Home
ಸುದ್ದಿಜಾಲ

ಫುಡ್‌ ಡೆಲಿವರಿಯನ್ನ ಬೆಂಬಲಿಸುವ ಫೀಚರ್ಸ್‌ ಪರಿಚಯಿಸಿದ ಇನ್‌ಸ್ಟಾಗ್ರಾಮ್‌!

ಇದು ಸೊಶೀಯಲ್‌ ಮೀಡಿಯಾ ಜಮಾನ ಎಲ್ಲಿ ಏನೇ ನಡೆದರೂ ಸೊಶೀಯಲ್‌ ಮೀಡಿಯಾ ದಲ್ಲಿ ಸುದ್ದಿ ಆಗಿ ಬಿಡುತ್ತೆ. ಇನ್ನು ನಿಮಗೆಲ್ಲಾ ತಿಳಿದಿರುವಂತೆ ಪ್ರಸ್ತುತ ಜಗತ್ತಿನಲ್ಲಿ ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್‌,ವಾಟ್ಸಾಪ್‌, ನಂತಹ ಸೊಶೀಯಲ್‌ ಮೀಡಿಯಾ ಆಪ್‌ಗಳು ಬಹಳ ಪ್ರಸಿದ್ಧಿಯನ್ನ ಪಡೆದುಕೊಂಡಿವೆ. ಅಷ್ಟೇ ಅಲ್ಲ ಈ ಆಪ್‌ಗಳು ಕೇವಲ ಕಮ್ಯೂನಿಕೇಶನ್‌ಗೆ ಮಾತ್ರ ಸೀಮಿತವಾಗಿಲ್ಲ ಬದಲಿಗೆ ಎಲ್ಲಾ ವಲಯಗಳನ್ನ ಮುಟ್ಟಬಲ್ಲ ಕಾರ್ಯವನ್ನ ಮಾಡುತ್ತಿವೆ. ಸದ್ಯ ಇಂತಹದೆ ಒಂದು ಕಾರ್ಯಕ್ಕೆ ಇನ್‌ಸ್ಟಾಗ್ರಾಮ್‌ ಮುಂದಾಗಿದೆ.

ಹೌದು

ಹೌದು, ಫೇಸ್‌ಬುಕ್ ಒಡೆತನದ ಫೋಟೋ ಮತ್ತು ವಿಡಿಯೋ-ಹಂಚಿಕೆ ಅಪ್ಲಿಕೇಶನ್ ಇನ್‌ಸ್ಟಾಗ್ರಾಮ್ ಹೊಸ ಮಾದರಿಯ ಫೀಚರ್ಸ್‌ ಒಂದನ್ನ ಬಿಡುಗಡೆ ಮಾಡಿದೆ. ಸದ್ಯ ಇಡೀ ಜಗತ್ತು ಲಾಕ್‌ಡೌನ್‌ ಸಂಕಷ್ಟವನ್ನ ಎದುರಿಸುತ್ತಿದೆ. ಮನೆ ಮಂದಿಯೆಲ್ಲಾ ಹೊರಬಾರದೇ ಮನೆಯಲ್ಲಿಯ ಕಾಲ ಕಳೆಯುವಂತಾಗಿದೆ. ಇಂತಹ ಸನ್ನಿವೇಶದಲ್ಲಿ ಬಳಕೆದಾರರಿಗೆ ಸಹಾಯ ಮಾಡುವುದಕ್ಕಾಗಿಎ ಹೊಸ ಫೀಚರ್ಸ್‌ ಅನ್ನು ಲಾಂಚ್‌ ಮಾಡಿದೆ. ಇನ್ನು ಈ ಫೀಚರ್ಸ್‌ ಫುಡ್‌ ಆರ್ಡರ್‌ಗಳನ್ನ ಮಾಡುವ ಫೀಚರ್ಸ್‌ ಆಗಿದ್ದು ಲೋಕಲ್‌ ಬ್ಯುಸಿನೆಸ್‌ ಅನ್ನು ಬೆಂಬಲಿಸಲಿದೆ.

