Home
ಸುದ್ದಿಜಾಲ

ಇನ್‌ಸ್ಟಾಗ್ರಾಮ್‌ ಬಳಕೆದಾರರೇ ಈ ವಿಚಾರದ ಬಗ್ಗೆ ನಿಮಗೆಷ್ಟು ತಿಳಿದಿದೆ?

ಜನಪ್ರಿಯ ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಇನ್‌ಸ್ಟಾಗ್ರಾಮ್‌ ಕೂಡ ಒಂದಾಗಿದೆ. ಇತ್ತೀಚಿನ ದಿನಗಳಲ್ಲಿ ಇನ್‌ಸ್ಟಾಗ್ರಾಮ್‌ ತನ್ನ ರೀಲ್ಸ್‌ ಫೀಚರ್ಸ್‌ನಿಂದಾಗಿ ಹೆಚ್ಚು ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಇದೇ ಸಂದರ್ಭದಲ್ಲಿ ಮೆಟಾ ಸಿಇಒ ಮಾರ್ಕ್‌ ಜುಕರ್‌ಬರ್ಗ್‌ ಇನ್‌ಸ್ಟಾಗ್ರಾಮ್‌ ಬಳಕೆದಾರರಿಗೆ ಗುಡ್‌ನ್ಯೂಸ್‌ ಒಂದನ್ನು ನೀಡಿದ್ದಾರೆ.

ಹೌದು, ಇನ್‌ಸ್ಟಾಗ್ರಾಮ್‌ ಬಳಕೆದಾರರಿಗೆ ಮೆಟಾ ಸಿಇಒ ಮಾರ್ಕ್‌ ಜುಕರ್‌ಬರ್ಗ್‌ ಸಿಹಿ ಸುದ್ದಿಯನ್ನು ಪ್ರಕಟಿಸಿದ್ದಾರೆ. ಅದೆನೆಂದರೆ ಇನ್‌ಸ್ಟಾಗ್ರಾಮ್‌ ಬಳಕೆದಾರರು ಇನ್ಮುಂದೆ ತಮ್ಮ ಬಯೋಗೆ 5 ಲಿಂಕ್‌ಗಳನ್ನು ಆಡ್‌ ಮಾಡುವುದಕ್ಕೆ ಅವಕಾಶ ನೀಡಲಾಗಿದೆ. ಹಾಗಾದ್ರೆ ಇನ್‌ಸ್ಟಾಗ್ರಾಮ್‌ನಲ್ಲಿ ನೀವು 5 ಲಿಂಕ್‌ಗಳನ್ನು ಹೇಗೆ ಸೇರ್ಪಡೆ ಮಾಡಬಹುದು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಇನ್‌ಸ್ಟಾಗ್ರಾಮ್‌ ಬಳಕೆದಾರರೇ ಈ ವಿಚಾರದ ಬಗ್ಗೆ ನಿಮಗೆಷ್ಟು ತಿಳಿದಿದೆ?

ಇನ್‌ಸ್ಟಾಗ್ರಾಮ್‌ ಬಳಕೆದಾರರು ತಮ್ಮ ಬಯೋದಲ್ಲಿ 5 ಲಿಂಕ್‌ಗಳನ್ನು ಸೇರ್ಪಡೆ ಮಾಡುವುದಕ್ಕೆ ಅವಕಾಶ ನೀಡಿದೆ. ಇದರಿಂದ ಬಳಕೆದಾರರು ತಮ್ಮ ಆನ್‌ಲೈನ್ ಬ್ಯುಸಿನೆಸ್‌, ಪ್ರಮೋಷನ್‌ ಬ್ರ್ಯಾಂಡ್‌ಗಳು, ತಾವು ಬೆಂಬಲಿಸುವ ಸೈಟ್‌ಗಳು ಅಥವಾ ಇತರ ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಿಗೆ ಫಾಲೋವರ್ಸ್‌ಗಳನ್ನು ರಿ ಡೈರೆಕ್ಟ್‌ ಮಾಡಲು ಇದು ಅನುಮತಿಸಲಿದೆ. ಇನ್ನು ಇನ್‌ಸ್ಟಾಗ್ರಾಮ್‌ನಲ್ಲಿ ನಿಮ್ಮ ಮೊದಲ ಲಿಂಕ್‌ ಅನ್ನು ಟ್ಯಾಪ್‌ ಮಾಡುವುದರಿಂದ ಸ್ಕ್ರೀನ್‌ನಲ್ಲಿ ಬಳಕೆದಾರರಿಗೆ ಎಲ್ಲಾ ಲಿಂಕ್‌ಗಳನ್ನು ಏಕಕಾಲದಲ್ಲಿ ವೀಕ್ಷಿಸಲು ಅನುವು ಮಾಡಿಕೊಡಲಿದೆ.

ಇದರಿಂದ ಇನ್‌ಸ್ಟಾಗ್ರಾಮ್‌ ಪ್ರೊಫೈಲ್‌ಗೆ ನೀವು ಮಲ್ಟಿ ಲಿಂಕ್‌ಗಳನ್ನು ಸೇರ್ಪಡೆ ಮಾಡಿದ್ದರೆ, ಸಂದರ್ಶಕರು ಲಿಂಕ್‌ಗಳ ಸಂಪೂರ್ಣ ಪಟ್ಟಿಯನ್ನು ವೀಕ್ಷಿಸಲು ಫಸ್ಟ್‌ ಲಿಂಕ್‌ ಅನ್ನು ಕ್ಲಿಕ್‌ ಮಾಡಬೇಕಾಗುತ್ತದೆ. ಇನ್ನು ನೀವು ನಿಮ್ಮ ಇನ್‌ಸ್ಟಾಗ್ರಾಮ್‌ ಬಯೋಗೆ ಲಿಂಕ್‌ಗಳನ್ನು ಸೇರಿಸಬೇಕಾದರೆ ಕೆಲವು ಹಂತಗಳನ್ನು ಅನುಸರಿಸಬೇಕಾಗುತ್ತದೆ.

ಇನ್‌ಸ್ಟಾಗ್ರಾಮ್‌ ಬಳಕೆದಾರರೇ ಈ ವಿಚಾರದ ಬಗ್ಗೆ ನಿಮಗೆಷ್ಟು ತಿಳಿದಿದೆ?

ಇನ್‌ಸ್ಟಾಗ್ರಾಮ್‌ ಬಯೋಗೆ ಮಲ್ಟಿ ಲಿಂಕ್‌ಗಳನ್ನು ಸೇರ್ಪಡೆ ಮಾಡುವುದು ಹೇಗೆ?

ನೀವು ನಿಮ್ಮ ಇನ್‌ಸ್ಟಾಗ್ರಾಮ್‌ ಬಯೋಗೆ ಲಿಂಕ್‌ಗಳನ್ನು ಸೇರ್ಪಡೆ ಮಾಡಬೇಕಾದರೆ ಈ ಕ್ರಮಗಳನ್ನು ಅನುಸರಿಸಿ.
* ಮೊದಲಿಗೆ ನಿಮ್ಮ ಪ್ರೊಫೈಲ್‌ ಪೇಜ್‌ಗೆ ಬೇಟಿ ನೀಡಿ
* ನಂತರ 'ಎಡಿಟ್‌ ಪ್ರೊಫೈಲ್' ಬಟನ್ ಅನ್ನು ಟ್ಯಾಪ್ ಮಾಡಿ
* ಇದೀಗ 'ಲಿಂಕ್ಸ್‌' ವಿಭಾಗಕ್ಕೆ ಹೋಗಿ ಮತ್ತು 'ಬಾಹ್ಯ ಲಿಂಕ್ ಸೇರಿಸಿ' (Add external link)ಕ್ಲಿಕ್ ಮಾಡಿ.
* ನಂತರ ಬಳಕೆದಾರರು ಲಿಂಕ್‌ಗಳನ್ನು ಸೇರಿಸಲು ಮತ್ತು ಅವುಗಳನ್ನು ರಿ ಆರ್ಡರ್‌ ಮಾಡಲು ಸಾಧ್ಯವಾಗಲಿದೆ.

ಇನ್ನು ಈ ಹೊಸ ಆಯ್ಕೆಯಲ್ಲಿ ಬಳಕೆದಾರರು ಗಮನಿಸಬೇಕಾದ ವಿಷಯವೆಂದರೆ external linkಗಳು ಸಣ್ಣ ಐಕಾನ್‌ಗಳಂತಹ ಯಾವುದೇ ವಿಶೇಷ ಕಸ್ಟಮೈಸ್‌ ಆಯ್ಕೆಗಳನ್ನು ಹೊಂದಿರುವುದಿಲ್ಲ. ಇವುಗಳು ಇನ್‌ಸ್ಟಾಗ್ರಾಮ್‌ ಅಪ್ಲಿಕೇಶನ್‌ನಲ್ಲಿಯೇ ತೆರೆಯಲಿವೆ. ಜೊತೆಗೆ ಲಿಂಕ್‌ಟ್ರೀ ಅಥವಾ ಇತರ ರೀತಿಯ ಸೇವೆಗಳಿಗೆ ಯಾವುದೇ ಲಿಂಕ್‌ಗಳನ್ನು ನಿರ್ಬಂಧಿಸುವುದಿಲ್ಲ ಎಂದು ಮೆಟಾ ಸಿಇಒ ಮಾರ್ಕ್‌ ಜುಕರ್‌ ಬರ್ಗ್‌ ದೃಢಪಡಿಸಿದ್ದಾರೆ.

ಇನ್‌ಸ್ಟಾಗ್ರಾಮ್‌ ಬಳಕೆದಾರರೇ ಈ ವಿಚಾರದ ಬಗ್ಗೆ ನಿಮಗೆಷ್ಟು ತಿಳಿದಿದೆ?

