ಇನ್‌ಸ್ಟಾಗ್ರಾಮ್‌ನಿಂದ 'ಲೈವ್‌ ರೂಮ್ಸ್‌' ಫೀಚರ್ಸ್‌ ಬಿಡುಗಡೆ!

|

ಸಜನಪ್ರಿಯ ಫೋಟೋ ಶೇರಿಂಗ್‌ ಅಪ್ಲಿಕೇಶನ್‌ ಇನ್‌ಸ್ಟಾಗ್ರಾಮ್‌ ತನ್ನ ಬಳಕೆದಾರರಿಗೆ ಹೊಸ ಫೀಚರ್ಸ್‌ ಅನ್ನು ಪರಿಚಯಿಸಿದೆ. ಇದು ಕ್ಲಬ್‌ಹೌಸ್‌ನಲ್ಲಿರುವ ಗ್ರೂಪ್‌ ಲೈವ್‌ ಬ್ರಾಡ್‌ಕಾಸ್ಟ್‌ ರೈಸಿಂಗ್‌ ಸ್ಟಾರ್‌ ಮಾದರಿಯಲ್ಲಿದೆ. ಇನ್ನು ಈ ಫೀಚರ್ಸ್‌ ಮೂಲಕ ಇನ್‌ಸ್ಟಾಗ್ರಾಮ್ ನಾಲ್ಕು ಜನರಿಗೆ ವರ್ಚುವಲ್ "ರೂಮ್ಸ್‌"ನಲ್ಲಿ ಒಟ್ಟಿಗೆ ಭಾಗವಹಿಸಲು ಅವಕಾಶ ನೀಡಿದೆ.

ಇನ್‌ಸ್ಟಾಗ್ರಾಮ್

ಹೌದು, ಇನ್‌ಸ್ಟಾಗ್ರಾಮ್ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಲೈವ್‌ ರೂಮ್ಸ್‌ ಫೀಚರ್ಸ್‌ ಅನ್ನು ಪರಿಚಯಿಸಿದೆ. ಈ ಫೀಚರ್ಸ್‌ ಮೂಲಕ ಇನ್‌ಸ್ಟಾಗ್ರಾಮ್ ನ ನಾಲ್ಕು ಬಳಕೆದಾರರು ಇತರ ಇನ್‌ಸ್ಟಾಗ್ರಾಮ್ ಬಳಕೆದಾರರು ಟ್ಯೂನ್ ಮಾಡಬಹುದಾದ ರಿಯಲ್‌ ಟೈಂನ ಲೈವ್‌ನಲ್ಲಿ ತೊಡಗಿಸಿಕೊಳ್ಳಲು ಲೈವ್ ರೂಮ್ಸ್ ಅನುಮತಿಸುತ್ತದೆ. ಇನ್ನುಳಿದಂತೆ ಈ ಫೀಚರ್ಸ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಲೈವ್‌ ರೂಮ್ಸ್

ಇನ್‌ಸ್ಟಾಗ್ರಾಮ್‌ನ ಲೈವ್‌ ರೂಮ್ಸ್‌ ಫೀಚರ್ಸ್‌ ಕ್ಲಬ್‌ಹೌಸ್‌ನಲ್ಲಿರುವ ಗ್ರೂಪ್‌ ಲೈವ್‌ ಮಾದರಿಯಲ್ಲಿದೆ. ಈ ಹಿಂದೆ, ನೀವು ಸ್ಟ್ರೀಮ್‌ನಲ್ಲಿರುವ ಇನ್ನೊಬ್ಬ ವ್ಯಕ್ತಿಯೊಂದಿಗೆ ಮಾತ್ರ ಲೈವ್‌ನಲ್ಲಿ ಇರಬಹುದಾಗಿತ್ತು. ಆದರೆ ಇನ್ಮುಂದೆ ನೀವು ನಿಮ್ಮ ಲೈವ್ 'ಡಬಲ್ ಅಪ್' ಮಾಡಲು ಅವಕಾಶ ನೀಡುತ್ತಿದ್ದೇವೆ" ಎಂದು ಕಂಪನಿ ಬ್ಲಾಗ್ ಪೋಸ್ಟ್‌ನಲ್ಲಿ ತಿಳಿಸಿದೆ.

