Home
ಸುದ್ದಿಜಾಲ

ವಿಡಿಯೋ ಪ್ರಿಯರಿಗೆ ಬಂದಿದೆ ಮತ್ತೊಂದು ಆಪ್...ಯುಟ್ಯೂಬ್‌ಗೆ ಸೆಡ್ಡು ಹೊಡೆಯಲಿದಿಯಾ ಐಜಿಟಿವಿ..!

By Avinash

ಸಾಮಾಜಿಕ ಜಾಲತಾಣದಲ್ಲಿನ ಪ್ರಮುಖ ಪೋಟೋ ಶೇರಿಂಗ್ ಪ್ಲಾಟ್‌ಫಾರ್ಮ್ ಆಗಿರುವ ಇನ್ಸ್ಟಾಗ್ರಾಂ ವಿಡಿಯೋ ಆಪ್ ಒಂದನ್ನು ಬಿಡುಗಡೆ ಮಾಡಿದ್ದು, ದೊಡ್ಡ ಅವಧಿಯ ವಿಡಿಯೋಗಳನ್ನು ಸ್ಟ್ರೀಮ್ ಮಾಡಲು ಮುಂದಾಗಿದೆ. ಈ ಮೂಲಕ ಜಗತ್ತಿನ ಅತಿದೊಡ್ದ್ ವಿಡಿಯೋ ಪ್ಲಾಟ್‌ಫಾರ್ಮ್ ಆಗಿರುವ ಯುಟ್ಯೂಬ್‌ಗೆ ಸ್ಪರ್ಧೆ ನೀಡಲು ಮುಂದಾಗಿದೆ.

ವಿಡಿಯೋ ಪ್ರಿಯರಿಗೆ ಬಂದಿದೆ ಮತ್ತೊಂದು ಆಪ್..!

ಹೌದು, ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಇನ್ಸ್ಟಾಗ್ರಾಂ ಐಜಿಟಿವಿ ಆಪ್ ಬಿಡುಗಡೆಗೊಳಿಸಿದ್ದು, ವಿಡಿಯೋ ಪ್ಲಾಟ್‌ಫಾರ್ಮ್‌ನ್ನು ಯುಟ್ಯೂಬ್‌ನೊಂದಿಗೆ ಹಂಚಿಕೊಳ್ಳಲು ಸಿದ್ಧತೆ ನಡೆಸಿದೆ. ಇನ್ಸ್ಟಾಗ್ರಾಂ ಬಿಡುಗಡೆಗೊಳಿಸಿರುವ ಹೊಸ ಆಪ್‌ನಲ್ಲಿ ಏನೇಲಾ ಎಂಬುದನ್ನು ಮುಂದೆ ನೋಡಿ.

ಒಂದು ನಿಮಿಷದಿಂದ ಗಂಟೆಗೆ ಹೆಚ್ಚಳ

ಒಂದು ನಿಮಿಷದಿಂದ ಗಂಟೆಗೆ ಹೆಚ್ಚಳ

ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಅಪ್‌ಲೋಡ್ ಮಾಡುವ ಅವಧಿಯನ್ನು ಒಂದು ನಿಮಿಷಕ್ಕೆ ಸೀಮಿತಗೊಳಿಸಲಾಗಿತ್ತು. ಈಗ ಹೊಸ ಐಜಿಟಿವಿ ಆಪ್‌ನಲ್ಲಿ ಈ ಅವಧಿಯನ್ನು ಒಂದು ಗಂಟೆಗೆ ಹೆಚ್ಚಿಸಲಾಗಿದ್ದು, ಬಳಕೆದಾರರಿಗೆ ಜನಪ್ರಿಯ ವಿಡಿಯೋ ನಿರ್ಮಾತೃಗಳಿಂದ ವಿಡಿಯೋಗಳನ್ನು ವೀಕ್ಷಿಸುವ ಭಾಗ್ಯ ಸಿಗಲಿದೆ.

ಸ್ಟಾಂಡ್ಅಲೋನ್ ಆಪ್‌

ಸ್ಟಾಂಡ್ಅಲೋನ್ ಆಪ್‌

ಐಜಿಟಿವಿ ಸ್ಟಾಂಡ್‌ಅಲೋನ್ ಆಪ್ ಆಗಿದ್ದು, ಬಳಕೆದಾರರು ಇನ್ಸ್ಟಾಗ್ರಾಂ ಆಪ್‌ ಮೂಲಕವೂ ವಿಡಿಯೋಗಳನ್ನು ವೀಕ್ಷಿಸುವ ಆಯ್ಕೆಯನ್ನು ಹೊಂದಲಿದ್ದಾರೆ. ಫೇಸ್‌ಬುಕ್ ಈ ಸಮಯದಲ್ಲಿ ಇನ್ಸ್ಟಾಗ್ರಾಂ ಜಾಗತಿಕವಾಗಿ ಒಂದು ಬಿಲಿಯನ್ ಬಳಕೆದಾರರನ್ನು ಹೊಂದಿದೆ ಎಂದು ಅಧಿಕೃತವಾಗಿ ಘೋಷಿಸಿದೆ. ಈ ಮೂಲಕ ವೀಕ್ಷಕರ ಸಂಖ್ಯೆಯನ್ನು ಹೆಚ್ಚಳಗೊಳಿಸಲು ಇನ್ಸ್ಟಾಗ್ರಾಂ ಮುಂದಾಗಿದೆ.

ಏನೆಲ್ಲಾ ಇರಲಿದೆ ಐಜಿಟಿವಿ ಆಪ್‌ನಲ್ಲಿ

ಏನೆಲ್ಲಾ ಇರಲಿದೆ ಐಜಿಟಿವಿ ಆಪ್‌ನಲ್ಲಿ

ಐಜಿಟಿವಿ ಆಪ್‌ನಲ್ಲಿ ಲಾಗ್‌ಇನ್ ಆದ ತಕ್ಷಣ ಪಾಲೋ ಮಾಡಿದ ಸ್ವಯಂಚಲಿತವಾಗಿ ವಿಡಿಯೋಗಳು ಪ್ಲೇ ಆಗಲಿವೆ. ಬಳಕೆದಾರರು ಸ್ವೈಪ್ ಮಾಡ್ತಾ ಎಷ್ಟು ಅವಧಿ ಬೇಕಾದರೂ ವಿಡಿಯೋಗಳನ್ನು ನೋಡಬಹುದಾಗಿದೆ. ಫಾರ್ ಯು, ಫಾಲೋಯಿಂಗ್, ಪಾಪುಲರ್ ಎಂಬ ಟ್ಯಾಬ್‌ಗಳನ್ನು ನೀಡಲಾಗಿದ್ದು, ವೀಕ್ಷಕರ ಆಸಕ್ತಿಗನುಗುಣವಾಗಿ ವಿಡಿಯೋಗಳನ್ನು ವೀಕ್ಷಿಸಬಹುದಾಗಿದೆ. ಕಂಟಿನೀವ್ ವಾಚಿಂಗ್ ಎಂಬ ಆಯ್ಕೆಯನ್ನು ನೀಡಲಾಗಿದೆ.

ಲೈಕ್, ಕಮೆಂಟ್, ಶೇರ್ ಮಾಡಬಹುದು

ಲೈಕ್, ಕಮೆಂಟ್, ಶೇರ್ ಮಾಡಬಹುದು

ಐಜಿಟಿವಿಯಲ್ಲಿ ಬಳಕೆದಾರರು ವಿಡಿಯೋಗಳನ್ನು ಲೈಕ್, ಕಮೆಂಟ್ ಮಾಡಬಹುದಾಗಿದೆ. ಮತ್ತು ತಮ್ಮ ಸ್ನೇಹಿತರಿಗೆ ನೇರವಾಗಿ ವಿಡಿಯೋ ಕಳಿಸುವ ಆಯ್ಕೆಯನ್ನು ನೀಡಲಾಗಿದೆ. ಅದಲ್ಲದೇ ಇನ್ದ್ಟಾಗ್ರಾಂ ಚಾನೆಲ್‌ಗಳನ್ನು ಅಭಿವೃದ್ಧಿಪಡಿಸಲಾಗಿದ್ದು, ಬಳಕೆದಾರರು ಸಬ್‌ಸ್ಕ್ರೈಬ್ ಆಗಬಹುದಾಗಿದೆ.

ಸದ್ಯಕ್ಕೆ ಜಾಹೀರಾತು ಇಲ್ಲ

ಸದ್ಯಕ್ಕೆ ಜಾಹೀರಾತು ಇಲ್ಲ

ಐಜಿಟಿವಿ ಆಪ್‌ನಲ್ಲಿ ಸದ್ಯಕ್ಕೆ ಜಾಹೀರಾತುಗಳು ಇಲ್ಲ ಎಂದು ಇನ್ಸ್ಟಾಗ್ರಾಂ ಸಿಇಒ ಕೇವಿನ್ ಸಿಸ್ಟೋರ್ಮ್ ಹೇಳಿದ್ದಾರೆ. ಆದರೆ ಕಾಲಕ್ರಮೇಣ ಜಾಹೀರಾತುಗಳನ್ನು ಅಳವಡಿಸಬಹುದು ಎಂದು ಹೇಳಿದ್ದಾರೆ.

ಯೂಟ್ಯೂಬ್ ಮತ್ತು ಸ್ನಾಪ್‌ಚಾಟ್‌ಗೆ ಸ್ಪರ್ಧೆ

ಯೂಟ್ಯೂಬ್ ಮತ್ತು ಸ್ನಾಪ್‌ಚಾಟ್‌ಗೆ ಸ್ಪರ್ಧೆ

ಇನ್ಸ್ಟಾಗ್ರಾಂನ ಐಜಿಟಿವಿ ಯುಟ್ಯೂಬ್ ಮತ್ತು ಸ್ನಾಪ್‌ಚಾಟ್‌ ವಿಡಿಯೋ ಪ್ಲಾಟ್‌ಫಾರ್ಮ್‌ಗಳಿಗೆ ಸ್ಪರ್ಧೆ ನೀಡಲಿದೆ. ಜಗತ್ತಿನಾದ್ಯಂತವಿರುವ ಯುವಜನರನ್ನು ಸೆಳೆಯಲು ಇನ್ಸ್ಟಾಗ್ರಾಂ ಮುಂದಾಗಿದೆ. ಟಿವಿಯಿಂದ ದೂರವಿದ್ದು, ಸ್ಮಾರ್ಟ್‌ಪೋನ್‌ನಲ್ಲಿ ಹೆಚ್ಚು ಕಂಟೆಂಟ್ ಹುಡುಕುತ್ತಿರುವವರನ್ನು ಗುರಿಯಾಗಿಸಿಕೊಂಡು ಐಜಿಟಿವಿ ಆಪ್ ಬಿಡುಗಡೆ ಮಾಡಿದೆ.

ಐಜಿಟಿವಿ ಚಾನೆಲ್ಸ್

ಐಜಿಟಿವಿ ಚಾನೆಲ್ಸ್

ಐಜಿಟಿವಿ ಹೊಸ ಚಾನೆಲ್ ಹೊಂದಿದ್ದು, ಇಲ್ಲಿ ವಿಡಿಯೋ ಕ್ರಿಯೆಟರ್ಸ್‌ಗಳೇ ಚಾನೆಲ್ಸ್‌ಗಳಾಗಿರಲಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಕ್ರಿಯೆಟರ್‌ನ್ನು ಫಾಲೋ ಮಾಡಿದರೆ ಐಜಿಟಿವಿ ಚಾನೆಲ್ ಅವರ ವಿಡಿಯೋಗಳನ್ನು ನೋಡುವಂತೆ ತಿಳಿಸುತ್ತದೆ. ನಿಮ್ಮದೇ ಆದ ಚಾನೆಲ್ ಸೃಷ್ಟಿಸಿಕೊಂಡು ನಿಮ್ಮ ಸ್ವಂತ ಐಜಿಟಿವಿ ವಿಡಿಯೋಗಳನ್ನು ಅಪ್‌ಲೋಡ್ ಮಾಡಬಹುದಾಗಿದೆ.

Best Mobiles in India

English summary
Instagram launches IGTV, a standalone app for long-form videos. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+