Subscribe to Gizbot

ಮಹಿಳಾ ದಿನಾಚರಣೆ: ಗೂಗಲ್ ಡೂಡಲ್‌ನಲ್ಲಿ ಸ್ಥಾನ ಪಡೆದ ಬೆಂಗಳೂರಿನ ಮಹಿಳೆ..!

Written By:

ವಿಶಿಷ್ಠವಾಗಿ ಅಂತರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸುತ್ತಿರುವ ಗೂಗಲ್, ಪ್ರತಿ ಬಾರಿಯಂತೆ ಈ ಬಾರಿಯೂ ಹೊಸಾಗಿ ಗೂಗಲ್ ಡೂಡಲ್ ರಚಿಸಿದೆ. ಈ ಮೂಲಕ ಮಹಿಳೆಯರಿಗೆ ಗೌರವ ಸಲ್ಲಿಸಿದೆ. ಈ ಬಾರಿಯ ಡೂಡಲ್ ನಲ್ಲಿ ಬೆಂಗಳೂರಿನ ಮಹಿಳೆಯೊಬ್ಬರು ಸ್ಥಾನ ಪಡೆದುಕೊಂಡಿದ್ದಾರೆ.

ಮಹಿಳಾ ದಿನಾಚರಣೆ: ಗೂಗಲ್ ಡೂಡಲ್‌ನಲ್ಲಿ ಸ್ಥಾನ ಪಡೆದ ಬೆಂಗಳೂರಿನ ಮಹಿಳೆ..!

ಈ ಬಾರಿ ವಿಭಿನ್ನವಾಗಿ ಡೂಡಲ್ ರಚಿಸಿರುವ ಗೂಗಲ್ 12 ಮಹಿಳೆಯರ ಬಗ್ಗೆ ಡೂಡಲ್ ಫೀಚರ್ ಮಾಡಿದೆ. ಆ 12 ಮಹಿಳೆಯರ ಕಾಮಿಕ್ಅನ್ನು ಪ್ರಕಟಿಸಿದೆ. ಇದರಲ್ಲಿ ನಮ್ಮ ಬೆಂಗಳೂರು ಮೂಲದ ಕನ್ನಡತಿ ಕಾವೇರಿ ಗೋಪಾಲಕೃಷ್ಣನ್ ಮೊದಲನೆಯವರಾಗಿ ಕಾಣಿಸಿಕೊಂಡಿದ್ದಾರೆ.

ಕಾವೇರಿ ಗೋಪಾಲಕೃಷ್ಣನ್ ಮೂಲತಃ ಕಾಮಿಕ್ ಆರ್ಟಿಸ್ಟ್ ಆಗಿದ್ದು, ಸದ್ಯ ಇಲಸ್ಟ್ರೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಗೂಗಲ್ ಡೂಡಲ್ ಗಾಗಿಯೇ ಅವರು ಅಪ್ ಅಂಡ್ ರೂಫ್ ಎನ್ನುವ ಕಾಮಿಕ್ ಒಂದನ್ನು ಬರೆದಿದ್ದಾರೆ. ಇದನ್ನು ಗೂಗಲ್ ಬಳಸಿಕೊಂಡಿದ್ದು, ತನ್ನ ಮಹಿಳಾ ದಿನಾಚರಣೆಯ ಡೂಡಲ್ ಆಗಿ ಬಳಕೆ ಮಾಡಿಕೊಂಡಿದೆ.

ಮಹಿಳಾ ದಿನಾಚರಣೆ: ಗೂಗಲ್ ಡೂಡಲ್‌ನಲ್ಲಿ ಸ್ಥಾನ ಪಡೆದ ಬೆಂಗಳೂರಿನ ಮಹಿಳೆ..!

ಕಾವೇರಿ ಗೋಪಾಲಕೃಷ್ಣನ್ ರಚಿಸಿರುವ ಕಾಮಿಕ್‌ನಲ್ಲಿ ಇದರಲ್ಲಿ ಹುಡುಗಿಯೊಬ್ಬಳು ಮನೆಯ ಮಹಡಿಯ ಮೇಲೆ ಕುಳಿತು ಪುಸ್ತಕವನ್ನು ಓದುತ್ತಿರುತ್ತಾಳೆ. ಪ್ರತಿ ಪುಸ್ತಕವನ್ನು ಓದಿ ಮುಗಿಸಿದಾಗ ಆಕೆ ಸ್ವಲ್ಪ ಸ್ವಲ್ಪವೇ ದೊಡ್ಡವಳಾಗುತ್ತಾ ಹೋಗುತ್ತಾಳೆ. ಕೊನೆಗೆ ಹಾರಿ ಹೋಗುತ್ತಾಳೆ.

ಈ ರೀತಿಯಲ್ಲಿ 12 ವಿವಿಧ ಸ್ಟೋರಿಗಳನ್ನು ಗೂಗಲ್ ತನ್ನ ಡೂಡಲ್ ನಲ್ಲಿ ಬಳಕೆ ಮಾಡಿಕೊಂಡಿದೆ. ಅದಕ್ಕಾಗಿಯೇ #HerStoryOurStory ಎನ್ನುವ ಹ್ಯಾಶ್ ಟ್ಯಾಗನ್ನು ಬಳಕೆ ಮಾಡಿಕೊಂಡಿದೆ.

English summary
International Women’s Day: Google shares 12 inspirational stories. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot