Home
ಸುದ್ದಿಜಾಲ

Instagram ನಲ್ಲಿ ಹೊಸ 'PG-13' ನಿಯಮ ಜಾರಿಗೆ!...ಏನಿದು?

ಮೆಟಾ-ಮಾಲೀಕತ್ವದ ಜನಪ್ರಿಯ ಸಾಮಾಜಿಕ ಮಾಧ್ಯಮ ವೇದಿಕೆ Instagram ಹದಿಹರೆಯದ ಬಳಕೆದಾರರಿಗೆ ಕಂಟೆಂಟ್ ಪ್ರದರ್ಶಿಸುವಲ್ಲಿ ಮಹತ್ವದ ಬದಲಾವಣೆಯನ್ನು ತರುತ್ತಿದೆ. ಹದಿಹರೆಯದವರ ಖಾತೆಗಳಿಗೆ ಇನ್ನು ಮುಂದೆ PG-13 ಚಲನಚಿತ್ರ ರೇಟಿಂಗ್‌ಗಳಿಗೆಸಮಾನವಾದ ಮಾರ್ಗಸೂಚಿಗಳನ್ನು ಅಳವಡಿಸಲು ವೇದಿಕೆಯು ನಿರ್ಧರಿಸಿದ್ದು, 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹದಿಹರೆಯದವರು ಈಗ ಸ್ವಯಂಚಾಲಿತವಾಗಿ ನವೀಕರಿಸಿದ '13+' ಸೆಟ್ಟಿಂಗ್‌ಗೆ ಸೇರುತ್ತಾರೆ ಎಂದು ತಿಳಿದುಬಂದಿದೆ. ಹಾಗಾದರೆ, ಏನಿದು ಹೊಸ ಬದಲಾವಣೆ?, ಇದರಿಂದ ಪೋಷಕರಿಗೆ ಹೇಗೆ ಸಂತೋಷವಾಗಿದೆ ಎಂಬುದನ್ನು ನೋಡೋಣ ಬನ್ನಿ.

ಇಂದಿನ ದಿನಗಳಲ್ಲಿ ಸಾಮಾನ್ಯವಾಗಿ ಹದಿಹರೆಯದ ಯುವಜನತೆಯಲ್ಲಿ Instagram ಬಳಕೆ ಹೆಚ್ಚಿದೆ. ಈ ತಾಣದಲ್ಲಿ ಉತ್ತಮ ಮತ್ತು ನಿಷೇಧಿತವಾದ ಎಲ್ಲಾ ಕಂಟೆಂಟ್ ಪ್ರದರ್ಶನವಾಗುತ್ತಿದ್ದವು. ಇದು ಪೋಷಕರ ಭಯಕ್ಕೆ ಕಾರಣವಾಗಿತ್ತು. ಇದೀಗ ಹೊಸ ಬದಲಾವಣೆಯಿಂದ ಪೋಷಕರು ತಮ್ಮ ಹದಿಹರೆಯದವರ ಅನುಭವದ ಮೇಲೆ ಹೆಚ್ಚಿನ ಮತ್ತು ಸೂಕ್ಷ್ಮ ನಿಯಂತ್ರಣವನ್ನು ಹೊಂದಬಹುದು. ಇದಕ್ಕಾಗಿ, Instagram ಒಂದು ಹೊಸ, ಇನ್ನೂ ಕಟ್ಟುನಿಟ್ಟಾದ ಸೆಟ್ಟಿಂಗ್ ಅನ್ನು ಪರಿಚಯಿಸುತ್ತಿದೆ. ಜಾಗತಿಕವಾಗಿ ಸಾವಿರಾರು ಪೋಷಕರಿಂದ ಪಡೆದ ಪ್ರತಿಕ್ರಿಯೆಯನ್ನು ಆಧರಿಸಿ ಈ ವೈಶಿಷ್ಟ್ಯವನ್ನು ಅಭಿವೃದ್ಧಿಪಡಿಸಲಾಗಿದೆ.

ಏನಿದು '13+' ಸೆಟ್ಟಿಂಗ್?
Instagram ತನ್ನ ನ್ಯೂಸ್‌ರೂಮ್ ಪೋಸ್ಟ್‌ನಲ್ಲಿ ಈ ಹೊಸ ರಕ್ಷಣಾ ಕ್ರಮವನ್ನು ವಿವರವಾಗಿ ತಿಳಿಸಿದೆ. ಮೂಲಭೂತವಾಗಿ, ಇದು US ನಲ್ಲಿ ಚಲನಚಿತ್ರಗಳು ಮತ್ತು ಶೋಗಳಿಗೆ ಅನುಸರಿಸುವ PG-13 ರೇಟಿಂಗ್‌ಗಳಂತೆ ಇರುತ್ತದೆ. ಇದರಡಿ ಕೆಲವು ವಿಷಯಗಳ ಪ್ರಸಾರಕ್ಕೆ ನಿರ್ಬಂಧವಿದೆ. ಅವುಗಳಲ್ಲಿ ಮುಖ್ಯವಾಗಿ, ಹಿಂಸಾಚಾರ, ಲೈಂಗಿಕ ದೃಶ್ಯಗಳು, ಮಾದಕವಸ್ತು ಬಳಕೆ ಮತ್ತು ನಿಂದನೀಯ ಪದಗಳ ಬಳಕೆಯು ನಿಷೇಶವಾಗಿದೆ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹದಿಹರೆಯದವರು ಈಗ ಸ್ವಯಂಚಾಲಿತವಾಗಿ ನವೀಕರಿಸಿದ '13+' ಸೆಟ್ಟಿಂಗ್‌ಗೆ ಸೇರಿಸಲ್ಪಡುತ್ತಾರೆ. ಈ ಕಟ್ಟುನಿಟ್ಟಾದ ಸೆಟ್ಟಿಂಗ್‌ನಿಂದ ಹೊರಬರಲು ಬಯಸಿದರೆ, ಅವರು ಕಡ್ಡಾಯವಾಗಿ ತಮ್ಮ ಪೋಷಕರ ಅನುಮತಿಯನ್ನು ಪಡೆಯಬೇಕಾಗುತ್ತದೆ. ಇದರಿಂದ ಪೋಷಕರ ಒಪ್ಪಿಗೆಯಿಲ್ಲದೆ ಯಾವುದೇ ಹದಿಹರೆಯದವರು ನಿಯಮವನ್ನು ತಪ್ಪಿಸಲು ಸಾಧ್ಯವಾಗುವುದಿಲ್ಲ.