ಲಾಕ್‌ಡೌನ್

ಇನ್ನು ಲಾಕ್‌ಡೌನ್ ಸಮಯದಲ್ಲಿ ಲೋಕ್ಲ್‌ ಬ್ಯುಸಿನೆಧ್‌ ಸಂಪೂರ್ಣವಾಗಿ ನೆಲಕಚ್ಚಿದೆ. ಇಂತಹ ಸಂಕಷ್ಟದಲ್ಲಿರುವವರಿಗೆ ಫುಡ್‌ ಆರ್ಡರ್‌ ಆಪ್ ಮೂಲಕ ಸ್ಥಳೀಯ ವ್ಯವಹಾರಗಳನ್ನು ಬೆಂಬಲಿಸುವ ಪ್ರಯತ್ನಕ್ಕೆ ಇನ್‌ಸ್ಟಾಗ್ರಾಮ್‌ ಮುಂದಾಗಿದೆ. ಸದ್ಯ ಕೊರೋನಾ ವೈರಸ್‌ನಿಂದಾಗಿ ನಷ್ಟದಲ್ಲಿರುವ ಆಹಾರ ಮಳಿಗೆಗಳಿಗೆ ಸಹಾಯ ಮಾಡಲು ಇದು ಸಹಾಯಕವಾಗಿದೆ. ಇನ್ನು ಈ ಫೀಚರ್ಸ್‌ ಅನ್ನು ಮೊದಲು ಯುಎಸ್ ಮತ್ತು ಕೆನಡಾದಲ್ಲಿ ಲಾಂಚ್‌ ಮಾಡಲಾಗಿತ್ತು. ಇದೀಗ ಇದು ವಿಶ್ವಾದ್ಯಂತ ಲಾಂಚ್‌ ಆಗಿದೆ.

ಇನ್‌ಸ್ಟಾಗ್ರಾಮ್

ಸದ್ಯ ಇನ್‌ಸ್ಟಾಗ್ರಾಮ್ ಪ್ರಕಾರ, ಬ್ಯುಸಿನೆಸ್‌ ಅಥವಾ ರೆಸ್ಟೋರೆಂಟ್‌ನ ಪ್ರೊಫೈಲ್‌ಗೆ ಹೊಸ ಆಕ್ಷನ್ ಬಟನ್ ಸೇರಿಸಲಾಗುತ್ತದೆ. ಇಲ್ಲವೇ ಅವರ ಇನ್‌ಸ್ಟಾಗ್ರಾಮ್ ಸ್ಟೋರಿಗಳಿಗೆ ಫುಡ್ ಆರ್ಡರ್ ಸ್ಟಿಕ್ಕರ್ ಅನ್ನು ಸೇರಿಸಬಹುದಾಗಿದೆ. ಅವರು ಈ ಗುಂಡಿಯನ್ನು ಟ್ಯಾಪ್‌ ಮಾಡುವ ಬಳಕೆದಾರರಿಗೆ ಫುಡ್‌ ಬ್ಯುಸಿನೆಸ್‌ ವೆಬ್‌ಸೈಟ್ ಮೂಲಕ ಖರೀದಿ ಮಾಡಲು ಅವಕಾಶ ನೀಡಲಾಗುತ್ತದೆ. ಇದೀಗ ಅನೇಕ ವ್ಯವಹಾರಗಳಿಗೆ, ಪ್ರತಿ ಹೆಜ್ಜೆಯು ಕೂಡ ಸಹಾಯ ಮಾಡಲಿದೆ ಎಂದು ಇನ್‌ಸ್ಟಾಗ್ರಾಮ್‌ ಹೇಳಿಕೊಂಡಿದೆ.

ಕಾಳಜಿವಹಿಸುವ

ನೀವು ನಾವು ಕಾಳಜಿವಹಿಸುವ ಸಣ್ಣ ಉದ್ಯಮಗಳನ್ನು ಬೆಂಬಲಿಸಲು ಸುಲಭವಾಗುವಂತಹ ಫೀಚರ್ಸ್‌ಗಳನ್ನ ಇನ್ನಷ್ಟು ಪರಿಚಯಿಸುವ ಕೆಲಸ ಮಾಡುವುದನ್ನು ನಾವು ಮುಂದುವರಿಸುತ್ತೇವೆ ಎಂದು ಇನ್‌ಸ್ಟಾಗ್ರಾಮ್‌ ಹೇಳೊಕೊಂಡಿದೆ. ಅಲ್ಲದೆ ಸ್ಥಳೀಯ ಆಹಾರ ಚಿಲ್ಲರೆ ವ್ಯಾಪಾರಿಗಳನ್ನು ಬೆಂಬಲಿಸಲು ಜನರಿಗೆ ಅನುಮತಿ ನೀಡುವ ಮೂಲಕ ಕರೋನವೈರಸ್ ದುರಂತದ ಸವಾಲುಗಳನ್ನು ಎದುರಿಸುತ್ತಿರುವ ಕಂಪನಿಗಳಿಗೆ ಸಹಾಯ ಮಾಡಲು ಈ ಉಪಕ್ರಮವನ್ನು ವಿನ್ಯಾಸಗೊಳಿಸಲಾಗಿದೆ ಎಂದು ಇನ್ಸ್ಟಾಗ್ರಾಮ್ ಉಲ್ಲೇಖಿಸಿದೆ.

Best Mobiles in India

English summary
Instagram food delivery feature will add a new Action button to a business or restaurant's profile, or a Food Order sticker to their Instagram Stories.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+