ಜುಲೈ 9 ರ ನಂತರ ಇಂಟರ್ನೆಟ್ ಬಂದ್ ?

Posted By: Varun
ಜುಲೈ 9 ರ ನಂತರ ಇಂಟರ್ನೆಟ್ ಬಂದ್ ?

ಫೆಬ್ ತಿಂಗಳಲ್ಲಿ ಇಂಟರ್ನೆಟ್ ಬಂದ್ ಆಗುವುದರ ಬಗ್ಗೆ ಅಮೆರಿಕಾದ FBI ಎಚ್ಚರಿಕೆ ನೀಡಿದ್ದ ಸುದ್ದಿಯನ್ನು ಕನ್ನಡ ಗಿಜ್ಬಾಟ್ ನಲ್ಲಿ ಪ್ರಕಟಿಸಿದ್ದೆವು.

ಕಳೆದ ವರ್ಷ ಅಂತರರಾಷ್ಟ್ರೀಯ ಮಟ್ಟದಲ್ಲಿ ಹ್ಯಾಕರ್ ಗಳ ತಂಡವೊಂದು ಆನ್ಲೈನ್ ಅಡ್ವರ್ಟೈಸಿಂಗ್ ಮೂಲಕ ಜಗತ್ತಿನಾದ್ಯಂತ ಕಂಪ್ಯೂಟರ್ ಗಳನ್ನು ವೈರಸ್ ಹರಡುವಂತೆ ಮಾಡಿತ್ತು. ಕಳೆದ ನವಂಬರ್ ತಿಂಗಳಲ್ಲಿ FBI ಈ ತಂಡದ ಹಲವಾರು ಹ್ಯಾಕರ್ ಗಳನ್ನು ಬಂಧಿಸಿದ್ದರಿಂದ ಈ ವಿಷಯ ಬೆಳಕಿಗೆ ಬಂದಿತ್ತು. ಇದನ್ನು ತಡೆಗಟ್ಟಲು ಹಲವಾರು ತಿಂಗಳಿನಿಂದ ಪ್ರಯತ್ನ ಪಟ್ಟಿದ್ದ FBI ಈಗ ಈ ಹ್ಯಾಕರುಗಳ ಮೂಲಕ ವೈರಸ್ ಬಂದಿರುವ ಕಂಪ್ಯೂಟರುಗಳನ್ನು ಪತ್ತೆ ಹಚ್ಚಲು ವೆಬ್ಸೈಟ್ ಒಂದನ್ನು ಮಾಡಿದ್ದು, ನಿಮ್ಮ ಕಂಪ್ಯೂಟರ್ ನಲ್ಲಿ ವೈರಸ್ ಬಂದಿದೆಯೋ ಇಲ್ಲವೋ ಎಂಬುದನ್ನು ಈ ವೆಬ್ಸೈಟ್ ಮೂಲಕ ಪರೀಕ್ಷಿಸಬಹುದು. ವೈರಸ್ ಇದೇ ಎಂದು ಕಂಡುಬಂದಲ್ಲಿ ಹೇಗೆ ಸರಿಪಡಿಸಬೇಕು ಎಂಬುದನ್ನೂ ತಿಳಿಸಿಕೊಡುತ್ತದೆ.

ಜುಲೈ 9 ರ ಒಳಗಾಗಿ ಈ ವೆಬ್ಸೈಟ್ ನಲ್ಲಿ ಚೆಕ್ ಮಾಡಿ ಸರಿಪಡಿಸಿಕೊಳ್ಳದಿದ್ದರೆ, ಯಾವ್ಯಾವ ಕಂಪ್ಯೂಟರುಗಳಿಗೆ ಆ ವೈರಸ್ ಬಂದಿದೆಯೋ ಆ ಕಂಪ್ಯೂಟರುಗಳ ಮೂಲಕ ಇಂಟರ್ನೆಟ್ ಸರ್ಫ್ ಮಾಡಲು ಆಗುವುದಿಲ್ಲ ಎಂದು FBI ಎಚ್ಚರಿಸಿದೆ.

ಈಗಾಗಲೇ ವಿಶ್ವದಾದ್ಯಂತ 5,70,000 ಕಂಪ್ಯೂಟರುಗಳಿಗೆ ಈ ವೈರಸ್ ಹರಡಿದ್ದು ಈ ಆನ್ಲೈನ್ ಫ್ರಾಡ್ ನಿಂದಾಗಿ ಹ್ಯಾಕರುಗಳು 14 ಮಿಲಿಯನ್ ಡಾಲರ್ ಹಣ ಮಾಡಿಕೊಂಡಿದ್ದರಂತೆ.

ದಯವಿಟ್ಟು ನಿಮ್ಮ ಕಂಪ್ಯೂಟರ್ ಸುರಕ್ಷಿತವಾಗಿದೆಯೋ ಇಲ್ಲವೋ ಚೆಕ್ ಮಾಡಿ ಈ ವೆಬ್ಸೈಟ್ ಮೂಲಕ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot