Home
ಸುದ್ದಿಜಾಲ

ಇನ್‌ಸ್ಟಾಗ್ರಾಮ್‌ ರೀಲ್ಸ್ ಡೌನ್‌ಲೋಡ್‌ ಆಗ್ತಾ ಇಲ್ವಾ! ಇಲ್ಲಿದೆ ನೋಡಿ ಹೊಸ ಪರಿಹಾರ!

ಜನಪ್ರಿಯ ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ ಇನ್‌ಸ್ಟಾಗ್ರಾಮ್‌ ತನ್ನ ಬಳಕೆದಾರರಿಗೆ ಗುಡ್‌ನ್ಯೂಸ್‌ ನೀಡಿದೆ. ಇಷ್ಟು ದಿನ ಪಬ್ಲಿಕ್‌ ಅಕೌಂಟ್‌ಗಳಿಂದ ರೀಲ್ಸ್‌ ಡೌನ್‌ಲೋಡ್‌ ಮಾಡಲು ಪರದಾಡುತ್ತಿದ್ದ ಬಳಕೆದಾರರಿಗೆ ಹೊಸ ಫೀಚರ್ಸ್‌ ಪರಿಚಯಿಸಿದೆ. ಇದರ ಮೂಲಕ ಪಬ್ಲಿಕ್‌‌ ಅಕೌಂಟ್‌ಗಳಿಂದ ರೀಲ್ಸ್‌ ಅನ್ನು ಡೌನ್‌ಲೋಡ್‌ ಮಾಡಬಹುದಾಗಿದೆ.

ಹೌದು, ಇನ್‌ಸ್ಟಾಗ್ರಾಮ್‌ನಲ್ಲಿ ರೀಲ್ಸ್‌ ಡೌನ್‌ಲೋಡ್‌ ಮಾಡೋದಕ್ಕೆ ಅಗ್ತಾ ಇಲ್ವಾ. ಡೌನ್‌ಲೋಡ್‌ ಮಾಡಲು ಹೋದರೆ ಪಬ್ಲಿಕ್‌ ಅಕೌಂಟ್‌ ರೀಲ್ಸ್‌ ಡೌನ್‌ಲೋಡ್‌ ಮಾಡೋಕೆ ಆಗೋದಿಲ್ಲ. ಈ ಕಿರಿಕಿರಿಯನ್ನು ತಪ್ಪಿಸುವುದಕ್ಕಾಗಿಯೇ ಇನ್‌ಸ್ಟಾಗ್ರಾಮ್‌ ಹೊಸ ಫೀಚರ್ಸ್‌ ಸೇರ್ಪಡೆ ಮಾಡಿದೆ. ಇದರ ಮೂಲಕ ಬಳಕೆದಾರರು ರೀಲ್ಸ್‌ಗಳನ್ನು ಕ್ಯಾಮೆರಾ ರೋಲ್‌ನಲ್ಲಿ ಸೇವ್‌ ಮಾಡುವುದಕ್ಕೆ ಅವಕಾಶ ನೀಡಲಿದೆ. ಹಾಗಾದ್ರೆ ಈ ಹೊಸ ಫೀಚರ್ಸ್‌ ಬಳಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಇನ್‌ಸ್ಟಾಗ್ರಾಮ್‌ ರೀಲ್ಸ್ ಡೌನ್‌ಲೋಡ್‌ ಆಗ್ತಾ ಇಲ್ವಾ! ಇಲ್ಲಿದೆ ನೋಡಿ ಹೊಸ ಪರಿಹಾರ

ಇನ್‌ಸ್ಟಾಗ್ರಾಮ್‌ ರೀಲ್ಸ್‌ಗಳನ್ನು ಡೌನ್‌ಲೋಡ್‌ ಮಾಡುವುದು ಹೇಗೆ?
ನಿಮ್ಮ ಅಕೌಂಟ್‌ ಅನ್ನು ಎಲ್ಲರೂ ಸಹ ನೋಡಬಹುದು, ಯಾರಾಬೇಕಾದರೂ ರೀಲ್ಸ್‌ ವೀಕ್ಷಿಸಬಹುದು ಅಂತಾ ಆಯ್ಕೆ ಮಾಡಿದ್ದರೆ ಇನ್‌ಸ್ಟಾಗ್ರಾಮ್‌ನಲ್ಲಿ ಯಾರಾದರೂ ನಿಮ್ಮ ರೀಲ್ಸ್‌ಗಳನ್ನು ಡೌನ್‌ಲೋಡ್‌ ಮಾಡಬಹುದಾಗಿದೆ. ನಿಮ್ಮ ರೀಲ್‌ಗಳನ್ನು ಡೌನ್‌ಲೋಡ್ ಶೇರ್‌ ಮಾಡಬಹುದಾಗಿದೆ. ಆದರೆ ಪಬ್ಲಿಕ್‌ ಅಕೌಂಟ್‌ಗಳನ್ನು ಹೊಂದಿರುವ 18 ವರ್ಷದೊಳಗಿನ ಬಳಕೆದಾರರು ಡೀಫಾಲ್ಟ್ ಆಗಿ ಡೌನ್‌ಲೋಡ್ ಅನ್ನು ಆಫ್ ಮಾಡಬಹುದು.
ಆದರೆ ಪಬ್ಲಿಕ್‌ ಅಕೌಂಟ್‌ಗಳು ಹೆಚ್ಚಿನ ಖಾಸಗಿ ಖಾತೆಗಳಾಗಿರುತ್ತವೆ. ಇವುಗಳು ನಿಮಗೆ ಹೆಚ್ಚಿನ ಗೌಪ್ಯತೆ ನೀಡುವುದರಿಂದ ಪಬ್ಲಿಕ್‌ ಅಕೌಂಟ್‌ಗಳ ರೀಲ್ಸ್‌ಗಳನ್ನು ಡೌನ್‌ಲೋಡ್‌ ಮಾಡುವುದಕ್ಕೆ ಸಾಧ್ಯವಿಲ್ಲ. ರೀಲ್ ಆಫ್‌ಲೈನ್ ವೀಕ್ಷಣೆಗೆ ಅರ್ಹವಾಗಿಲ್ಲದಿದ್ದರೂ ಸಹ, ಅಪ್ಲಿಕೇಶನ್‌ನಲ್ಲಿ ವೀಕ್ಷಣೆಗಾಗಿ ಅದನ್ನು ಸೇವ್‌ ಮಾಡಬಹುದು.

ಇನ್‌ಸ್ಟಾಗ್ರಾಮ್‌ ರೀಲ್ಸ್ ಡೌನ್‌ಲೋಡ್‌ ಆಗ್ತಾ ಇಲ್ವಾ! ಇಲ್ಲಿದೆ ನೋಡಿ ಹೊಸ ಪರಿಹಾರ

ಇನ್‌ಸ್ಟಾಗ್ರಾಮ್‌ ಪರಿಚಯಿಸಿರುವ ಹೊಸ ಫೀಚರ್ಸ್‌ ಅನ್ವಯ ನೀವು ಪಬ್ಲಿಕ್‌ ಅಕೌಂಟ್‌ ರೀಲ್ಸ್‌ ಡೌನ್‌ಲೋಡ್‌ ಮಾಡಬಹುದು. ಆದರೆ ನೀವು ನಿಮ್ಮ ಡೌನ್‌ಲೋಡ್ ಸೆಟ್ಟಿಂಗ್‌ಗಳನ್ನು ನೀವು ಮಾರ್ಪಡಿಸದ ಹೊರತು, ಸಾರ್ವಜನಿಕ ಖಾತೆಗಳಿಗಾಗಿ ಹೊಸ ರೀಲ್‌ಗಳನ್ನು ಮಾತ್ರ ಡೌನ್‌ಲೋಡ್ ಮಾಡಬಹುದು. ಅಂದರೆ ಡೌನ್‌ಲೋಡ್ ಮಾಡಿದ ರೀಲ್‌ಗಳು Instagram ವಾಟರ್‌ಮಾರ್ಕ್‌ನೊಂದಿಗೆ ಬರುತ್ತವೆ. ಈ ರೀಲ್ಸ್‌ಗಳಲ್ಲಿ ಬಳಕೆದಾರಹೆಸರು ಮತ್ತು ಆಡಿಯೊ ಗುಣಲಕ್ಷಣವನ್ನು ಪ್ರದರ್ಶಿಸುತ್ತದೆ.

ಇನ್‌ಸ್ಟಾಗ್ರಾಮ್‌ ರೀಲ್ಸ್‌ ಡೌನ್‌ಲೋಡ್‌ ಮಾಡಲು ಹೀಗೆ ಮಾಡಿರಿ!
ಆಂಡ್ರಾಯ್ಡ್ ಬಳಕೆದಾರರು ಇನ್‌ಸ್ಟಾಗ್ರಾಮ್‌ ರೀಲ್ಸ್‌ಗಳನ್ನು ಡೌನ್‌ಲೋಡ್‌ ಮಾಡಬೇಕಾದರೆ ಗೂಗಲ್ ಪ್ಲೇ ಸ್ಟೋರ್‌ನಿಂದ ರೀಲ್ಸ್ ಡೌನ್‌ಲೋಡರ್ ಅನ್ನು ಡೌನ್‌ಲೋಡ್‌ ಮಾಡಬೇಕಾಗುತ್ತದೆ. ಇದರ ಮೂಲಕ ಇನ್‌ಸ್ಟಾಗ್ರಾಮ್‌ ರೀಲ್ಸ್‌ ಅನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ. ಇದಕ್ಕಾಗಿ ಈ ಕೆಳಗಿನ ಹಂತಗಳನ್ನು ಅನುಸರಿಸಿ.
* ಮೊದಲಿಗೆ ಸ್ಮಾರ್ಟ್‌ಫೋನ್‌ನಲ್ಲಿ ಇನ್‌ಸ್ಟಾಗ್ರಾಮ್‌ ಆ್ಯಪ್‌ ತೆರೆಯಿರಿ
* ನಂತರ ಇನ್‌ಸ್ಟಾಗ್ರಾಮ್‌ನಲ್ಲಿ ರೀಲ್ಸ್ ವಿಭಾಗಕ್ಕೆ ಹೋಗಿ
* ಇದೀಗ ನೀವು ಡೌನ್‌ಲೋಡ್ ಮಾಡಲು ಬಯಸುವ ರೀಲ್ಸ್‌ಗಳ ಲಿಂಕ್ ಕಾಪಿ ಮಾಡಿ
* ನಂತರ ರೀಲ್ಸ್ ಡೌನ್‌ಲೋಡರ್ ಅಪ್ಲಿಕೇಶನ್ ತೆರೆಯಿರಿ
* ಇದರಲ್ಲಿ ನೀವು ಡೌನ್‌ಲೋಡ್ ಮಾಡಲು ಬಯಸುವ ರೀಲ್ಸ್‌ ಲಿಂಕ್ ಪೇಸ್ಟ್‌ ಮಾಡಿ
* ಇದೀಗ ಡೌನ್‌ಲೋಡ್ ಬಟನ್ ಅನ್ನು ಟ್ಯಾಪ್ ಮಾಡಿರಿ.
ಈ ಎಲ್ಲಾ ಆಯ್ಕೆಗಳನ್ನು ಮಾಡಿದ ನಂತರ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ನೀವು ಬಯಸಿದ ಇನ್‌ಸ್ಟಾಗ್ರಾಮ್‌ ರೀಲ್ಸ್‌ ಡೌನ್‌ಲೋಡ್‌ ಆಗಲಿದೆ.

ಇನ್‌ಸ್ಟಾಗ್ರಾಮ್‌ ರೀಲ್ಸ್ ಡೌನ್‌ಲೋಡ್‌ ಆಗ್ತಾ ಇಲ್ವಾ! ಇಲ್ಲಿದೆ ನೋಡಿ ಹೊಸ ಪರಿಹಾರ

ಇನ್‌ಸ್ಟಾಗ್ರಾಮ್‌ ರೀಲ್ಸ್‌ಗಳನ್ನು ಕ್ರಿಯೆಟ್‌ ಮಾಡುವುದು ಹೇಗೆ?
* ಇನ್‌ಸ್ಟಾಗ್ರಾಮ್‌ ಅಪ್ಲಿಕೇಶನ್‌ನಲ್ಲಿ ಬಲಕ್ಕೆ ಸ್ವೈಪ್ ಮಾಡಿ
* ಇದರಲ್ಲಿ ಸ್ಕ್ರೀನ್‌ ಕೆಳಭಾಗದಲ್ಲಿರುವ ರೀಲ್ಸ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
* ನಂತರ ರೀಲ್ಸ್‌ ರೆಕಾರ್ಡ್ ಮಾಡಲು, ವೀಡಿಯೊ ಪ್ಲೇಯರ್ ಐಕಾನ್ ಅನ್ನು ಹಿಡಿದಿಟ್ಟುಕೊಳ್ಳಿರಿ.
* ನಿಮಗೆ ಸೂಕ್ತವಾದ ವೇಗವನ್ನು ಆಯ್ಕೆ ಮಾಡಿರಿ
* ರೀಲ್ಸ್‌ಗೆ ಬೇಕೆನಿಸುವ ಚಿತ್ರಗಳು, ಸ್ಟಿಕ್ಕರ್‌ಗಳು ಮತ್ತು ಮ್ಯೂಸಿಕ್‌ ಅನ್ನು ಆಡ್‌ ಮಾಡಿರಿ
* ರೀಲ್ಸ್‌ ಶೇರ್‌ ಮಾಡುವ ಮೊದಲು ಪ್ರಿವ್ಯೂ ಮಾಡಿರಿ
* ನಿಮಗೆ ಒಕೆ ಎನಿಸಿದರೆ ರೀಲ್ಸ್‌ ಶೇರ್‌ ಮಾಡಲು ಶೇರ್‌ ಬಟನ್ ಅನ್ನು ಕ್ಲಿಕ್ ಮಾಡಿ.

Best Mobiles in India

English summary
Instagram has introduced a new feature allowing users to download Reels from public accounts
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+