ನಿಮ್ಮ ಫೋನ್‌ನಲ್ಲಿರುವ ವಾಟ್ಸ್‌ಆಪ್‌ ಬಗ್ಗೆ ಎಷ್ಟು ಗೊತ್ತು.? ಹೇಳ್ತೀವಿ ಕೇಳಿ..!

By Avinash

  ಸ್ಮಾರ್ಟ್‌ಫೋನ್ ಯುಗದಲ್ಲಿ ವಾಟ್ಸ್‌ಆಪ್ ಯಾರಿಗ್ ತಾನೇ ಗೊತ್ತಿಲ್ಲ ಹೇಳಿ. ಹಳ್ಳಿಯಿಂದ ದಿಲ್ಲಿ ಜನರವರೆಗೂ, ಮಕ್ಕಳಿಂದಿಡಿದು ವೃದ್ಧರವರೆಗೂ ವಾಟ್ಸ್‌ಆಪ್ ಹೆಸರು ಗೊತ್ತೇ ಗೊತ್ತಿರುತ್ತೆ. ಆದರೆ, ನಾವು ಇಲ್ಲಿ ಹೇಳುವ ವಾಟ್ಸ್‌ಆಪ್ ವಿಷಯಗಳು ನಿಮಗೆ ಗೊತ್ತಿರಲಿಕ್ಕಿಲ್ಲ. ಇನ್‌ಸ್ಟಾಂಟ್‌ ಮೆಸೆಂಜರ್ ಆಗಿರುವ ವಾಟ್ಸ್‌ಆಪ್ ಎಲ್ಲರ ಮೊಬೈಲ್‌ನಲ್ಲೂ ಸ್ಥಾನ ಪಡೆದಿದೆ. ಬಳಕೆದಾರ ಸ್ನೇಹಿ ಪ್ರವೃತ್ತಿಯಿಂದಲೇ ಹೆಸರು ಪಡೆದಿರುವ ವಾಟ್ಸ್‌ಆಪ್ ಅನೇಕ ಆಪ್‌ಗಳ ತೀವ್ರ ಸ್ಪರ್ಧೆಯಿಂದಲೂ ತನ್ನ ಬಳಕೆದಾರರನ್ನು ಬಿಟ್ಟುಕೊಟ್ಟಿಲ್ಲ.

  ವಾಟ್ಸ್‌ಆಪ್‌ ಬಗ್ಗೆ ಎಷ್ಟು ಗೊತ್ತು.? ಹೇಳ್ತೀವಿ ಕೇಳಿ..!

  ಪ್ರಸ್ತುತ ವಾಟ್ಸ್‌ಆಪ್‌ನ್ನು ಬಹಳಷ್ಟು ಜನಕ್ಕೆ ಬಿಟ್ಟಿರುವುದಕ್ಕೆ ಆಗೋದೆ ಇಲ್ವಂತೆ. 1 ಬಿಲಿಯನ್‌ಗೂ ಹೆಚ್ಚು ಬಳಕೆದಾರರನ್ನು ಹೊಂದಿರುವ ವಾಟ್ಸ್‌ಆಪ್‌ಗೆ ದಿನದಿಂದ ದಿನಕ್ಕೆ ಜನಪ್ರಿಯತೆ ಹೆಚ್ಚುತ್ತಾ ಇದೆ. ಹೊಸ ಫೀಚರ್‌ ಹಾಗೂ ಅಪ್‌ಡೇಟ್‌ಗಳೊಂದಿಗೆ ವಾಟ್ಸ್‌ಆಪ್‌ ಜನರನ್ನು ಹಿಡಿದಿಟ್ಟುಕೊಂಡಿದೆ. ಇಂತಹ ವಾಟ್ಸ್‌ಆಪ್‌ ಕುರಿತು ಅನೇಕ ವಿಷಯಗಳು ಬಹಳಷ್ಟು ಜನಕ್ಕೆ ಗೊತ್ತೆ ಇಲ್ಲ. ಅಂತಹ ಗೊತ್ತಿರದ ವಾಟ್ಸ್‌ಆಪ್ ವಿಷಯಗಳ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ ಇದು.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  1.ಫೇಸ್‌ಬುಕ್ ಕೆಲಸಕ್ಕಾಗಿ ಅರ್ಜಿ

  2009ರಲ್ಲಿ ಫೇಸ್‌ಬುಕ್‌ ಕೆಲಸಕ್ಕಾಗಿ ವಾಟ್ಸ್‌ಆಪ್ ಸಂಸ್ಥಾಪಕರಾದ ಜಾನ್ ಕೌಮ್ ಮತ್ತು ಬ್ರಿಯಾನ್ ಆಕ್ಟನ್ ಇಬ್ಬರೂ ಅರ್ಜಿ ಸಲ್ಲಿಸಿರುತ್ತಾರೆ ಎಂದರೆ ನೀವು ನಂಬಲೇಬೇಕು. ಆದರೆ, ಅವರಿಬ್ಬರ ಅರ್ಜಿಯನ್ನು ಫೇಸ್‌ಬುಕ್ ತಿರಸ್ಕರಿಸಿತ್ತು.