ರೂಮ್ಸ್‌ ಲೈವ್

ಸದ್ಯ ರೂಮ್ಸ್‌ ಲೈವ್‌ನಲ್ಲಿ ಡಬಲ್‌ ಅಪ್‌ ಅವಕಾಶ ನೀಡಿರುವುದರಿಂದ ಹೆಚ್ಚು ಸೃಜನಶೀಲ ಅವಕಾಶಗಳು ತೆರೆದುಕೊಳ್ಳುತ್ತವೆ. ಇದರಲ್ಲಿ ಟಾಕ್ ಶೋ ಪ್ರಾರಂಭಿಸಬಹುದಾಗಿದೆ, ಅಲ್ಲದೆ ಜಾಮ್ ಸೆಷನ್ ಆಯೋಜಿಸಬಹುದು ಅಥವಾ ಇತರ ಕಲಾವಿದರೊಂದಿಗೆ ಕೋ-ಕ್ರಿಯೆಟ್‌ ಮಾಡಬಹುದಾಗಿದೆ. ಇದಲ್ಲದೆ ಹೆಚ್ಚು ಆಕರ್ಷಕವಾಗಿರುವ ಪ್ರಶ್ನೋತ್ತರಗಳನ್ನು ಹೋಸ್ಟ್ ಮಾಡುವುದಕ್ಕೆ ಅವಕಾಶವಿದೆ. ಈ ಮೂಲಕ ತಮ್ಮ ಇಂಟ್ರಸ್ಟಿಂಗ್‌ ಶೋ ಗಳನ್ನ ಇದರಲ್ಲಿ ಹೋಸ್ಟ್‌ ಮಾಡಿ ನಾಲ್ವರು ಒಂದೇ ಕಡೆ ಎಂಜಾಯ್‌ ಮಾಡಬಹುದಾಗಿದೆ.

ಯೂಟ್ಯೂಬ್ ವಿಡಿಯೋ

ಇನ್ನು ಕ್ಲಬ್‌ಹೌಸ್‌ನ ಲೈವ್‌ ಮತ್ತು ಯೂಟ್ಯೂಬ್ ವಿಡಿಯೋ ಚಾನೆಲ್‌ಗಳು ಮತ್ತು ಟ್ವಿಚ್‌ನಲ್ಲಿ ಸ್ಟ್ರೀಮ್ ಮಾಡಿದ ವಿಡಿಯೋ ಗೇಮ್ ಪ್ಲೇ ಇತ್ತೀಚೆಗೆ ಜನಪ್ರಿಯತೆ ಗಳಿಸಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಕಳೆದ ವರ್ಷದಲ್ಲಿ ಲೈವ್ಸ್ಟ್ರೀಮ್ ಸಂಭಾಷಣೆಗಳಲ್ಲಿ COVID-19, ಸೆಲೆಬ್ರಿಟಿಗಳ ಸಂದರ್ಶನಗಳು, ರಾಪ್ ವಾರ್ಸ್‌, ಮ್ಯೂಸಿಕ್‌ ಲೆಸೆನ್ಸ್‌, ವರ್ಕೌಟ್‌ ಸೆಸನ್ಸ್‌ ಮತ್ತು ಹೆಚ್ಚಿನವುಗಳ ಕುರಿತು ಅಧಿಕಾರಿಗಳು ನಡೆಸಿದ ಮಾತುಕತೆಗಳನ್ನು ಒಳಗೊಂಡಿದೆ. ಅಲ್ಲದೆ ಕೊರೋನಾದಂತಹ ಸಂದರ್ಭದಲ್ಲಿ ದೂರವಿರುವ ಜನರ ನಡುವೆ ಸಂಭಾಷಣೆ ನಡೆಸಲು ಲೈವ್ ರೂಮ್ಸ್ ಅವಕಾಸ ನೀಡಲಿದೆ. ಜೊತೆಗೆ ಹೆಚ್ಚುವರಿಯಾಗಿ ಹಣ ಗಳಿಸುವ ಅವಕಾಶವನ್ನು ಒದಗಿಸುತ್ತದೆ.

Best Mobiles in India

English summary
Instagram Live Rooms Feature Launched, to Allows Up to Four People Live Stream Together.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X