Instagram: ರೀಲ್ಸ್‌ನಲ್ಲಿ ವೀಡಿಯೋ ಮಾಡಿ ಹಣ ಗಳಿಸಿ!
ಇನ್‌ಸ್ಟಾಗ್ರಾಮ್ ಜನಪ್ರಿಯ ಫೋಟೋ ಶೇರಿಂಗ್ ಅಪ್ಲಿಕೇಶನ್ ಆಗಿ ಗುರುತಿಸಿಕೊಂಡಿದೆ. ತನ್ನ ಬಳಕೆದಾರರಿಗೆ ಹಲವು ಆಕರ್ಷಕ ಫೀಚರ್ಸ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಇದರಲ್ಲಿ ಇನ್‌ಸ್ಟಾಗ್ರಾಮ್ ರೀಲ್ಸ್ ಶಾರ್ಟ್ ವೀಡಿಯೋ ಪ್ರಿಯರ ಮನಸ್ಸು ಗೆದ್ದಿದ್ದು, ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿದೆ. ಇದೀಗ ಇನ್‌ಸ್ಟಾಗ್ರಾಮ್ ರೀಲ್ಸ್ ಬಳಕೆದಾರರಿಗೆ ಶುಭ ಸುದ್ದಿ ನೀಡಿದೆ. ಇನ್ಮುಂದೆ ಇನ್‌ಸ್ಟಾಗ್ರಾಮ್ ರೀಲ್ಸ್‌ನಲ್ಲಿ ವೀಡಿಯೋ ಮಾಡುವವರು ಹಣವನ್ನು ಕೂಡ ಸಂಪಾದಿಸಬಹುದಾಗಿದೆ.

ಹೌದು, ಇನ್‌ಸ್ಟಾಗ್ರಾಮ್ ರೀಲ್ಸ್ ಬಳಕೆದಾರರಿಗೆ ಗುಡ್ ನ್ಯೂಸ್ ಅನ್ನು ನೀಡಿದೆ. ಶಾರ್ಟ್ ವೀಡಿಯೋ ಅಪ್ಲಿಕೇಶನ್ ಅನ್ನು ಇನ್ನಷ್ಟು ಜನಪ್ರಿಯತೆಗೊಳಿಸುವ ನಿಟ್ಟಿನಲ್ಲಿ ಹೊಸ ಹೆಜ್ಜೆಯನ್ನು ಇಟ್ಟಿದೆ. ಫೇಸ್‌ಬುಕ್‌ನ ಇತರೆ ಉತ್ಪನ್ನಗಳಂತೆ, ಇನ್‌ಸ್ಟಾಗ್ರಾಮ್ ಕೂಡ ರೀಲ್ಸ್‌ನಲ್ಲಿ ಬಳಕೆದಾರರು ಹಣಗಳಿಸುವ ಆಯ್ಕೆಗಳನ್ನು ಪ್ರಾರಂಭಿಸಿದೆ. ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ರೀಲ್ಸ್ ಮೂಲಕ ವೀಡಿಯೋ ಕ್ರಿಯೆಟರ್ಸ್‌ಗೆ ಹಣ ಸಂಪಾದಿಸಲು ಇನ್‌ಸ್ಟಾಗ್ರಾಮ್ ಈಗ ಪ್ಲ್ಯಾನ್ ರೂಪಿಸಿದೆ. ಈ ಪ್ಲ್ಯಾನ್ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ಮುಂದೆ ಓದಿರಿ.

ಇನ್‌ಸ್ಟಾಗ್ರಾಮ್ "Bonuses" ಫೀಚರ್ಸ್ ಅನ್ನು ಪರೀಕ್ಷಿಸುತ್ತಿದೆ. ಇದು ವೀಡಿಯೋ ಕ್ರಿಯೆಟರ್ಸ್‌ಗೆ ತಮ್ಮ ರೀಲ್‌ಗಳ ಮೂಲಕ ಹಣವನ್ನು ಸಂಪಾದಿಸಲು ಅನುವು ಮಾಡಿಕೊಡುತ್ತದೆ. ಈ ಫೀಚರ್ಸ್ ಅನ್ನು ಅಲೆಸ್ಸಾಂಡ್ರೊ Paluzzi ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಸ್ಕ್ರೀನ್‌ಶಾಟ್‌ಗಳ ಪ್ರಕಾರ, ಹೊಸ ರೀಲ್‌ಗಳನ್ನು ಹಂಚಿಕೊಂಡಾಗ ಕ್ರಿಯೆಟರ್ಸ್ ಇನ್‌ಸ್ಟಾಗ್ರಾಮ್‌ನಿಂದ ಬೋನಸ್ ಗಳಿಸಲು ಸಾಧ್ಯವಾಗುತ್ತದೆ. ಅಲ್ಲದೆ ತಮ್ಮ ಬೋನಸ್ ಮೂಲಕ ಎಷ್ಟು ಸಂಪಾದಿಸಿದ್ದಾರೆ ಎಂಬುದನ್ನು ಸಹ ನೋಡಬಹುದಾಗಿದೆ.

ಇನ್ನು ಇನ್‌ಸ್ಟಾಗ್ರಾಮ್ ರೀಲ್ಸ್‌ನಲ್ಲಿ ವೀಡಿಯೋ ಮಾಡುವವರು ಕೇವಲ ಮನರಂಜನೆ ಮಾತ್ರವಲ್ಲ ಹಣವನ್ನು ಸಹ ಗಳಿಸಬಹುದಾಘಿದೆ. ಇದಕ್ಕಾಗಿಯೇ ಬೋನಸ್ ಫೀಚರ್ಸ್ ನಿಮಗೆ ಉಪಯುಕ್ತವಾಗಿದೆ. ಆದರೆ ಇನ್‌ಸ್ಟಾಗ್ರಾಮ್ ವೃತ್ತಿಪರ ಖಾತೆಗಳಿಗೆ ಮಾತ್ರ ಬೋನಸ್‌ಗಳನ್ನು ನೀಡುತ್ತದೆ ಎಂದು ಹೇಳಲಾಗಿದೆ. ಇದು ವೈಯಕ್ತಿಕ ಖಾತೆಗಳಿಗೆ ಲಭ್ಯವಿಲ್ಲದಿರಬಹುದು. ಸದ್ಯ ಫೀಚರ್ಸ್ ಇನ್ನೂ ಪರೀಕ್ಷೆಯ ಹಂತದಲ್ಲಿರುವುದರಿಂದ ಇನ್ನೂ ಯಾವುದು ಅಧಿಕೃತವಾಗಿಲ್ಲ.

ಇನ್‌ಸ್ಟಾಗ್ರಾಮ್ ನಿಯಮಿತವಾಗಿ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಹೊಸ ವೈಶಿಷ್ಟ್ಯಗಳನ್ನು ಪರೀಕ್ಷಿಸುತ್ತದೆ. ಇನ್ನು ಕೆಲವು ಹೊಸ ಫಿಚರ್ಸ್‌ಗಳು ಬಿಡುಗಡೆಯ ಸನ್ನಿಹದಲ್ಲಿವೆ. ಹಾಗಂತ ಪರೀಕ್ಷಿಸಿದ ಫೀಚರ್ಸ್‌ಗಳೆಲ್ಲಾ ಅಧಿಕೃತವಾಗುವುದು ಸಹಜ ಎನ್ನುವಂತೆಯೂ ಇಲ್ಲ. ಆದರೆ ರೀಲ್ಸ್ ಮೂಲಕ ಹಣ ಗಳಿಸುವ ಅವಕಾಶ ದೊರೆತರೆ ಇನ್ನಷ್ಟು ಜನಪ್ರಿಯತೆ ಸಿಗಲಿದೆ ಅನ್ನೊದು ಇನ್‌ಸ್ಟಾಗ್ರಾಮ್ ಪ್ಲ್ಯಾನ್ ಆಗಿದೆ.

ಈಗಾಗಲೇ ಸ್ನ್ಯಾಪ್‌ಚಾಟ್ ಕೂಡ ಸ್ಪಾಟ್‌ಲೈಟ್ ಮೂಲಕ ವೀಡಿಯೋ ಸೃಷ್ಟಿಕರ್ತರಿಗೆ ಹಣ ಗಳಿಸುವ ಅವಕಾಶವನ್ನು ನೀಡಿದೆ. ಇಲ್ಲಿವರೆಗೆ 5,400 ಕ್ಕೂ ಹೆಚ್ಚು ಸೃಷ್ಟಿಕರ್ತರು ಒಟ್ಟಾರೆಯಾಗಿ 130 ಮಿಲಿಯನ್ ಗಿಂತ ಹೆಚ್ಚಿನ ಹಣವನ್ನು ಗಳಿಸಿದ್ದಾರೆ ಎಂದು ಸ್ನ್ಯಾಪ್ ಹೇಳಿದೆ. ಸೃಷ್ಟಿಕರ್ತರಿಗೆ ದೈನಂದಿನ ಬದಲು ಮಾಸಿಕ ಸಂಪಾದಿಸಲು ಅವಕಾಶ ನೀಡುವ ಮೂಲಕ ಈ ಕಾರ್ಯಕ್ರಮವನ್ನು ಬದಲಾಯಿಸಲು ಸಹ ಇದು ಯೋಜಿಸಿದೆ. ಇದೇ ಹಾದಿಯಲ್ಲಿ ಹೆಜ್ಜೆ ಇಟ್ಟಿರುವ ಇನ್‌ಸ್ಟಾಗ್ರಾಮ್ ಬಳಕೆದಾರರಿಗೆ ಯಾವ ಮಾಅದರಿಯಲ್ಲಿ ಹಣ ನೀಡಲಿದೆ ಅನ್ನೊದು ಮುಂದಿನ ದಿನಗಳಲ್ಲಿ ತಿಳಿಯಲಿದೆ.


Click it and Unblock the Notifications








