Home
ಸುದ್ದಿಜಾಲ

ಬೆಂಗಳೂರು ವಿದ್ಯಾರ್ಥಿ ಪಾಲಿವಾಲ್‌ಗೆ ಗೂಗಲ್‌ನಲ್ಲಿ 1.2 ಕೋಟಿ ರೂ. ವೇತನ..!

By Avinash

ದಿನ ಕಳೆದಂತೆ ಮಾಹಿತಿ ತಂತ್ರಜ್ಞಾನ ಲೋಕದಲ್ಲಿ ಭಾರತೀಯರ ಸಾಧನೆ ಉತ್ತುಂಗ ಮುಟ್ಟುತ್ತಿದೆ. ದಿಗ್ಗಜ ಐಟಿ ಕಂಪನಿಗಳೆಲ್ಲ ಭಾರತೀಯ ಸಂಜಾತರ ಆಡಳಿತದಲ್ಲಿರುವ ಬೆನ್ನಲ್ಲೇ ಭಾರತೀಯ ಐಟಿ ಲೋಕಕ್ಕೆ ಮತ್ತೊಂದು ಗರಿಮೆ ಸಂದಿದೆ. ಹೌದು, ಭಾರತದ ವಿದ್ಯಾರ್ಥಿಯೊಬ್ಬ ಸರ್ಚ್‌ ಇಂಜಿನ್ ದೈತ್ಯ ಗೂಗಲ್‌ನಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದು, ವಾರ್ಷಿಕ ಬರೋಬ್ಬರಿ 1.2 ಕೋಟಿ ರೂ. ವೇತನ ಪಡೆಯಲಿದ್ದಾರೆ.

ಬೆಂಗಳೂರು ವಿದ್ಯಾರ್ಥಿ ಪಾಲಿವಾಲ್‌ಗೆ ಗೂಗಲ್‌ನಲ್ಲಿ 1.2 ಕೋಟಿ ರೂ. ವೇತನ..!

ಐಟಿ ಹಬ್ ಎಂದೇ ಖ್ಯಾತಿ ಆಗಿರುವ ಬೆಂಗಳೂರಿನ 22 ವರ್ಷದ ವಿದ್ಯಾರ್ಥಿ ಆದಿತ್ಯ ಪಾಲಿವಾಲ್‌ ಗೂಗಲ್‌ನಲ್ಲಿ ಉದ್ಯೋಗ ಗಿಟ್ಟಿಸಕೊಂಡವರು. ಮಾಸಿಕ 10 ಲಕ್ಷ ರೂ. ವೇತನ ಪಡೆಯುವ ಬಿಗ್ ಪ್ಯಾಕೇಜ್ ಪಡೆದಿರುವ ಆದಿತ್ಯ ಬೆಂಗಳೂರಿನ ಅಂತಾರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯ (ಐಐಐಟಿ-ಬಿ) ವಿದ್ಯಾರ್ಥಿ ಎನ್ನುವುದು ಕರ್ನಾಟಕ ಶೈಕ್ಷಣಿಕ ಕ್ಷೇತ್ರಕ್ಕೆ ಮತ್ತೊಂದು ಗರಿಮೆ.

