ದೀಪಾವಳಿ ಸಲುವಾಗಿ ಇಂಟೆಲ್ ನಿಂದ ಬಜೆಟ್ ಬೆಲೆಯಲ್ಲಿ ಬೊಂಬಾಟ್ ಫೋನ್ ಲಾಂಚ್
ಈ ಎರಡು ಸ್ಮಾರ್ಟ್ ಫೋನ್ ಗಳದ್ದು ಹೈಲೆಟ್ ಎಂದರೆ ಶಟರ್ ಫ್ರೂಫ್ ಡಿಸ್ ಪ್ಲೇಗಳು. ಬೇರೆ ಯಾವುದೇ ಸ್ಮಾರ್ಟ್ ಫೋನ್ ಗಳು ಈ ಬೆಲೆಯಲ್ಲಿ ಈ ಮಾದರಿಯ ಡಿಸ್ ಪ್ಲೇಯನ್ನು ಹೊಂದಿಲ್ಲ ಎನ್ನಲಾಗಿದೆ.
ಇನ್ ಟೆಕ್ಸ್ ಮತ್ತೇರಡು ಸ್ಮಾರ್ಟ್ ಫೋನ್ ನೊಂದಿಗೆ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿದೆ. ಆಕ್ವಾ ಲಯನ್ಸ್ X1 ಮತ್ತು ಆಕ್ವಾ ಲಯನ್ಸ್ X1 ಪ್ಲಸ್ ಸ್ಮಾರ್ಟ್ ಫೋನ್ ಗಳು ಲಾಂಚ್ ಆಗಿದ್ದು, ಬೆಲೆಗಳು ಕ್ರಮವಾಗಿ ರೂ. 7499 ಮತ್ತು ರೂ.8499ಕ್ಕೆ ದೊರೆಯಲಿದೆ.

ಈ ಎರಡು ಸ್ಮಾರ್ಟ್ ಫೋನ್ ಗಳದ್ದು ಹೈಲೆಟ್ ಎಂದರೆ ಶಟರ್ ಫ್ರೂಫ್ ಡಿಸ್ ಪ್ಲೇಗಳು. ಬೇರೆ ಯಾವುದೇ ಸ್ಮಾರ್ಟ್ ಫೋನ್ ಗಳು ಈ ಬೆಲೆಯಲ್ಲಿ ಈ ಮಾದರಿಯ ಡಿಸ್ ಪ್ಲೇಯನ್ನು ಹೊಂದಿಲ್ಲ ಎನ್ನಲಾಗಿದೆ. ಇಲ್ಲದೇ ಈ ಎರಡು ಸ್ಮಾರ್ಟ್ ಫೋನ್ ಗಳು ಒಂದು ವರ್ಷದ ಫ್ರಿ ಸ್ಕ್ರಿನ್ ರಿಪ್ಲೇಸ್ ಮೆಂಟ್ ಆಯ್ಕೆಯನ್ನು ನೀಡುತ್ತಿದೆ.
ಇದಲ್ಲದೇ ಈ ಸ್ಮಾರ್ಟ ಫೋನ್ ಖರೀದಿಸಿದವರಿಗೆ ಜಿಯೋ 4Gಯ 25 GB ಡೇಟಾ ಬೇರೆ ಬಳಕೆಗೆ ದೊರೆಯಲಿದೆ ಎನ್ನಲಾಗಿದೆ.
ಈ ಎರಡು ಸ್ಮಾರ್ಟ್ ಪೋನ್ ಗಳು 5.2 ಇಂಚಿನ ಡಿಸ್ ಪ್ಲೇಯನ್ನು ಹೊಂದಿದೆ ಎನ್ನಲಾಗಿದೆ. HD ಗುಣಮಟ್ಟದಾಗಿದೆ. ಅಲ್ಲದೇ 1.3GHz ವೇಗದ ಕ್ವಾಡ್ ಕೋರ್ ಪ್ರೋಸೆಸರ್ ಅನ್ನು ಕಾಣಬಹುದಾಗಿದೆ. ಆದರೆ ಯಾವ ಚಿಪ್ ಸೆಟ್ ಎನ್ನುವುದನ್ನು ನಮೂದಿಸಿಲ್ಲ.
ಇನ್ ಟೆಲ್ ಆಕ್ವಾ ಲಯನ್ಸ್ X1 2GB RAM ಮತ್ತು 16GB ಇಂಟರ್ನಲ್ ಮೆಮೊರಿಯನ್ನು ಹೊಂದಿದೆ. ಇದೇ ಮಾದರಿಯಲ್ಲಿ ಆಕ್ವಾ ಲಯನ್ಸ್ X1 ಪ್ಲಸ್ 3GB RAM ಮತ್ತು 32GB ಇಂಟರ್ನಲ್ ಮೆಮೊರಿಯೊಂದಿಗೆ ಲಭ್ಯವಿದೆ.
ಈ ಎರಡು ಸ್ಮಾರ್ಟ್ ಫೋನ್ ಗಳು 13 MP ಹಿಂಬದಿಯ ಕ್ಯಾಮೆರಾವನ್ನು ಹೊಂದಿದ್ದು, LED ಫ್ಲಾಷ್ ಲೈಟ್ ಕಾಣಬಹುದಾಗಿದೆ. ಇದಲ್ಲದೇ ಮುಂಭಾಗದಲ್ಲಿ 5MP ಸೆಲ್ಫಿ ಕ್ಯಾಮೆರಾ ಜೊತೆಗೆ LED ಫ್ಲಾಷ್ ಲೈಟ್ ಕಾಣಬಹುದಾಗಿದೆ.


Click it and Unblock the Notifications








