Home
ಸುದ್ದಿಜಾಲ

Instagram: ಜಾಹೀರಾತುಗಳ ಕಿರಿಕಿರಿ ತಪ್ಪಿಸಲು ಬರಲಿದೆ ಹೊಸ ಫೀಚರ್! ಏನಿದರ ವೈಶಿಷ್ಟ್ಯ?

ಇನ್‌ಸ್ಟಾಗ್ರಾಮ್‌ (Instagram) ಇಂದು ಸ್ಮಾರ್ಟ್‌ಫೋನ್‌ ಪ್ರಿಯರ ಹಾಟ್ ಫೇವರಿಟ್. ಇದು ವಿಶ್ವದ ಅತ್ಯಂತ ಜನಪ್ರಿಯ ಕಿರು ವಿಡಿಯೋ ಫ್ಲಾಟ್‌ಫಾರ್ಮ್‌​ ಆಗಿದೆ. ಇಲ್ಲಿ ನಾವು ಎಲ್ಲಾ ರೀತಿಯ ವಿಡಿಯೋಗಳನ್ನು ಪಡೆಯುತ್ತೇವೆ. ಆದರೆ, ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋಗಳನ್ನು ನೋಡುವಾಗ ಹೆಚ್ಚು ಕಿರಿಕಿರಿ ಉಂಟುಮಾಡುವ ವಿಷಯವೆಂದರೆ ಮಧ್ಯದಲ್ಲಿ ಬರುವ ಅನಗತ್ಯ ಜಾಹೀರಾತುಗಳು. ಆ ಸಂದರ್ಭದಲ್ಲಿ ಕೆಟ್ಟ ಕೋಪ ಬರುತ್ತದೆ. ಇನ್ಮುಂದೆ ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಇನ್‌ಸ್ಟಾಗ್ರಾಮ್‌ ವಿಡಿಯೋಗಳ ಮಧ್ಯದಲ್ಲಿ ಬರುವ ಜಾಹೀರಾತುಗಳನ್ನು ಸ್ಕಿಪ್ ಮಾಡಬಹುದಾದ ಫೀಚರ್‌ ಬರಲಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಮೆಟಾ ಕಂಪನಿ ದಿನಕ್ಕೊಂದು ಹೊಸ ಬಗೆಯ ಫೀಚರ್‌ಗಳು ಮತ್ತು ಹೊಸ ಅನುಭವಗಳನ್ನು ನೀಡುತ್ತಿದೆ. ಇದೀಗ, ಇನ್‌ಸ್ಟಗ್ರಾಮ್‌ ಬಳಕೆದಾರರಿಗೆ ಹೊಸದೊಂದ ಫೀಚರ್‌ ಪರಿಚಯಿಸಲು ಮುಂದಾಗಿದೆ. ಫೋಟೋ ಹಂಚಿಕೊಳ್ಳಲು ಆರಂಭವಾದ Instagram ಇಂದು ರೀಲ್ಸ್ ಲೋಕದಲ್ಲಿ ಮುಳುಗಿದೆ. ದಿನವೊಂದಕ್ಕೆ ಲಕ್ಷಾಂತರ ರೀಲ್ಸ್, ವಿಡಿಯೋ ಇನ್‌ಸ್ಟಗ್ರಾಮ್‌ಗೆ ಅಪ್​ಲೋಡ್ ಆಗುತ್ತಿದೆ. ಆದರೆ, ಬಳಕೆದಾರರು ವಿಡಿಯೋ ವೀಕ್ಷಣೆ ಮಾಡುವಾಗ ಜಾಹೀರಾತುಗಳು ಅಡಚಣೆ ಮಾಡುತ್ತವೆ. ಇದರಿಂದ ಮುಕ್ತಿ ನೀಡಲು ಮೆಟಾ, ಜಾಹಿರಾತು ಸ್ಕಿಪ್ ಮಾಡುವ ಫೀಚರ್‌ ಪರಿಚಯಿಸಲು ಸಜ್ಜಾಗಿದೆ.

Instagramನಲ್ಲಿ ಜಾಹೀರಾತುಗಳ ಕಿರಿಕಿರಿ ತಪ್ಪಿಸಲು ಬರಲಿದೆ ಹೊಸ ಫೀಚರ್!

