ಇನ್‌ಸ್ಟಾಗ್ರಾಮ್ ಮಾಡುತ್ತಿರುವ ಈ ಅಭಿಯಾನಕ್ಕೆ ನೀವು ಶಹಬ್ಬಾಶ್ ಅನ್ನಲೇಬೇಕು!
ಇನ್‌ಸ್ಟಾಗ್ರಾಮ್ ಜನಪ್ರಿಯ ಸೊಶೀಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದೆನಿಸಿದೆ. ಬಳಕೆದಾರರ ನೆಚ್ಚಿನ ಫೋಟೋ ಶೇರಿಂಗ್ ಅಪ್ಲಿಕೇಶನ್ ಎನಿಸಿಕೊಂಡಿದೆ. ಈಗಾಗಲೇ ಅನೇಕ ಆಕರ್ಷಕ ಫೀಚರ್ಸ್‌ಗಳನ್ನು ಒಳಗೊಂಡಿರುವ ಇನ್‌ಸ್ಟಾಗ್ರಾಮ್ ಯುಜನತೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಆಕರ್ಷಿಸಿದೆ. ಬಳಕೆದಾರರು ಫೊಟೋ ಮತ್ತು ವೀಡಿಯೊಗಳನ್ನ ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ಕೂಡ ಶೇರ್ ಮಾಡಬಹುದಾಗಿದೆ. ಸದ್ಯ ಇದೀಗ ಯುವಜನತೆಯ ರಕ್ಷಣೆಗಾಗಿ ಹೊಸ ಅಭಿಯಾನವನ್ನು ಪ್ರಕಟಿಸಿದೆ.

ಹೌದು, ಇನ್‌ಸ್ಟಾಗ್ರಾಮ್ ತನ್ನ ಪ್ಲಾಟ್‌ಫಾರ್ಮ್‌ನಲ್ಲಿರುವ ಸೇಪ್ಟಿ ಫೀಚರ್ಸ್ ಮತ್ತು "ಕಾನೂನು ಹಕ್ಕುಗಳು ಮತ್ತು ರಕ್ಷಣೆಗಳು" ಕುರಿತು ಜಾಗೃತಿ ಮೂಡಿಸಲು ಹೊಸ ಅಭಿಯಾನಗಳನ್ನು ಪ್ರಕಟಿಸಿದೆ. ಈ ಅಭಿಯಾನಗಳು ದೇಶಾದ್ಯಂತ ಯುವಜನರಿಗೆ ಸಹಾಯ ಮಾಡಲಿದೆ. ಈ ಅಭಿಯಾನ ಬಹುಭಾಷಾ ವಿಷಯಗಳಲ್ಲಿ ಕಾಣಿಸಿಕೊಳ್ಳುವ ವೈವಿಧ್ಯಮಯ ರಚನೆಕಾರರನ್ನು ಸಹ ಒಳಗೊಂಡಿರುತ್ತದೆ ಎನ್ನಲಾಗಿದೆ. ಹಾಗಾದ್ರೆ ಇನ್‌ಸ್ಟಾಗ್ರಾಮ್ ಯುವಜನತೆಗಾಗಿ ಆರಂಬಿಸಿರುವ ಹೊಸ ಅಭಿಯಾನದ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಇನ್‌ಸ್ಟಾಗ್ರಾಮ್ ತನ್ನ ಬಳಕೆದಾರರ ರಕ್ಷಣೆಗಾಗಿ ಈಗಾಗಲೇ ಅನೇಕ ಕ್ರಮಗಳನ್ನು ಕೈಗೊಂಡಿದೆ. ಬಳಕೆದಾರರ ಸುರಕ್ಷತೆಗಾಗಿ ಹೊಸ ಹೊಸ ಪ್ರಯತ್ನಗಳನ್ನು ನಡೆಸುತ್ತಲೇ ಬಂದಿದೆ. ಅಷ್ಟೇ ಅಲ್ಲ ಇನ್‌ಸ್ಟಾಗ್ರಾಮ್ ನಮ್ಮ ಸಮುದಾಯವು ಆನ್‌ಲೈನ್‌ನಲ್ಲಿ ಸುರಕ್ಷಿತವಾಗಿರುವುದರ ಬಗ್ಗೆ ಸ್ಥಳೀಯವಾಗಿ ಜಾಗೃತಿ ಮೂಡಿಸಲು ನಾವು ಬಯಸಿದ್ದೇವೆ ಎಂದು ಹೇಳಿಕೊಂಡಿದೆ. 'ಸೇಫ್ ಸ್ಟ್ರೀ' ಮತ್ತು 'ಮೈ ಕಾನೂನ್' ಮೂಲಕ ಕಾನೂನಿನ ಅಡಿಯಲ್ಲಿ ಯುವಜನರಿಗೆ ಲಭ್ಯವಿರುವ ಹಕ್ಕುಗಳ ಬಗ್ಗೆ ತಿಳಿಸುವುದಾಗಿ ಇನ್‌ಸ್ಟಾಗ್ರಾಮ್ ಹೇಳಿಕೊಂಡಿದೆ.

'ಸೇಫ್ ಸ್ಟ್ರೀ' ಅಭಿಯಾನ
ಇನ್‌ಸ್ಟಾಗ್ರಾಮ್ ಯುವಜನರ ಸುರಕ್ಷತೆಗಾಗಿ ಆಯೋಜಿಸಿರುವ ಅಭಿಯಾನಗಳಲ್ಲಿ ಸುರಕ್ಷಿತ ಸ್ತ್ರೀ ಅಭಿಯಾನ ಕೂಡ ಒಂದಾಗಿದೆ. ಹೆಸರೇ ಸೂಚಿಸುವಂತೆ ಈ ಅಭಿಯಾನದಲ್ಲಿ ಮಹಿಳೆಯರ ಹಕ್ಕುಗಳು ಮತ್ತು ಕಾನೂನುಗಳನ್ನು ಅರ್ಥಮಾಡಿಸುವ ಪ್ರಯತ್ನ ಮಾಡಲಾಗುತ್ತದೆ. ಮಹಿಳೆಯರಿಗೆ ಆನ್‌ಲೈನ್‌ನಲ್ಲಿ ಎದುರಾಗಬಹುದಾದ ಸಂಕಷ್ಟಗಳನ್ನು ನಿವಾರಣೆ ಮಾಡುವುದು ಹೇಗೆ ಎಂದು ತಿಳಿಸಿಕೊಡಲಿದ. ಇದಕ್ಕಾಗಿ Yuvaa ಸಹಭಾಗಿತ್ವದಲ್ಲಿ ಮಹಿಳೆಯರಿಗೆ ಸುರಕ್ಷಿತ ಮತ್ತು ಕಿಂಡರ್ ಆನ್‌ಲೈನ್ ಪ್ಲೇಸ್ ಅನ್ನು ಕ್ರಿಯೆಟ್ ಮಾಡಲು 'ಸೇಫ್ ಸ್ಟ್ರೀ' ಅಭಿಯಾನವನ್ನು ಪ್ರಾರಂಭಿಸಿದೆ. ಈ ಅಭಿಯಾನವು ಒಂದು ತಿಂಗಳ ಕಾಲ ನಡೆಯಲಿದೆ. ಇದು ಮೊದಲು ಆನ್‌ಲೈನ್‌ನಲ್ಲಿ ಹೆಚ್ಚು ಇಂಟರ್‌ಬಿಲ್ಟ್ ಪ್ಲೇಸ್ ಅನ್ನು ಬಿಲ್ಡ್ ಮಾಡುವ ಮಾರ್ಗಗಳ ಕುರಿತು ಕ್ರಿಯೆಟರ್ಸ್‌ಗೆ ಆರು ಭಾಗಗಳ ತರಬೇತಿ ಕಾರ್ಯಕ್ರಮವನ್ನು ನಡೆಸುತ್ತದೆ. ಇದು Instagram ನಲ್ಲಿ ಮಹಿಳೆಯರಿಗೆ ಲಭ್ಯವಿರುವ ಸುರಕ್ಷತಾ ವೈಶಿಷ್ಟ್ಯಗಳನ್ನು ಹೈಲೈಟ್ ಮಾಡುತ್ತದೆ.

‘ಮೈ ಕಾನೂನ್' ಅಭಿಯಾನ
ಇನ್ನು ಇನ್‌ಸ್ಟಾಗ್ರಾಮ್ ನ್ಯಾಯಾ ಮತ್ತು ವಿ ದಿ ಯಂಗ್ ಸಹಭಾಗಿತ್ವದಲ್ಲಿ, ಯುವಜನರಿಗೆ ಕಾನೂನುಗಳನ್ನು ಸರಳೀಕರಿಸಲು ಮತ್ತು ವಿವರಿಸಲು 'ಮೈ ಕಾನೂನ್' ಅಭಿಯಾನವನ್ನು ನಡೆಸುತ್ತಿದೆ. ಇದು ಇನ್‌ಸ್ಟಾಗ್ರಾಮ್‌ನಲ್ಲಿರುವ ಸೆಫ್ಟಿ ಕಂಟ್ರೋಲ್ ಬಗ್ಗೆ ಯುವಜನರಿಗೆ ಮಾಹಿತಿ ನೀಡಲಿದೆ. ಅಲ್ಲದೆ ಯುವಜನರಿಗೆ ತಿಳುವಳಿಕೆಯುಳ್ಳ ಕಾನೂನು ಕ್ರಮಗಳನ್ನು ಳಿಸುವ ಪ್ರಯತ್ನ ಮಾಡಿದ್ದು, ನ್ಯಾಯ ವ್ಯವಸ್ಥೆಗಳೊಂದಿಗೆ ಸಂವಹನ ನಡೆಸಲು ಸಹಾಯ ಮಾಡುತ್ತದೆ. ಈ ಅಭಿಯಾನವು ಸುಮಾರು ಮೂರು ತಿಂಗಳವರೆಗೆ ನಡೆಯಲಿದೆ. ಆನ್‌ಲೈನ್ ಮೂಲಕ ನಡೆಯುವ ಹಿಂಸಾಚಾರ, ಬೆದರಿಕೆ ಕ್ರಮಗಳು ಮತ್ತು ಕಿರುಕುಳ, ಮಕ್ಕಳ ಲೈಂಗಿಕ ನಿಂದನೆ ಮತ್ತು ಕಾನೂನು ಸಂಘರ್ಷದ ವಿಚಾರದ ಬಗ್ಗೆ 50 ಕ್ಕೂ ಹೆಚ್ಚು ಸಣ್ಣ ಮತ್ತು ಲಾಂಗ್ ಕಂಟೆಂಟ್ ನೀಡಲಿದೆ.

