ಶೀಘ್ರದಲ್ಲೇ ಇನ್‌ಸ್ಟಾಗ್ರಾಮ್‌ನಿಂದ ಮತ್ತೊಂದು ಹೊಸ ಫೀಚರ್ಸ್‌ ಪರಿಚಯ!

|

ಇದು ಟೆಕ್ನಾಲಜಿ ಜಮಾನ. ಈಗ ಏನಿದ್ದರೂ ಸೊಶೀಯಲ್‌ ಮಿಡಿಯಾಗಳದ್ದೇ ಆರ್ಭಟ. ಜಗತ್ತಿನಲ್ಲಿ ಏನೇ ನಡೆದರೂ ಕ್ಷಣಾರ್ಧದಲ್ಲಿ ಸೊಶೀಯಲ್‌ ಮೀಡಿಯಾದಲ್ಲಿ ಸುದ್ದಿಯಾಗುತ್ತೇ, ಟ್ರೆಂಡ್‌ ಆಗುತ್ತೇ ಹಾಗೇಯೇ ಸಿಕ್ಕಾಪಟ್ಟೆ ವೈರಲ್‌ ಕೂಡ ಆಗುತ್ತೆ. ಅಷ್ಟರ ಮಟ್ಟಿಗೆ ಸೊಶೀಯಲ್‌ ಮೀಡಿಯಾ ಇಂದು ಇಡೀ ಜಗತ್ತನ್ನೇ ಆವರಿಸಿಕೊಂಡಿದೆ. ಇನ್ನು ನಿಮಗೆಲ್ಲಾ ತಿಳಿದಿರುವಂತೆ ಫೇಸ್‌ಬುಕ್‌, ಟ್ವಿಟ್ಟರ್, ಯುಟ್ಯೂಬ್‌, ಇನ್‌ಸ್ಟಾಗ್ರಾಮ್‌ ನಂತಹ ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ಗಳು ಇಂದು ಸಾಕಷ್ಟು ಜನಪ್ರಿಯತೆಯನ್ನ ಹೊಂದಿವೆ. ಇನ್ನು ಜನಪ್ರಿಯ ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಇನ್‌ಸ್ಟಾಗ್ರಾಮ್‌ ಕೂಡ ಒಂದಾಗಿದ್ದು ತನ್ನ ಬಳಕೆದಾರರಿಗೆ ಹೊಸ ಹೊಸ ಫೀಚರ್ಸ್‌ಗಳನ್ನ ಪರಿಚಯಿಸುತ್ತಲೇ ಬಂದಿದೆ.

ಇನ್‌ಸ್ಟಾಗ್ರಾಮ್

ಹೌದು, ಜನಪ್ರಿಯ ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ ಆಗಿ ಗುರುತಿಸಿಕೊಂಡಿರುವ ಇನ್‌ಸ್ಟಾಗ್ರಾಮ್ ತನ್ನ ಬಳಕೆದಾರರಿಗೆ ಹೊಸ ಮಾದರಿಯ ಫೀಚರ್ಸ್‌ಗಳನ್ನ ಪರಿಚಯಿಸುತ್ತಲೇ ಬಂದಿದೆ. ಸದ್ಯ ಇದೀಗ ತನ್ನ ಸ್ವತಂತ್ರ ಮೆಸೇಜಿಂಗ್ ಅಪ್ಲಿಕೇಶನ್ ಥ್ರೆಡ್‌ಗಳಿಗಾಗಿ ವೀಡಿಯೊ ನೋಟ್‌ ಎಂಬ ಹೊಸ ಫೀಚರ್ಸ್‌ ಅನ್ನು ಪರಿಚಯಿಸಲು ಸಿದ್ದತೆ ನಡೆಸಿದೆ. ಇದು ಬಳಕೆದಾರರ ಆಪ್ತ ಅಥವಾ ಸಣ್ಣ ವಲಯದೊಂದಿಗೆ ಸಂಪರ್ಕದಲ್ಲಿರಲು ಸಹಾಯ ಮಾಡುತ್ತದೆ ಎಂದು ಹೇಳಲಾಗ್ತಿದೆ ಅಷ್ಟಕ್ಕೂ ಈ ಫೀಚರ್ಸ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿರಿ.

ಇನ್‌ಸ್ಟಾಗ್ರಾಮ್‌

ಇನ್‌ಸ್ಟಾಗ್ರಾಮ್‌ ತನ್ನ ಬಳಕೆದಾರರಿಗೆ ವೀಡಿಯೋ ನೋಟ್‌ ಅನ್ನು ಪರಿಚಯಿಸಲು ಸಿದ್ದತೆ ನಡೆಸಿದೆ. ಇನ್ನು ಈ ಹೊಸ ಫಿಚರ್ಸ್‌ ವೀಡಿಯೊಗಳಲ್ಲಿನ ಆಡಿಯೊವನ್ನು ಸ್ವಯಂಚಾಲಿತವಾಗಿ ಲೈವ್ ಶೀರ್ಷಿಕೆಗಳಿಗೆ ಬದಲಾಯಿಸುತ್ತದೆ. ಇದನ್ನು ರೆಕಾರ್ಡಿಂಗ್‌ನೊಂದಿಗೆ ಪ್ಲೇ ಮಾಡಲಾಗುತ್ತದೆ. ಇದು ಶ್ರವಣ ವಿಕಲಾಂಗತೆ ಹೊಂದಿರುವ ಬಳಕೆದಾರರಿಗೆ ವಿಶೇಷವಾಗಿ ಸಹಾಯಕವಾಗಲಿದೆ ಎನ್ನಲಾಗ್ತಿದೆ. ಜೊತೆಗೆ ಥ್ರೆಡ್ಸ್ ಬಳಕೆದಾರರು ತಮ್ಮ ಸ್ನೇಹಿತರು ಏನನ್ನು ಯಾವುದನ್ನ ಹೇಳಲು ಬಯಸಿದ್ದಾರೆ ಅನ್ನೊದನ್ನ ಅರ್ಥಮಾಡಿಕೊಳ್ಳಲು ಮತ್ತು ಸ್ಪಷ್ಟವಾಗಿ ಪ್ರತಿಕ್ರಿಯಿಸಲು ಇದು ಸಹಾಯ ಮಾಡಲಿದೆ.

ಇನ್‌ಸ್ಟಾಗ್ರಾಮ್

ಇನ್ನು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಇನ್‌ಸ್ಟಾಗ್ರಾಮ್ ಬಳಕೆದಾರರಿಗಾಗಿ ಸ್ನ್ಯಾಪ್-ಕ್ಲೋನ್ ಆಪ್ ಅನ್ನು ಬಿಡುಗಡೆ ಮಾಡಿತು. ಇದರಿಂದ ಸ್ನೇಹಿತರೊಂದಿಗೆ ಫೋಟೋಗಳು, ವೀಡಿಯೊಗಳು, ಸಂದೇಶಗಳು, ಕಥೆಗಳು ಮತ್ತು ಹೆಚ್ಚಿನದನ್ನು ಹಂಚಿಕೊಳ್ಳಲು ಥ್ರೆಡ್‌ಗಳು ಅವಕಾಶವನ್ನ ನೀಡಿತ್ತು. ಅಲ್ಲದೆ ಥ್ರೆಡ್‌ಗಳಲ್ಲಿ ಯಾರು ನಿಮ್ಮನ್ನು ತಲುಪಬಹುದು ಎಂಬುದರ ಮೇಲೆ ಸಹ ನೀವು ನಿಯಂತ್ರಣವನ್ನ ಹೊಂದಬಹುದಾಗಿದೆ. ಜೊತೆಗೆ ಹೆಚ್ಚು ಪ್ರಾಮುಖ್ಯತೆ ಹೊಂದಿರುವ ಜನರ ಸುತ್ತಲಿನ ಅನುಭವವನ್ನು ನೀವು ಗ್ರಾಹಕೀಯಗೊಳಿಸಬಹುದು ಎಂದು ಸಹ ಇನ್‌ಸ್ಟಾಗ್ರಾಮ್‌ ಹೇಳಿಕೊಂಡಿದೆ.

ಇನ್‌ಸ್ಟಾಗ್ರಾಮ್‌

ಇದಲ್ಲದೆ ಇನ್‌ಸ್ಟಾಗ್ರಾಮ್‌ನಲ್ಲಿ ಆಪ್ತ ಸ್ನೇಹಿತರಿಗೆ ಸಂದೇಶ ಕಳುಹಿಸಲು ನೀವು ಥ್ರೆಡ್‌ಗಳನ್ನು ಬಳಸಬಹುದು ಮತ್ತು ನೀವು ಅವರಿಗೆ ಮೀಸಲಾದ ಇನ್‌ಬಾಕ್ಸ್ ಮತ್ತು ಅಧಿಸೂಚನೆಗಳನ್ನು ಸಹ ನೀಡಬಹುದಾಗಿದೆ. ಜೊತೆಗೆ ಥ್ರೆಡ್ಸ್ ಅಪ್ಲಿಕೇಶನ್ ನಲ್ಲಿ ನೇರವಾಗಿ ಕ್ಯಾಮೆರಾ ತೆರೆಯುವಂತೆ ಮಾಡವುದು ಮತ್ತು ಶಾರ್ಟ್‌ಕಟ್‌ಗಳನ್ನು ಸೇರಿಸಲು ಸಹ ನಿಮಗೆ ಅವಕಾಶವನ್ನ ನೀಡಲಾಗಿದೆ. ಇದ್ದರಿಂದ ನೀವು ಏನು ಮಾಡುತ್ತಿದ್ದೀರಿ ಎಂಬುದನ್ನು ಕೇವಲ ಎರಡು ಟ್ಯಾಪ್‌ಗಳಲ್ಲಿ ಹಂಚಿಕೊಳ್ಳಬಹುದಾಗಿದೆ.

Best Mobiles in India

English summary
Threads lets you share photos, videos, messages, Stories and more with Instagram close friends list.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X