Home
ಸುದ್ದಿಜಾಲ

ಶೀಘ್ರದಲ್ಲೇ ಇನ್‌ಸ್ಟಾಗ್ರಾಮ್‌ ಸೇರಲಿದೆ ಉಪಯುಕ್ತ ಫೀಚರ್‌!

ಪ್ರಸ್ತುತ ದಿನಗಳಲ್ಲಿ ಇನ್‌ಸ್ಟಾಗ್ರಾಮ್‌ ಪ್ಲಾಟ್‌ಫಾರ್ಮ್‌ ಸಾಕಷ್ಟು ಜನಪ್ರಿಯತೆ ಪಡೆದಿದೆ. ಯುವಜನರ ನೆಚ್ಚಿನ ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ ಎನಿಸಿಕೊಂಡಿದೆ. ಇನ್‌ಸ್ಟಾಗ್ರಾಮ್‌ ಕೂಡ ಬಳಕೆದಾರರ ಅನುಕೂಲಕ್ಕಾಗಿ ಹೊಸ ಹೊಸ ಆಕರ್ಷಕ ಫೀಚರ್ಸ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಸದ್ಯ ಇದೀಗ ಬಕೆದಾರರು ಪೋಸ್ಟ್‌ಗಳನ್ನು ರಿಪೋಸ್ಟ್‌ ಮಾಡಬಹುದಾದ ಬಟನ್‌ ಪರಿಚಯಿಸಲು ಮುಂದಾಗಿದೆ. ಸ್ಟೋರೀಸ್‌ ಅನ್ನು ರಿಪೋಸ್ಟ್‌ ಮಾಡುವ ರೀತಿಯಲ್ಲಿಯೇ ಪೋಸ್ಟ್‌ಗಳನ್ನು ರಿಪೋಸ್ಟ್‌ ಮಾಡಬಹುದಾಗಿದೆ.

ಇನ್‌ಸ್ಟಾಗ್ರಾಮ್‌

ಹೌದು, ಇನ್‌ಸ್ಟಾಗ್ರಾಮ್‌ ಬಳಕೆದಾರರಿಗೆ ಪೋಸ್ಟ್‌ಗಳನ್ನು ರಿಪೋಸ್ಟ್‌ ಮಾಡಲು ಅನುಮತಿಸುವುದಕ್ಕೆ ಮುಂದಾಗಿದೆ. ಇದಕ್ಕಾಗಿ ಹೊಸ ಬಟನ್‌ ಪರಿಚಯಿಸಲಿದ್ದು, ಶೀಘ್ರದಲ್ಲೇ ಇದು ಇನ್‌ಸ್ಟಾಗ್ರಾಮ್‌ ಪ್ಲಾಟ್‌ಫಾರ್ಮ್‌ನಲ್ಲಿ ಲಭ್ಯವಾಗಲಿದೆ. ರಿಪೋಸ್ಟ್‌ಗಳು ಬಳಕೆದಾರರು ತಮ್ಮ ಹಿಂಬಾಲಕರೊಂದಿಗೆ ಹಂಚಿಕೊಳ್ಳಲು ಬಯಸುವ ಪೋಸ್ಟ್‌ಗಳನ್ನು ನೇರವಾಗಿ ಅವರ ಹೋಮ್ ಫೀಡ್‌ಗಳಿಗೆ ಕಳುಹಿಸಲು ಅನುಮತಿಸುತ್ತದೆ. ಹಾಗಾದ್ರೆ ಇನ್‌ಸ್ಟಾಗ್ರಾಮ್‌ ಸೇರಲಿರುವ ಈ ಫೀಚರ್ಸ್‌ನಿಂದಾಗುವ ಉಪಯೋಗವೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಇನ್‌ಸ್ಟಾಗ್ರಾಮ್‌

ಇನ್‌ಸ್ಟಾಗ್ರಾಮ್‌ನಲ್ಲಿ ನೀವು ಬಯಸುವ ಪೋಸ್ಟ್‌ ಅನ್ನು ರಿಪೋಸ್ಟ್‌ ಮಾಡುವುದಕ್ಕೆ ಈ ಹೊಸ ಫೀಚರ್‌ ಅನುಕೂಲ ಮಾಡಿಕೊಡಲಿದೆ. ಇದು ನಿಮ್ಮ ಪ್ರೊಫೈಲ್‌ನಲ್ಲಿ ನೀವು ಎಲ್ಲಿಯವರೆಗೆ ಬಯಸುತ್ತೀರೋ ಅಲ್ಲಿಯವರೆಗೆ ರಿಪೋಸ್ಟ್‌ ಉಳಿಯುವಂತೆ ಮಾಡಲಿದೆ. ಸದ್ಯ ಈ ಹೊಸ ಫೀಚರ್‌ ಕುರಿತು ಸೊಶೀಯಲ್‌ ಮೀಡಿಯಾ ವಿಶ್ಲೇಷಕ ಮ್ಯಾಟ್ ನವರ್ರಾ ಅವರು ಮಾಹಿತಿ ನೀಡಿದ್ದಾರೆ. ಟ್ವೀಟ್‌ನಲ್ಲಿ ಇನ್‌ಸ್ಟಾಗ್ರಾಮ್ ಪ್ರೊಫೈಲ್‌ಗಳು 'ರಿಪೋಸ್ಟ್‌ಗಳು' ಟ್ಯಾಬ್ ಅನ್ನು ಸಹ ಪಡೆಯುತ್ತವೆ ಎಂದು ಬಹಿರಂಗಪಡಿಸಿದ್ದಾರೆ.

