ಇಂಟೆಲ್‌ನಿಂದ ವಿಶ್ವದ ಅತ್ಯಂತ ವೇಗದ ಡೆಸ್ಕ್‌ಟಾಪ್‌ ಪ್ರೊಸೆಸರ್‌ ಬಿಡುಗಡೆ!

|

ಇಂಟೆಲ್‌ ಕಂಪೆನಿ ಟೆಕ್‌ ವಲಯದಲ್ಲಿ ಪ್ರಮುಖ ಪ್ರೊಸೆಸರ್‌ ಕಂಪೆನಿಯಾಗಿ ಪ್ರಸಿದ್ಧಿ ಪಡೆದುಕೊಂಡಿದೆ. ಸ್ಮಾರ್ಟ್‌ ಡಿವೈಸ್‌ಗಳ ಕಾರ್ಯದಕ್ಷತೆ ಹೆಚ್ಚಿಸುವ ಅತ್ಯುತ್ತಮ ಪ್ರೊಸೆಸರ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಸದ್ಯ ಇದೀಗ CES 2022ರಲ್ಲಿ ಅನಾವರಣಗೊಳಿಸಿದ್ದ ಹೊಸ ಇಂಟೆಲ್ ಕೋರ್ i9-12900KS ಲಭ್ಯತೆಯ ಬಗ್ಗೆ ಘೋಷಣೆ ಮಾಡಿದೆ. ಈ ಪ್ರೊಸೆಸರ್‌ ವಿಶ್ವದ ಅತ್ಯಂತ ವೇಗದ ಡೆಸ್ಕ್‌ಟಾಪ್‌ ಅನ್ನು ಬಿಡುಗಡೆ ಮಾಡಿದೆ. ಇದು ಇಂಟೆಲ್ ಥರ್ಮಲ್ ವೆಲಾಸಿಟಿ ಬೂಸ್ಟ್‌ನೊಂದಿಗೆ 5.5 GHz ಗರಿಷ್ಠ ಟರ್ಬೊ ಫ್ರಿಕ್ವೆನ್ಸಿಯನ್ನು ನೀಡುತ್ತದೆ ಮತ್ತು ಇಂಟೆಲ್ ಅಡಾಪ್ಟಿವ್ ಬೂಸ್ಟ್ ತಂತ್ರಜ್ಞಾನವನ್ನು ಹೊಂದಿದೆ.

ಇಂಟೆಲ್‌

ಹೌದು, ಇಂಟೆಲ್‌ ಕಂಪೆನಿ ವಿಶ್ವದ ಅತ್ಯಂತ ವೇಗದ ಡೆಸ್ಕ್‌ಟಾಪ್‌ ಪ್ರೊಸೆಸರ್‌ ಅನ್ನು ಲಾಂಚ್‌ ಮಾಡಿದೆ. ಈ ವೇಗದ ಪ್ರೊಸೆಸರ್‌ ವಿವರಗಳನ್ನು ಇಂಟೆಲ್‌ ಕಂಪೆನಿ ಬಹಿರಂಗಪಡಿಸಿದೆ. ಇನ್ನು ಈ ಪ್ರೊಸೆಸರ್‌ ಅನ್ನು ವಿಶೇಷವಾಗಿ ಗೇಮರ್‌ಗಳಿಗಾಗಿ ನಿರ್ಮಿಸಲಾಗಿದೆ ಎನ್ನಲಾಗಿದೆ. ಈ ಪ್ರೊಸೆಸರ್‌ನ SoC 16 ಕೋರ್‌ಗಳು ಮತ್ತು 24 ಥ್ರೆಡ್‌ಗಳನ್ನು ಹೊಂದಿರಲಿದೆ ಎನ್ನಲಾಗಿದೆ. ಇನ್ನುಳಿದಂತೆ ಈ ವೇಗದ ಪ್ರೊಸೆಸರ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಿಶೇಷತೆ ಏನು?

ವಿಶೇಷತೆ ಏನು?

