ನಕಲಿ ಸುದ್ದಿ ಹಾವಳಿ ತಡೆಗೆ ಇನ್‌ಸ್ಟಾಗ್ರಾಮ್ ಹೊಸ ಕ್ರಮ!
ಜನಪ್ರಿಯ ಸೋಶಿಯಲ್ ಮೀಡಿಯಾಗಳಲ್ಲಿ ಇನ್‌ಸ್ಟಾಗ್ರಾಮ್ ಕೂಡ ಬಳಕೆದಾರರ ನೆಚ್ಚಿನ ಸೋಶಿಯಲ್ ಮೀಡಿಯಾ ಆಪ್ಲಿಕೇಶನ್ ಆಗಿದೆ. ಯುವಜನತೆಯೆ ನೆಚ್ಚಿನ ಅಪ್ಲಿಕೇಶನ್ ಆಗಿರೋ ಇನ್‌ಸ್ಟಾಗ್ರಾಮ್‌ನಲ್ಲಿ ಹಲವಾರು ಸುದ್ದಿ, ಪೋಟೋ ವೀಡೀಯೋ ಎಲ್ಲವೂ ಕೂಡ ಶೇರ್ ಮಾಡಲಾಗುತ್ತೆ. ಸೋಶಿಯಲ್ ಮೀಡಿಯಾದಲ್ಲಿ ಸತ್ಯ ಸುದ್ದಿ ಮಾತ್ರವಲ್ಲ ಕೆಲ ನಕಲಿ ಸುದ್ದಿಯ ಕಾಟವೂ ಸಹ ಇರುತ್ತೆ. ಇದಕ್ಕಾಗಿ ಇನ್‌ಸ್ಟಾಗ್ರಾಮ್ ಹೊಸ ಫೀಚರ್ಸ್ ಒಂದನ್ನ ಪರಿಚಯಿಸಲು ಮುಂದಾಗಿದೆ.

ಹೌದು,ಇನ್‌ಸ್ಟಾಗ್ರಾಮ್ ಅಪ್ಲಿಕೇಶನ್ ಯುವಜನತೆಯ ಆಶಯಕ್ಕೆ ತಕ್ಕಂತೆ ಹೊಸ ಮಾದರಿಯ ಪೀಚರ್ಸ್‌ಗಳನ್ನ ಪರಿಚಯಿಸುತ್ತಲೇ ಬಂದಿದೆ. ಜನಪ್ರಿಯ ಸೋಶಿಯಲ್ ಮೀಡಿಯಾ ಅಪ್ಲಿಕೇಶನ್‌ಗಳ ಲೀಸ್ಟ್‌ನಲ್ಲಿ ಸ್ಥಾನ ಪಡೆದುಕೊಂಡಿರೋ ಇನ್‌ಸ್ಟಾಗ್ರಾಮ್ ಇದೀಗ ನಕಲಿ ಸುದ್ದಿಗಳ್ಳನ್ನ ಪತ್ತೆ ಹಚ್ಚುವ ಫೀಚರ್ಸ್ ಪರಿಚಯಿಸಲಿದೆ. ಇತ್ತಿಚೀನ ದಿನಗಳಲ್ಲಿ ಸೋಶಿಯಲ್ ಮೀಡಿಯಾಗಳಲ್ಲಿ ನಕಲಿ ಸುದ್ದಿಗಳ ಹಾವಳಿ ಜಾಸ್ತಿಯಾಗುತ್ತಿದೆ.

ಅಷ್ಟೇ ಅಲ್ಲ ಸುಳ್ಳು ಸುದ್ದಿಗಳ ಮೂಲಕ ಜನರಿಗೆ ತಪ್ಪು ಸಂದೇಶಗಳು ಕೂಡ ರವಾನೆಯಾಗುತ್ತಿರೊದನ್ನ ತಪ್ಪಿಸೋದಕ್ಕೆ ಇನ್‌ಸ್ಟಾಗ್ರಾಮ್ ಸುದ್ದಿಗಳ ಅಸಲಿಯತ್ತನ್ನ ಪತ್ತೆ ಮಾಡಲು ಮುಂದಾಗಿದೆ. ಈಗಾಗಲೇ ಸೋಶಿಯಲ್ ಮೀಡಿಯಾಗಳಲ್ಲಿ ಬರುವ ಸುದ್ದಿಯ ಅಸಲಿಯತ್ತಿನ ಪ್ಯಾಕ್ಟ್ ಚೆಕ್ಕಿಂಗ್ ಮಾಡುವುದಕ್ಕೆ ಗುಂಪುಗಳನ್ನ ರಚಿಸಲಾಗಿದೆ. ಈ ಗುಂಪಿನೊಂದಿಗೆ ಇನ್‌ಸ್ಟಾಗ್ರಾಮ್ ಕೂಡ ಪಾಲುದಾರಿಕೆಯನ್ನು ಪಡೆದುಕೊಂಡಿದ್ದು. ಮುಂದಿನ ದಿನಗಳಲ್ಲಿ ಇನ್‌ಸ್ಟಾಗ್ರಾಮ್ ನಲ್ಲಿ ಕೂಡ ನ್ಯೂಸ್ ಪ್ಯಾಕ್ಟ್ ಚೆಕ್ ಮಾಡಲಾಗುತ್ತೆ.