ಕೃತಕ ಬುದ್ಧಿಮತ್ತೆ ವಿಭಾಗದಲ್ಲಿ ಉದ್ಯೋಗ

ಕೃತಕ ಬುದ್ಧಿಮತ್ತೆ ವಿಭಾಗದಲ್ಲಿ ಉದ್ಯೋಗ

ಗೂಗಲ್‌ನ ನ್ಯೂಯಾರ್ಕ್‌ ಕಚೇರಿಯ ಕೃತಕ ಬುದ್ಧಿಮತ್ತೆ (ಆರ್ಟಿಫೀಶಿಯಲ್ ಇಂಟಲಿಜೆನ್ಸ್‌) ಗೂಗಲ್ ರೆಸಿಡೆನ್ಸಿ ಪ್ರೋಗ್ರಾಮ್‌ನಲ್ಲಿ ಉದ್ಯೋಗಕ್ಕೆ ಆಯ್ಕೆಯಾಗಿರುವ ಆದಿತ್ಯ ಪಾಲಿವಾಲ್‌ ಬೆಂಗಳೂರಿನ ಐಐಐಟಿಯಲ್ಲಿ ಸಂಯೋಜಿತ ಎಂಟೆಕ್ ವಿದ್ಯಾರ್ಥಿಯಾಗಿ ವ್ಯಾಸಂಗ ಮಾಡುತ್ತಿದ್ದರು. ಇದೇ ಜುಲೈ 16ರಂದು ಕೆಲಸಕ್ಕೆ ಸೇರಿಕೊಳ್ಳಲಿದ್ದಾರೆ.

ಮುಂಬೈ ಮೂಲದ ಆದಿತ್ಯ

ಮುಂಬೈ ಮೂಲದ ಆದಿತ್ಯ

ಬೆಂಗಳೂರಿನಲ್ಲಿ ಕಳೆದ 5 ವರ್ಷಗಳಿಂದ ವ್ಯಾಸಂಗ ಮಾಡುತ್ತಿದ್ದ ಆದಿತ್ಯ ಮುಂಬೈ ಮೂಲದವರಾಗಿದ್ದಾರೆ. ಭಾನುವಾರ ನಡೆದ ಅಂತಾರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯ ಘಟಿಕೋತ್ಸವದಲ್ಲಿ ಪದವಿ ಪ್ರಧಾನ ಮಾಡಲಾಯಿತು.

ಏನೀದು ಕೃತಕ ಬುದ್ಧಿಮತ್ತೆ ಗೂಗಲ್ ರೆಸಿಡೆನ್ಸಿ ಪ್ರೋಗ್ರಾಮ್‌?

ಏನೀದು ಕೃತಕ ಬುದ್ಧಿಮತ್ತೆ ಗೂಗಲ್ ರೆಸಿಡೆನ್ಸಿ ಪ್ರೋಗ್ರಾಮ್‌?

ಗೂಗಲ್‌ನ ಕೃತಕ ಬುದ್ಧಿಮತ್ತೆ ಗೂಗಲ್ ರೆಸಿಡೆನ್ಸಿ ಪ್ರೋಗ್ರಾಮ್‌ ಒಂದು ವರ್ಷದ ಅವಧಿಯಾಗಿದ್ದು, ವಿಶ್ವದ ನಾನಾ ಕಡೆಯಿಂದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಈ ಪ್ರೋಗ್ರಾಮ್‌ಗೆ ಪರೀಕ್ಷೆಯ ಮೂಲಕ ಆಯ್ಕೆ ಮಾಡಿಕೊಳ್ಳುತ್ತದೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನದಲ್ಲಿ ಪ್ರಗತಿಗೆ ಈ ಯೋಜನೆ ಸಹಾಯಕವಾಗಿದೆ. 2015ರಲ್ಲಿ ಪ್ರಾರಂಭವಾದ ಯೋಜನೆಗೆ ಭಾರತದ ಐಐಟಿ ಮದ್ರಾಸ್, ಐಐಟಿ ರೂರ್ಕಿ, ಐಐಟಿ ಹೈದ್ರಾಬಾದ್‌ನ ವಿದ್ಯಾರ್ಥಿಗಳು ಈ ಮುಂಚೆ ಆಯ್ಕೆಯಾಗಿದ್ದರು.

ಗೂಗಲ್‌ನಲ್ಲಿ ಉದ್ಯೋಗ ಪಡೆದಿದ್ದು..!

ಗೂಗಲ್‌ನಲ್ಲಿ ಉದ್ಯೋಗ ಪಡೆದಿದ್ದು..!

ಸರ್ಚ್‌ ಇಂಜಿನ್ ದೈತ್ಯ ಗೂಗಲ್ ತನ್ನ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ವಿಭಾಗದಲ್ಲಿ ಸಂಶೋಧನೆ ನಡೆಸುವ ವಿದ್ಯಾರ್ಥಿಗಳಿಗೆ ನಡೆಸಿದ ಪರೀಕ್ಷೆಯಲ್ಲಿ ಆದಿತ್ಯ ಕೆಲಸ ಪಡೆದಿದ್ದಾರೆ. ವಿಶ್ವದಾದ್ಯಂತ ಸುಮಾರು 6000 ಮಂದಿ ಈ ಕೆಲಸಕ್ಕಾಗಿ ಪರೀಕ್ಷೆಯನ್ನು ಬರೆದಿದ್ದರು. ಅದರಲ್ಲಿ ಆಯ್ಕೆಯಾದ 50 ಜನರಲ್ಲಿ ಆದಿತ್ಯ ಪಾಲಿವಾಲ್ ಕೂಡ ಒಬ್ಬರು.

ಗೂಗಲ್ ಆಫರ್‌ಗೆ ಕಾಯುತ್ತಿದ್ದ ಆದಿತ್ಯ

ಗೂಗಲ್ ಆಫರ್‌ಗೆ ಕಾಯುತ್ತಿದ್ದ ಆದಿತ್ಯ

ಗೂಗಲ್‌ನಲ್ಲಿ ಉದ್ಯೋಗ ಪಡೆಯಬೇಕೆಂದು ಬಹುದೊಡ್ಡ ಕನಸು ಹೊಂದಿದ್ದೆ, ಅದಕ್ಕೋಸ್ಕರ ಗೂಗಲ್ ಆಫರ್‌ಗೆ ಕಾಯುತ್ತಿದ್ದೆ. ಮಾರ್ಚ್‌ನಲ್ಲಿ ಕೆಲಸಕ್ಕೆ ಆಫರ್ ಬಂದಾಗ ಬಹಳಷ್ಟು ಖೂಷಿಯಾಯಿತು. ಗೂಗಲ್‌ನಲ್ಲಿ ಕೆಲಸ ಮಾಡುವ ಅವಧಿಯಲ್ಲಿ ಅನೇಕ ಹೊಸ ವಿಷಯಗಳನ್ನು ಕಲಿಯಬೇಕೆಂಬ ಹಂಬಲವಿದೆ ಎಂದು ತಮ್ಮ ಸಂತಸವನ್ನು ಆದಿತ್ಯ ಹಂಚಿಕೊಳ್ಳುತ್ತಾರೆ.

ಐಟಿಯಲ್ಲಿ ಅನೇಕ ಸಾಧನೆ

ಐಟಿಯಲ್ಲಿ ಅನೇಕ ಸಾಧನೆ

ಗೂಗಲ್‌ನ ಕೃತಕ ಬುದ್ಧಿಮತ್ತೆ (ಆರ್ಟಿಫೀಶಿಯಲ್ ಇಂಟಲಿಜೆನ್ಸ್‌) ಗೂಗಲ್ ರೆಸಿಡೆನ್ಸಿ ಪ್ರೋಗ್ರಾಮ್‌ನಲ್ಲಿ ಉದ್ಯೋಗಕ್ಕೆ ಆಯ್ಕೆಯಾಗಿರುವ ಆದಿತ್ಯ 2017-18ರಲ್ಲಿ ಆಯೋಜಿಸಿದ್ದ ಎಸಿಎಂ ಅಂತಾರಾಷ್ಟ್ರೀಯ ಕಾಲೇಜು ಮಟ್ಟದ ಪ್ರೊಗ್ರಾಮಿಂಗ್ ಸ್ಪರ್ಧೆ (ಐಸಿಪಿಸಿ)ಯಲ್ಲಿ ಅಂತಿಮ ಹಂತ ತಲುಪಿದ್ದ ಸಾಧನೆ ಮಾಡಿದ್ದರು. ಕಂಪ್ಯೂಟರ್ ಲ್ಯಾಂಗ್ವೇಜ್ ಕೋಡಿಂಗ್‌ನಲ್ಲಿ ಆಯೋಜಿಸುವ ಬಹುದೊಡ್ಡ ಸ್ಪರ್ಧೆಯಾಗಿದ್ದ ಐಸಿಪಿಸಿಯಲ್ಲಿ 111 ದೇಶಗಳ 3098 ವಿಶ್ವವಿದ್ಯಾಲಯಗಳ 50 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಆದಿತ್ಯ ಜತೆಯಲ್ಲಿ ಸಿಮ್ರಾನ್ ದೋಜಾನಿಯಾ ಮತ್ತು ಶ್ಯಾಮ್‌ ಕೆ.ಬಿ. ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಬೆಂಗಳೂರು ಬೆಸ್ಟ್‌

ಬೆಂಗಳೂರು ಬೆಸ್ಟ್‌

ಕಳೆದ 5 ವರ್ಷಗಳಿಂದ ಬೆಂಗಳೂರಿನ ಅಂತಾರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಆದಿತ್ಯ ಬೆಂಗಳೂರನ್ನು ಬೆಸ್ಟ್ ಎಜುಕೇಶನ್ ಹಬ್ ಎಂದಿದ್ದಾರೆ. ಬೆಂಗಳೂರಿನಲ್ಲಿ ವ್ಯಾಸಂಗ ಮಾಡಿದ್ದು ತುಂಬಾ ಉತ್ತಮವಾಗಿತ್ತು. ಹಾಗೂ ಅನೇಕ ಸಂತಸದ ಅನುಭವಗಳನ್ನು ಬೆಂಗಳೂರು ನೀಡಿದೆ. ನನ್ನ ಅನೇಕ ಇನೋವೆಟಿವ್ ಯೋಜನೆಗಳಿಗೆ ಪ್ರಾಧ್ಯಾಪಕರು ಬೆಂಬಲ ನೀಡಿದ್ದು, ನನ್ನ ಸಾಧನೆಯಲ್ಲಿ ನಮ್ಮ ಸೀನಿಯರ್ಸ್‌ಗಳ ಪಾತ್ರವೂ ದೊಡ್ಡದಿದೆ ಎಂದು ಆದಿತ್ಯ ಹೇಳಿದ್ದಾರೆ.

ಡ್ರೈವಿಂಗ್ ಅಚ್ಚುಮೆಚ್ಚು

ಡ್ರೈವಿಂಗ್ ಅಚ್ಚುಮೆಚ್ಚು

ಗೂಗಲ್‌ನಲ್ಲಿ ಉದ್ಯೋಗ ಪಡೆದಿರುವ ಆದಿತ್ಯ ಕಂಪ್ಯೂಟರ್ ಬಗ್ಗೆ ಜಾಸ್ತಿ ತಲೆ ಕೆಡಿಸಿಕೊಂಡವರಲ್ಲ. ಅಂದರೆ, ಕಂಪ್ಯೂಟರ್ ಹುಳುವಲ್ಲ. ಫುಟ್ಬಾಲ್ ಮತ್ತು ಕ್ರಿಕೆಟ್‌ನ ಬಹುದೊಡ್ಡ ಅಭಿಮಾನಿಯಾಗಿರುವ ಆದಿತ್ಯ ಪಾಲಿವಾಲ್‌ಗೆ ಡ್ರೈವಿಂಗ್ ಎಂದರೆ ಬಹಳ ಅಚ್ಚುಮೆಚ್ಚು ಅಂತೆ.

Best Mobiles in India

English summary
International Institute of Information Technology Bangalore student bags Rs 1.2 crore residency with Google. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+