಷ್ಟು ಸಮಯದ ವರೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಕಾಲ ಕಳೆಯಬೇಕು ಅನ್ನೊದನ್ನ ಟೈಂ ಸೆಟ್‌ ಮಾಡಬಹುದಾಗಿದೆ.

ಇನ್‌ಸ್ಟಾಗ್ರಾಮ್‌ನಲ್ಲಿ ಚಾಟ್ ಥೀಮ್‌ಗಳನ್ನು ಬದಲಾಯಿಸುವುದು ಹೇಗೆ?

ಇನ್‌ಸ್ಟಾಗ್ರಾಮ್‌ನಲ್ಲಿ ಚಾಟ್ ಥೀಮ್‌ಗಳನ್ನು ಬದಲಾಯಿಸುವುದು ಹೇಗೆ?

ಇನ್‌ಸ್ಟಾಗ್ರಾಮ್‌ ಪ್ರಸ್ತುತ ಹಲವಾರು ಚಾಟ್ ಥೀಮ್‌ಗಳನ್ನು ನೀಡುತ್ತಿದೆ. ನೀವು ಕೂಡ ನಿಮ್ಮ ಹಳೆಯ ಚಾಟ್ ಕಲರ್‌ ಅಥವಾ ಥೀಮ್‌ಗಳನ್ನು ಬದಲಾಯಿಸಬೇಕು ಅಂತಾ ಎನಿಸಿದರೆ ಹೊಸ ಸ್ಟ್ರೇಂಜರ್ ಥಿಂಗ್ಸ್ ಥೀಮ್ ಅನ್ನು ಸೆಟ್‌ ಮಾಡಬಹುದು. ಹೊಸ ಥೀಮ್‌ಗಳನ್ನು ಸೆಟ್‌ ಮಾಡಲು ಈ ಕ್ರಮಗಳನ್ನು ಅನುಸರಿಸಿ.
ಹಂತ:1 ಮೊದಲಿಗೆ ನೀವು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ Instagram ಅಪ್ಲಿಕೇಶನ್ ತೆರೆಯಿರಿ ಮತ್ತು DM ವಿಭಾಗಕ್ಕೆ ಹೋಗಿ.
ಹಂತ:2 ನಂತರ ನೀವು ಡಿಎಂ ಕಳುಹಿಸುವ ಚಾಟ್ ತೆರೆಯಿರಿ ಮತ್ತು ಮೇಲ್ಭಾಗದಲ್ಲಿ ಕಾಣಿಸುವ ವ್ಯಕ್ತಿಯ ಹೆಸರಿನ ಮೇಲೆ ಕ್ಲಿಕ್ ಮಾಡಿ.
ಹಂತ:3 ಇದಾದ ನಂತರ ನಿಮಗೆ "ಥೀಮ್" ಆಯ್ಕೆ ಕಾಣಲಿದೆ, ಅದರ ಮೇಲೆ ಟ್ಯಾಪ್ ಮಾಡಿ ಮತ್ತು ನಿಮ್ಮ ಆಯ್ಕೆಯ ಥೀಮ್ ಅನ್ನು ಆಯ್ಕೆ ಮಾಡಿ.
ಹಂತ:4 ನಂತರ ಡಿಸ್‌ಪ್ಲೇ ಮೇಲ್ಭಾಗದಲ್ಲಿ, ನೀವು ಸ್ಟ್ರೇಂಜರ್ ಥಿಂಗ್ಸ್ ಥೀಮ್ ಅನ್ನು ಸಹ ಕಾಣಬಹುದು.
ಹಂತ:5 ಅದರ ಮೇಲೆ ಟ್ಯಾಪ್ ಮಾಡಿದರೆ ಸ್ಟ್ರೇಂಜರ್ ಥಿಂಗ್ಸ್ ಥೀಮ್ ಅನ್ನು ಸೆಟ್‌ ಮಾಡಬಹುದು. ಹೀಗೆ ಮಾಡಿದ ನಂತರ ನಿಮ್ಮ ಡಿಎಂ ಬ್ಯಾಕ್‌ಗ್ರೌಂಡ್‌ನಲ್ಲಿ ಸ್ಟ್ರೇಂಜರ್ ಥಿಂಗ್ಸ್ ಚಿತ್ರದೊಂದಿಗೆ ಕೆಂಪು ಮತ್ತು ಬಿಳಿ ಥೀಮ್ ಅನ್ನು ಕಾಣಬಹುದಾಗಿದೆ.

Best Mobiles in India

Read more about:
English summary
Instagram's Take a Break feature will encourage users to spend some time away from the platform after a certain period of time spent scrolling.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X