ನೆಟ್‌ ಬ್ಯಾಂಕಿಂಗ್‌ ಸೇವೆ ಬಳಸುವಾಗ ನೀವು ಅನುಸರಿಸಲೇಬೇಕಾದ ಕ್ರಮಗಳು!

|

ಪ್ರಸ್ತುತ ದಿನಗಳಲ್ಲಿ ಆನ್‌ಲೈನ್‌ ಬ್ಯಾಂಕಿಂಗ್‌ ಸೇವೆ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ. ಡಿಜೀಟಲಿಕರಣ ಹೆಚ್ಚಾದಂತೆ ಬಹುತೇಕ ಎಲ್ಲಾ ಬ್ಯಾಂಕ್‌ಗಳು ತಮ್ಮ ಗ್ರಾಹಕರಿಗೆ ಆನ್‌ಲೈನ್‌ ಬ್ಯಾಂಕಿಂಗ್‌ ಸೇವೆಯನ್ನು ಪರಿಚಯಿಸಿವೆ. ನೆಟ್‌ ಬ್ಯಾಂಕಿಂಗ್‌ ಸೇವೆ ನೀವು ಎಲ್ಲೆ ಇದ್ದರೂ ತುರ್ತು ಸಂದರ್ಭದಲ್ಲಿ ಹಣಕಾಸು ವರ್ಗಾವಣೆ ಇಲ್ಲವೆ ಹಣಕಾಸು ವಹಿವಾಟು ನಡೆಸಲು ಅನುಕೂಲಕರವಾಗಿದೆ. ಆದರೆ ನೆಟ್‌ಬ್ಯಾಂಕಿಂಗ್‌ ಸೇವೆ ಎಷ್ಟು ಅನುಕೂಲಕರವಾಗಿದೆಯೋ ಸ್ವಲ್ಪ ಯಾಮಾರಿದರೂ ಅಷ್ಟೇ ತೊಂದರೆಯನ್ನು ತಂದಿಡಲಿದೆ.

ನೆಟ್‌ ಬ್ಯಾಂಕಿಂಗ್‌

ಹೌದು, ನೆಟ್‌ ಬ್ಯಾಂಕಿಂಗ್‌ ಸೇವೆ ಬಳಸುವಾಗ ಸ್ವಲ್ಪ ಯಾಮಾರಿದರೂ ನಷ್ಟ ಅನುಭವಿಸುವ ಸಾದ್ಯತೆ ಹೆಚ್ಚಿದೆ. ನೀವು ಮಾಡಿಕೊಳ್ಳುವ ಎಡವಟ್ಟುಗಳ ಕಾರಣದಿಂದ ನಿಮ್ಮ ಹೆಸರು, ಪಾಸ್‌ವರ್ಡ್, ಪಿನ್, ಡೆಬಿಟ್ ಕಾರ್ಡ್ ವಿವರಗಳು, ಕ್ರೆಡಿಟ್ ಕಾರ್ಡ್ ವಿವರಗಳಿಂದ ಹಿಡಿದು ಎಟಿಎಂ ಕಾರ್ಡ್ ವಿವರಗಳು ಹ್ಯಾಕರ್‌ಗಳ ಪಾಲಾಗಲಿದೆ. ನೆಟ್ ಬ್ಯಾಂಕಿಂಗ್ ಮಾಡುವಾಗ ನಿಮ್ಮ ಪಾಸ್‌ವರ್ಡ್‌ ಮತ್ತು ವೈಯುಕ್ತಿಕ ಮಾಹಿತಿಯ ಗೌಪ್ಯತೆ ಕಾಪಾಡುವುದು ಪ್ರಮುಖವಾಗಲಿದೆ. ಹಾಗಾದ್ರೆ ನೆಟ್‌ ಬ್ಯಾಂಕಿಂಗ್‌ ಉಪಯೋಗಿಸುವಾಗ ನೀವು ಅನುಸರಿಸಬೇಕಾದ ಅಗತ್ಯ ಕ್ರಮಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ನೆಟ್‌ಬ್ಯಾಂಕಿಂಗ್‌

ಕಳೆದ ಎರಡು ಮೂರು ವರ್ಷಗಳಿಂದ ನೆಟ್‌ಬ್ಯಾಂಕಿಂಗ್‌ ಸೇವೆ ಬಳಸುವವರ ಸಂಖ್ಯೆ ಸಾಕಷ್ಟು ಹೆಚ್ಚಳವಾಗಿದೆ. ಆದರೆ ನೆಟ್‌ ಬ್ಯಾಂಕಿಂಗ್‌ ಸೇವೆ ಬಳಸುವಾಗ ಸಾಕಷ್ಟು ಮಂದಿ ಸೈಬರ್‌ ಹ್ಯಾಕರ್‌ಗಳ ದಾಳಿಗೆ ಒಳಗಾಗಿದ್ದಾರೆ. ಇದೇ ಕಾರಣಕ್ಕೆ ಹೆಚ್ಚಿನ ಜನರು ತಮ್ಮ ಹಣವನ್ನು ಕಳೆದುಕೊಂಡ ಪ್ರಕರಣಗಳು ದಾಖಲಾಗುತ್ತಿವೆ. ಇವುಗಳಲ್ಲಿ ಬ್ಯಾಂಕ್ ಖಾತೆದಾರರು ಇಮೇಲ್ ಮೂಲಕ ಬಂದಂತಹ ಸ್ಪಾಮ್‌ ಮೇಲ್‌ಗಳಿಂದಲೂ ಬಳಕೆದಾರರು ಹಣ ಕಳೆದುಕೊಂಡಿದ್ದಾರೆ. ಸೈಬರ್ ಕ್ರಿಮಿನಲ್‌ಗಳು ಈ ಮೇಲ್ ಟ್ರಯಲ್‌ನಲ್ಲಿ ಬ್ಯಾಂಕ್ ಖಾತೆದಾರರಿಗೆ ಅರಿವಿಲ್ಲದಂತೆ ಮೋಸ ಮಾಡುವುದು ಹೆಚ್ಚಿನ ಪ್ರಕರಣಗಳಲ್ಲಿ ದಖಲಾಗಿದೆ.

ಬ್ಯಾಂಕ್‌

ಇಂತಹ ಸನ್ನಿವೇಶದಲ್ಲಿ ಹಣ ಕಳೆದುಕೊಂಡ ಗ್ರಾಹಕ ಸರಿಯಾದ ಸಮಯಕ್ಕೆ ಬ್ಯಾಂಕ್‌ ಅಥವಾ ಹಣಕಾಸು ಸಂಸ್ಥೆಗೆ ದೂರು ದಾಖಲಿಸಿದರೆ ಉತ್ತಮ. ಹಣ ಕಳೆದುಕೊಂಡ ಗ್ರಾಹಕರ ತಕ್ಷಣವೇ ದೂರು ನೀಡಿದರೆ ಕಳೆದುಕೊಂಡ ಹಣವನ್ನು ಮರಳಿ ಪಡೆಯಬಹುದಾಗಿದೆ. ಇಂತಹ ಹ್ಯಾಕರ್‌ದಾಳಿಗಳಿಂದ ನೀವು ಸುರಕ್ಷಿತವಾಗಿರಬೇಕಾದರೆ ಎಚ್ಚರ ಅಗತ್ಯ. ನೀವು ಹಣ ವರ್ಗಾವಣೆ ಮಾಡುವಾಗ ಈ ಕೆಳಗಿನ ನಿಯಮಗಳನ್ನು ಅನುಸರಿಸಿ.

ನೆಟ್‌ ಬ್ಯಾಂಕಿಂಗ್‌ ವಹಿವಾಟ ನಡೆಸುವಾಗ ಅನುಸರಿಸಲೇಬೇಕಾದ ಕ್ರಮಗಳು ಇಲ್ಲಿವೆ?

ನೆಟ್‌ ಬ್ಯಾಂಕಿಂಗ್‌ ವಹಿವಾಟ ನಡೆಸುವಾಗ ಅನುಸರಿಸಲೇಬೇಕಾದ ಕ್ರಮಗಳು ಇಲ್ಲಿವೆ?

