Instagram: ಹೋಮ್‌ಸ್ಕ್ರೀನ್‌ನಿಂದ ಐಜಿಟಿವಿ(IGTV) ಬಟನ್‌ ರಿಮೋವ್‌!

|

ಜನಪ್ರಿಯ ಸೊಶೀಯಲ್‌ ಮೀಡಿಯಾ ಆಪ್ಲಿಕೇಶನ್‌ಗಳಲ್ಲಿ ಒಂದಾದ ಇನ್‌ಸ್ಟಾಗ್ರಾಮ್‌ ಈಗಾಗ್ಲೆ ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ಹೊಸ ಫೀಚರ್ಸ್ ಗಳನ್ನ ಪರಿಚಯಿಸುತ್ತಲೇ ಇದೆ. ಆದರೆ ಇದೀಗ ತನ್ನ ಹೋಮ್‌ಸ್ಕ್ರೀನ್‌ನಲ್ಲಿನ ಐಜಿಟಿವಿ(IGTV) ಚಿಹ್ನೆಯನ್ನ ರಿಮೋವ್‌ ಮಾಡಿದೆ. ಹೆಚ್ಚಿನ ಬಳಕೆದಾರರು ಇನ್‌ಸ್ಟಾಗ್ರಾಮ್‌ನಿಂದ ಐಜಿಟಿವಿ ಆಯ್ಕೆಯನ್ನ ಬಳಸುತ್ತಿಲ್ಲ ಎಂಬ ಕಾರಣ ನೀಡಿ ರಿಮೋವ್‌ ಮಾಡಿದೆ.

ಹೌದು

ಹೌದು ಜನಪ್ರಿಯ ಸೊಶೀಯಲ್‌ ಮೀಡಿಯಾ ಆಪ್‌ ಇನ್‌ಸ್ಟಾಗ್ರಾಮ್‌ ತನ್ನ ಹೋಮ್‌ಸ್ಕ್ರೀನ್‌ ನಿಂದ ಐಜಿಟಿವಿ ಬಟನ್‌ ಅನ್ನು ರಿಮೋವ್‌ ಮಾಡಿದೆ. ಬಳಕೆದಾರರನ್ನ ಆಕರ್ಷಿಸುವಲ್ಲಿ ಈ ಬಟನ್‌ ವಿಫಲವಾಗಿದೆ ಎಂಬ ಕಾರಣ ನೀಡಿ ಇನ್‌ಸ್ಟಾಗ್ರಾಮ್‌ ಇದನ್ನ ರಿಮೋವ್‌ ಮಾಡಿದೆ. ಹಾಗೇ ನೋಡಿದ್ರೆ ಇದೇ ಇನ್‌ಸ್ಟಾಗ್ರಾಮ್‌ ತನ್ನ ಸ್ವತಂತ್ರ ಐಜಿಟಿವಿ ಅಪ್ಲಿಕೇಶನ್ ಅನ್ನು 2018 ರ ಜೂನ್‌ನಲ್ಲಿ ಪ್ರಾರಂಭಿಸಿತ್ತು. ಇದರ ಮೂಲಕ ಬಳಕೆದಾರರು ತಮ್ಮ ವಿಡಿಯೋಗಳನ್ನ ಹಂಚಿಕೊಳ್ಳಬಹುದಾಗಿತ್ತು.

ಆದರೆ

ಆದರೆ ಬಳಕೆದಾರರು ಇದೀಗ ಇನ್‌ಸ್ಟಾಗ್ರಾಮ್‌ಗಿಂತ ಹೆಚ್ಚಾಗಿ ಐಜಿಟಿವಿ ಆಪ್‌ ಮೂಲಕ ಹೆಚ್ಚಿನ ಜನರು ಐಜಿಟಿವಿ ವಿಷಯವನ್ನು ಹುಡುಕುತ್ತಿದ್ದಾರೆ ಎಂದು ಇನ್‌ಸ್ಟಾಗ್ರಾಮ್‌ ಅಮೆರಿಕನ್‌ ಆಣಲೈನ್‌ ಪಬ್ಲಿಷರ್‌ ಟೆಕ್ ಕ್ರಂಚ್‌ಗೆ ತಿಳಿಸಿದೆ. ಆದ್ದರಿಂದ, ಮುಖಪುಟದ ಪರದೆಯ ಮೇಲಿನ ಬಲ ಮೂಲೆಯಲ್ಲಿರುವ ಪ್ರತ್ಯೇಕ ಐಕಾನ್ ಅನ್ನು ತೆಗೆದುಹಾಕಲಾಗಿದೆ ಎಂದು ಹೇಳಲಾಗ್ತಿದೆ. ಇನ್ನು ಟೆಕ್‌ ಕ್ರಂಚ್‌ ವರದಿ ಪ್ರಕಾರ 1 ಬಿಲಿಯನ್‌ಗಿಂತಲೂ ಹೆಚ್ಚು ಇನ್‌ಸ್ಟಾಗ್ರಾಮ್ ಬಳಕೆದಾರರಲ್ಲಿ 7 ಮಿಲಿಯನ್‌ ಬಳಕೆದಾರರಿಂದ ಐಜಿಟಿವಿ ಆಪ್‌ ಡೌನ್‌ಲೋಡ್ ಮಾಡಲಾಗಿದೆ. ಹಾಗೇ ನೋಡಿದ್ರೆ ಟಿಕ್‌ಟಾಕ್‌ಅನ್ನು ಜಾಗತಿಕವಾಗಿ 1.15 ಶತಕೋಟಿ ಬಾರಿ ಡೌನ್‌ಲೋಡ್ ಮಾಡಲಾಗಿದೆ.

