ಇಂಟೆಲ್‌ನಿಂದ ಹೊಸ ಪ್ರೊಸೆಸರ್ ಲಾಂಚ್! ಕಾರ್ಯದಕ್ಷತೆ ಕೇಳಿದ್ರೆ ಶಾಕ್ ಆಗ್ತೀರಾ!
ಪ್ರೊಸೆಸರ್ ತಯಾರಕ ಕಂಪೆನಿಗಳಲ್ಲಿ ಇಂಟೆಲ್ ಸಂಸ್ಥೆ ಮುಂಚೂಣಿಯಲ್ಲಿ ಗುರುತಿಸಿಕೊಂಡಿದೆ. ಇದೀಗ ತನ್ನ ಮುಂದಿನ-ಪೀಳಿಗೆಯ ಮೊಬೈಲ್ ಪ್ರೊಸೆಸರ್‌ಗಳನ್ನು ಅಧಿಕೃತವಾಗಿ ಅನಾವರಣಗೊಳಿಸಿದೆ. ಇದನ್ನು ಇಂಟೆಲ್ ಕೋರ್ ಅಲ್ಟ್ರಾ ಎಂದು ಹೆಸರಿಸಲಾಗಿದ್ದು, ಇದು ಕಂಪೆನಿಯ ಮೊದಲ ಗ್ರಾಹಕ-ವಿಭಾಗದ ಪ್ರೊಸೆಸರ್‌ಗಳು ಡೆಡಿಕೇಟೆಡ್ ನ್ಯೂರಲ್ ಪ್ರೊಸೆಸಿಂಗ್ ಯೂನಿಟ್ (ಎನ್‌ಪಿಯು) ಅನ್ನು ಒಳಗೊಂಡಿದೆ.
ಹೌದು, ಇಂಟೆಲ್ ಕೋರ್ ಅಲ್ಟ್ರಾ ಹೆಸರಿನ ಪ್ರೊಸೆಸರ್ ಅನ್ನು ಬಿಡುಗಡೆ ಮಾಡಲಾಗಿದೆ. ಈ ಪ್ರೊಸೆಸರ್‌ನಲ್ಲಿರುವ "ಎಐ ಎವೆರಿವೇರ್" ನಲ್ಲಿ ಆನ್-ಡಿವೈಸ್ ಜನರೇಟಿವ್ ಎಐ ಅನುಭವವನ್ನು ನೀಡುವ ಸಾಮರ್ಥ್ಯವನ್ನು ನೀಡಲಾಗಿದೆ. ಈ ಪ್ರೊಸೆಸರ್ ಹಲವು ಜನಪ್ರಿಯ ಲ್ಯಾಪ್‌ಟಾಪ್‌ಗಳಲ್ಲಿ ಲಭ್ಯವಾಗಲಿದೆ ಎನ್ನಲಾಗಿದೆ. ಹಾಗಾದ್ರೆ ಇಂಟೆಲ್ ಕೋರ್ ಅಲ್ಟ್ರಾ ಪ್ರೊಸೆಸರ್ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಇಂಟೆಲ್ ಕೋರ್ ಅಲ್ಟ್ರಾ ಪ್ರೊಸೆಸರ್ ಏಸರ್, ಆಸುಸ್, ಡೆಲ್, ಡೈನಾಬುಕ್, ಗಿಗಾಬೈಟ್, ಗೂಗಲ್ ಕ್ರೋಮ್‌ಬುಕ್, HP, ಲೆನೊವೊ, LG, ಮೈಕ್ರೋಸಾಫ್ಟ್ ಸರ್ಫೆಸ್, MSI ಮತ್ತು ಸ್ಯಾಮ್‌ಸಂಗ್ ನಂತಹ ಪ್ರಮುಖ OEMಗಳಲ್ಲಿ ಈ ಪ್ರೊಸೆಸರ್ ಇರಲಿದೆ. ಇಂಟೆಲ್ ಕೋರ್ ಅಲ್ಟ್ರಾ ಪ್ರೊಸೆಸರ್ ಮೂಲಕ 230ಕ್ಕೂ ಹೆಚ್ಚು ಪರ್ಸನಲ್ ಕಂಪ್ಯೂಟರ್‌ಗಳು ರನ್ ಆಗಲಿದ್ದು, ಇವುಗಳನ್ನು ವಿಶ್ವದ ಮೊದಲ AI PC ಗಳು ಎಂದು ಹೇಳಲಾಗಿದೆ.
ಇನ್ನು ಈ ಪ್ರೊಸೆಸರ್ ಬಗ್ಗೆ ಇಂಟೆಲ್ ಕಾರ್ಯನಿರ್ವಾಹಕ ಉಪಾಧ್ಯಕ್ಷ ಮತ್ತು ಕ್ಲೈಂಟ್ ಕಂಪ್ಯೂಟಿಂಗ್ ಗ್ರೂಪ್‌ನ ಜನರಲ್ ಮ್ಯಾನೇಜರ್ ಮಿಚೆಲ್ ಜಾನ್ಸ್‌ಟನ್ ಹೋಲ್ಥಾಸ್ ಮಾತನಾಡಿದ್ದಾರೆ. ಅವರು ನೀಡಿರುವ ಮಾಹಿತಿಯ ಪ್ರಕಾರ 2028ರ ವೇಳೆಗೆ, AI PC ಗಳು PC ಮಾರುಕಟ್ಟೆಯಲ್ಲಿ 80% ಇರಲಿವೆ. ನಮ್ಮ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಪಾಲುದಾರರ ವಿಶಾಲ ಪರಿಸರ ವ್ಯವಸ್ಥೆಯೊಂದಿಗೆ, ಇಂಟೆಲ್ ಇನ್ನಷ್ಟು ಉತ್ತಮ ಸ್ಥಾನದಲ್ಲಿರಲಿದೆ ಎಂದು ಹೇಳಿದ್ದಾರೆ.

