Home
ಸುದ್ದಿಜಾಲ

ಯೂಟ್ಯೂಬ್ ಮೀರಿಸುವ ಆಪ್: ಫೇಸ್ ಬುಕ್ ನಿಂದ ಹೊಸ ಪ್ರಯತ್ನ..!

By Srinidhi

ಸೋಶಿಯಲ್ ಮೀಡಿಯಾ ದೈತ್ಯ ಫೇಸ್ ಬುಕ್ ತನ್ನ ಒಡೆತನಕ್ಕೆ ಸೇರಿಕೊಂಡಿರುವ ಆಪ್ ಗಳಲ್ಲಿ ಸಾಕಷ್ಟು ಬದಲಾವಣೆಯನ್ನು ಮಾಡುತ್ತಿದ್ದು, ಹೆಚ್ಚಿನ ಆದಾಯದ ನಿರೀಕ್ಷೆಯೊಂದಿಗೆ ಬಳಕೆದಾರರಿಗೆ ಹೊಸ ಹೊಸ ಮಾದರಿಯ ಸೇವೆಯನ್ನು ನೀಡುತ್ತಿದೆ. ಇದೇ ಮಾದರಿಯಲ್ಲಿ ಹೊಸದಾಗಿ IGTV ಎನ್ನುವ ಹೊಸ ಸೇವೆಯನ್ನು ಪ್ರಾರಂಭಿಸಿಲು ಮುಂದಾಗಿದ್ದು, ಇದು ವಿಡಿಯೋ ಸೇವೆಯಾಗಿದೆ.

ಯೂಟ್ಯೂಬ್ ಮೀರಿಸುವ ಆಪ್: ಫೇಸ್ ಬುಕ್ ನಿಂದ ಹೊಸ ಪ್ರಯತ್ನ..!

ಸದ್ಯ ಇನ್ ಸ್ಟಾಗ್ರಾಮ್ ನಲ್ಲಿ ಕಾಣಿಸಿಕೊಂಡಿರುವ ಸೇವೆಯೂ ಮುಂದೇ ಹೊಸ ಆಪ್ ಆಗಿ ಕಾಣಿಸಿಕೊಳ್ಳಲಿದೆ. ಯೂಟ್ಯೂಬ್ ಸೇರಿದಂತೆ ವಿವಿಧ ಮೂಲಗಳಿಂದ ಇದು ವಿಡಿಯೋಗಳನ್ನು ಪಡೆದುಕೊಂಡು ಒಂದೇ ವೇದಿಕೆಯಲ್ಲಿ ಬಳಕೆದಾರರಿಗೆ ನೀಡಲಿದೆ. ಇದರಿಂದಾಗಿ ವಿಡಿಯೋ ಹುಡುಕಾಟಕ್ಕಾಗಿ ಮತ್ತೊಂದು ಹೊಸ ವೇದಿಕೆಯೂ ಲಭ್ಯವಾಗಿದೆ ಎನ್ನಲಾಗಿದೆ. ಈಗಾಗಲೇ ಹಲವು ಹೊಸತನಗಳಿಗೆ ಸಾಕ್ಷಿಯಾಗಿರುವ ಇನ್ ಸ್ಟಾಗ್ರಾಮ್ ಈಗ ಮತ್ತೊಂದು ಪರೀಕ್ಷೆಗೆ ಸಿದ್ಧವಾಗಿದೆ.

ಯೂಟ್ಯೂಬ್ ಗೆ ನಷ್ಟ

ಯೂಟ್ಯೂಬ್ ಗೆ ನಷ್ಟ

ಈಗಾಗಲೇ ಯೂಟ್ಯೂಬ್ ವಿಡಿಯೋಗಳಿಗೆ ಸೆಡ್ಡು ಹೊಡೆಯುವ ಮಾದರಿಯಲ್ಲಿ ಫೇಸ್ ಬುಕ್ ವಿಡಿಯೋಗಳು ಕಾರ್ಯನಿರ್ವಹಿಸುತ್ತಿವೆ. ಇದೇ ಮಾದರಿಯಲ್ಲಿ IGTV ಕಾರ್ಯನಿರ್ವಹಿಸಲಿದ್ದು, ಇದು ವಿಡಿಯೋ ಸಾಗರವಾಗಲಿದ್ದು, ಬಳಕೆದಾರರಿಗೆ ಹೆಚ್ಚಿನ ಕಂಟೆಂಟ್ ನೀಡಿದೆ. ಇದರಿಂದಾಗಿ ಯೂಟ್ಯೂಬ್ ಕಡೆಗೆ ಬಳಕೆದಾರರು ಹೆಚ್ಚಿನ ರೀತಿಯಲ್ಲಿ ಆಕರ್ಷಿತರಾಗುವುದನ್ನು ತಪ್ಪಿಸಿಸಬಹುದಾಗಿದೆ.