ರಿಪೋಸ್ಟ್‌

ಇನ್ನು ರಿಪೋಸ್ಟ್‌ ಫೀಚರ್‌ ಮೂಲಕ ಬಳಕೆದಾರರು ನಿರ್ದಿಷ್ಟ ಬಳಕೆದಾರರಿಂದ ಎಲ್ಲಾ ರಿಪೋಸ್ಟ್‌ಗಳನ್ನು ಪರಿಶೀಲಿಸಬಹುದಾಗಿದೆ. ಆದರೆ ಬಳಕೆದಾರರು ತಮ್ಮ ಪೋಸ್ಟ್ ಅನ್ನು ರಿಪೋಸ್ಟ್‌ ಮಾಡದಂತೆ ತಡೆಯುವುದಕ್ಕೆ ಕೂಡ ಅವಕಾಶವದೆ. ಈ ಆಯ್ಕೆಯು ಶೇರ್‌ ಮೆನುವಿನಲ್ಲಿ ಕಂಡುಬರುತ್ತದೆ. ಇನ್ನು ಈ ಫೀಚರ್‌ ಶೀಘ್ರದಲ್ಲೇ ಸೀಮಿತ ಸಂಖ್ಯೆಯ ಬಳಕೆದಾರರಿಗೆ ಲಭ್ಯವಾಗುವ ಸಾಧ್ಯತೆಯಿದೆ. ಕೆಲವು ಆಯ್ದ ಬಳಕೆದಾರರ ಮೂಲಕ ಫೀಚರ್‌ ಅನ್ನು ಪರೀಕ್ಷಿಸಿ ನಂತರ ಅದನ್ನು ಅಧಿಕೃತ ಮಾಡುವ ಸಾಧ್ಯತೆಯಿದೆ.

ಚಾಲೆಂಜಸ್‌

ಇದಲ್ಲದೆ ಇನ್‌ಸ್ಟಾಗ್ರಾಮ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಹೊಸ ಕ್ಯಾಂಡಿಡ್‌ ಚಾಲೆಂಜಸ್‌ ಎನ್ನುವ ಫೀಚರ್ಸ್‌ ಪರಿಚಯಿಸಲು ಮುಂದಾಗಿದೆ. ಇದು BeReal ಎಂಬ ಜನಪ್ರಿಯ ಫ್ರೆಂಚ್ ಸೊಶೀಯಲ್‌ ಮೀಡಿಯಾ ಅಪ್ಲಿಕೇಶನ್‌ ಮಾದರಿಯನ್ನು ಹೊಂದಿದೆ. ಇದು ಬಳಕೆದಾರರಿಗೆ ಫೋಟೋ ಕ್ಲಿಕ್‌ ಮಾಡುವಾಗ ಹೊಸ ಅನುಭವ ನೀಡಲಿದೆ ಎನ್ನಲಾಗಿದೆ. ಅಲ್ಲದೆ ಡೈಲಿ ನೋಟಿಫಿಕೇಶನ್‌ ಪಡೆದುಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ.

ಇನ್‌ಸ್ಟಾಗ್ರಾಮ್‌

ಇನ್‌ಸ್ಟಾಗ್ರಾಮ್‌ ಪ್ಲಾಟ್‌ಫಾರ್ಮ್‌ ಸೇರಲಿರುವ ಕ್ಯಾಂಡಿಡ್ ಚಾಲೆಂಜಸ್‌ ಫೀಚರ್ಸ್ ಮೂಲಕ ಬಳಕೆದಾರರು ತಮ್ಮ ಸುತ್ತಮುತ್ತಲಿನ ಫೋಟೋ ಕ್ಲಿಕ್ಕಿಸುವಾಗ ದಿನಕ್ಕೆ ಒಮ್ಮೆ ನೋಟಿಫಿಕೇಶನ್‌ ಅನ್ನು ನೋಡುತ್ತಾರೆ. ಅಲ್ಲದೆ ಪ್ರಾಂಪ್ಟ್ ಪಡೆದಾಗಲೆಲ್ಲಾ, ಮುಂಭಾಗ ಮತ್ತು ಹಿಂಭಾಗದ ಇನ್‌ಸ್ಟಾಗ್ರಾಮ್‌ ಕ್ಯಾಮೆರಾಗಳು ತೆರೆದುಕೊಳ್ಳಲಿವೆ. ಇದರಿಂದ ಫೋಟೋವನ್ನು ಕ್ಲಿಕ್‌ ಮಾಡಲು ಎರಡು ನಿಮಿಷಗಳ ವಿಂಡೋ ಲಭ್ಯವಾಗಲಿದೆ. ಇದರಲ್ಲಿ ಕ್ಲಿಕ್‌ಮಾಡುವ ಚಿತ್ರಗಳು ಮೇನ್‌ಪೇಜ್‌ ಸ್ಟೋರೀಸ್‌ ವಿಭಾಗದಲ್ಲಿ ಗೋಚರಿಸುತ್ತವೆ.