ಇನ್‌ಸ್ಟಾಗ್ರಾಮ್‌ನಲ್ಲಿ ಲ್ಯಾಂಗ್ವೇಜ್‌ ಸೆಟ್ಟಿಂಗ್ಸ್‌ಗಳನ್ನು ಬದಲಾಯಿಸುವುದು ಹೇಗೆ?

ಹಂತ:1 ಮೊದಲಿಗೆ ನೀವು ಆಂಡ್ರಾಯ್ಡ್‌ ಫೋನ್‌ನಲ್ಲಿ ಇನ್‌ಸ್ಟಾಗ್ರಾಮ್‌ ಅಪ್ಲಿಕೇಶನ್‌ ತೆರೆಯಿರಿ.
ಹಂತ:2 ಇದೀಗ ಅಪ್ಲಿಕೇಶನ್‌ನ ಕೆಳಗಿನ ಬಲ ಮೂಲೆಯಲ್ಲಿರುವ ಪ್ರೊಫೈಲ್ ಚಿತ್ರವನ್ನು ಟ್ಯಾಪ್ ಮಾಡಿ.
ಹಂತ:3 ಮೇಲಿನ ಬಲಭಾಗದಲ್ಲಿರುವ ಮೋರ್‌ ಆಯ್ಕೆಯನ್ನು ಟ್ಯಾಪ್ ಮಾಡಿ.
ಹಂತ:4 ಇದೀಗ ಸೆಟ್ಟಿಂಗ್ಸ್‌ ಆಯ್ಕೆಯನ್ನು ಟ್ಯಾಪ್ ಮಾಡಿ.
ಹಂತ:5 ಇದರಲ್ಲಿ ಅಕೌಂಟ್‌ ಆಯ್ಕೆಯನ್ನು ಟ್ಯಾಪ್ ಮಾಡಿ ಮತ್ತು ನಂತರ ಲ್ಯಾಂಗ್ವೇಜ್‌ ಆಯ್ಕೆಯನ್ನು ಟ್ಯಾಪ್ ಮಾಡಿ.
ಹಂತ:6 ಇದೀಗ ನೀವು ಬಳಸಲು ಬಯಸುವ ಭಾಷೆಯನ್ನು ಟ್ಯಾಪ್ ಮಾಡುವ ಮೂಲಕ ಭಾಷೆ ಬದಲಾಯಿಸಬಹುದು.

ಫೇಸ್‌ಬುಕ್‌ನಲ್ಲಿ ಲ್ಯಾಂಗ್ವೇಜ್‌ ಸೆಟ್ಟಿಂಗ್ಸ್‌ ಬದಲಾಯಿಸುವುದು ಹೇಗೆ?

ಹಂತ:1 ಮೊದಲಿಗೆ ನೀವು ನಿಮ್ಮ ಆಂಡ್ರಾಯ್ಡ್‌ ಫೋನ್‌ನಲ್ಲಿ ನಿಮ್ಮ ಫೇಸ್‌ಬುಕ್‌ ಅಪ್ಲಿಕೇಶನ್‌ ತೆರೆಯಿರಿ.
ಹಂತ:2 ಇದೀಗ ಫೇಸ್‌ಬುಕ್‌ನಲ್ಲಿ ಮೆನು ಆಯ್ಕೆಯನ್ನು ಟ್ಯಾಪ್ ಮಾಡಿ.
ಹಂತ:3 ನಂತರ ಕೆಳಗೆ ಸ್ಕ್ರಾಲ್ ಮಾಡಿ ಮತ್ತು ಸೆಟ್ಟಿಂಗ್‌ಗಳು ಮತ್ತು ಗೌಪ್ಯತೆ ಆಯ್ಕೆಯನ್ನು ಟ್ಯಾಪ್ ಮಾಡಿ.
ಹಂತ:4 ಇದೀಗ ಸೆಟ್ಟಿಂಗ್ಸ್‌ ಆಯ್ಕೆಯನ್ನು ಟ್ಯಾಪ್ ಮಾಡಿ ಮತ್ತು ನಂತರ ಭಾಷೆ ಮತ್ತು ಪ್ರದೇಶ ಆಯ್ಕೆಯನ್ನು ಟ್ಯಾಪ್ ಮಾಡಿ.
ಹಂತ:5 ಫೇಸ್‌ಬುಕ್‌ನಲ್ಲಿ ಬಟನ್‌, ಕ್ಯಾಪ್ಶನ್‌ ಮತ್ತು ಇತರ ಪಠ್ಯಕ್ಕಾಗಿ ಭಾಷೆಯನ್ನು ಟ್ಯಾಪ್ ಮಾಡಿ.
ಹಂತ:6 ನೀವು ಫೇಸ್‌ಬುಕ್ ಕಾಣಿಸಿಕೊಳ್ಳಲು ಬಯಸುವ ಭಾಷೆಯನ್ನು ಆಯ್ಕೆಮಾಡುವ ಮೂಲಕ ಭಾಷೆಯನ್ನು ಬದಲಾಯಿಸಿ.

Best Mobiles in India

English summary
Instagram users will now be able to add up to 5 links to their bio:details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+