Instagram ನಲ್ಲಿ ಹೊಸ 'PG-13' ನಿಯಮ ಜಾರಿಗೆ!...ಏನಿದು?

ಈ ಬದಲಾವಣೆಯ ಮಹತ್ವದ್ದಾಗಿದೆ ಏಕೆ?
ಕೋಟ್ಯಾಂತರ ಹದಿಹರೆಯದವರು Instagram ವೇದಿಕೆಯನ್ನು ಬಳಸುತ್ತಿದ್ದಾರೆ. ಈ ಹೊಸ ಮಾರ್ಗಸೂಚಿಗಳು ಪೋಷಕರು ತಮ್ಮ ಮಕ್ಕಳ ಸುರಕ್ಷತೆಯ ಬಗ್ಗೆ ಹೆಚ್ಚು ಕಾಳಜಿ ಸಹಾಯ ಮಾಡಲಿವೆ. . ಈ ಹೊಸ 'PG-13' ನಿಯಮಗಳು ಹದಿಹರೆಯದವರು ಅಸಭ್ಯ, ಹಿಂಸಾತ್ಮಕ ಅಥವಾ ವಯಸ್ಕರಿಗೆ ಸೂಕ್ತವಾದ ವಿಷಯಗಳಿಗೆ ಒಡ್ಡಿಕೊಳ್ಳುವುದನ್ನು ತಡೆಯಲು ಸಹಾಯ ಮಾಡುತ್ತದೆ. ಇದು ಯುವ ಬಳಕೆದಾರರಿಗೆ ಸುರಕ್ಷಿತವಾದ ಆನ್‌ಲೈನ್ ಪರಿಸರವನ್ನು ಸೃಷ್ಟಿಸುತ್ತದೆ.ವೇದಿಕೆಯು ಇದನ್ನು ಕಳೆದ ವರ್ಷ ಹದಿಹರೆಯದವರ ಖಾತೆಗಳನ್ನು ಪರಿಚಯಿಸಿದ ನಂತರ ಮಾಡಿದ "ಅತ್ಯಂತ ಮಹತ್ವದ ನವೀಕರಣ" ಎಂದು ಬಣ್ಣಿಸಿದೆ.

ವ್ಯವಸ್ಥೆಯು ಪರಿಪೂರ್ಣವಾಗಿಲ್ಲ!
ಪೋಷಕರು ಇಲ್ಲಿ ಮತ್ತೊಂದು ಅಂಶವನ್ನು ಗಮನಿಸಬೇಕು. ಕೆಲವು ಸಮಯದಲ್ಲಿ ಅಸಭ್ಯ ವಿಷಯ ಅಥವಾ ಕಠಿಣ ಭಾಷೆ ಹದಿಹರೆಯದವರ ವಿಷಯದೊಳಗೆ ನುಸುಳಬಹುದು ಎಂದು Instagram ಒಪ್ಪಿಕೊಂಡಿದೆ. ಆದರೆ ಅಲ್ಗಾರಿದಮ್ ಅನ್ನು ನಿರಂತರವಾಗಿ ಸುಧಾರಿಸಲಾಗುತ್ತದೆ ಮತ್ತು ಇಂತಹ ನಿದರ್ಶನಗಳನ್ನು ಅಪರೂಪವಾಗಿಸಲು ಪ್ರಯತ್ನಿಸಲಾಗುತ್ತದೆ ಎಂದು ಸಂಸ್ಥೆ ಭರವಸೆ ನೀಡಿದೆ. ಒಟ್ಟಾರೆಯಾಗಿ, ಹದಿಹರೆಯದವರ ಮಾನಸಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದಾದ ವಿಷಯಗಳಿಗೆ Instagram ತಡೆಹಾಕುತ್ತಿರುವುದು ಒಂದು ಒಳ್ಳೆಯ ಉಪಕ್ರಮ ಎಂದು ಹೇಳಬಹುದು. ಭಾರತದ ಯುವಜನರಲ್ಲಿ ಆತಂಕ, ಒತ್ತಡ ಮತ್ತು ಇತರ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ತಗ್ಗಿಸಲು ಇದು ಸಹಾಯ ಮಾಡುತ್ತದೆ ಎಂಬುದು ನನ್ನ ಅಭಿಪ್ರಾಯ. ಈ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.

Best Mobiles in India

English summary
Instagram introduces new PG-13 content restrictions to protect teenagers from sensitive or mature material, ensuring a safer social media environment for young users.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+