ಬಳಕೆದಾರರಿಗೆ ಹಲವು ಆಕರ್ಷಕ ಫೀಚರ್ಸ್ ಪರಿಚಯಿಸಿದ ಇನ್‌ಸ್ಟಾಗ್ರಾಮ್!
ಜನಪ್ರಿಯ ಸೊಶೀಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಫೇಸ್‌ಬುಕ್ ಇತ್ತೀಚಿಗಷ್ಟೇ ತನ್ನ ಮೆಸೆಂಜರ್ ಅನ್ನು ಇನ್‌ಸ್ಟಾಗ್ರಾಮ್ ಡೈರೆಕ್ಟ್ ಮೆಸೇಜ್ ಜೊತೆ ವಿಲೀನ ಮಾಡಿತ್ತು. ಇದರಿಂದ ಇನ್‌ಸ್ಟಾಗ್ರಾಮ್ ಬಳಕೆದಾರರಿಗೆ ಮೆಸೆಂಜರ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡದೆಯೇ ಮೆಸೆಂಜರ್‌ನಲ್ಲಿ ಸ್ನೇಹಿತರೊಂದಿಗೆ ಚಾಟ್ ಮಾಡಲು ಅವಕಾಶ ಸಿಕ್ಕಂತಾಗಿದೆ. ಅಲ್ಲದೆ ಮೆಸೆಂಜರ್ ಬಳಕೆದಾರರಿಗೂ ಕೂಡ ಇನ್‌ಸ್ಟಾಗ್ರಾಮ್ ಡೌನ್‌ಲೋಡ್ ಮಾಡದೆ ಚಾಟ್ ಮಾಡಲು ಅವಕಾಶ ದೊರೆತಿದೆ. ಇದೀಗ ಇನ್‌ಸ್ಟಾಗ್ರಾಮ್ ತನ್ನ ಬಳಕೆದಾರರಿಗೆ ಇನ್ನಷ್ಟು ಹೊಸ ಮಾದರಿಯ ಫೀಚರ್ಸ್‌ಗಳನ್ನ ಪರಿಚಯಿಸಿದೆ.

ಹೌದು, ಫೇಸ್‌ಬುಕ್ ಮೆಸೆಂಜರ್ ಜೊತೆ ಇನ್‌ಸ್ಟಾಗ್ರಾಮ್ ಡೈರೆಕ್ಟ್ ಮೆಸೇಜ್ ವಿಲೀನಗೊಂಡ ಕಾರಣ ಇನ್‌ಸ್ಟಾಗ್ರಾಮ್ ತನ್ನ ಬಳಕೆದಾರರಿಗೆ ಹೊಸ ಫೀಚರ್ಸ್‌ಗಳನ್ನ ಪರಿಚಯಿಸಿದೆ. ಈ ಹೊಸ ಆಪ್ಡೇಟ್ ಸ್ವೀಕರಿಸಿದಾಗಲೆಲ್ಲಾ ನಿಮ್ಮ ಇನ್‌ಸ್ಟಾಗ್ರಾಂನಲ್ಲಿ ಪಾಪ್-ಅಪ್ ಡಿಸ್‌ಪ್ಲೇ ಆಗಲಿದೆ. ಸದ್ಯ Instagram ಬಳಕೆದಾರರಿಗೆ ಹಲವು ಹೊಸ ಫೀಚರ್ಸ್‌ಗಳನ್ನ ಪರಿಚಯಿಸಿದ್ದು, ಅವುಗಳು ಯಾವುವು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

Cross-app communication
ಇನ್‌ಸ್ಟಾಗ್ರಾಮ್ ತನ್ನ ಬಳಕೆದಾರರಿಗೆ ಹೊಸದಾಗಿ ಪರಿಚಯಿಸಿರುವ ಫೀಚರ್ಸ್‌ಗಳಲ್ಲಿ Cross-app communication ಫೀಚರ್ಸ್ ಮೊದಲನೇಯದಾಗಿದೆ. ಇದು ಇನ್‌ಸ್ಟಾಗ್ರಾಮ್ ಬಳಕೆದಾರರಿಗೆ ಮೆಸೆಂಜರ್‌ನಲ್ಲಿ ಸ್ನೇಹಿತರಿಗೆ ಸಂದೇಶ ಕಳುಹಿಸಲು ಅವಕಾಶ ನೀಡುತ್ತದೆ. ನೀವು ಸಂದೇಶಗಳನ್ನು ಕಳುಹಿಸಲು ಮಾತ್ರವಲ್ಲದೆ ಎರಡೂ ಅಪ್ಲಿಕೇಶನ್‌ಗಳಲ್ಲಿ ವೀಡಿಯೊ ಕರೆಗಳನ್ನು ಮಾಡುವ ಅವಕಾಶವನ್ನು ಸಹ ನೀಡಲಾಗಿದೆ.
Watch Together
ಇನ್ನು ಈ ಫೀಚರ್ಸ್ ವೀಡಿಯೊ ಕರೆ ಸಮಯದಲ್ಲಿ ಫೇಸ್‌ಬುಕ್, ಐಜಿಟಿವಿ, ಟಿವಿ ಕಾರ್ಯಕ್ರಮಗಳು ಮತ್ತು ಚಲನಚಿತ್ರಗಳಿಂದ ವೀಡಿಯೊಗಳನ್ನು ಸಹ-ವೀಕ್ಷಿಸಲು ಇನ್‌ಸ್ಟಾಗ್ರಾಮ್ ಮತ್ತು ಮೆಸೆಂಜರ್ ಬಳಕೆದಾರರಿಗೆ ಅವಕಾಶ ನೀಡುವುದಕ್ಕಾಗಿ ಸಕ್ರಿಯಗೊಳಿಸಲಾಗಿದೆ.