ಜಾಹೀರಾತು ಬಂದಾಗ ಮೂಡ್‌ ಆಫ್‌ ಆಗುತ್ತಾ?

ಸಾಮಾನ್ಯವಾಗಿ Instagramನಲ್ಲಿ ರೀಲ್ಸ್, ವಿಡಿಯೋಗಳನ್ನು ನೋಡುವುದು ಒಂದು ರೀತಿಯಲ್ಲಿ ಯೂಟ್ಯೂಬ್‌ ನೋಡಿದ ಹಾಗೆ. ಯಾಕಂದ್ರೆ, ಅಷ್ಟೊಂದು ಜಾಹೀರಾತುಗಳು ಒಂದರ ಹಿಂದೆ ಒಂದರಂತೆ ಬರ್ತಾ ಇರುತ್ತವೆ. ಇದರಿಂದ ವಿಡಿಯೋವನ್ನು ಸತತವಾಗಿ ನೋಡಲು ಸಾಧ್ಯವೇ ಇಲ್ಲ. ಜಾಹೀರಾತು ಬಂದಾಗ ನಿಮಗೆ ಮೂಡ್‌ ಆಫ್‌ ಆಗುವುದು ಗ್ಯಾರಂಟಿ. ಈ ಜಾಹೀರಾತುಗಳು 3 ರಿಂದ 5 ಸೆಕೆಂಡ್ ಪ್ರದರ್ಶನವಾಗುತ್ತದೆ. ಇದರಿಂದ ನಮಗೆ ಕಿರಿಕಿರಿಯಾಗುತ್ತಿದೆ ಎಂಬುದಂತೂ ಸತ್ಯ. ಇದೀಗ, ಈ ಜಾಹೀರಾತುಗಳ ಕಿರಿಕಿರಿಯಿಂದ ಮುಕ್ತಿ ಪಡೆಯುವ ಟೈಮ್ ಹತ್ತಿರವಾಗಿದೆ.

ಈ ಹೊಸ ಫೀಚರ್‌ ಯಾವಾಗ ಬರುತ್ತೆ?

ಮೆಟಾ ಸಂಸ್ಥೆಯು Instagramನಲ್ಲಿ ಜಾಹಿರಾತು ಸ್ಕಿಪ್ ಮಾಡುವ ಆಯ್ಕೆ ಪರಿಚಯಿಸಲು ಯುಟ್ಯೂಬ್‌ ಮಾದರಿಯ ಫೀಚರ್‌ ಅನ್ನು ಪರೀಕ್ಷಿಸುತ್ತಿದೆ. ಇದಕ್ಕಾಗಿ Instagram ಬಳಕೆದಾರರಿಂದ ಪ್ರತಿಕ್ರಿಯೆಯನ್ನು ಪಡೆಯುತ್ತಿದೆ ಎನ್ನಲಾಗಿದೆ. ಸಾಮಾನ್ಯವಾಗಿ YouTubeನಲ್ಲಿ ವಿಡಿಯೋ ವೀಕ್ಷಿಸುವಾಗ ಈ ರೀತಿಯ ಜಾಹಿರಾತುಗಳು ಕಂಡುಬರುತ್ತವೆ. ಅಲ್ಲಿ ಜಾಹಿರಾತು ಸ್ಕಿಪ್ ಮಾಡುವ ಆಯ್ಕೆ ಇರುತ್ತದೆ. YouTubeನ ಈ ವಿಧಾನದಿಂದ ಸ್ಫೂರ್ತಿ ಪಡೆದ ನಂತರವೇ Instagram ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಈ ಫೀಚರ್‌ ಸೇರಿಸಲು ಹೊರಟಿದೆ. ಆದಷ್ಟು ಬೇಗ ಯೂಟ್ಯೂಬ್ ಮಾದರಿಯಲ್ಲೇ ಇದು Instagramನಲ್ಲಿ ಲಭ್ಯವಾಗಲಿದೆ.

Instagramನಲ್ಲಿ ಜಾಹೀರಾತುಗಳ ಕಿರಿಕಿರಿ ತಪ್ಪಿಸಲು ಬರಲಿದೆ ಹೊಸ ಫೀಚರ್!

ಜಾಹೀರಾತುಗಳನ್ನು ಪ್ರದರ್ಶಿಸಲು ಹೊಸ ದಾರಿ

ಮೆಟಾ ಮತ್ತು Instagram ಜಾಹೀರಾತಿನ ಕುರಿತು ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಆದರೂ, ವಿಡಿಯೋ ನೋಡುವಾಗ ಜಾಹೀರಾತು ಬರುತ್ತಿವೆ. ಕೆಲವರು ಟೈಮ್‌ಪಾಸ್‌ಗಾಗಿ ಮಾತ್ರ Instagram ಬಳಸುತ್ತಾರೆ. ಅಂತವರಿಗೆ ಈ ಜಾಹೀರಾತುಗಳನ್ನು ಸಹಿಸಿಕೊಳ್ಳುವುದು ತುಸು ಕಷ್ಟವಾಗುತ್ತಿದೆ. ಜಾಹೀರಾತು ಬಂದಾಗ ಕನಿಷ್ಠ ಐದು ಸೆಕೆಂಡ್‌ಗಳಾದರೂ ಕಾಯಬೇಕು. ಆಮೇಲೆ ಸ್ಕಿಪ್‌ ಮಾಡಿ ಮತ್ತೊಂದು ಜಾಹೀರಾತು ಬರುವವರೆಗೆ ನಿರಾತಂಕವಾಗಿ ವಿಡಿಯೋ ನೋಡಬಹುದು. ಇನ್ಮುಂದೆ ಜಾಹಿರಾತುಗಳನ್ನು ಪೂರ್ಣವಾಗಿ ನೋಡಲು ಬಯಸದವರು, ಕೂಡಲೇ ಸ್ಕಿಪ್ ಮಾಡಬಹುದು. ಇದಕ್ಕಾಗಿ ಮೆಟಾ ಹೊಸ ಫೀಚರ್‌ ಅನ್ನು ಪರೀಕ್ಷಿಸುತ್ತಿದೆ.

ಇನ್‌ಸ್ಟಗ್ರಾಮ್‌ಗೆ ಮೆಟಾದಿಂದ ಎಐ ಫೀಚರ್

ಟೆಕ್ನಾಲಜಿ ಕ್ಷೇತ್ರವು ಇಂದು ದಿನಕ್ಕೊಂದು ಹೊಸ ಬಗೆಯ ಫೀಚರ್‌ ಪರಿಚಯಿಸುತ್ತಿದೆ. ಅದರಲ್ಲೂ ಸ್ಮಾರ್ಟ್‌ಫೋನ್‌ ಪ್ರಿಯರಿಗೆ ಹೊಸ ಫೀಚರ್‌ಗಳು ನಿತ್ಯ ಅಂಗೈ ಮೇಲೆಯೇ ಸಿಗುತ್ತಿವೆ. ಇದಕ್ಕೆ ಪೂರಕವಾದ ಇಂದಿನ ಲೇಟೆಸ್ಟ್‌ ಸುದ್ದಿ ಅಂದ್ರೆ ಮೆಟಾದ ಎಐ ಫೀಚರ್. Instagram ಕಾರ್ಯಕ್ಷಮತೆ ಹಾಗೂ ಬಳಕೆದಾರರಿಗೆ ನೀಡುವ ಅನುಕೂಲತೆಯನ್ನು ಗಮನದಲ್ಲಿಟ್ಟುಕೊಂಡು ಮೆಟಾ ಕಂಪನಿ, ಈಗ Instagram ಅಪ್ಲಿಕೇಶನ್‌ಗಳಿಗೆ ಎಐ ಫೀಚರ್‌ಗಳನ್ನು ಪರೀಕ್ಷಿಸುತ್ತಿದೆ. ಎಐ ಚಾಟ್‌ಬಾಟ್‌ ಅನ್ನು ಶೀಘ್ರದಲ್ಲಿ ಪರಿಣಾಮಕಾರಿಯಾಗಿ ಬಳಕೆದಾರರಿಗೆ ಲಭ್ಯವಾಗುವಂತೆ ಮಾಡಲು ಮುಂದಾಗಿದೆ.

Best Mobiles in India

English summary
META is constantly offering new features. Accordingly, now Instagram is about to introduce a new feature to the users. Advertisements interrupt while watching videos. To get rid of this, Meta Company has decided to introduce a feature that skips advertisements
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+