Home
ಸುದ್ದಿಜಾಲ

ಓಕ್ಲಾ ರಿಪೋರ್ಟ್..ಭಾರತದಲ್ಲಿ ಇಂಟರ್‌ನೆಟ್ ವೇಗ ಕುಸಿತ!!

ಇಂಟರ್‌ನೆಟ್ ಬಳಕೆಯಲ್ಲಿ ವಿಶ್ವದಲ್ಲೇ ಮೊದಲ ಸ್ಥಾನ ಪಡೆದಿರುವ ಭಾರತೀಯರಿಗೆ ಈ ಕೆಟ್ಟ ಸುದ್ದಿ ಕೇಳಿ ಆಶ್ಚರ್ಯವಾಗಬಹುದು. ಏಕೆಂದರೆ, ಇಂಟರ್‌ನೆಟ್ ಬಳಕೆಯಲ್ಲಿ ಮಾತ್ರ ಮುಂಚೂಣಿಯಲ್ಲಿರುವ ಭಾರತದಲ್ಲಿ ಇಂಟರ್‌ನೆಟ್ ವೇಗ ಕುಸಿತವಾಗಿದೆ. ಕಳೆದ ವರ್ಷಕ್ಕಿಂತಲೂ ಈ ಬಾರಿ ದೇಶದ ಇಂಟರ್‌ನೆಟ್ ವೇಗ ಕುಸಿತಗೊಂಡಿದೆ ಎಂದು ಓಕ್ಲಾ ಹೇಳಿದೆ.

ಹೌದು, ಮೊಬೈಲ್ ನೆಟ್‌ವರ್ಕ್ ವೇಗದ ಕುರಿತಂತೆ ಪ್ರಖ್ಯಾತ ಓಕ್ಲಾ ಸಂಸ್ಥೆ ಪರೀಕ್ಷೆ ನಡೆಸಿದ್ದು, ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಈ ವರ್ಷ ಭಾರತದಲ್ಲಿ ಇಂಟರ್‌ನೆಟ್ ವೇಗ ಕುಸಿತವಾಗಿದೆ ಎಂದು ತಿಳಿಸಿದೆ. ಇಂಟರ್‌ನೆಟ್ ವೇಗದಲ್ಲಿ 2018ರಲ್ಲಿ ವಿಶ್ವದಲ್ಲೇ 109ನೇ ಸ್ಥಾನದಲ್ಲಿದ್ದ ಭಾರತ, ಈ ವರ್ಷ 121 ನೇ ಸ್ಥಾನಕ್ಕೆ ಕುಸಿತಕಂಡಿದೆ ಎಂದು ಓಕ್ಲಾ ನೀಡಿರುವ ವರದಿಯಲ್ಲಿ ಹೇಳಿದೆ.

ಓಕ್ಲಾ ರಿಪೋರ್ಟ್..ಭಾರತದಲ್ಲಿ ಇಂಟರ್‌ನೆಟ್ ವೇಗ ಕುಸಿತ!!

ಇನ್ನು ಸ್ಥಿರ ಬ್ರಾಡ್‌ಬ್ಯಾಂಡ್ ವೇಗದಲ್ಲೂ ಕೂಡ ಭಾರತ ಈ ಬಾರಿ ಒಂದು ಸ್ಥಾನ ಇಳಿಕೆ ಕಂಡಿದ್ದು, ಬ್ರಾಡ್‌ಬ್ಯಾಂಡ್ ವೇಗದಲ್ಲಿ 67ನೇ ಸ್ಥಾನದಿಂದ 68ನೇ ಸ್ಥಾನಕ್ಕೆ ಇಳಿದಿದೆ ಎಂದು ವರದಿ ಹೇಳಿದೆ. ದೇಶದಲ್ಲಿ ಸರಾಸರಿ ಮೊಬೈಲ್ ಇಂಟರ್‌ನೆಟ್ ವೇಗ 10.71 ಎಂಬಿಪಿಎಸ್ ನಷ್ಟು ಇದ್ದರೆ, ಸರಾಸರಿ ಸ್ಥಿರ ಬ್ರಾಡ್‌ಬ್ಯಾಂಡ್ ವೇಗ 29.25 ಎಂಬಿಪಿಎಸ್ ನಷ್ಟಿದೆ ಎಂದು ತಿಳಿಸಿದೆ.

65.41 ಎಂಬಿಪಿಎಸ್ ಮೂಲಕ ಮೊಬೈಲ್ ಇಂಟರ್‌ನೆಟ್ ವೇಗದಲ್ಲಿ ನಾರ್ವೆ ದೇಶ ಮೊದಲ ಸ್ಥಾನ ಪಡೆದುಕೊಂಡರೆ, 197.50 ಎಂಬಿಪಿಎಸ್ ವೇಗದೊಂದಿಗೆ ಸ್ಥಿರ ಬ್ರಾಡ್‌ಬ್ಯಾಂಡ್ ವೇಗದಲ್ಲಿ ಸಿಂಗಾಪುರ ಮೊದಲ ಸ್ಥಾನ ಪಡೆದುಕೊಂಡಿದೆ. ಸೂಚ್ಯಂಕದ ಅಂಕಿ ಅಂಶಗಳು ಪ್ರತಿ ತಿಂಗಳು ಜನರು ಬಳಸುವ ಸ್ಪೀಡ್‌ಟೆಸ್ಟ್ ಅನ್ನು ತೆಗೆದುಕೊಳ್ಳುವ ಲಕ್ಷಾಂತರ ಪರೀಕ್ಷೆಗಳಿಂದ ಬರುತ್ತದೆ.

ಓಕ್ಲಾ ರಿಪೋರ್ಟ್..ಭಾರತದಲ್ಲಿ ಇಂಟರ್‌ನೆಟ್ ವೇಗ ಕುಸಿತ!!

ಭಾರತದಲ್ಲಿ ಇಂಟರ್‌ನೆಟ್ ಬಳಕೆ ಹೆಚ್ಚಿದ್ದರೂ ಕೂಡ ವೇಗದ ವಿಚಾರದಲ್ಲಿ ಸಾಕಷ್ಟು ಹಿಂದುಳಿದಿರುವುದನ್ನು ವರದಿಯು ತಿಳಿಸಿದೆ. ದೇಶದ ದೊಡ್ಡ ಭೌಗೋಳಿಕ ಗಾತ್ರ ಮತ್ತು ಜನಸಂಖ್ಯೆಯ ಕಾರಣದಿಂದಾಗಿ ಭಾರತವು ಇಂಟರ್‌ನೆಟ್‌ನ ಸವಾಲುಗಳನ್ನು ಹೊಂದಿದೆ. ದಟ್ಟಣೆ ಮತ್ತು ದೊಡ್ಡ ಸಮುದಾಯ ನಿಧಾನಗತಿಯ ಜಾಲವನ್ನು ಹೊಂದಿದೆ ಎಂಬುದನ್ನು ನಾವು ನೋಡಬಹುದು.

Best Mobiles in India

English summary
India witnessed a dip in mobile speeds in April 2019 with its rank remaining at 68th position in fixed broadband speeds globally and has decreased in ranking to 121 in mobile speeds, Ookla. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+