ಹಂತ:1 ಮೊದಲನೇಯದಾಗಿ ನೀವು ವ್ಯವಹರಿಸುತ್ತಿರುವ ಹಣಕಾಸು ಸಂಸ್ಥೆಯ ಬಗ್ಗೆ ಕೂಲಂಕುಶವಾಗಿ ಪರಿಶೀಲಿಸಿ.
ಹಂತ:2 ನೀವು ಹಣವನ್ನು ವರ್ಗಾಯಿಸುವ ಬ್ಯಾಂಕ್ ಖಾತೆಯನ್ನು ಪರಿಶೀಲಿಸುವುದು ಉತ್ತಮ.
ಹಂತ:3 ನಿಮಗೆ ಸ್ವಲ್ಪ ಅನುಮಾನ ಬಂದರೂ ಹಣ ವರ್ಗಾವಣೆ ಮಾಡಲು ಹೋಗಬೇಡಿ.
ಹಂತ:4 ಬ್ಯಾಂಕ್‌ ವಿವರಗಳನ್ನು ಪರಿಶೀಲಿಸಲು ಸಂಸ್ಥೆಯ ಅಧಿಕೃತ ಕಾಲ್ ಸೆಂಟರ್‌ಗೆ ಕರೆ ಮಾಡಿ.
ಹಂತ:5 ಅನುಮಾನವಿದ್ದಲ್ಲಿ, ಅಧಿಕೃತ ಬ್ಯಾಂಕ್‌ ಶಾಖೆಗೆ ಭೇಟಿ ನೀಡಿ.
ಹಂತ:6 ಯಾವುದೇ ಪರಿಶೀಲನೆ ಇಲ್ಲದೆ ಮೇಲ್ ಮೂಲಕ ವ್ಯವಹರಿಸಲು ಹೋಗಬೇಡಿ.
ಹಂತ:7 ನಿಮ್ಮ ಎಲ್ಲಾ ನೆಟ್ ಬ್ಯಾಂಕಿಂಗ್ ವಹಿವಾಟುಗಳ ಪ್ರಿಂಟ್‌ಸ್ಕ್ರೀನ್‌ಗಳನ್ನು ಯಾವಾಗಲೂ ತೆಗೆದುಕೊಳ್ಳಿ
ಹಂತ:8 ನೀವು ತಪ್ಪಾದ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾಯಿಸಿದರೆ, ಸಾಧ್ಯವಾದಷ್ಟು ಬೇಗ ಬ್ಯಾಂಕಿಂಗ್ ಸಂಸ್ಥೆಗೆ ವರದಿ ಮಾಡಿ.
ಹಂತ:9 ಹಣಕಾಸು ಸಂಸ್ಥೆಯ ವೆಬ್‌ಸೈಟ್ ತನ್ನ URL ನಲ್ಲಿ 'https' ಅನ್ನು ಹೊಂದಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಪರಿಶೀಲಿಸಲು ಬ್ರೌಸರ್ ಪರಿಶೀಲಿಸಿ

ಸಾಮಾನ್ಯವಾಗಿ ಗಮನಿಸುವುದಾದರೆ ಸೈಬರ್‌ ಕ್ರಿಮಿನಲ್‌ಗಳು ಜನರನ್ನು ಸುಲಭವಾಗಿ ವಂಚನೆ ಮಾಡಿಬಿಡುತ್ತಾರೆ. ಬ್ಯಾಂಕ್‌ ಸಿಬ್ಬಂದಿ ಎಂದು ಹೇಳಿಕೊಡು ಆನ್‌ಲೈನ್‌ ಮೂಲಕ ವಂಚಿಸುತ್ತಾರೆ. ಇದಕ್ಕೆ ಮುಖ್ಯ ಕಾರಣ ಜನರಲ್ಲಿರುವ ಮಾಹಿತಿಯ ಕೊರತೆ. ಆದರಿಂದ ನೀವು ಯಾವುದೇ ಬ್ಯಾಂಕ್‌ ಮಾಹಿತಿಯನ್ನು ಹಂಚಿಕೊಳ್ಳುವಾಗ ಬ್ಯಾಂಕ್‌ ಅನ್ನು ಸಂಪರ್ಕಿಸುವುದು ಒಳಿತು.

ಯಾರಿಗಾದರೂ ಹಣ ಕಳುಹಿಸುವ ಮುನ್ನ ಗಮನಿಸಬೇಕಾದ ಅಂಶಗಳು

ಯಾರಿಗಾದರೂ ಹಣ ಕಳುಹಿಸುವ ಮುನ್ನ ಗಮನಿಸಬೇಕಾದ ಅಂಶಗಳು

* ವಂಚಕರು ಹೆಚ್ಚಿನ ಪ್ರಮಾಣದಲ್ಲಿ ಆನ್‌ಲೈನ್‌ನಲ್ಲಿ ವಂಚಿಸುತ್ತಾರೆ.
* ಅಪರಿಚಿತ ವ್ಯಕ್ತಿಗಳು ಬ್ಯಾಂಕ್‌ ಸಿಬ್ಬಂದಿ ಎಂದು ಹೇಳಿದಾಗ ಅವರ ವಿವರಗಳನ್ನು ಪರಿಶೀಲಿಸಿ.
* ಅನೇಕ ಖಾತೆದಾರರು ತಮ್ಮ ಹಣವನ್ನು ಸೈಬರ್ ಅಪರಾಧಿಗಳಿಗೆ ವರ್ಗಾಯಿಸುತ್ತಾರೆ
* ಖಾತೆದಾರರು ಯಾವುದೇ ಅಪರಿಚಿತ ವ್ಯಕ್ತಿಗಳ ಹಣ ವರ್ಗಾವಣೆ ಮಾಡಲು ಹೋಗಬೇಡಿ.

Best Mobiles in India

English summary
Notably, if the mistake is reported to the bank or financial institution on time, the account holder may get the money back.to know more visit to kannada.gizbot.com.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X