Vanish Mode
ಹೆಸರೇ ಸೂಚಿಸುವಂತೆ, ಸಂದೇಶಗಳನ್ನು ಓದಿದ ನಂತರ ಅಥವಾ ನೀವು ಚಾಟ್ ಮುಚ್ಚಿದಾಗ ಕ್ಲಿಯರ್ ಮಾಡುವುದಕ್ಕಾಗಿ ಈ ಫೀಚರ್ಸ್ ಅನ್ನು ಆಕ್ಟಿವ್ ಮಾಡಲಾಗಿದೆ.
Selfie Stickers
ಇನ್ನು ಈ ಫೀಚರ್ಸ್ ಮೂಲಕ ನಿಮ್ಮ ಸೆಲ್ಫಿಯೊಂದಿಗೆ ನೀವು ಬೂಮರಾಂಗ್ ಸ್ಟಿಕ್ಕರ್‌ಗಳನ್ನು ಸಹ ಮಾಡಬಹುದು ಮತ್ತು ಅದನ್ನು ಅಪ್ಲಿಕೇಶನ್‌ನಲ್ಲಿ ಹಂಚಿಕೊಳ್ಳಬಹುದು.

Chat Colors
ಮೆಸೆಂಜರ್‌ನ ಅತ್ಯಂತ ಜನಪ್ರಿಯ ಫೀಚರ್ಸ್ ಚಾಟ್ ಕಲರರ್ಸ್ ಇದೀಗ ಇನ್‌ಸ್ಟಾಗ್ರಾಮ್‌ನಲ್ಲಿ ಸಹ ಲಭ್ಯವಾಗಲಿದೆ. ನೀವು Instagram ನಲ್ಲಿ ವಿಭಿನ್ನ ಕಲರ್ ಆಯ್ಕೆಯುಳ್ಳ ಚಾಟ್‌ಗಳನ್ನು ಮಾಡಬಹುದಾಗಿದೆ. ಅಲ್ಲದೆ ನೀವು ಚಾಟ್‌ನ ಬಣ್ಣವನ್ನು ಬದಲಾಯಿಸಿದಾಗ ಅದು ಇತರ ವ್ಯಕ್ತಿಯ ಅಪ್ಲಿಕೇಶನ್‌ನಲ್ಲೂ ಪ್ರತಿಫಲಿಸುತ್ತದೆ.
Custom Emoji Reactions
ಈ ಫಿಚರ್ಸ್ ಮೂಲಕ ನೀವು ಮೆಸೆಂಜರ್ನಲ್ಲಿಯೂ ಎಮೋಜಿಗಳೊಂದಿಗೆ ಸಂದೇಶಗಳಿಗೆ ಪ್ರತಿಕ್ರಿಯಿಸಬಹುದು. ಸಂದೇಶಗಳಿಗೆ ತ್ವರಿತವಾಗಿ ಪ್ರತಿಕ್ರಿಯಿಸಲು ನಿಮ್ಮ ಆಯ್ದ ಗೋ-ಟು ಎಮೋಜಿಗಳನ್ನು ಶಾರ್ಟ್‌ಕಟ್‌ನಂತೆ ಸೇರಿಸಬಹುದಾಗಿದೆ.
Forwarding
ನೀವು ಈಗ Instagram ನಲ್ಲಿಯೂ ಸಂದೇಶಗಳನ್ನು ಫಾರ್ವರ್ಡ್ ಮಾಡಬಹುದಾಗಿದೆ. ಆದರೆ ಇದು ಐದು ಸ್ನೇಹಿತರಿಗೆ ಮಾತ್ರ ಸೀಮಿತವಾಗಿರುತ್ತದೆ.


Click it and Unblock the Notifications








