ಇನ್‌ಸ್ಟಾಗ್ರಾಮ್‌ ಲೈಟ್‌ ಅಪ್ಲಿಕೇಶನ್‌ ಸೇರಿದ ಕುತೂಹಲಕಾರಿ ಫೀಚರ್ಸ್!

|

ಫೇಸ್‌ಬುಕ್‌ ಒಡೆತನದ ಇನ್‌ಸ್ಟಾಗ್ರಾಮ್‌ ಜನಪ್ರಿಯ ಸೊಶೀಯಲ್‌ ಮೀಡಿಯಾ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ. ಈಗಾಗಲೇ ಹಲವು ಹೊಸತನದ ಫೀಚರ್ಸ್‌ಗಳನ್ನು ಪರಿಚಯಿಸಿ ಜನರನ್ನು ಆಕರ್ಷಿಸಿದೆ. ಸದ್ಯ ಇದೀಗ ಇನ್‌ಸ್ಟಾಗ್ರಾಮ್‌ ಭಾರತದಲ್ಲಿ ತನ್ನ ಇನ್‌ಸ್ಟಾಗ್ರಾಮ್‌ ಲೈಟ್‌ ಅಪ್ಲಿಕೇಶನ್‌ನಲ್ಲಿ ಹೊಸ ಅಪ್ಡೇಟ್‌ಗಳನ್ನು ಹೊರತಂದಿದೆ. ಈ ಹೊಸ ಅಪ್ಡೇಟ್‌ ಮೂಲಕ ರೀಲ್ಸ್‌ ಫೀಚರ್ಸ್‌ಗೆ ಬೆಂಬಲವನ್ನು ನೀಡಿದೆ.

ಇನ್‌ಸ್ಟಾಗ್ರಾಮ್

ಹೌದು, ಇನ್‌ಸ್ಟಾಗ್ರಾಮ್ ಅಪ್ಲಿಕೇಶನ್‌ ಇನ್‌ಸ್ಟಾಗ್ರಾಮ್ ಲೈಟ್ ಅಪ್ಲಿಕೇಶನ್‌ನಲ್ಲಿ 2021ರ ಹೊಸ ಅಪ್ಡೇಟ್‌ ಅನ್ನು ಹೊರತಂದಿದೆ. ಈ ಹಿಂದೆ ಸಾಮಾನ್ಯ ಅಪ್ಲಿಕೇಶನ್‌ನಲ್ಲಿ ಲಭ್ಯವಿದ್ದ ರೀಲ್ಸ್‌ ಫಿಚರ್ಸ್‌ ಇನ್ಮುಂದೆ ಇನ್‌ಸ್ಟಾಗ್ರಾಮ್‌ ಲೈಟ್‌ನಲ್ಲಿಯೂ ಲಭ್ಯವಾಗಲಿದೆ. ಆದರೆ ಈ ಫೀಚರ್ಸ್‌ ಕೇವಲ 2MB ಯ ಫೈಲ್ ಗಾತ್ರವನ್ನು ಅಳೆಯುವ ಹಗುರವಾದ ಆವೃತ್ತಿಗೆ ಇಳಿದಿದೆ. ಇನ್ನುಳಿದಂತೆ ಈ ಹೊಸ ಫೀಚರ್ಸ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಫೇಸ್‌ಬುಕ್‌

ಫೇಸ್‌ಬುಕ್‌ ಒಡೆತನದ ಫೋಟೋ ಮತ್ತು ವೀಡಿಯೊ ಶೇರ್‌ ಅಪ್ಲಿಕೇಶನ್ ಇನ್‌ಸ್ಟಾಗ್ರಾಮ್‌ ಕಳೆದ ವರ್ಷ ಡಿಸೆಂಬರ್‌ನಲ್ಲಿ ಲೈಟ್ ಅಪ್ಲಿಕೇಶನ್ ಅನ್ನು ಪರೀಕ್ಷಿಸಲು ಪ್ರಾರಂಭಿಸಿತ್ತು. ಅಲ್ಲದೆ ಇದನ್ನು Facebook Fuel for India event ನಲ್ಲಿ ಪರಿಚಯಿಸಿತ್ತು. ಇನ್ನು ಪ್ರಾರಂಭಿಕ ಸಮಯದಲ್ಲಿ, ಇನ್‌ಸ್ಟಾಗ್ರಾಮ್ ಲೈಟ್ ಅಪ್ಲಿಕೇಶನ್ ರೀಲ್ಸ್, ಐಜಿಟಿವಿ ಮತ್ತು ಶಾಪಿಂಗ್ ವೈಶಿಷ್ಟ್ಯಗಳಿಗೆ ಬೆಂಬಲವನ್ನು ಹೊಂದಿರಲಿಲ್ಲ. ಆದರೆ ಇದೀಗ ರೀಲ್ಸ್‌ ಫೀಚರ್ಸ್‌ ಅನ್ನು ಬೆಂಬಲಿಸಲಿದೆ.