ಇದಲ್ಲದೆ ಇನ್‌ಸ್ಟಾಗ್ರಾಮ್ ಕೆಲ ದಿನಗಳ ಹಿಂದೆ ಆಡ್ ಯುವರ್ಸ್ ಸ್ಟಿಕ್ಕರ್ ಫೀಚರ್ಸ್ ಪರಿಚಯಿಸಿದೆ. ಇದು ಬಳಕೆದಾರರಿಗೆ ಚಿತ್ರಗಳೊಂದಿಗೆ ಸ್ಟೋರಿಗಳಿಗೆ ರಿಯಾಕ್ಟ್ ಮಾಡಲು ಅನುವು ಮಾಡಿಕೊಡಲಿದೆ. ಇನ್‌ಸ್ಟಾಗ್ರಾಮ್‌ನಲ್ಲಿರುವ ಸ್ಟೋರಿಗಳಿಗೆ ಪ್ರತಿಕ್ರಿಯೆಯನ್ನು ಇವುಗಳ ಮೂಲಕ ನೀಡಬಹುದಾಗಿದೆ. ಇನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಯಾರಾದರೂ ನಿಮ್ಮ ಸ್ಟಿಕ್ಕರ್‌ಗಳ ಜೊತೆಗೆ ಹಿಂದಿನ ಎಲ್ಲಾ ಸ್ಟೋರಿಗಳನ್ನು ಸಹ ವೀಕ್ಷಿಸಬಹುದಾಗಿದೆ. ಅದೇ ಥೀಮ್ ಅಥವಾ ವಿಷಯದ ಆಧಾರದ ಮೇಲೆ ವಿಷಯವನ್ನು ಅನ್ವೇಷಿಸಲು ಇದು ಅನುಕೂಲಕರವಾಗಿದೆ. ಆದರೆ ನೀವು ಪ್ರೈವೇಟ್ ಅಕೌಂಟ್ ಅನ್ನು ಹೊಂದಿದ್ದರೆ, ಇತರರು ಸ್ಟಿಕ್ಕರ್‌ಗೆ ಸೇರಿಸಲಾದ ಸ್ಟೋರಿಗಳನ್ನು ನೋಡಬಹುದಾಗಿದೆ. ಆದರೆ ನಿಮ್ಮ ಬೇಸ್ ಸ್ಟೋರಿ ನಿಮ್ಮ ಅನುಯಾಯಿಗಳಿಗೆ ಮಾತ್ರ ಗೋಚರಿಸುತ್ತದೆ. ಇನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಆಡ್ ಯುವರ್ಸ್ ಸ್ಟಿಕ್ಕರ್ ಅನ್ನು ಬಳಸುವುದಕ್ಕೆ ಮೊದಲಿಗೆ ಸ್ಟೋರಿ ಇಂಟರ್ಫೇಸ್ ತೆರೆಯಿರಿ. ನಂತರ ಮೇಲಿನ ಪಟ್ಟಿಯಿಂದ ಸ್ಟಿಕ್ಕರ್ ಐಕಾನ್ ಮೇಲೆ ಟ್ಯಾಪ್ ಮಾಡಬೇಕಾಗುತ್ತದೆ. ಇದೀಗ ನೀವು ಮೇಲ್ಭಾಗದಲ್ಲಿ ಹೊಸ 'ಆಡ್ ಯುವರ್ಸ್ ' ಸ್ಟಿಕ್ಕರ್ ಕಾಣಬಹುದಾಗಿದೆ. ನಂತರ ಹೊಸ 'ಆಡ್ ಯುವರ್ಸ್' ಥ್ರೆಡ್ ಅನ್ನು ಕ್ರಿಯೆಟ್ ಅದನ್ನು ಟ್ಯಾಪ್ ಮಾಡಿ. ಸ್ಟಿಕ್ಕರ್ ಕಾಣಿಸಿಕೊಂಡಾಗ, ಪ್ರಾಂಪ್ಟ್ ಅನ್ನು ಟೈಪ್ ಮಾಡಿ, ಸ್ಟಿಕ್ಕರ್ ಅನ್ನು ಪರದೆಯ ಮೇಲೆ ಎಲ್ಲಿಯಾದರೂ ಇರಿಸಿ ಮತ್ತು ಸ್ಟೋರಿಯನ್ನು ಪೋಸ್ಟ್ ಮಾಡಿರಿ.


Click it and Unblock the Notifications