ಈ ಪ್ರೊಸೆಸರ್ ಕಾರ್ಯಕ್ಷಮತೆಗೆ ಸಂಬಂಧಿಸಿದಂತೆ, ಇದು ಟ್ರೈ ಕ್ಲಸ್ಟರ್ CPU - P ಅಥವಾ ಕಾರ್ಯಕ್ಷಮತೆಯ ಕೋರ್‌ಗಳನ್ನು ಹೊಂದಿದೆ. E ಅಥವಾ ದಕ್ಷತೆಯ ಕೋರ್‌ಗಳು ಮತ್ತು LP E ಅಥವಾ ಕಡಿಮೆ-ಶಕ್ತಿಯ ದಕ್ಷತೆಯ ಕೋರ್‌ಗಳ ಜೊತೆಗೆ ಇಂಟಿಗ್ರೇಟೆಡ್ ಆರ್ಕ್ GPU ಜೊತೆಗೆ ಎಂಟು Xe ಕೋರ್‌ಗಳನ್ನು ಹೊಂದಿದೆ. ಜೊತೆಗೆ ಇಂಟೆಲ್ ಕೋರ್ ಅಲ್ಟ್ರಾ 7 165H AMD Ryzen 7 7840U, Snapdragon 8cx Gen 3, ಮತ್ತು Apple Silicon M3 ಮತ್ತು ಹಿಂದಿನ ಪೀಳಿಗೆಗಿಂತ 2.5x ಪಟ್ಟು ಹೆಚ್ಚು ಶಕ್ತಿಯ ದಕ್ಷತೆಯನ್ನು ನೀಡಲಿವೆ.
ಇದಲ್ಲದೆ ಹೊಸ ಇಂಟೆಲ್ ಕೋರ್ ಅಲ್ಟ್ರಾ 5.1 GHz ನ ಉನ್ನತ CPU ಗಡಿಯಾರದ ವೇಗದೊಂದಿಗೆ 16 ಕೋರ್ CPU , 22 ಥ್ರೆಡ್‌ಗಳನ್ನು ನೀಡುತ್ತದೆ. ಜೊತೆಗೆ 96 GB ವರೆಗಿನ DDR5 ಅಥವಾ 64 GB LPDDR5x ಮೆಮೊರಿಗೆ ಬೆಂಬಲವನ್ನು ಸಹ ನೀಡಲಿದ್ದು, ಥಂಡರ್ಬೋಲ್ಟ್ 4 ಬೆಂಬಲವು ಸೆಕೆಂಡಿಗೆ 40 ಗಿಗಾಬಿಟ್‌ಗಳವರೆಗೆ (Gbps) ಡೇಟಾ ವರ್ಗಾವಣೆ ವೇಗವನ್ನು ನೀಡಲಿದೆ. ಇನ್ನು AI ಸಾಮರ್ಥ್ಯಗಳ ಹೊರತಾಗಿ, ಇಂಟೆಲ್ ಕೋರ್ ಅಲ್ಟ್ರಾ ಕಂಪನಿಯ ಮೊದಲ ಪ್ರೊಸೆಸರ್ ಆಗಿದ್ದು, ಅತ್ಯಾಧುನಿಕ 4nm ಪ್ರಕ್ರಿಯೆಯನ್ನು ಬಳಸಿಕೊಂಡು ಫ್ಯಾಬ್ ಮಾಡಲಾಗಿದ್ದು, ಫೊವೆರೋಸ್ 3D ಸುಧಾರಿತ ಪ್ಯಾಕೇಜಿಂಗ್ ಅನ್ನು ಸಹ ಬಳಸಲಾಗಿದೆ.

ಇನ್ನು ಇಂಟೆಲ್ ಕೋರ್ ಅಲ್ಟ್ರಾವನ್ನು ಆಧರಿಸಿ, ಕಂಪನಿಯು ಲ್ಯಾಪ್‌ಟಾಪ್‌ಗಳಿಗಾಗಿ ಇಂಟೆಲ್ ಇವೊ ಆವೃತ್ತಿಯನ್ನು ಸಹ ಪ್ರಕಟಿಸಿದೆ. ಇದು ಪ್ರತಿ ಚಾರ್ಜ್‌ಗೆ 10 ಗಂಟೆಗಳ ರಿಯಲ್-ವರ್ಲ್ಡ್ ಬ್ಯಾಟರಿ ಟೈಂ ನೀಡಲಿದೆ. ಕೂಲರ್, ನಿಶ್ಯಬ್ದ ಕಾರ್ಯಕ್ಷಮತೆ, ವೇಗದ ಚಾರ್ಜಿಂಗ್ ಮತ್ತು ತ್ವರಿತ ವೇಕ್ ಬೆಂಬಲವನ್ನು ಸಹ ನೀಡುತ್ತದೆ. ಇದಲ್ಲದೆ ಮುಂಬರುವ ದಿನಗಳಲ್ಲಿ, ಇಂಟೆಲ್ ಕಮರ್ಷಿಯಲ್ ಡಿವೈಸ್‌ಗಳಿಗಾಗಿ ಇಂಟೆಲ್ ಕೋರ್ ಅಲ್ಟ್ರಾ-ಆಧಾರಿತ vPro ಪ್ಲಾಟ್‌ಫಾರ್ಮ್ ಅನ್ನು ಸಹ ಅನಾವರಣಗೊಳಿಸಲಿದೆ.


Click it and Unblock the Notifications