  2. 5 ಸಾವಿರ ಕೋಟಿ ಸಂದೇಶ

  ವಾಟ್ಸ್‌ಆಪ್‌ನಲ್ಲಿ ಪ್ರತಿದಿನ 5 ಕೋಟಿಗೂ ಹೆಚ್ಚು ಸಂದೇಶಗಳನ್ನು ಕಳುಹಿಸಲಾಗುತ್ತದೆಯಂತೆ.

  3. ಭಾರತದಲ್ಲಿಯೇ ಹೆಚ್ಚು ಬಳಕೆದಾರರು

  ವಿಶ್ವದ ಇತರ ದೇಶಗಳಿಗೆ ಹೋಲಿಸಿದರೆ, ವಾಟ್ಸ್‌ಆಪ್‌ ಬಳಕೆದಾರರಲ್ಲಿ ಹೆಚ್ಚಿನವರು ಭಾರತದವರೇ ಎನ್ನುವುದನ್ನು ಮರೆಯಂಗಿಲ್ಲ. ಜನಸಂಖ್ಯೆ ಮತ್ತು ಸ್ಮಾರ್ಟ್‌ಫೋನ್ ಬಳಕೆದಾರರು ಹೆಚ್ಚಿರುವುದರಿಂದ ಈ ಫಲಿತಾಂಶ ಬಂದೇ ಬರುತ್ತೆ.

  4. ಸೆಲ್ಫಿ ಹಂಚಿಕೆಯೇ ಹೆಚ್ಚು

  ಸಾಮಾಜಿಕ ಜಾಲತಾಣದಲ್ಲಿ ಸೆಲ್ಫಿ ಪೋಟೋಗಳನ್ನು ಶೇರ್ ಮಾಡುವ ಬೆಸ್ಟ್‌ ತಾಣವಾಗಿ ವಾಟ್ಸ್‌ಆಪ್ ಇದೆ. ಶೇ.27ರಷ್ಟು ಸೆಲ್ಫಿಗಳನ್ನು ವಾಟ್ಸ್‌ಆಪ್‌ ಮೂಲಕ ಶೇರ್ ಮಾಡಲಾಗುತ್ತದೆ.

  5. ಜಾಹೀರಾತಿಗೆ ಒಂದು ರೂಪಾಯಿ ಖರ್ಚು ಮಾಡಿಲ್ಲ

  ವಾಟ್ಸ್‌ಆಪ್ ಬಗ್ಗೆ ವಿಶ್ವದ ಎಲ್ಲಾ ಕಡೆಯೂ ಗೊತ್ತಿದೆ. ಜನಪ್ರಿಯವಾಗಿರುವ ವಾಟ್ಸ್‌ಆಪ್ ತನ್ನನ್ನು ತಾನು ಬ್ರಾಂಡ್ ಮಾಡಿಕೊಳ್ಳಲು ಅಥವಾ ಜನರನ್ನು ತಲುಪಲು ಜಾಹೀರಾತಿಗೋಸ್ಕರ ಒಂದು ರೂಪಾಯಿ ಖರ್ಚು ಮಾಡಿಲ್ಲ ಎಂದರೆ ನಂಬಬೇಕಾಗಿದೆ.

  6. ಪ್ರತಿ ದಿನ ಹೊಸ ಬಳಕೆದಾರರು

  ನಿಮಗೆ ಗೊತ್ತಿರಲಿಕ್ಕಿಲ್ಲ, ವಿಶ್ವದಲ್ಲಿ ಪ್ರತಿದಿನವೂ 10 ಮಿಲಿಯನ್‌ಗಿಂತಲೂ ಹೆಚ್ಚು ಜನ ವಾಟ್ಸ್‌ಆಪ್‌ ಬಳಸಲು ಪ್ರಾರಂಭಿಸುತ್ತಾರಂತೆ.

  7. 100 ಮಿಲಿಯನ್‌ಗೂ ಹೆಚ್ಚು ಗುಂಪುಗಳು

  ವಾಟ್ಸ್‌ಆಪ್‌ನಲ್ಲಿ 100 ಮಿಲಿಯನ್‌ಗೂ ಹೆಚ್ಚು ಗುಂಪುಗಳಿವೆಯಂತೆ. ಒಬ್ಬಬ್ರೂ ಏನಿಲ್ಲ ಎಂದರೂ ಒಂದು ಗುಂಪು ಮಾಡಿಯೇ ಇರುತ್ತಾರೆ. ಈ ಸಂಖ್ಯೆ ವಾಟ್ಸ್ಆಪ್ ಬಳಕೆದಾರರನ್ನು ಮೀರಿದರೂ ಅಚ್ಚರಿ ಪಡಬೇಕಿಲ್ಲ.

  8.ಸ್ವಚ್ಛತಾ ಕೆಲಸ ಮಾಡುತ್ತಿದ್ದ ಜಾನ್ ಕೋಮ್

  ವಾಟ್ಸ್‌ಆಪ್ ಸಂಸ್ಥಾಪಕ ಜಾನ್‌ ಕೋಮ್‌ ವಾಟ್ಸ್‌ಆಪ್ ಸ್ಥಾಪಿಸುವ ಮುಂಚೆ ಅಂಗಡಿಯೊಂದರಲ್ಲಿ ಸ್ವಚ್ಛತಾ ಕೆಲಸ ಮಾಡುತ್ತಿದ್ದ. ಆದರೆ, ಈಗ ವಿಶ್ವದ ಬಿಲಿಯೇನರ್‌ಗಳಲ್ಲಿ ಒಬ್ಬರು.

  9. ದುಬಾರಿ ವ್ಯವಹಾರ

  ವಾಟ್ಸ್‌ಆಪ್‌ನ್ನು ಸಾಮಾಜಿಕ ಜಾಲತಾಣದ ದೈತ್ಯ ಫೇಸ್‌ಬುಕ್‌ 1182 ಶತಕೋಟಿ ಡಾಲರ್‌ಗೆ ಖರೀದಿಸಿತು. ಈ ವ್ಯವಹಾರ ಇಲ್ಲಿಯವರೆಗೂ ಅತಿ ದುಬಾರಿಯಾದ ವ್ಯವಹಾರವಾಗಿದೆ. 2014ರ ವ್ಯಾಲೆಂಟೈನ್ಸ್‌ ಡೇಯಂದು ಈ ವ್ಯವಹಾರ ನಡೆಯಿತು.

  10. ಆಪಲ್‌ ಸ್ಟೋರ್‌ನಲ್ಲಿ ಮೊದಲು ಇದ್ದಿಲ್ಲ

  ಜನವರಿ 2012ರಲ್ಲಿ ವಾಟ್ಸ್‌ಆಪ್‌ನ್ನು iOS ಆಪ್‌ ಸ್ಟೋರ್‌ನಲ್ಲಿ ನೀಡಲಾಗಿತ್ತು. ಆದರೆ, ಆಪಲ್ ಸ್ಟೋರ್‌ಗೆ ನೀಡದೆ ಆಪ್‌ ಸ್ಟೋರ್‌ನಲ್ಲಿ ವಾಟ್ಸ್‌ಆಪ್ ಲಭ್ಯವಿತ್ತು. ಆದರೆ, 4 ದಿನಗಳ ನಂತರ ಆಪಲ್ ಸ್ಟೋರ್‌ಗೆ ವಾಟ್ಸ್‌ಆಪ್‌ನ್ನು ಸೇರಿಸಲಾಯಿತು.

  11. ಕೆಲಸ ನೀಡಲು ನಿರಾಕರಿಸಿದ ಕಂಪನಿಯೇ ವಾಟ್ಸ್‌ಆಪ್‌ ತೆಗೆದುಕೊಂಡಿತು

  2009ರಲ್ಲಿ ವಾಟ್ಸ್‌ಆಪ್ ಸಂಸ್ಥಾಪಕ ಬ್ರೇನ್ ಆಕ್ಟನ್‌ಗೆ ಫೇಸ್‌ಬುಕ್ ಕೆಲಸ ನೀಡಲು ನಿರಾಕರಿಸಿತ್ತು. ಆದರೆ, ಅದೇ ಫೇಸ್‌ಬುಕ್‌, 2014ರ ಫೆಬ್ರವರಿಯಲ್ಲಿ ವಾಟ್ಸ್‌ಆಪ್‌ನ್ನು ಬೃಹತ್ ಮೊತ್ತಕ್ಕೆ ತೆಗೆದುಕೊಂಡಿತು.

  12.ಬ್ಲಾಕ್ ಅಥವಾ ಸೇವ್ ಮಾಡಿಲ್ಲ

  ಯಾರೋ ನಿಮಗೆ ಲಿಂಕ್ ಅಥವಾ ಮೇಸೆಜ್ ಕಳುಹಿಸಿದ್ದರೆ ಅವರ ಪ್ರೊಫೈಲ್ ಚಿತ್ರ ನೋಡಲು ನಿಮಗೆ ಸಾಧ್ಯವಾಗದಿದ್ದರೆ ಇದಕ್ಕೆ 2 ರೀತಿಯ ಕಾರಣಗಳಿವೆ. ನೀವು ಅವರ ಕಾಂಟ್ಯಾಕ್ಟ್‌ ಲೀಸ್ಟ್‌ನಲ್ಲಿ ಇಲ್ಲ ಅಥವಾ ನಿಮ್ಮನ್ನು ಬ್ಲಾಕ್ ಮಾಡಲಾಗಿದೆ ಎಂದು.

  13. ಹೆಚ್ಚು ಡೌನ್‌ಲೋಡ್‌ ಮಾಡಿದ ಆಪ್‌

  ವಾಟ್ಸ್‌ಆಪ್‌ ವಿಶ್ವದಲ್ಲಿಯೇ ಅತಿಹೆಚ್ಚು ಡೌನ್‌ಲೋಡ್‌ ಮಾಡಿದ ಆಪ್‌ಗಳಲ್ಲಿ 5ನೇ ಸ್ಥಾನ ಪಡೆದಿದ್ದು, 1 ಬಿಲಿಯನ್‌ಗೂ ಹೆಚ್ಚು ಜನ ವಾಟ್ಸ್‌ಆಪ್‌ ಬಳಸುತ್ತಿದ್ದಾರೆ.

  14. ನಾಸಾ ಬಜೆಟ್‌

  ವಾಟ್ಸ್‌ಆಪ್‌ನ ಒಂದು ವರ್ಷದ ಟರ್ನ್‌ ಓವರ್ ವ್ಯವಹಾರ ನಾಸಾದ ಒಂದು ವರ್ಷದ ಬಜೆಟ್‌ಗಿಂತ ಹೆಚ್ಚಂತೆ.

  15. ಶೇರ್ ಆಗುವ ಪೋಟೋಗಳು ಎಷ್ಟು ಗೊತ್ತಾ?

  ವಾಟ್ಸ್‌ಆಪ್‌ನಲ್ಲಿ ಪ್ರತಿದಿನ 160 ಮಿಲಿಯನ್‌ಗಿಂತಲೂ ಹೆಚ್ಚು ಪೋಟೋಗಳು ಶೇರ್ ಆಗುತ್ತವೆ ಎಂದರೆ ವಾಟ್ಸ್‌ಆಪ್‌ ಜನಪ್ರಿಯತೆ ಅರ್ಥವಾಗುತ್ತದೆ.

  16. ನಿದ್ದೆಯಲ್ಲೂ ಬಳಕೆ

  ವಾಟ್ಸ್‌ಆಪ್‌ನ್ನು ರಾತ್ರಿ ನಿದ್ದೆಯಲ್ಲೂ ಬಳಕೆದಾರರು ಬಳಸುತ್ತಿದ್ದು, ದಿನಕ್ಕೆ 20 ರಿಂದ 25 ಬಾರಿ ವಾಟ್ಸ್‌ಆಪ್‌ನ್ನು ಬಳಸುತ್ತಾರೆ.

  17. ವೇಗದ ಯಶಸ್ಸು

  ವಾಟ್ಸ್‌ಆಪ್‌ ವಿಶ್ವದಲ್ಲಿಯೇ ಅತಿ ವೇಗವಾಗಿ ಬೆಳೆಯುತ್ತಿರುವ ಕಂಪನಿಯಾಗಿದೆ. ವಿಶ್ವದ ಯಾವುದೇ ಕಂಪನಿ ಇಲ್ಲಿಯವರೆಗೂ ಇಷ್ಟೊಂದು ವೇಗವಾಗಿ ಯಶಸ್ಸನ್ನು ಗಳಿಸಿಲ್ಲ.

  18. ವಿವಿಧ ಭಾಷೆಗಳಲ್ಲಿ ಲಭ್ಯ

  ವಾಟ್ಸ್‌ಆಪ್‌ ವಿಶ್ವದ ನಾನಾ ಭಾಷೆಗಳಲ್ಲಿ ಲಭ್ಯವಿದೆ. ಸುಮಾರು 60 ಭಾಷೆಗಳಲ್ಲಿ ವಾಟ್ಸ್‌ಆಪ್ ಲಭ್ಯವಿದ್ದು, ವಾಟ್ಸ್‌ಆಪ್ ಯಶಸ್ಸಿಗೆ ಇದು ಸಹ ಪ್ರಮುಖ ಕಾರಣ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  Interesting Facts about Whatsapp. To know more this visit kannada.gizbot.com
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more