Just In
Don't Miss
- Finance
ಹಳೆಯ 100 ರೂಪಾಯಿ ನೋಟುಗಳನ್ನು ಆರ್ಬಿಐ ಹಿಂಪಡೆಯುವ ಸಾಧ್ಯತೆ!
- Automobiles
ವಿವಿಧ ಕಾರು ಮಾದರಿಗಳ ಬೆಲೆ ಹೆಚ್ಚಳ ಮಾಡಿದ ಟಾಟಾ ಮೋಟಾರ್ಸ್
- Lifestyle
ನಿಮ್ಮ ಡಲ್ ಸ್ಕಿನ್ ಹೋಗಲಾಡಿಸಲು ಸುಲಭವಾದ ಮನೆಮದ್ದು ಇಲ್ಲಿದೆ
- Sports
ಐಪಿಎಲ್ 2021: ಮತ್ತೆ ಕಣಕ್ಕಿಳಿಯಲು ವೇಗಿ ಎಸ್ ಶ್ರೀಶಾಂತ್ ಸಜ್ಜು
- News
ನೇತಾಜಿ 125ನೇ ಜನ್ಮದಿನ; ಪರಾಕ್ರಮ ಸ್ಮರಿಸಿ ಗೌರವ ಸಲ್ಲಿಸಿದ ಪ್ರಧಾನಿ ಮೋದಿ
- Movies
ಅಕ್ಷಯ್ ಕುಮಾರ್ ನಟನೆಯ 'ಬಚ್ಚನ್ ಪಾಂಡೆ' ಸಿನಿಮಾದ ರಿಲೀಸ್ ಡೇಟ್ ಅನೌನ್ಸ್
- Education
RITES Limited Recruitment 2021: ವಿವಿಧ 9 ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮೂರು ಹೊಸ ಫೀಚರ್ಸ್ ಪರಿಚಯಿಸಿದ ಇನ್‌ಸ್ಟಾಗ್ರಾಮ್!
ಜನಪ್ರಿಯ ಸೊಶೀಯಲ್ ಮೀಡಿಯಾ ಆಪ್‌ಗಳಲ್ಲಿ ಒಂದಾದ ಇನ್‌ಸ್ಟಾಗ್ರಾಮ್ ತನ್ನ ಬಳಕೆದಾರರಿಗೆ ಸದಾ ಹೊಸ ಮಾದರಿಯ ಫೀಚರ್ಸ್‌ಗಳನ್ನ ಪರಿಚಯಿಸುತ್ತಲೇ ಬಂದಿದೆ. ಸದ್ಯ ಐಫೋನ್ ಹಾಗೂ ಆಂಡ್ರಾಯ್ಡ್‌ಬಳಕೆದಾರರಿಗೆ ಇನ್‌ಸ್ಟಾಗ್ರಾಮ್ ಮೂರು ಹೊಸ ಫೀಚರ್ಸ್‌ಗಳನ್ನ ಪರಿಚಯಿಸಿದ್ದು, ಬಳಕೆದಾರರು ವಿಭಿನ್ನ ಶೈಲಿಯ ಸ್ಟೋರಿಗಳನ್ನ ಶೇರ್ ಮಾಡಲು ಈ ಫೀಚರ್ಸ್‌ಗಳು ಉಪಯುಕ್ತವಾಗಿವೆ. ಶೇರ್ ಮಾಡಲು ಬಯಸುವ ಸ್ಟೋರಿಗಳನ್ನ ಈ ಫೀಚರ್ಸ್‌ಗಳ ಮೂಲಕ ಟ್ರಿಮ್ ಮಾಡಬಹುದಾಗಿದೆ.

ಹೌದು ಫೇಸ್‌ಬುಕ್ ಒಡೆತನದ ಇನ್‌ಸ್ಟಾಗ್ರಾಮ್ ಸ್ಲೊಮೋ, ಎಕೋ ಮತ್ತು ಡ್ಯುವೋ, ಫೀಚರ್ಸ್‌ಗಳನ್ನ ಬಳಕೆದಾರರಿಗೆ ಪರಿಚಯಿಸಿದೆ. ಬಳಕೆದಾರರು ತಮ್ಮ ಭಾವನೆಗಳನ್ನ ಹಂಚಿಕೊಳ್ಳಲು ಹಾಗೂ ಇನ್‌ಸ್ಟಾಗ್ರಾಮ್ ಕ್ಯಾಮೆರಾ ಮೂಲಕ ಸ್ನೇಹಿತರ ಜೊತೆ ಮಾಹಿತಿಯನ್ನ ಹಂಚಿಕೊಳ್ಳಲು ಈ ಫೀಚರ್ಸ್ಗಳು ಇನ್ನಷ್ಟು ಉಪಯುಕ್ತವಾಗಿದೆ. ಇನ್‌ಸ್ಟಾಗ್ರಾಮ್‌ನ ಕ್ಯಾಮೆರಾ ಸ್ವರೂಪಗಳಲ್ಲಿ ಬೂಮರಾಂಗ್ ಎಲ್ಲರ ನೆಚ್ಚಿನ ಕ್ಯಾಮೆರಾ ಆಗಿರೊದ್ರಿಂದ ಈ ಮೂರು ಫೀಚರ್ಸ್‌ಗಳು ಬೂಮ್‌ರಾಗ್ ಅನ್ನ ಬಳಸಲು ಹೊಸ ಮಾದರಿಯ ಅವಕಾಶವನ್ನ ಕಲ್ಪಿಸಿದೆ.