ಇಂಟೆಲ್ ಕೋರ್ i9-12900KS ಅನ್ನು ವಿಶೇಷವಾಗಿ ಹೆಚ್ಚಿನ ಕಾರ್ಯಕ್ಷಮತೆಗಾಗಿ ಬಿನ್ ಮಾಡಲಾಗಿದೆ. ಇದು ಎಂಟು ಕಾರ್ಯಕ್ಷಮತೆಯ ಕೋರ್‌ಗಳು ಮತ್ತು ಎಂಟು ದಕ್ಷತೆಯ ಕೋರ್‌ಗಳನ್ನು ಹೊಂದಿದೆ. ಜೊತೆಗೆ ಇದು 40% ಹೈಯರ್ ಪರ್ಫಾರ್ಮೆನ್ಸ್ ನೀಡುತ್ತದೆ ಎನ್ನಲಾಗಿದೆ. ಈ ಪ್ರೊಸೆಸರ್‌ 24 ಥ್ರೆಡ್‌ಗಳು ಮತ್ತು 5.5 GHz ಗರಿಷ್ಠ ಟರ್ಬೊ ಫ್ರಿಕ್ವೆನ್ಸಿ, 150W ಪ್ರೊಸೆಸರ್ ಬೇಸ್ ಪವರ್ ಮತ್ತು 30MB ಇಂಟೆಲ್ ಸ್ಮಾರ್ಟ್ ಸ್ಟೋರೇಜ್‌ ಹೊಂದಿದೆ.

ಕಾರ್ಯದಕ್ಷತೆ ಹೇಗಿದೆ?

ಕಾರ್ಯದಕ್ಷತೆ ಹೇಗಿದೆ?

ಈ ಪ್ರೊಸೆಸರ್‌ನಲ್ಲಿ ಹೆಚ್ಚಿನ ಮಲ್ಟಿ-ಕೋರ್ ಟರ್ಬೊ ಫ್ರಿಕ್ವೆನ್ಸಿ ಪಡೆದುಕೊಳ್ಳಬಹುದು. ಇದರಲ್ಲಿ ಗೇಮಿಂಗ್ ಕಾರ್ಯಕ್ಷಮತೆಗಾಗಿ ಇಂಟೆಲ್ ಅಡಾಪ್ಟಿವ್ ಬೂಸ್ಟ್ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಇದು ಇತ್ತೀಚಿನ BIOS ಜೊತೆಗೆ ಅಸ್ತಿತ್ವದಲ್ಲಿರುವ Z690 ಮದರ್‌ಬೋರ್ಡ್‌ಗಳೊಂದಿಗೆ ಹೊಂದಿಕೊಳ್ಳುತ್ತದೆ. ಇನ್ನು i9-12900KS ಪ್ರೊಸೆಸರ್ ಗೇಮರುಗಳಿಗಾಗಿ ಮತ್ತು ಓವರ್‌ಕ್ಲಾಕಿಂಗ್ ಉತ್ಸಾಹಿಗಳಿಗೆ ಕಾರ್ಯಕ್ಷಮತೆಯನ್ನು ಮುಂದಿನ ಹಂತಕ್ಕೆ ತೆಗೆದುಕೊಳ್ಳಲು ಅನುಮತಿಸುತ್ತದೆ. ಈ ಹೊಸ ಪ್ರೊಸೆಸರ್‌ 9 ನೇ ತಲೆಮಾರಿನ ಇಂಟೆಲ್‌ ಕೋರ್‌ 'Ice Lake' 10nm CPU ಬಳಕೆದಾರರಿಗೆ ನೀಡಿರುವುದನ್ನು ಗಮನಿಸಬಹುದಾಗಿದೆ. ಈ ಎಲ್ಲಾ ಕೋರ್‌ಗಳಲ್ಲಿ CPU ಅನ್ನು 5.0GHz ಗೆ ಹೆಚ್ಚಿಸುವ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದೇ ಕಾರಣಕ್ಕೆ ಈ ಹೊಸ ಕೋರ್ i9-12900KS ಒಂದೇ ಕೋರ್‌ನಲ್ಲಿ 5.5GHz ಬೂಸ್ಟ್ ಕ್ಲಾಕ್‌ ಅನ್ನು ನೀಡಲಿದೆ ಎನ್ನಲಾಗಿದೆ.

ಇಂಟೆಲ್‌ನ

ಅಲ್ಲದೆ ಇಂಟೆಲ್‌ನ ಗೇಮಿಂಗ್, ಕ್ರಿಯೇಟರ್ ಮತ್ತು ಎಸ್‌ಪೋರ್ಟ್ಸ್ ವಿಭಾಗದ ಜನರಲ್ ಮ್ಯಾನೇಜರ್ ಮಾರ್ಕಸ್ ಕೆನಡಿ ಹೇಳಿರುವಂತೆ ಇಂಟೆಲ್ ಹೊಸ 12 ನೇ ಜನ್ ಇಂಟೆಲ್ ಕೋರ್ i9-12900KS ಪ್ರೊಸೆಸರ್‌ನೊಂದಿಗೆ ಡೆಸ್ಕ್‌ಟಾಪ್ ಗೇಮಿಂಗ್‌ಗಾಗಿ ಹೊದಿಕೆಯನ್ನು ಮುಂದುವರಿಸುತ್ತಿದೆ. ಇಂಟೆಲ್‌ನ 12 ನೇ ಜನ್ ಕಾರ್ಯಕ್ಷಮತೆಯ ಹೈಬ್ರಿಡ್ ಆರ್ಕಿಟೆಕ್ಚರ್ ಅನ್ನು ಆಧರಿಸಿ, ಈ ಪ್ರೊಸೆಸರ್ ಮೊದಲ ಬಾರಿಗೆ ಎರಡು ಕೋರ್‌ಗಳಲ್ಲಿ 5.5 GHz ಅನ್ನು ಹೊಂದಿರಲಿದೆ ಎಂದಿದ್ದಾರೆ. ಇದು ಅತ್ಯಂತ ತೀವ್ರವಾದ ಗೇಮರ್‌ಗಳಿಗೆ ಕಾರ್ಯಕ್ಷಮತೆಯನ್ನು ಗರಿಷ್ಠಗೊಳಿಸುವ ಸಾಮರ್ಥ್ಯವನ್ನು ನೀಡುತ್ತದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಇನ್ನು ಈ ಪ್ರೊಸೆಸರ್ ಏಪ್ರಿಲ್ 5 ರಿಂದ ಲಭ್ಯವಾಗಲಿದೆ. ಇದರ ಗ್ರಾಹಕ ಬೆಲೆ $739 (ಸುಮಾರು 56,200ರೂ.) ಗಳಿಂದ ಪ್ರಾರಂಭವಾಗಲಿದೆ ಎನ್ನಲಾಗಿದೆ. ಅಲ್ಲದೆ ಇಂಟೆಲ್‌ ಕಂಪನಿಯು ಇದನ್ನು ಪ್ರಪಂಚದಾದ್ಯಂತದ ಚಿಲ್ಲರೆ ವ್ಯಾಪಾರಿಗಳಲ್ಲಿ ಬಾಕ್ಸ್ಡ್ ಪ್ರೊಸೆಸರ್‌ನಂತೆ ಕಾಣಬಹುದು. ಜೊತೆಗೆ ಇಂಟೆಲ್‌ನ ಚಾನಲ್ ಮತ್ತು OEM ಪಾಲುದಾರರಿಂದ ಸಿಸ್ಟಮ್‌ಗಳಲ್ಲಿ ಸಂಯೋಜಿಸಲ್ಪಟ್ಟಿದೆ ಎಂದು ಹೇಳಿದೆ.

Best Mobiles in India

English summary
Intel core i9-12900ks launched as world's fastest desktop processor

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X