ಭಾರೀ ಲಾಭ

ಭಾರೀ ಲಾಭ

ಫೇಸ್ ಬುಕ್ ಹೊಸದಾಗಿ ಶುರು ಮಾಡಲಿರುವ IGTVಯಿಂದಾಗಿ ಹೆಚ್ಚಿನ ಲಾಭವನ್ನು ಮಾಡಬಹುದಾಗಿದೆ. ಇದರಲ್ಲಿ ಬಳಕೆದಾರರಿಗೆ ಹೆಚ್ಚಿನ ವಿಡಿಯೋ ದೊರೆಯುವುದಲ್ಲದೇ ಹಾರಿಸಾಂಟಲ್ ವಿಡಿಯೋ ಹೆಚ್ಚಾಗಿ ಕಾಣಿಸಿಕೊಳ್ಳಲಿದ್ದು, ಹೊಸ ಮಾದರಿಯಲ್ಲಿ ಜಾಹೀರಾತಿನಿಂದ ಲಾಭವನ್ನು ಮಾಡಿಕೊಳ್ಳಲು ಮುಂದಾಗಿದೆ.

ಎಲ್ಲಾ ವಿಡಿಯೋಗಳು

ಎಲ್ಲಾ ವಿಡಿಯೋಗಳು

IGTV ಪ್ಲಾಟ್ ಫಾರ್ಮ್ ನಲ್ಲಿ ಬಳಕೆದಾರರಿಗೆ ಎಲ್ಲಾ ಮಾದರಿಯ ವಿಡಿಯೋಗಳು ಬಳಕೆಗೆ ದೊರೆಯಲಿದೆ. ಇದರಲ್ಲಿ ಯೂಟ್ಯೂಬ್, ಸ್ನಾಪ್ ಚಾಟ್ ಸೇರಿದಂತೆ ವಿವಿಧ ಮೂಲಗಳಿಂದ ವಿಡಿಯೋಗಳು ಲಭ್ಯವಾಗಲಿದ್ದು, ಬಳಕೆದಾರರು ತನ್ಮ ಸ್ವಂತ ಕಂಟೆಂಟ್ ಗಳನ್ನು ಹಾಕುವ ಅವಕಾಶವನ್ನು ಪಡೆದುಕೊಂಡಿದ್ದಾರೆ.

ಹೊಸ ವಿಧಾನ

ಹೊಸ ವಿಧಾನ

ಮಾರುಕಟ್ಟೆಯಲ್ಲಿ ವಿಡಿಯೋ ನೋಡುವರ ಸಂಖ್ಯೆಯೂ ಹೆಚ್ಚಾಗಿದ್ದು, ಈ ಹಿನ್ನಲೆಯಲ್ಲಿ ವಿಡಿಯೋ ಆಡ್ ಗಳು ಹಾಗೂ ಕಂಟೆಟ್ ಗಳು ಮಾರುಕಟ್ಟೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಖ್ಯಾತಿಯನ್ನು ಪಡೆದುಕೊಂಡಿದೆ. ಈ ಹಿನ್ನಲೆಯಲ್ಲಿ ವಿಡಿಯೋ ಮಾದರಿಯ ಎಲ್ಲಾ ಕಂಟೆಂಟ್ ಗಳು ಬೆಲೆ ಪಡೆದುಕೊಂಡಿರುವ ಹಿನ್ನಲೆಯಲ್ಲಿ ಫೇಸ್ ಬುಕ್ ಸಹ ವಿಡಿಯೋ ಕಡೆಗೆ ಹೆಚ್ಚಿನ ಗಮನವನ್ನು ಹರಿಸುತ್ತಿದೆ ಎನ್ನುವ ಮಾತು ಕೇಳಿ ಬಂದಿದೆ.

Best Mobiles in India

English summary
Instagram's New Video App 'IGTV' Goes Live. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+