ಈ ಹೊಸ ಫೀಚರ್ಸ್‌ಗಳು ಇನ್‌ಸ್ಟಾಗ್ರಾಮ್ ಸ್ಟೋರೀಸ್ ಕ್ಯಾಮೆರಾದಲ್ಲಿರುವ ಬೂಮರಾಂಗ್ ನಲ್ಲಿ ಲಭ್ಯವಿರಲಿದೆ. ಇನ್ನು ಹೆಸರೇ ಸೂಚಿಸುವಂತೆ, ಬೂಮರಾಂಗ್ ವೀಡಿಯೊಗಳನ್ನ ಅವುಗಳ ಮೂಲ ವೇಗದ ಅರ್ಧದಷ್ಟು ನಿಧಾನವಾಗುವಂತೆ ಮಾಡಲು ಸ್ಲೊಮೋ ಫೀಚರ್ಸ್ ಅವಕಾಸ ನೀಡಲಿದೆ. ಈ ಫೀಚರ್ಸ್‌ನ ಮೂಲಕ ಬೂಮ್‌ರಾಗ್‌ನ ವಿಡಿಯೋಗಳನ್ನ ಅಗತ್ಯಕ್ಕೆ ತಕ್ಕಂತೆ ಸ್ಲೋಮೋಷನ್ ವಿಡಿಯೋ ಮಾಡಿ ಶೇರ್ ಮಾಡಬಹುದು.

ಇನ್ನು ವಿಡಿಯೋವನ್ನ ಡಬಲ್ ವಿಡಿಯೋ ಮಾಡುವುದಕ್ಕೆ ಬೂಮರಾಂಗ್ ನಲ್ಲಿ ಎಕೋ ಹಾಗೂ ಡ್ಯುಯೋ ಫೀಚರ್ಸ್ ಅನ್ನ ಪರಿಚಯಿಸಲಾಗಿದ್ದು, ಇದು ನಿಗದಿತ ವಿಡಿಯೋವನ್ನ ಎರಡು ವಿಭಿನ್ನ ಮಾದರಿಯಲ್ಲಿ ಕಾಣುವಂತೆ ಮಾಡಲಿದೆ. ಎರಡೂ ವಿಡಿಯೋಗಳ ವೇಗವರ್ಧನೆ ಸೇರಿದಂತೆ ಸ್ಲೋಮೋ ವಿಡಿಯೋ ಎರಡನ್ನು ಒಂದೇ ಬಾರಿಗೆ ನೋಡುವುದಕ್ಕೆ ಈ ಎರಡು ಫೀಚರ್ಸ್‌ಗಳು ಉಪಯೋಗವಾಗಲಿದೆ.

ಇನ್ನು ಈ ಮೂರು ಫೀಚರ್ಸ್‌ಗಳ ಜೊತೆಗೆ ಬೂಮರಾಂಗ್‌ವಿಡಿಯೋಗಳ ಉದ್ದವನ್ನು ಟ್ರಿಮ್ ಮಾಡಲು ಮತ್ತು ಹೊಂದಿಸುವುದಕ್ಕಾಗಿ ಓವರ್-ದಿ-ಏರ್ ಫೀಚರ್ಸ್ ಅನ್ನ ಪರಿಚಯಿಸಲಾಗಿದೆ. ಇನ್ನು ಈ ಹೊಸ ಫೀಚರ್ಸ್‌ಗಳನ್ನ ಇನ್‌ಸ್ಟಗ್ರಾಮ್‌ನಲ್ಲಿ ಉಪಯೋಗಿಸಲು ಇನ್‌ಸ್ಟಾಗ್ರಾಮ್‌ನ ಬೂಮರಾಂಗ್ ಓಪನ್ ಮಾಡಿ, ಸ್ಟೋರಿ ಕ್ಯಾಮೆರಾವನ್ನು ತೆರೆದು, ಬೂಮರಾಂಗ್ ಗೆ ಸ್ವೈಪ್ ಮಾಡಿದ ನಂತರ ಶಟರ್ ಬಟನ್ ಟ್ಯಾಪ್ ಮಾಡಿದ್ರೆ ಹೊಸ ಫೀಚರ್ಸ್‌ಗಳು ಕಾಣುತ್ತವೆ ಆ ಚಿಹ್ನೆಗಳ ಮೇಲೆ ಟ್ಯಾಪ್ ಮಾಡಿದರೆ ಸಾಕು ಫೀಚರ್ಸ್ಗಳು ಆಪ್‌ಡೇಟ್ ಆಗಲಿದೆ.

ಒಬ್ಬ ಬಳಕೆದಾರನ ಮೂರು ವಿಡಿಯೋಗಳನ್ನ ಒಂದೇ ಬಾರಿಗೆ ತೋರಿಸಲು ಈ ಫೀಚರ್ಸ್‌ಗಳು ಉಪಯೋಗವಾಗಲಿದ್ದು, ಬಳಕೆದಾರರಿಗೆ ಹೊಸ ಮಾದರಿಯ ಫೀಲ್ ಕೊಡಲಿದೆ ಅನ್ನೊದು ಇನ್‌ಸ್ಟಾಗ್ರಾಮ್‌ನ ಉದ್ದೇಶವಾಗಿದೆ.
-
92,999
-
17,999
-
39,999
-
29,400
-
38,990
-
29,999
-
16,999
-
23,999
-
18,170
-
21,900
-
14,999
-
17,999
-
42,099
-
16,999
-
23,999
-
29,495
-
18,580
-
64,900
-
34,980
-
45,900
-
17,999
-
54,153
-
7,000
-
13,999
-
38,999
-
29,999
-
20,599
-
43,250
-
32,440
-
16,190