ಫೇಸ್ ಬುಕ್, ಟ್ವಿಟರ್, ಲಿಂಕ್ಡ್ ಇನ್ ನಿಂದ ನಿಮ್ಮ ಖಾಸಗಿ ಮಾಹಿತಿ ಕಳುವು:ವರದಿ

Posted By: Varun
ಫೇಸ್ ಬುಕ್, ಟ್ವಿಟರ್, ಲಿಂಕ್ಡ್ ಇನ್ ನಿಂದ ನಿಮ್ಮ ಖಾಸಗಿ ಮಾಹಿತಿ ಕಳುವು:ವರದಿ

ವಿಶ್ವದ ದೊಡ್ಡ ಸಾಮಾಜಿಕ ಜಾಲ ತಾಣಗಳಾದ ಫೇಸ್ ಬುಕ್, ಟ್ವಿಟರ್, ಲಿಂಕ್ಡ್ ಇನ್, ಫ್ಲಿಕರ್ ಮುಂತಾದವು, ನಿಮ್ಮ ಖಾಸಗಿ ಮಾಹಿತಿ ಯನ್ನು ಉಪಯೋಗಿಸಿಕೊಂಡು ಜಾಹೀರಾತು ಕಂಪನಿಗಳಿಗೆ ಒದಗಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಅದರಲ್ಲೂ ಆಂಡ್ರಾಯ್ಡ್ ಹಾಗು ಆಪಲ್ ನ ಐ.ಓ.ಎಸ್ ನ ಸ್ಮಾರ್ಟ್ ಫೋನ್ ಗಳಿಂದ ಕಳಿಸುವ ಎಸ್.ಎಂ.ಎಸ್ ಹಾಗು ಚಿತ್ರಗಳನ್ನು ಸುಲಭವಾಗಿ ಓದಲು ಸಾದ್ಯವಿದ್ದು, ಈ ವೆಬ್ಸೈಟ್ಗಳು ಅನಧೀಕೃತವಾಗಿ ಈ ರೀತಿ ಮಾಡಿರುವುದಾಗಿ ಒಪ್ಪಿಕೊಂಡಿವೆ ಎಂದು ಡೈಲಿ ಮೇಲ್ ಪತ್ರಿಕೆ ವರದಿ ಮಾಡಿದೆ.

ಸ್ಮಾರ್ಟ್ ಫೋನ್ ಮೂಲಕ ಟ್ವಿಟರ್ ಬಳಸುವ ಖಾತೆದಾರರ ಇ-ಮೇಲ್ ಹಾಗು ಫೋನ್ ನಂಬರಗಳನ್ನ ತನ್ನ ಸರ್ವರ್ಗಳಲ್ಲಿ ಸಂಗ್ರಹಿಸಿದ್ದಾಗಿ ಹೇಳಿಕೊಂಡಿದೆ.

ಈ ರೀತಿಯ ಅಪಾಯವಿರುವುದರಿಂದ ನೀವು ಸಾಮಾಜಿಕ ಜಾಲ ತಾಣಗಳಲ್ಲಿ ನಿಮ್ಮ ಖಾಸಗಿ ವಿಷಯವನ್ನು ಆದಷ್ಟು ಕಡಿಮೆ ಹಂಚಿಕೊಳ್ಳುವುದು ಒಳಿತು.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot