Home
ಸುದ್ದಿಜಾಲ

ದೇಶದಲ್ಲಿ ಪ್ರಸ್ತುತ ಇಂಟರ್‌ನೆಟ್ ಬಳಕೆದಾರರು ಎಷ್ಟು?..ಟ್ರಾಯ್ ರಿಪೋರ್ಟ್!

ಭಾರತದಲ್ಲಿ ಇಂಟರ್‌ನೆಟ್ ಬಳಕೆದಾರರ ಸಂಖ್ಯೆ ಹೆಚ್ಚಿರುವ ಬಗ್ಗೆ ಟ್ರಾಯ್ ನೀಡಿರುವ ಇತ್ತೀಚಿನ ಮಾಹಿತಿಯಿಂದ ತಿಳಿದುಬಂದಿದೆ. 2016ರ ಮಾರ್ಚ್‌ನಿಂದ 2018ರವರೆಗೂ ದೇಶದಲ್ಲಿ ಅಂತರ್ಜಾಲ ಸಂಪರ್ಕಗಳ ಸಂಖ್ಯೆ ಶೇ.65ರಷ್ಟು ಹೆಚ್ಚಾಗಿದ್ದು, 2018ರ ಸೆಪ್ಟೆಂಬರ್ ವೇಳೆ ದೇಶದಲ್ಲಿ 56 ಕೋಟಿಗೂ ಅಧಿಕ ಬ್ರಾಡ್‌ಬ್ಯಾಂಡ್ ಮತ್ತು ನ್ಯಾರೋಬ್ಯಾಂಡ್ ಸಂಪರ್ಕ ಏರ್ಪಟ್ಟಿದೆ.

ಇತ್ತೀಚಿಗೆ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) ನೀಡಿದ ಮಾಹಿತಿ ಪ್ರಕಾರ, 2016ರ ಮಾರ್ಚ್ ಅಂತ್ಯಕ್ಕೆ ದೇಶದಲ್ಲಿ 34 ಕೋಟಿ ಇಂಟರ್‌ನೆಟ್ ಸಂಪರ್ಕ ಇದ್ದರೆ, ಇದು 2017ರ ಮಾರ್ಚ್ 31ಕ್ಕೆ 42 ಕೋಟಿಗೆ ಏರಿಕೆಯಾಗಿತ್ತು. 2018ರ ಮಾರ್ಚ್ ಕೊನೆಯಲ್ಲಿ 49 ಕೋಟಿಗೆ ತಲುಪಿದ್ದ ಅಂತರ್ಜಾಲ ಸಂಪರ್ಕದ ಸಂಖ್ಯೆ ಇದೀಗ 56 ಕೋಟಿಯ ಗಡಿ ದಾಟಿದೆ.

ದೇಶದಲ್ಲಿ ಪ್ರಸ್ತುತ ಇಂಟರ್‌ನೆಟ್ ಬಳಕೆದಾರರು ಎಷ್ಟು?..ಟ್ರಾಯ್ ರಿಪೋರ್ಟ್!

56 ಕೋಟಿ ಅಂತರ್ಜಾಲ ಸಂಪರ್ಕಗಳ ಪೈಕಿ, ನಗರದಲ್ಲಿ 36 ಕೋಟಿ ಹಾಗೂ ಗ್ರಾಮೀಣ ಪ್ರದೇಶದಲ್ಲಿ 19.4 ಕೋಟಿ ಅಂತರ್ಜಾಲ ಸಂಪರ್ಕ ಏರ್ಪಟ್ಟಿದೆ. ದೇಶದಲ್ಲಿ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ (ತೆಲಂಗಾಣವನ್ನು ಒಳಗೊಂಡಂತೆ), ಗುಜರಾತ್ ಮತ್ತು ಮಹಾರಾಷ್ಟ್ರ ರಾಜ್ಯಗಳು ಒಟ್ಟು 20 ಕೋಟಿ ಇಂಟರ್‌ನೆಟ್ ಸಂಪರ್ಕಗಳನ್ನು ಹೊಂದಿರುವ ಬಗ್ಗೆ ಟ್ರಾಯ್ ತಿಳಿಸಿದೆ.

ಈ ಎರಡು ವರ್ಷಗಳಲ್ಲಿ ಅಂತರ್ಜಾಲ ಸಂಪರ್ಕಗಳ ಸಂಖ್ಯೆಯಲ್ಲಿ ಕರ್ನಾಟಕದಲ್ಲಿ 58% ರಷ್ಟು ಬೆಳವಣಿಗೆ ಕಂಡಿದ್ದರೆ, ತಮಿಳುನಾಡು 45%, ಆಂಧ್ರಪ್ರದೇಶ 76%, ಮಹಾರಾಷ್ಟ್ರ 56% ಮತ್ತು ಗುಜರಾತ್ 70% ಬೆಳವಣಿಗೆಯನ್ನು ಕಂಡಿವೆ. ಈ ಐದು ರಾಜ್ಯಗಳು ದೇಶದ ಶೇ.36% ಇಂಟರ್ನೆಟ್ ಸಂಪರ್ಕಗಳನ್ನು ತಮ್ಮದಾಗಿಸಿಕೊಂಡಿವೆ ಎಂದು ಟ್ರಾಯ್ ಮಾಹಿತಿಯಿಂದ ತಿಳಿದುಬಂದಿದೆ.

ದೇಶದಲ್ಲಿ ಪ್ರಸ್ತುತ ಇಂಟರ್‌ನೆಟ್ ಬಳಕೆದಾರರು ಎಷ್ಟು?..ಟ್ರಾಯ್ ರಿಪೋರ್ಟ್!

ದೇಶದಲ್ಲಿ 2018ರ ವೇಳೆಯಲ್ಲಿ ಸುಮಾರು 50 ಕೋಟಿಗೂ ಅಧಿಕ ಅಂತರ್ಜಾಲ ಸಂಪರ್ಕ ಕಲ್ಪಿಸುವ ಗುರಿ ಹೊಂದಿದ್ದೇವೆ. ಮುಂದಿನ 2-3 ವರ್ಷಗಳಲ್ಲಿ ವಿಶ್ವದ ಮಾಹಿತಿ ತಂತ್ರಜ್ಞಾನ ಮಾರುಕಟ್ಟೆಯಲ್ಲಿ ಭಾರತ ಕೂಡ ಚೀನಾಗೆ ಸಮನಾಗಲಿದೆ ಎಂದು 2015ರಲ್ಲಿ ಕೇಂದ್ರ ಟೆಲಿಕಾಂ ಸಚಿವ ರವಿ ಶಂಕರ್ ಪ್ರಸಾದ್ ಹೇಳಿದ ಗುರಿಯನ್ನು ಭಾರತ ಸರ್ಕಾರ ಈಗ ತಲುಪಿದೆ.

Best Mobiles in India

English summary
The number of internet connections in India has grown by 65% from March 2016 to cross the 50 crore mark in 2018, in line with the target set by the Narendra Modi government three years ago.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+