ಇನ್‌ಸ್ಟಾಗ್ರಾಮ್‌ನ ಈ ಹೊಸ ಫೀಚರ್ಸ್‌ ನಿಮ್ಮ ಕಾಂಮೆಟ್‌ಗಳನ್ನ ಪಿನ್‌‌ ಮಾಡಲಿದೆ!

|

ಇದು ಸೊಶೀಯಲ್‌ ಮಿಡಿಯಾ ಜಮಾನ. ಎಲ್ಲಿ ಏನೇ ನಡೆದರೂ ಕ್ಷಣಾರ್ಧದಲ್ಲಿಯೇ ಸೊಶೀಯಲ್ ಮೀಡಿಯಾದಲ್ಲಿ ವೈರಲ್‌ ಆಗಿ ಬಿಡುತ್ತದೆ. ಅಷ್ಟರ ಮಟ್ಟಿಗೆ ಇಂದು ಸೊಶೀಯಲ್‌ ಮೀಡಿಯಾ ತನ್ನ ಜನಪ್ರಿಯತೆಯನ್ನ ಹೊಂದಿದೆ. ಸದ್ಯ ಜನಪ್ರಿಯ ಸೊಶೀಯಲ್‌ ಮೀಡಿಯಾ ಅಪ್ಲಿಕೇಶನ್‌ಗಳಾಗಿ ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್‌, ಸೇರಿದಂತೆ ಹಲವು ಅಪ್ಲಿಕೇಶನ್‌ಗಳು ತಮ್ಮ ಜನಪ್ರಿಯತೆಯನ್ನ ಹೊಂದಿವೆ. ಸದ್ಯ ಇನ್‌ಸ್ಟಾಗ್ರಾಮ್‌ ಕೂಡ ತನ್ನದೇ ಆದ ಜನಪ್ರಿಯತೆಯನ್ನ ಹೊಂದಿದ್ದು, ಬಳಕೆದಾರರಿಗೆ ಹಲವು ಅನುಕೂಲಕರ ಫೀಚರ್ಸ್‌ಗಳನ್ನ ಪರಿಚಯಿಸಿದ್ದು, ಇದೀಗ ಮತ್ತೊಂದು ಹೊಸ ಫೀಚರ್ಸ್‌ ಅನ್ನು ಪರಿಚಯಿಸಿದೆ.

ಇನ್‌ಸ್ಟಾಗ್ರಾಮ್‌

ಹೌದು, ಇನ್‌ಸ್ಟಾಗ್ರಾಮ್‌ ತನ್ನ ಬಳಕೆದಾರರು ತಮ್ಮ ಫೋಟೋಗಳು ಮತ್ತು ವೀಡಿಯೊಗಳ ಮೇಲಿನ ಕಾಮೆಂಟ್‌ಗಳಲ್ಲಿ ಕಂಟ್ರೋಲ್‌ ಹೊಂದಲು ಹೊಸ ಮಾದರಿಯ ಫೀಚರ್ಸ್‌ ಅನ್ನು ಪರಿಚಯಿಸಿದೆ. ಇದು ನಿಮ್ಮ ವೀಡಿಯೋ ಕಾಮೆಂಟ್‌ಗಳ ಮೇಲೆ ಹೆಚ್ಚಿನ ನಿಯಂತ್ರಣವನ್ನು ಹೊಂದುವ ನಿಟ್ಟಿನಲ್ಲಿ ಇನ್‌ಸ್ಟಾಗ್ರಾಮ್ ಪಿನ್ ಮಾಡಿದ ಕಾಮೆಂಟ್‌ಗಳ ಫೀಚರ್ಸ್‌ ಅನ್ನು ಪರಿಚಯಿಸಿದೆ. ಇನ್ನು ಈ ಫೀಚರ್ಸ್‌ ಅನ್ನು ಕಳೆದ ಮೇ ತಿಂಗಳಲ್ಲಿಯೇ ಪರೀಕ್ಷಿಸಲು ಇನ್‌ಸ್ಟಾಗ್ರಾಮ್‌ ಮುಂದಾಗಿತ್ತು. ಅಂತಿಮವಾಗಿ ಇದೀಗ ಪರಿಚಯಿಸಿದೆ.

ಇನ್‌ಸ್ಟಾಗ್ರಾಮ್‌

ಇನ್ನು ಈ ಹೊಸ ಫೀಚರ್ಸ್‌ ಇನ್‌ಸ್ಟಾಗ್ರಾಮ್‌ ಬಳಕೆದಾರರಿಗೆ ಪೋಸ್ಟ್‌ನಲ್ಲಿ ಮೂರು ಕಾಮೆಂಟ್‌ಗಳನ್ನು ಥ್ರೆಡ್‌ನ ಮೇಲ್ಭಾಗಕ್ಕೆ ಪಿನ್ ಮಾಡಲು ಅನುಮತಿಸುತ್ತದೆ, ಇದು ಅವರ ಕಾಮೆಂಟ್ ಥ್ರೆಡ್‌ನ ಸ್ವರವನ್ನು ಮಾಡರೇಟ್‌ ಮತ್ತು ಕಂಟ್ರೋಲ್‌ ಮಾಡಲು ಅನುವು ಮಾಡಿಕೊಡುತ್ತದೆ. ಸದ್ಯ ಇನ್‌ಸ್ಟಾಗ್ರಾಮ್ ತನ್ನ ಬಳಕೆದಾರರಿಗೆ "ಸಕಾರಾತ್ಮಕವಾದ ಸಂಭಾಷಣೆಯನ್ನು ಮತ್ತು ಪ್ರೋತ್ಸಾಹಿಸಲು ಸುಲಭವಾದ ಮಾರ್ಗವನ್ನು" ಒದಗಿಸಲು ಈ ಮೂಲಕ ಬಯಸಿದೆ ಎಂದು ಇನ್‌ಸ್ಟಾಗ್ರಾಮ್‌ ಹೇಳಿದೆ.