ಇನ್‌ಸ್ಟಾಗ್ರಾಮ್

ಇದಲ್ಲದೆ ಇನ್‌ಸ್ಟಾಗ್ರಾಮ್ ಬಳಕೆದಾರರು ತಮ್ಮ ಐಜಿಟಿವಿ ವೀಡಿಯೊಗಳಿಂದ ನೇರವಾಗಿ ಹಣವನ್ನು ಸಂಪಾದಿಸಲು ಮುಕ್ತ ಮಾರ್ಗವಿದೆ. ಆದರೆ ಯೂಟ್ಯೂಬ್ ಅಥವಾ ಫೇಸ್‌ಬುಕ್ ನಂತೆ ಜಾಹೀರಾತು ಆದಾಯ ಹಂಚಿಕೆಯನ್ನು ಇನ್‌ಸ್ಟಾಗ್ರಾಮ್‌ ಬಳಕೆದಾರರು ಪಡೆಯಲು ಸಾಧ್ಯವಿಲ್ಲ ಅನ್ನೊದನ್ನ ಟೆಕ್‌ ಕ್ರಂಚ್‌ ಹೇಳಿದೆ. ಇನ್ನು ದೀರ್ಘ-ರೂಪದ ವೀಡಿಯೊಗಳನ್ನು ಸುಲಭವಾಗಿ ಪೋಸ್ಟ್ ಮಾಡಲು ಕೂಡ ಐಜಿಟಿವಿ ಆಪ್ಲಿಕೇಶನ್‌ನಲ್ಲಿ ಇನ್‌ಸ್ಟಾಗ್ರಾಮ್‌ ಅವಕಾಶ ನೀಡಿತ್ತು.

ಮೂಲಕ

ಈ ಮೂಲಕ ಹೆಚ್ಚಿನ ಬಳಕೆದಾರರನ್ನು ಸಕ್ರಿಯಗೊಳಿಸಲು, ಇನ್‌ಸ್ಟಾಗ್ರಾಮ ಪ್ರಯತ್ನ ಮಾಡಿತ್ತು. ಅಷ್ಟೇ ಅಲ್ಲ ಐಜಿಟಿವಿ ಫೀಡ್ ವೀಡಿಯೊ ಅಪ್‌ಲೋಡರ್‌ನಿಂದಲೇ ಐಜಿಟಿವಿ ವೀಡಿಯೊಗಳನ್ನು ಪೋಸ್ಟ್ ಮಾಡಲು ಸಹ ಬಳಕೆದಾರರಿಗೆ ಅವಕಾಶ ನೀಡುವ ಫೀಚರ್ಸ್‌ ಅನ್ನು ಸಹ ನೀಡಿತ್ತು. ಆದರೆ ಇಷ್ಟೆಲ್ಲಾ ಫೀಚರ್ಸ್‌ಗಳನ್ನ ನೀಡಿದ್ದರೂ ಸಹ ಇತ್ತೀಚಿನ ದಿನಗಳಲ್ಲಿ ಇದೊಂದು ವ್ಯರ್ಥ ಪ್ರಯತ್ನ ಅನ್ನೊದನ್ನ ಇನ್‌ಸ್ಟಾಗ್ರಾಮ್‌ ಕಂಡುಕೊಂಡಿದ್ದು, ಇದೇ ಕಾರಣಕ್ಕೆ ಇನ್‌ಸ್ಟಾಗ್ರಾಮ್‌ ತನ್ನ ಹೋಮ್‌ ಸ್ಕ್ರೀನ್‌ನಿಂದ ಐಜಿಟಿವಿ ಬಟನ್‌ ಅನ್ನ ರಿಮೋವ್‌ ಮಾಡಿದೆ. ಈ ಮೂಲಕ ಇನ್ಮುಂದೆ ಇನ್‌ಸ್ಟಾಗ್ರಾಮ್‌ನ ಸ್ವಾಗತ ಪರದೆಯಲ್ಲಿ ಐಜಿಟಿವಿ ಬಟನ್‌ ಕಾಣೊದಿಲ್ಲ.

Best Mobiles in India

English summary
Instagram recently added a new feature that allows users to post IGTV videos right from the main app's IGTV feed video uploader.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X