ಈಗಾಗಲೇ ನಕಲಿ ಸುದ್ದಿಗಳನ್ನು ಪತ್ತೆ ಹಚ್ಚುವುದಕ್ಕೆ ಫೇಸ್‌ಬುಕ್ ಇದೇ ರೀತಿಯ ಸೇವೆಯನ್ನು ಹೊಂದಿದೆ ಅನ್ನೊದನ್ನ ನಾವಿಲ್ಲಿ ಗಮನಿಸಬೇಕಾಗಿದೆ. ಇದೀಗ ಇನ್‌ಸ್ಟಾಗ್ರಾಮ್‌ನಲ್ಲಿ ನಕಲಿ ಸುದ್ದಿಯನ್ನ ಹರಡಿದರೆ ಅ ಸುದ್ದಿಯನ್ನ ಬ್ಲರ್ ಮಾಡಲಾಗುತ್ತದೆ. ಅಷ್ಟೇ ಅಲ್ಲ ಸುದ್ದಿಯ ಕೆಳಭಾಗದಲ್ಲಿ "ಸುಳ್ಳು ಮಾಹಿತಿ" ಎಂಬ ಟ್ಯಾಗ್‌ನೊಂದಿಗೆ ಮಸುಕಾದ ಸ್ಟೋರಿ ಮಾತ್ರ ಬಳಕೆದಾರರಿಗೆ ಕಾಣುತ್ತದೆ. ಈ ಮೂಲಕ ಈ ಸುದ್ದಿಯ ಪ್ಯಾಕ್ಟ್ ಚೆಕ್ ಮಾಡಲಾಗಿದೆ ಅನ್ನೊದು ಬಳಕೆದಾರರಿಗೆ ಗೊತ್ತಾಗುತ್ತದೆ, ಇದರಿಂದ ಸುದ್ದಿಯನ್ನ ವಿಕ್ಷಿಸುವ ಬಳಕೆದಾರರು ಅಸಲಿಯೋ ನಕಲಿಯೋ ಎಂದು ತಿಳಿದ ನಂತರ ಪೋಸ್ಟ್ ನೋಡಿ ಇತರರಿಗೆ ಸ್ಟೋರಿ ಶೇರ್ ಮಾಡಬಹುದಾಗಿದೆ.

ಸದ್ಯ ಇನ್‌ಸ್ಟಾಗ್ರಾಮ್ ನಕಲಿ ಸುದ್ದಿಗಳಿಗೆ ಸಂಬಂಧಿಸಿದಂತೆ ಪ್ಯಾಕ್ ಚೆಕ್ ಮಾಡಿದ ನಂತರ ಅದಕ್ಕೆ ಸಂಬಂದಿಸಿದ ಲೇಖನದ ಲಿಂಕ್ ಅನ್ನು ಸೇರಿಸಲಿದೆ. ಲಿಂಕ್ ಮಾಡಲಾದ ಲೇಖನವು ಹೆಚ್ಚಿನ ಮಾಹಿತಿಯ ವಿಭಾಗದಲ್ಲಿರುತ್ತದೆ. ಇದರ ಮೇಲೆ ಕ್ಲಿಕ್ ಮಾಡಿದರೆ ನಿಮಗೆ ಪರಿಪೂರ್ಣ ಸುದ್ದಿಯನ್ನ ತಿಳಿದುಕೊಳ್ಳುವುದಕ್ಕೆ ಸಾಧ್ಯವಾಗಲಿದೆ. ಇದರಿಂದ ತಪ್ಪು ಮಾಹಿತಿ ಮತ್ತು ನಕಲಿ ಸುದ್ದಿಗಳನ್ನು ಎದುರಿಸಲು ಉತ್ತಮ ಕ್ರಮವಾಗಿದ್ದು, ಜನರಿಗೆ ತಪ್ಪು ಸಂದೇಶ ನೀಡುವುದನ್ನ ತಪ್ಪಿಸಬಹುದಾಗಿದೆ.


Click it and Unblock the Notifications