ಇನ್‌ಸ್ಟಾಗ್ರಾಮ್

ಅಲ್ಲದೆ ನಿಮಗೆಲ್ಲಾ ತಿಳಿದಿರುವ ಹಾಗೇ ಇನ್‌ಸ್ಟಾಗ್ರಾಮ್‌ನಲ್ಲಿ ನಿವು ಮಾಡಲಿಚ್ಚಿಸುವ ಟ್ಯಾಗ್‌ ಇರಬಹುದು, ಇಲ್ಲವೇ ಯಾವುದೇ ಉಲ್ಲೇಖಗಳಿರಬಹುದು ಇದನ್ನು ಕುರಿತು ಕೆಲವೊಮ್ಮೆ ನಕರಾತ್ಮಕ ಕಾಮೆಂಟ್‌ಗಳು ಕೂಡ ಬರಬಹುದು. ಇಂತಹ ಸಮಯದಲ್ಲಿ ಇದನ್ನ ಕಂಟ್ರೋಲ್‌ ಮಾಡುವ ಅವಕಾಶವನ್ನ ಇನ್‌ಸ್ಟಾಗ್ರಾಮ್‌ ನೀಡಿದೆ.ಇದರಿಂದ ನಿಮ್ಮನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಯಾರು ಟ್ಯಾಗ್ ಮಾಡಬಹುದು ಅಥವಾ ಪ್ರಸ್ತಾಪಿಸಬಹುದು ಎಂಬುದನ್ನು ನಿರ್ವಹಿಸಲು ನಿಮಗೆ ಅನುವು ಮಾಡಿಕೊಡುತ್ತದೆ. ನೀವು ಎಲ್ಲರನ್ನು ಬಯಸುತ್ತೀರಾ, ಅಥವಾ ಕೆಲವೇ ಜನರನ್ನು ಮಾತ್ರ ನೀವು ಅನುಸರಿಸುತ್ತೀರಿ ಅಥವಾ ಯಾರೂ ನಿಮ್ಮನ್ನು ಕಾಮೆಂಟ್, ಶೀರ್ಷಿಕೆ ಅಥವಾ ಕಥೆಯಲ್ಲಿ ಟ್ಯಾಗ್ ಮಾಡಲು ಅಥವಾ ಉಲ್ಲೇಖಿಸಲು ಸಾಧ್ಯವಾಗದಂತೆ ಕೂಡ ನೀವು ಇದರಿಂದ ಕಂಟ್ರೋಲ್‌ ಮಾಡಬಹುದಾಗಿದೆ.

ಪೋಸ್ಟ್‌

ಸದ್ಯ ಈ ಹೊಸ ಫೀಚರ್ಸ್‌ನಿಂದಾಗಿ ಪೋಸ್ಟ್‌ನ ಲೇಖಕರಿಗೆ ಕಾಮೆಂಟ್‌ಗಳ ರೀತಿ ನೀತಿಯನ್ನ ಕಂಟ್ರೋಲ್‌ ಮಾಡುವ ಅವಕಾಶವಿದ್ದು, ಆತ ಉತ್ತಮವಾದ ಕಾಮೆಂಟ್‌ಗಳಿಗೆ ಮಾತ್ರ ಅವಕಾಶ ನೀಡಬಹುದಾಗಿದೆ.negative ಮತ್ತು ನಿಂದನಾತ್ಮಕ ಕಾಮೆಂಟ್‌ಗಳನ್ನು ಕೆಳಭಾಗದಲ್ಲಿ ಇಡುತ್ತದೆ. ಅಲ್ಲದೆ ಕಾಮೆಂಟ್ ಅನ್ನು ಪಿನ್ ಮಾಡಲು ಬಳಕೆದಾರರು ಎಡಕ್ಕೆ ಸ್ವೈಪ್ ಮಾಡಬೇಕು ಮತ್ತು ವರದಿ ಮಾಡಲು, ಡಿಲೀಟ್‌ ಮಾಡುವ ಆಯ್ಕೆಗಳನ್ನು ಬಹಿರಂಗಪಡಿಸಬೇಕಾಗುತ್ತದೆ. ಈ ಆಯ್ಕೆಗಳ ಎಡಭಾಗದಲ್ಲಿ ಇರಿಸಲಾಗಿರುವ ಪುಷ್ಪಿನ್ ಐಕಾನ್ ಕಾಮೆಂಟ್‌ಗಳನ್ನು ಪಿನ್ ಮಾಡಲು ನಿಮಗೆ ಅನುವು ಮಾಡಿಕೊಡುತ್ತದೆ.

Most Read Articles
Best Mobiles in India

English summary
Instagram has now introduced a new feature of pinned comments, new feature allows users to pin three comments on a post to the top of a thread.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X