ಇನ್‌ಸ್ಟಾಗ್ರಾಮ್

ಇದಲ್ಲದೆ ಇನ್‌ಸ್ಟಾಗ್ರಾಮ್ ಅಪ್ಲಿಕೇಶನ್‌ನ ಟ್ರಿಮ್-ಡೌನ್ ಆವೃತ್ತಿಯನ್ನು ಹಗುರವಾದ ಅನುಭವವನ್ನು ನೀಡಲು ವಿನ್ಯಾಸಗೊಳಿಸಲಾಗಿದ್ದರೆ, ಇತ್ತೀಚಿನ ಆಡ್-ಆನ್ ಬಳಕೆದಾರರಿಗೆ ರೀಲ್ಸ್ ಟ್ಯಾಬ್‌ನಲ್ಲಿನ ಜನಪ್ರಿಯ ಕಿರು ವೀಡಿಯೊಗಳನ್ನು ನೇರವಾಗಿ ವೀಕ್ಷಿಸಲು ಅನುವು ಮಾಡಿಕೊಡುತ್ತದೆ. ಈಗ ಈ ಅಪ್‌ಡೇಟ್‌ನೊಂದಿಗೆ, ಭಾರತದಲ್ಲಿ ಇನ್‌ಸ್ಟಾಗ್ರಾಮ್ ಲೈಟ್ ಅಪ್ಲಿಕೇಶನ್ ಬಳಸುವ ಪ್ರತಿಯೊಬ್ಬರೂ ರೀಲ್ಸ್ ಟ್ಯಾಬ್‌ನೊಂದಿಗೆ ರೀಲ್‌ಗಳನ್ನು ವೀಕ್ಷಿಸಲು ಸಾಧ್ಯವಾಗಲಿದೆ.

ಇನ್‌ಸ್ಟಾಗ್ರಾಮ್ ಲೈಟ್ ಅಪ್ಲಿಕೇಶನ್: ರೀಲ್ಸ್ ಫೀಚರ್ಸ್‌ ಅನ್ನು ಬಳಸುವುದು ಹೇಗೆ?

ಇನ್‌ಸ್ಟಾಗ್ರಾಮ್ ಲೈಟ್ ಅಪ್ಲಿಕೇಶನ್: ರೀಲ್ಸ್ ಫೀಚರ್ಸ್‌ ಅನ್ನು ಬಳಸುವುದು ಹೇಗೆ?

ನೀವು ಇನ್‌ಸ್ಟಾಗ್ರಾಮ್ ಲೈಟ್ ಅಪ್ಲಿಕೇಶನ್ ಬಳಸುತ್ತಿದ್ದರೆ, ನೀವು ಗೂಗಲ್ ಪ್ಲೇ ಸ್ಟೋರ್‌ಗೆ ಹೋಗುವ ಮೂಲಕ ರೀಲ್ಸ್ ಫೀಚರ್ಸ್‌ಅನ್ನು ಪ್ರವೇಶಿಸಬಹುದು. ಸರ್ಚ್‌ ಟ್ಯಾಬ್‌ನಲ್ಲಿ ಇನ್‌ಸ್ಟಾಗ್ರಾಮ್ ಲೈಟ್ ಅಪ್ಲಿಕೇಶನ್ ಅನ್ನು ಟೈಪ್ ಮಾಡಿ, ತದನಂತರ ಅಪ್ಡೇಟ್‌ ಆಯ್ಕೆಯನ್ನು ಒತ್ತಿ. ಅಪ್ಲಿಕೇಶನ್ ನವೀಕರಿಸಿದ ನಂತರ, ನೀವು ರೀಲ್ಸ್ ಟ್ಯಾಬ್ ಅನ್ನು ಪ್ರವೇಶಿಸಲು ಮತ್ತು ಪ್ಲಾಟ್‌ಫಾರ್ಮ್‌ನಲ್ಲಿ ಜನಪ್ರಿಯ ಕಿರು ವೀಡಿಯೊಗಳನ್ನು ವೀಕ್ಷಿಸಲು ಸಾಧ್ಯವಾಗುತ್ತದೆ. ವಿಶೇಷವೆಂದರೆ, ಈ ಅಪ್ಲಿಕೇಶನ್ ಬಾಂಗ್ಲಾ, ಗುಜರಾತಿ, ಹಿಂದಿ, ಕನ್ನಡ, ಮಲಯಾಳಂ, ಮರಾಠಿ, ಪಂಜಾಬಿ, ತಮಿಳು ಮತ್ತು ತೆಲುಗು ಸೇರಿದಂತೆ ಅನೇಕ ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯವಿದೆ.

Best Mobiles in India

English summary
Instagram is rolling out a new update of 2021 for the Instagram Lite app in India.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X