ಫೀಚರ್ಸ್‌

ಇನ್ನು ಈ ಫೀಚರ್ಸ್‌ BeReal ಅಪ್ಲಿಕೇಶನ್‌ ಮಾದರಿಯನ್ನು ಹೊಂದಿದೆ ಎನ್ನುವುದಕ್ಕೆ ಪ್ರಮುಖ ಕಾರಣ ಎಂದರೆ ಇದು ಎರಡು ನಿಮಿಷಗಳ ಅವಧಿಯ ನಂತರ ವಿಂಡೋ ಕ್ಲೋಸ್‌ ಮಾಡುವುದು. ಎರಡು ನಿಮಿಷಗಳಲ್ಲಿ ಫೋಟೋ ಕ್ಲಿಕ್ ಮಾಡಲು ಬಳಕೆದಾರರನ್ನು ಪ್ರೇರೇಪಿಸುತ್ತದೆ. ಈ ಚಿತ್ರಗಳನ್ನು ಅವರ ಸ್ನೇಹಿತರು ಸಹ ಹಂಚಿಕೊಳ್ಳಬಹುದು, ಅಲ್ಲದೆ ದಿನದೊಳಗೆ ಡಿಸ್‌ಅಪಿಯರ್‌ ಕೂಡ ಆಗಲಿದೆ. ಜೊತೆಗೆ ಒಂದೇ ಸಮಯದಲ್ಲಿ ಫ್ರಂಟ್‌ ಮತ್ತು ಬ್ಯಾಕ್‌ ಎರಡು ಕ್ಯಾಮೆರಾಗಳನ್ನು ಬಳಸುವುದಕ್ಕೆ ಅವಕಾಶ ನೀಡಲಿದೆ. ಇದು ಬಳಕೆದಾರರನ್ನು ಇನ್ನಷ್ಟು ಆಕರ್ಷಿಸಬಹುದು ಎನ್ನಲಾಗಿದೆ. ಸದ್ಯ ಈ ಫೀಚರ್ಸ್‌ ಯಾವಾಗ ಲಭ್ಯವಾಗಲಿದೆ ಎಂಬುದರ ಬಗ್ಗೆ ಇನ್ನು ಯಾವುದೇ ಮಾಹಿತಿ ಅಧಿಕೃತವಾಗಿಲ್ಲ.

ಇನ್‌ಸ್ಟಾಗ್ರಾಮ್‌

ಇನ್‌ಸ್ಟಾಗ್ರಾಮ್‌ ಈಗಾಗಲೇ ಡ್ಯುಯಲ್‌ ಕ್ಯಾಮೆರಾ ಆಯ್ಕೆಗಳನ್ನು ನೀಡಿದೆ. ಇದರಿಂದ ಮುಂಭಾಗ ಮತ್ತು ಹಿಂಭಾಗದ ಕ್ಯಾಮರಾಗಳನ್ನು ಏಕಕಾಲದಲ್ಲಿ ಏನನ್ನಾದರೂ ರೆಕಾರ್ಡ್ ಮಾಡಲು ಮತ್ತು ಅದಕ್ಕೆ ಅವರ ಪ್ರತಿಕ್ರಿಯೆಯನ್ನು ಬಳಸಲು ಅನುಮತಿಸುತ್ತದೆ. ಈ ಆಯ್ಕೆಯ ಮೂಲಕ 'ಡ್ಯುಯಲ್' ರೀಲ್ಸ್‌ ಮಾಡುವುದಕ್ಕೆ ಸಾದ್ಯವಾಗಲಿದೆ. ಎರಡೂ ಫೀಡ್‌ಗಳು ಟ್ವಿಚ್ ಸ್ಟ್ರೀಮ್‌ಗೆ ಹೋಲುವ ಸ್ಕ್ರೀನ್‌ ಮೇಲೆ ಒಟ್ಟಿಗೆ ಕಾಣಿಸಿಕೊಳ್ಳುತ್ತವೆ.

Best Mobiles in India

English summary
Instagram will soon let you repost other users’ posts
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+