ಮಾರ್ಚ್ 8 ಕ್ಕೆ ಇಂಟರ್ನೆಟ್ ಬಂದ್ ಆಗಲಿದೆಯೇ ?

Posted By: Varun
ಮಾರ್ಚ್ 8 ಕ್ಕೆ ಇಂಟರ್ನೆಟ್ ಬಂದ್ ಆಗಲಿದೆಯೇ ?

ಅಮೆರಿಕಾದ ಅಪರಾಧ ಪತ್ತೇದಾರಿ ಸಂಸ್ಥೆ, ಫೆಡೆರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (FBI) ಅಂತರ್ಜಾಲವನ್ನು ಮಾರ್ಚ್ 8 ಕ್ಕೆಬಂದ್ ಮಾಡಲಿದೆಯಂತೆ.

ಕಾರಣ ಇಷ್ಟೇ. ಅಂತರ್ಜಾಲ ಸೇವೆ ಒದಗಿಸುವ ಕಂಪನಿಗಳಿಂದ ಬರುವ ಸಾಮಾನ್ಯ ವೈರಸ್ ಗಳು, ಮಾಲ್ವೇರ್(ಕಂಪ್ಯೂಟರ್ ಕಾರ್ಯಾಚರಣೆ ಅಡ್ಡಿ ಪಡಿಸಲು ಹಾಗು ಅನಧಿಕೃತ ಪ್ರವೇಶ ಪಡೆಯಲು ಇಲ್ಲವೆ ಸೂಕ್ಷ್ಮ ಮಾಹಿತಿಯನ್ನು ಸಂಗ್ರಹಿಸಲು ವಿನ್ಯಾಸ ಗೊಳಿಸಲಾದ ತಂತ್ರಾಂಶ), ಟ್ರೋಜನ್ ವೈರಸ್ ಗಳ ಹಾವಳಿ ವಿಶ್ವದಾದ್ಯಂತ ಹೆಚ್ಚಾಗಿದ್ದು, ಸರ್ಕಾರಗಳಿಗೆ ಭಾರೀ ನಷ್ಟ ಉಂಟು ಮಾಡುತ್ತಿದೆ.

ಇದರಿಂದಾಗಿ ಕೋಟ್ಯಾಂತರ ಇಂಟರ್ನೆಟ್ ಬಳಕೆದಾರರಿಗೆ ತೊಂದರೆಯಾಗಲಿರುವ ಕಾರಣ, ಈ ರೀತಿಯ ವೈರಸ್ ಗಳ ಪ್ರಬಾವವನ್ನು ಅಂದಾಜು ಮಾಡಲು ಎಫ್.ಬಿ.ಐ ಈ ಕ್ರಮ ಕೈಗೊಳ್ಳಲಿದೆ.

ಇದರಿಂದಾಗಿ ಮಾರ್ಚ್ 8 ರಂದು ಹಲವಾರು ದೇಶಗಳ ಅಂತರ್ಜಾಲ ಸಂಪರ್ಕದಲ್ಲಿ ಏರುಪೇರಾಗಲಿದ್ದು ಅದರಲ್ಲೂ ಅಮೇರಿಕಾ ಹಾಗು ಭಾರತದ ಬಳಕೆದಾರ ಮೇಲೆ ಪರಿಣಾಮ ಬೀರಲಿದೆ.

 

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot